Prvních 200 řádků.
ದ ಲಾಸ್ಟ್ ಸನ್‌ರೈಸ್
ನನ್ನ ದೇಹ ನನ್ನ ಶತ್ರುವಾಗಿದೆ.
ಆದರೆ ನಾನು ಭೂಮಿಯ ಒಂದು ಕಣವಷ್ಟೇ.
ಅನಾರೋಗ್ಯವೋ ಅಥವಾ ಸಾವುಬದುಕಿನ ಪ್ರಶ್ನೆಯೋ, ಸಾಗರಕ್ಕೆ ಇದರ ಚಿಂತೆ ಇಲ್ಲ.
ನಮ್ಮ ಹೋರಾಟಗಳು ಅಥವಾ ನಮ್ಮ ನೋವನ್ನು ಲೆಕ್ಕಿಸಲ್ಲ,
ಅಥವಾ ಇಂತಹ ಒಂದು ಕೊನೆಯ ಬೇಸಿಗೆಗಾಗಿ ನಾನು ಸರ್ವಸ್ವವನ್ನೂ
ಧಾರೆಯೆರೆಯುತ್ತಿದ್ದೆ ಎಂಬುದನ್ನೂ ಲೆಕ್ಕಿಸಲ್ಲ.
ಒಂದು ಕೊನೆಯ ಸೂರ್ಯೋದಯ…
ಅವನ ಜೊತೆ.
3 ತಿಂಗಳ ಹಿಂದೆ ಹ್ಯೂಸ್ಟನ್, ಟೆಕ್ಸಾಸ್
ರೈ. ರೈ.
ರೈ!
ಆ ಕಡೆ ಹೋಗು! ನಾನು ನೋಡಿಕೊಳ್ಳುತ್ತೇನೆ. ಪರವಾಗಿಲ್ಲ.
ಪರವಾಗಿಲ್ಲ. ಉಸಿರಾಡು. ಉಸಿರಾಡು, ರೈ. ನೀನು ಉಸಿರಾಡಲೇಬೇಕು, ಚಿನ್ನ.
ಈ ಹಂತದಲ್ಲಿ, ನೀನು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೇನೇ ಒಳ್ಳೆಯದು, ಒರಾಯ.
ಈಗಲೂ ನಾವು ಗೆಡ್ಡೆಗಳನ್ನು ತೆಗೆದುಹಾಕಬಹುದು,,
ಫಿಟ್ಸ್ ನಿಲ್ಲಿಸಬಹುದು.
ನಾನು ನನ್ನ ಸ್ಮರಣಶಕ್ತಿಯನ್ನೂ ಕಳೆದುಕೊಳ್ಳಬಹುದು.
ಜನರು, ಸ್ಥಳಗಳು, ಹೇಗೆ ನಡೆಯಬೇಕು, ಹೇಗೆ ನೃತ್ಯ ಮಾಡಬೇಕು, ಹೇಗೆ ಬದುಕಬೇಕು.
ನಾನು ಏನೋ ಅದನ್ನೇ ಮರೆತುಬಿಡಬಹುದು.
ನಾವು ಮಾತಾಡುತ್ತಿರೋದು ನಿನ್ನ ಜೀವನದ ಬಗ್ಗೆ.
ಹೌದು, ಅಮ್ಮ, ಇದು ನನ್ನ ಜೀವನದ ಪ್ರಶ್ನೆ.
ಸರಿ, ನಾವು ಔಷಧಿ ಹೆಚ್ಚಿಸಬಹುದು,
ಆದರೆ ಇದರಿಂದ ಅಡ್ಡಪರಿಣಾಮ ಹೆಚ್ಚಾಗೋ ಸಾಧ್ಯತೆಯಿದೆ.
ಮಾತ್ರೆ ತಪ್ಪಿಸಿಕೊಳ್ಳದಂತೆ ಅಲಾರಾಂ ಇಡು, ಇಲ್ಲದಿದ್ದರೆ ಇದು ಸರಿಯಾಗಿ ಕೆಲಸ ಮಾಡಲ್ಲ.
ಸರಿಯಾಗಿ ತೆಗೆದುಕೊಳ್ಳುತ್ತೀಯಾ?
ರೈ. ರೈ.
ನಿನಗೆ ಮದ್ದು ತೆಗೆದುಕೊಳ್ಳಲು ಇಷ್ಟವಿಲ್ಲ ಅಂತ ಗೊತ್ತು.
ಇಷ್ಟವಿಲ್ಲ ಅಲ್ಲ, ಅದು ನನಗೆ ಭಾವನೆಗಳೇ ಇಲ್ಲದಂತೆ ಮಾಡುತ್ತೆ.
ಸರಿ, ಲೀನಾ, ಇವಳಿಗೆ ಡ್ರೈವರ್ ಬುಕ್ ಮಾಡಿಕೊಡು.
-ಅವಳು ಎಲ್ಲಿ ಬೇಕೋ ಅಲ್ಲಿ ಸುತ್ತಲಿ. -ಖಂಡಿತ.
ಹೋಟೆಲ್‌ನಿಂದ ಎರಡು ಬೀದಿಯಾಚೆ ಒಂದು ಔಷಧಾಲಯವಿದೆ,
ಇವಳ ಔಷಧಿ ಖಾಲಿಯಾದರೆ ಅಲ್ಲಿ ಸಿಗುತ್ತೆ.
ಇದಲ್ಲದೆ, ಇವಳ ಫಿಟ್ಸ್ ಬಗ್ಗೆ ಸಾಮಾನ್ಯ ವಿಷಯಗಳಿಗೆ ಗಮನ ಕೊಡು,
ಮಿನುಗುವ ದೀಪ ಬೇಡ, ಚೆನ್ನಾಗಿ ನಿದ್ರೆ ಮಾಡಬೇಕು, ಒತ್ತಡವಿರಬಾರದು, ಮದ್ಯ ಕುಡಿಯಬಾರದು.
ಚೆನ್ನಾಗಿದೆ. ನಾನು ಸನ್ಯಾಸಿಗಳ ಜೊತೆ ಬೇಸಿಗೆ ಕಳೆಯುತ್ತೇನೆ.
ಮೊದಲ ನಾಲ್ಕು ದಿನ ಸ್ಥಳ ವ್ಯವಸ್ಥಾಪಕರು ಮತ್ತು ವಕೀಲರೊಂದಿಗೆ ಮಾತುಕತೆ ಇರುತ್ತೆ.
-ಸ್ವಲ್ಪ ಖಾಲಿ ಸಮಯ ಇಡಲು ಯತ್ನಿಸಿದೆ, ಆದರೆ… -ಒಟ್ಟಿಗೆ ಸಮಯ ಕಳೆಯೋದು ಏನಾಯಿತು?
ಅಮ್ಮ, ನೀನು ಬೆಳೆದ ಜಾಗ ತೋರಿಸುತ್ತೇನೆ ಅಂತ ಮಾತು ಕೊಟ್ಟಿದ್ದೆ.
ಇಲ್ಲ ಚಿನ್ನ, ನಾವು ಒಟ್ಟಿಗೆ ಬಹಳಷ್ಟು ಸಮಯ ಕಳೆಯುತ್ತೇವೆ.
ನಮಗೆ ಪೂರ್ತಿ ಆರು ವಾರ ಸಿಗುತ್ತೆ.
ನಾವು ಮಯೋರ್ಕಾದಲ್ಲಿ ಮಜಾ ಮಾಡೋಣ.
ನೀನು ಭರವಸೆ ಕೊಟ್ಟಂತೆ ಮಾತ್ರೆ ತೆಗೆದುಕೊಳ್ಳಬೇಕು.
ಆನಾ ಟಾಡ್ ಅವರ ಕಾದಂಬರಿಯನ್ನು ಆಧರಿಸಿದೆ
ಥ್ಯಾಂಕ್ಸ್.
ಸರಿ, ಆ ವೇಳಾಪಟ್ಟಿಯನ್ನು ಮತ್ತೊಮ್ಮೆ ತೋರಿಸು. ಹೂಂ.
-ಹಲೋ. -ಸ್ವಾಗತ.
-ಪೆರಾ, ನಿಮಗಾಗಿ ಕಾಯುತ್ತಿದ್ದೆವು. -ಇಸೊಲ್ದೆ ಅಂತ ಕರೆಯಿರಿ.
ಸ್ವಾಗತ.
ಥ್ಯಾಂಕ್ಸ್. ಇವಳು ನನ್ನ ಮಗಳು, ಒರಾಯ. ಚಿನ್ನ?
-ಹಾಯ್. -ಅವಳಿಗೆ ಜೆಟ್ ಲ್ಯಾಗ್ ಆಗಿದೆ.
-ಹಾಯ್. -ನಿನ್ನ ಕೋಣೆಗೆ ಹೋಗು, ನಾನು ಅಲ್ಲೇ ಸಿಗುತ್ತೇನೆ.
ನನಗೆ ಕಾನ್ಫರೆನ್ಸ್ ಕರೆ ಇದೆ.
ನಮ್ಮ ಸಹಾಯಕ ತಂಡ ನಿಮ್ಮನ್ನು ಭೇಟಿಯಾಗಲು ಎದುರು ನೋಡುತ್ತಿದೆ.
ನಮಸ್ಕಾರ, ನಮ್ಮ ಹೋಟೆಲ್‌ಗೆ ಸ್ವಾಗತ.
-ಹಾಯ್. -ಪ್ರಯಾಣ ಹೇಗಿತ್ತು?
-ಚೆನ್ನಾಗಿತ್ತು. -ಒಳ್ಳೆಯದು.
ಕ್ಷಮಿಸು, ನಿನ್ನ ಕಣ್ಣಲ್ಲಿ ಏನೋ…
ಟಿಕ್‌ಟಾಕ್‌ನಲ್ಲಿ ನೋಡಿದೆ. ಇದಕ್ಕೆ ನನಗೆ 20 ನಿಮಿಷ ಹಿಡಿಯಿತು.
ಇನ್ನೊಂದು ಕಣ್ಣಿನ ಮೇಲೆ ಅಷ್ಟು ಸಮಯ ಹೂಡಬಹುದಾ?
ಕಂಪನಿ ಸಮಯದಲ್ಲಿ ಅಂದರೆ ಅಷ್ಟು ಸಮಯ ಹೂಡಬಹುದು.
ನೀನು ಇಷ್ಟವಾದೆ. ನನ್ನನ್ನು ಹಿಂಬಾಲಿಸು.
ನಾನು ನಿನ್ನ ಕೋಣೆ ತೋರಿಸುತ್ತೇನೆ. ಹೀಗೆ ಬಾ.
-ಅಂದಹಾಗೆ, ನಾನು ಅಮಾರ. -ನಾನು ರೈ.
ಇದು ಲಾಬಿ.
ನಿನಗೆ ಬೇಕಾದಾಗ ಇಲ್ಲಿಗೆ ಬಂದರೆ ನಾನು ಸಿಗುತ್ತೇನೆ.
ಸ್ಪೇನ್‌ನ ಈ ಸ್ವರ್ಗಕ್ಕೆ ಬಂದ ಕಾರಣ?
ಅಮ್ಮನಿಗೆ ರಿಯಲ್ ಎಸ್ಟೇಟ್ ವ್ಯವಹಾರವಿದೆ.
ಅವಳ ಕಂಪನಿ ಹೊಸ ಹೋಟೆಲ್ ಕಟ್ಟಬೇಕೆಂದಿದೆ.
ಇನ್ನೊಂದು ಹೋಟೆಲ್, ಅದ್ಭುತ. ಸ್ಥಳೀಯರಿಗೆ ಇಷ್ಟವಾದ ಹಾಗೇ.
-ನಿನಗೆ ದ್ವೀಪದ ಪರಿಚಯವಿದೆಯಾ? -ಇಲ್ಲ, ಇದೇ ಮೊದಲ ಬಾರಿಗೆ ಬಂದಿದ್ದೇನೆ.
ನಾನು ಟೆಕ್ಸಾಸ್‌ನಿಂದ ಹೆಚ್ಚು ಹೊರಗೆ ಹೋಗಿಲ್ಲ.
ಟೆಕ್ಸಾನ್‌ನವರಾ? ಅದ್ಭುತ.
ರೈ, ನೀನು ಮೋಜಿಗಾಗಿ ಏನು ಮಾಡಲು ಇಷ್ಟಪಡುತ್ತೀಯ?
ಗೊತ್ತಿಲ್ಲ. ಬಹುಶಃ ಬೀಚ್‌ಗೆ ಹೋಗಬಹುದು ಅಥವಾ ಪೂಲ್ ಬಳಿ ಮಲಗಬಹುದು.
ಅದನ್ನು ಮಾಡಬಹುದು, ಆದರೆ ಇನ್ನೂ ಹಲವಾರು ಆಯ್ಕೆಗಳಿವೆ.
-ನಿನಗೆ ಗುಹೆ ಇಷ್ಟವಾ? -ಗುಹೆಯಾ?
ಬಾಯ್‌ಫ್ರೆಂಡ್?
-ಇಲ್ಲ. -ಇಲ್ಲಿನ ಸ್ಥಳೀಯರು ತುಂಬಾ ಸುಂದರವಾಗಿದ್ದಾರೆ.
ಕಾರ್ತೇಜ್‌ನವರು, ರೋಮನ್ನರು, ಮಿಶ್ರ ಜನಾಂಗದವರಿದ್ದಾರೆ,
ಫ್ರಾನ್ಸ್ ಮತ್ತು ಸ್ಪೇನ್‌ನಿಂದ ಬಂದ ಕ್ಯಾಟಲಾನ್ ವಸಾಹತುಗಾರರು.
ಬಫೆ ಥರ, ನಿನಗೆ ಯಾರು ಇಷ್ಟವೋ ಅವರನ್ನು ಆರಿಸಿಕೋ.
ಮರಗಳ ಮೇಲೆ ಆಡುಗಳನ್ನು ನೋಡಿದರೂ ಆಶ್ಚರ್ಯಪಡಬೇಡ.
-ಮರಗಳ ಮೇಲೆ ಆಡುಗಳಾ? -ಹೌದು, ಮರಗಳ ಮೇಲೆ ಆಡುಗಳು.
ನನ್ನ ಮಾತಿನ ಅರ್ಥ, ಇದು ನಿನಗೆ ಮರೆಯಲಾರದ ಬೇಸಿಗೆ ಆಗುತ್ತೆ.
ನಿನ್ನ ಅಮ್ಮನ ಕೋಣೆ ಹಾಲ್‌ನ ಆಚೆ ಇದೆ,
ಮತ್ತು ಇದು ನಿನ್ನದು.
ನಿನ್ನ ಅಮ್ಮನ ಕಂಪನಿ ಅದ್ಭುತವಾದ ಸ್ಥಳವನ್ನು ನಿರ್ಮಿಸಿದೆ.
ಹೌದು.
ಕ್ಷಮಿಸು.
6:00 ಔಷಧಿ ಸಮಯ
ಸರಿ, ನಾನು ಹೋಗುತ್ತೇನೆ.
ನಿನಗೆ ಏನಾದರೂ ಬೇಕಾದರೆ ನನಗೆ ಕರೆ ಮಾಡು.
ಆಫ್ ವೀಡರ್‌ಝೇನ್. ಬೈ-ಬೈ.
ಥ್ಯಾಂಕ್ಸ್, ಅಮಾರ.
ನಾಳೆಯ ವೇಳಾಪಟ್ಟಿಯಲ್ಲಿ ಏನಿದೆ?
ಸತತ ಸಭೆಗಳು ಮತ್ತು ಪಾರ್ಟಿ ಯೋಜನೆ ಇದೆ.
ಯಾವ ಪಾರ್ಟಿ?
ನಿಧಿಸಂಗ್ರಹಣೆಗಾಗಿ.
ಹೋಟೆಲ್ ನಿರ್ಮಿಸಲು ನಮಗೆ ಅವರು ಅವಕಾಶ ನೀಡಿದ್ದಕ್ಕಾಗಿ,
ನಾವು ಮಯೋರ್ಕಾದ ಮಕ್ಕಳಿಗಾಗಿ ಒಂದು ಕಲಾ ಕೇಂದ್ರ ನಿರ್ಮಿಸುತ್ತಿದ್ದೇವೆ.
ಒಳ್ಳೆಯ ಕೆಲಸ.
ಏನಾದರೂ ತೊಂದರೆಯಾ?
ಕಂಪನಿಯಿಂದ. ಶರತ್ಕಾಲದ ಸಮಯಕ್ಕೆ ವಾಪಸ್ ಹೋಗುತ್ತೇನಾ ಅಂತ ತಿಳಿದುಕೊಳ್ಳಲು.
ನೀನು ವಾಪಸ್ ಹೋಗುತ್ತೀಯ, ಅಲ್ವಾ?
ಈ ಬೇಸಿಗೆಗೆ ವಿಶ್ರಾಂತಿ ಪಡೆದು,
ನಂತರ ಕೆಲಸಕ್ಕೆ ವಾಪಸ್ ಹೋಗುತ್ತೀಯ, ಅಲ್ವಾ?
ಹೌದು.
ಋತುವಿನ ಅಂತ್ಯವನ್ನು ಆಚರಿಸಲು ನಾವೆಲ್ಲರೂ ರಾತ್ರಿ ಹೊರಗೆ ಹೋಗುತ್ತಿದ್ದೇವೆ.
ನೀನಿದ್ದರೆ ಚೆನ್ನಾಗಿರುತ್ತಿತ್ತು.
ಹೇಗಿದ್ದೀಯ? ಹೊಸ ಔಷಧಿ ಸಹಾಯ ಮಾಡುತ್ತಿದೆಯಾ?
ಇನ್ನೂ… ಇದಕ್ಕೆ ಹೊಂದಿಕೊಳ್ಳಬೇಕು.
ನಾವೆಲ್ಲರೂ ನಿನ್ನ ಬಗ್ಗೆ ತುಂಬಾ ಚಿಂತಿಸುತ್ತಿದ್ದೇವೆ.
ಮೊದಲನೆಯದಾಗಿ, ಹಾಗೆ ಮಾಡಬೇಡಿ.
ಎರಡನೆಯದಾಗಿ, ನಾನು ಚೆನ್ನಾಗಿದ್ದೇನೆ.
ಅಮ್ಮ ನಾಳೆಗೆ ತುಂಬಾ ಪ್ಲಾನ್ ಮಾಡಿದ್ದಾಳೆ,
-ಅವಳು ಬೆಳೆದ ಜಾಗ ತೋರಿಸುತ್ತಾಳೆ. -ನಿನ್ನ ಅಮ್ಮ ಸೂಪರ್.
ನಾನು ಹೇಳಿದ್ದನ್ನು ಮರೆತುಬಿಡು. ನಾವೂ ನಿಮ್ಮ ಜೊತೆ ಬಂದಿದ್ದರೆ ಚೆನ್ನಾಗಿರ್ತಿತ್ತು.
ಸ್ಪೇನ್‌ನಲ್ಲಿ ಸುಂದರ ಯುವಕ ಸಿಕ್ಕರೆ ಹೇಳು.
-ಸರಿಯಾ? -ಆಯ್ತು.
-ಖಂಡಿತ. -ಲವ್ ಯು, ಚಿನ್ನ. ಕರೆ ಮಾಡುತ್ತಿರು.
ಲವ್ ಯು, ರೈ!
ಲವ್ ಯು. ಬೈ.
11:00 ಔಷಧಿ ಸಮಯ
ಸುಮಾರು 150 ಅತಿಥಿಗಳು ಬರುತ್ತಾರೆ.
ಅದ್ಭುತ.
ಹೇ, ರೈ, ನಿನಗೆ ಹಾಲು ಬಣ್ಣ ಇಷ್ಟವೋ ಗೋಧಿ ಬಣ್ಣವೋ?
ಅವೆಲ್ಲಕ್ಕೂ ಆಹಾರದ ಹೆಸರನ್ನೇ ಏಕೆ ಇಡಬೇಕು?
ಗೊತ್ತಿಲ್ಲ.
ಚಿನ್ನ, ನೀನು ಹೋಗಿ ಮೋಜು ಮಾಡು, ನಾವು ನಂತರ ಭೇಟಿಯಾಗೋಣವಾ?
-ನಾನು ಬೀಚ್‌ಗೆ ಹೋಗುತ್ತಿದ್ದೆ. -ಸರಿ, ಅದು ಒಳ್ಳೆಯ ಐಡಿಯಾ.
ಡ್ರೈವರ್ ಜೊತೆ ಹೋಗು.
ಹೆಚ್ಚುವರಿ ಮಾತ್ರೆ ಇಟ್ಟುಕೊಂಡಿರು.
ನೀರು ಕೂಡ. ಸ್ವಲ್ಪ ಸನ್‌ಸ್ಕ್ರೀನ್ ಹಚ್ಚಿಕೋ, ಚಿನ್ನ.
-ಮತ್ತು, ರೈ… -ಎಚ್ಚರಿಕೆಯಿಂದಿರಬೇಕಾ?
ಮಜಾ ಮಾಡು.
ತೆಂಗಿನ ಹಾಲಿನ ಬಣ್ಣ ಇಷ್ಟ.
ನೋಡಿದಿರಾ? ಕಾಳಜಿ ಇಲ್ಲ ಅಂತ ನಟಿಸುತ್ತಾಳೆ, ಆದರೆ ಕಾಳಜಿ ಇದೆ.
-ಹಾಯ್. -ಹಾಯ್.
ಬೆಳಿಗ್ಗೆ ಜನ ಇರಲಿಲ್ಲವಾ?
-ಯಾಕೆ? -ನಿನ್ನ ಕಣ್ಣು.
-ನನಗೆ ಐಲೈನರ್ ಇಷ್ಟವಾಯಿತು. -ಥ್ಯಾಂಕ್ಸ್.
ಎಲ್ಲಿಗೆ ಪಯಣ?
ಯಾವ ಬೀಚ್‌ಗೆ ಹೋಗಲಿ ಅಂತ ನಿನ್ನನ್ನು ಕೇಳಬೇಕೆಂದಿದ್ದೆ.
ನನಗೆ ಒಳ್ಳೆಯ ಜಾಗ ಗೊತ್ತು.
ಇದು ನಿಜಕ್ಕೂ ಒಂದು ಗುಪ್ತ ರತ್ನ.
-ಥ್ಯಾಂಕ್ಸ್. -ಮಜಾ ಮಾಡು.
ಸರಿ.
ನಾನು ಹೃದಯ ಮಯೋರ್ಕಾ
ಏನಾದರೂ ಸಹಾಯ ಬೇಕಾ?
ಇಲ್ಲ, ಇಲ್ಲ.
-ಗುರಾಯಿಸೋದು ಅಸಭ್ಯ, ಮಿಸ್. -ನಾನು…
ನಾನು ಗುರಾಯಿಸುತ್ತಿರಲಿಲ್ಲ. ಹಾಗೇ…
ನಿನ್ನ ಹಿಂದೆ ನೋಡುತ್ತಿದ್ದೆ.
ವಾಹ್. ಸುಂದರ ನೋಟ.
-ಸರಿ, ನಾನು ಹೋಗುತ್ತೇನೆ. -ಹೌದು, ನೀನು ಹೋಗಬೇಕು.
-ಏನಂದೆ? -ನೀನು ಹೋಗಬೇಕು ಅಂದೆ.
-ನಾನು ತಪ್ಪು ಮಾಡಿದೆನಾ? ನಿನಗೆ ಸಮಸ್ಯೆ ಇದೆಯಾ? -ನನಗೆ ಸಮಸ್ಯೆ ಇದೆ.
ಇದು ಸ್ಥಳೀಯರ ಬೀಚ್.
ನಾವು ಸೂರ್ಯಸ್ನಾನ ಮಾಡುವಾಗ ಪ್ರವಾಸಿಗರು ಗುರಾಯಿಸೋದು ನಮಗಿಷ್ಟವಿಲ್ಲ.
ಕ್ಷಮಿಸು. ಇದು ಸ್ಥಳೀಯರಿಗೆ ಮಾತ್ರ ಇರೋ ಬೀಚ್ ಅಂತ ಗೊತ್ತಿರಲಿಲ್ಲ.
ನನಗೆ ಈಜುವ ಆಸೆ ಇತ್ತು.
ಮಾರೆಸ್ & ಮಾರ್ ಹೋಟೆಲ್‌ನಲ್ಲಿನ ಪೂಲ್ ನಿನಗೆ ಇಷ್ಟವಾಗಬಹುದು.
ನಿನಗೆ ಹೇಗೆ…
ಏಕೆ? ನಾನು ನಿನ್ನ ಗಮನ ಸೆಳೆಯುತ್ತಿದ್ದೇನಾ?
ಇಲ್ಲ.
ನಾನು ಹೋಗುತ್ತೇನೆ.
ಹಾಯ್. ಹಲೋ. ನಿಮ್ಮ ಹತ್ತಿರ…
ಸರಿ.
ನಮಸ್ಕಾರ. ಇಲ್ಲಿ ಕೇಳಿ.
ನೀವು ಇಂಗ್ಲೀಶ್ ಮಾತಾಡುತ್ತೀರಾ?
ನನ್ನ ಹತ್ತಿರ ಹಲವು ವರ್ಣಚಿತ್ರಗಳು ಮಾರಾಟಕ್ಕಿವೆ.
ನನಗೆ… ನಿಮ್ಮ ಬಳಿ ಚಾರ್ಜರ್ ಇದೆಯಾ?
ಬಹುಶಃ ಬಲ ಬದಿಯಲ್ಲಿದೆ? ಅಥವಾ ಮೇಲಿದೆ?
ನನಗೆ ನಿಮ್ಮ…
ಕ್ಷಮಿಸಿ.
ಕ್ಷಮಿಸಿ. ನಿಮ್ಮ ದಿನ ಚೆನ್ನಾಗಿರಲಿ. ಥ್ಯಾಂಕ್ಸ್.
-ಓ ದೇವರೇ. -ಕ್ಯಾಬ್ರಾನ್.
ಕ್ಷಮಿಸು.
ಕ್ಷಮಿಸು.
ಕೇಳು, ಮಿಸ್.
ನೀನು ನೋಡಬಹುದು ಆದರೆ ಮುಟ್ಟಬಾರದು.
ಪೊಲೀಸ್ ಕಂಪ್ಲೇಂಟ್ ಕೊಡಲಾ?
ತಮಾಷೆ ಮಾಡಬೇಡ. ನಾನು ಹೊಟೇಲ್‌ಗೆ ಹೋಗ್ತಿದ್ದೇನೆ.
ದಯವಿಟ್ಟು, ನನಗೆ ದಾರಿ ಬಿಟ್ಟರೆ.
ಆ ದಾರಿ ಅಲ್ಲ.
ಆ ದಾರಿಯೂ ಅಲ್ಲ.
ದಾರಿ ತಪ್ಪಿದೆಯಾ, ಮಿಸ್ ಅಮೇರಿಕಾ?
ಇಲ್ಲ, ದಾರಿ ತಪ್ಪಿಲ್ಲ.
ಈ ಸುಂದರವಾದ ಅಂಕುಡೊಂಕಾದ ಬೀದಿಗಳಲ್ಲಿ ವಿಹರಿಸುತ್ತಿದ್ದೇನೆ.
ನೀನು ನಿರಾಕರಿಸಬಹುದು,
ಅಥವಾ ದಾರಿ ತಪ್ಪಿದ್ದನ್ನು ಒಪ್ಪಿಕೊಂಡು ನನ್ನ ಸಹಾಯ ಕೇಳಬಹುದು.
ನಾನು ದಾರಿ ತಪ್ಪಿಲ್ಲ.
ಸಹಾಯ ಬೇಕಿಲ್ಲ, ಥ್ಯಾಂಕ್ಸ್.
ನೀನೇನು ಮಾಡುತ್ತಿದ್ದೀಯ? ನನ್ನನ್ನು ಹಿಂಬಾಲಿಸುತ್ತಿದ್ದೀಯಾ?
ಹೌದು. ನೀನು ಬೀಚ್‌ನಲ್ಲಿ ನನ್ನನ್ನು ಕಣ್ತುಂಬಿಕೊಳ್ಳುತ್ತ ನನ್ನ ಮೇಲೆ ಪ್ರಭಾವ ಬೀರಿದೆ,
ನಿನ್ನಿಂದ ದೂರವಿರಲು ಸಾಧ್ಯವಾಗಲಿಲ್ಲ.
-ನೀನು ಯಾವಾಗಲೂ ಇಷ್ಟು ವಿಚಿತ್ರವಾಗಿರ್ತೀಯಾ? -ವಿಚಿತ್ರವಾ?
ನನಗೆ ನಿನ್ನ ಬಗ್ಗೆ ಚಿಂತೆಯಾಗಿತ್ತು,
ಆದರೆ ನನಗೆ ಮಾಡಲು ತುಂಬಾ ಕೆಲಸಗಳಿವೆ,
No comments yet. Be the first to leave one.