Οι πρώτες 200 γραμμές.
ಬದುಕು ಬಹಳ ಬೇಗ ಬದಲಾಗುತ್ತದೆ ಎಂಬುದೇ ವಿಚಿತ್ರ.
ಒಂದು ವರ್ಷದ ಹಿಂದೆ, ನಾನು ಹೊಸ ಜೀವನ ಶುರುಮಾಡಲು ಲಂಡನ್‌ಗೆ ಬಂದೆ,
ನಾನು ಯಾವುದು ಬೇಡವೆಂದು ಓಡುತ್ತಿದ್ದೆನೋ ಅದೇ ನನ್ನನ್ನು ಹುಡುಕಿ ಬಂತು.
ಆದರೆ ನಾನು ಹೇಗೋ ಏನೋ ಬಚಾವಾದೆ,
ನಾನು ಯಾರನ್ನು ಪ್ರೀತಿಸಬಾರದಿತ್ತೋ ಅವನನ್ನೇ ಕೊನೆಗೆ ಪ್ರೀತಿಸಿಬಿಟ್ಟೆ.
ಒರಟು ಮನುಷ್ಯನ ಚಮತ್ಕಾರ,
ತಾಯಂದಿರು ಯಾರ ಬಗ್ಗೆ ಎಚ್ಚರಿಸುತ್ತಾರೋ ಅಂತಹವನು.
ನನ್ನ ಅಮ್ಮ ಅವನ ತಂದೆಯನ್ನೇ ಮದುವೆಯಾಗಿ, ನಾವು ಒಟ್ಟಿಗೆ ಇರಬೇಕಾಗಿದ್ದು ವಿಪರ್ಯಾಸ.
ನನಗೆ ಯಾವ ಅವಕಾಶವೂ ಇರಲಿಲ್ಲ.
ದೇವರೇ, ನಾನು ನಿಕ್ ಲೆಸ್ಟರ್ ಬಲೆಗೆ ಬೀಳದಿರಲು ಸಾಧ್ಯವೇ?
ಆದರೆ ನಿಜವಾದ ಪ್ರೀತಿಯನ್ನು ಪಡೆಯುವುದಕ್ಕಿಂತ ಕಷ್ಟ ಎಂದರೆ
ಅದನ್ನು ಕಾಪಾಡಿಕೊಳ್ಳುವುದು.
ಯುವರ್ ಫಾಲ್ಟ್: ಲಂಡನ್
ಬಾ.
ಹಿಡಿ ನೋಡೋಣ!
ಅವನು ನನ್ನವನು ಎಂದು ನಂಬುವುದಕ್ಕೇ ಆಗಲಿಲ್ಲ.
ನಾನು ಇದನ್ನು ಇಡೀ ಪ್ರಪಂಚಕ್ಕೆ ಹೇಳೋಣ ಅಂತಿದ್ದೆ,
ಆದರೆ ನಿಕ್ ಇದನ್ನು ಗುಟ್ಟಾಗಿ ಇಡಲು ಬಯಸಿದ್ದ.
ನನಗರ್ಥ ಆಗುತ್ತದೆ. ಸುರಕ್ಷಿತವಾಗಿರಲೆಂದು ಕೆಲವೊಂದನ್ನು ಗುಟ್ಟಾಗಿ ಇಡುತ್ತೇವೆ.
ಆದರೆ ಕೆಲವು ಗುಟ್ಟುಗಳು ರಟ್ಟಾಗಲೇಬೇಕು.
ಅವು ಥಟ್ಟಂತ ಹೊರಬಂದು, ಆಘಾತ ನೀಡುತ್ತವೆ.
ಅಯ್ಯೋ.
ಛೇ!
ಅವು ಹಾಗೆ ಹೊರಬಂದಾಗ,
ಅದೇ, ಬದುಕು ಬಹಳ ಬೇಗ ಬದಲಾಗುವುದೇ ವಿಚಿತ್ರ.
ಆಯಿತು ಬಿಡು. ನೀನೇ ಗೆದ್ದೆ.
ಆಘಾತ.
ಬಹುಮಾನದ ರೂಪದಲ್ಲಿ ಏನು ಬೇಕು?
ಅದು ನಿನಗೂ ಗೊತ್ತು.
ಹಾಗಾದರೆ, ನೀನೇ ಬಂದು ಅದನ್ನು ಪಡೆಯಬೇಕು.
-ಬಾ ಬೇಗ. ಬಾ. -ಏನು?
ನಿಕ್.
ಹೇ, ಕೇಳು.
ವಾಪಸ್ ಬಾ.
ನಿಕ್.
ನಿಕ್?
ಏನು ಮಾಡುತ್ತಿದ್ದೀಯ ನೀನು?
ನಿಕ್.
ದೇವರೇ, ನೀನು ಮಹಾನ್--
ಆಶ್ಚರ್ಯ!
ದೇವರೇ, ನೀವು ಸೂಪರ್.
ಹುಟ್ಟುಹಬ್ಬದ ಶುಭಾಷಯ, ಚಿನ್ನ.
ಇವರೆಲ್ಲರೂ ಯಾರು?
ಇವರು ಬ್ರಿಟಿಷ್ ನಾಗರಿಕ ಸಂಘದ ಖ್ಯಾತ ಹಾಗೂ ಸಭ್ಯ ಜನರು, ಚಿನ್ನ.
ನಗುಬೀರು ಹಾಗೂ ಕೈಬೀಸು,
-ನನಗೂ ಏನೂ ಗೊತ್ತಿಲ್ಲ. -ಸರಿ.
-ನಮಸ್ಕಾರ! -ಮಾಡೀ!
ಜನ್ಮದಿನದ ಶುಭಾಶಯಗಳು.
ನೀವು ಇದನ್ನೆಲ್ಲಾ ಮಾಡಿದಿರಿ ಎಂದರೆ ನಂಬಲಾಗುತ್ತಿಲ್ಲ. ಬಹಳ ಚೆನ್ನಾಗಿದೆ.
ನಿಕ್ ಮಾತು ಅಷ್ಟೊಂದು ಪ್ರಭಾವ ಬೀರಿತೇ?
ಸಿಕ್ಕಾಪಟ್ಟೆ ಪ್ರಭಾವ ಬೀರಿತು.
ಅವರ ಬಳಿ ನೀಲಿ ಬಣ್ಣದ್ದು ಇರಲಿಲ್ಲ.
ಅಮ್ಮ.
ನೀಲಿ ಬಣ್ಣದ್ದು?
ನೋವಾಗೆ ಸುಮಾರು ಐದು ವರ್ಷ ಇದ್ದಾಗ,
ಅವಳಿಗೆ ಒಂದು ಕೈತೋಟ ನೋಡಿಕೊಳ್ಳಲು ಹೇಳಿದ್ದೆ,
ಅವಳು ಅಲ್ಲಿ ಮಾಡಲು ಬಯಸಿದ್ದು ನೀಲಿ ಗುಲಾಬಿ ಬೆಳೆಸುವುದು ಮಾತ್ರ.
ಅಂದರೆ ಕಲಾಕೃತಿ ಮಳಿಗೆಯಲ್ಲಿ ಕಾಣುವ ಬಣ್ಣಬಣ್ಣದ ನಕಲಿ ಹೂವುಗಳ ಥರದ್ದಾ?
ಅವು ಬಹಳ ಸುಂದರ ಎನಿಸಿತ್ತು ನನಗೆ.
ಹೂಂ, ಫ್ಲೊರಿಡಾ ಹುಡುಗಿಯರು ಎಂದರೆ ಹೀಗೇ…
ಹೇ!
ಬಂದಳು ನೋಡು.
ಏನು ಇದು?
ನೀವು ಆಕ್ಸ್‌ಫರ್ಡ್‌ಗೆ ತೆಗೆದುಕೊಂಡು ಹೋಗಲು.
ನಿಮಗೆ ಮನೆಯ ನೆನಪಾದರೆ ಅವಳನ್ನು ಅಪ್ಪಿಕೊಳ್ಳಿ.
-ದೇವರೇ, ಇದೊಂದು ಬೆಕ್ಕು. -ತುಂಬಾ ಇಷ್ಟವಾಯಿತು.
ಈಗ ನಾನು ಶಾಲೆಯಲ್ಲಿ ಒಂಟಿಯಲ್ಲ.
ಜೆನ್ನಾ! ನಿನ್ನನ್ನು ಹಿಡಿಯುತ್ತೇನೆ ಈಗ!
ಬಿಯರ್ ಖಾಲಿ ಆಗಿದೆ.
-ನಮಗಾಗಿ ಎರಡು ಉಳಿಸಿದ್ದೆ. -ಧನ್ಯವಾದ.
ಶುರು ಮಾಡು, ಗೆಳೆಯ.
ಒಂದು ವಿಷಯ ಗುಟ್ಟಾಗಿ ಇಡುವೆಯಾ?
ಏನದು?
ನಾನು ನನ್ನ ಅಜ್ಜಿಯ ಉಂಗುರ ತಂದಿದ್ದೇನೆ, ಜೆನ್ನಾಗೆ ಪ್ರೇಮನಿವೇದನೆ ಮಾಡಲಿದ್ದೇನೆ.
ಅಂದರೆ, ಯಾವಾಗ, ಇವತ್ತಾ?
-ಅಲ್ಲ. -ಅಲ್ಲವೇ?
-ಇಲ್ಲ, ಇಲ್ಲ, ಇವತ್ತಲ್ಲ. -ನಿಜ?
-ಹಾಂ, ನಿಜ, ಆದರೆ ಇವತ್ತಲ್ಲ. -ಅಭಿನಂದನೆ ಕಣೋ.
-ಧನ್ಯವಾದ, ಧನ್ಯವಾದ. -ಮದುಮಗನ ಗೆಳೆಯ ಆಗಬೇಕೇ?
ಹಾಂ, ಮದುಮಗನ ಗೆಳೆಯ ಆಗು.
-ಒಳ್ಳೆಯ ವಿಷಯ. ನನಗೆ ಇಷ್ಟವಾಯಿತು. -ಹಾಂ.
ಇದಕ್ಕೂ ಮುಂಚೆ ನಾನು ಒಂದಷ್ಟು ವಿಷಯ ಬಗೆಹರಿಸಬೇಕು, ಆಯ್ತಾ?
ನನಗೆ ಸಾಲ ಎಲ್ಲಾ ತೀರಿಸಿಕೊಳ್ಳಬೇಕು,
ತಲೆ ಮೇಲೆ ಯಾವ ಹೊರೆಯೂ ಬೇಡ.
ನನಗೆ ಅರ್ಥ ಆಯಿತು. ಹಾಂ, ನಾನಿದ್ದೇನೆ ಬಿಡು.
ನಿಕ್, ನನಗೆ ನಿನ್ನ ಹಣ ಬೇಡ, ಆದರೆ…
ಒಂದು ರೇಸ್ ಇದೆ.
ಅದರ ಮೇಲೆ ಜಿಮ್‌ನ ಬಾಜಿ ಕಟ್ಟಿದ್ದೇನೆ.
ಇಲ್ಲ, ಇಲ್ಲ.
-ನಾನು ಈಗ ಅದನ್ನೆಲ್ಲಾ ಮಾಡುತ್ತಿಲ್ಲ. -ಇಲ್ಲ, ಇಲ್ಲ.
ನೀನು ನಿದ್ದೆಯಲ್ಲೂ ಇವನನ್ನು ಸೋಲಿಸಬಹುದು.
ಸಾಕಾಗಿದೆ. ನನಗೆ ಬೇಡ. ನೋವಾಗೆ ಮಾತು ಕೊಟ್ಟಿದ್ದೇನೆ. ಕೆಲಸ ಇದೆ.
ನೀನು ಗೆದ್ದರೆ, ನಾನಿದೆಲ್ಲಾ ಬಿಡುವೆ.
ಮೂರ್ಖ ಬಾಜಿ ಕಟ್ಟಿದೆ, ಆದರೆ ಈಗ ಹಿಂದಡಿ ಇಡಲು ಆಗಲ್ಲ--
ಹೇ, ಇಲ್ಲಿ ನೋಡಿ.
ಯಾಕೆ ಅಷ್ಟೊಂದು ಅನುಮಾನಾಸ್ಪದ ನೋಟ?
ನೀನ್ಯಾಕೆ ಅನುಮಾನದಿಂದ ನೋಡುತ್ತಿರುವೆ?
ಒಳ್ಳೆಯ ಪ್ರಶ್ನೆ.
ಎಲ್ಲರೂ ಬನ್ನಿ, ದಯವಿಟ್ಟು.
ಒಳ್ಳೇ ತಿರುಗೇಟು ಕೊಟ್ಟೆ.
ನಿಕ್…
ಇರು, ದಯವಿಟ್ಟು…
ನಾನು ಇದನ್ನು ಮಾಡಿದರೆ,
ನೋವಾಗೆ ಯಾವತ್ತೂ ಗೊತ್ತಾಗಕೂಡದು.
ಸರಿ.
ನಮ್ಮ ಹುಡುಗಿಯರಿಗೆ ಹೇಳುವುದು ಬೇಡ.
-ಆಯ್ತಾ? -ಸರಿ ಬಿಡು.
ಇಲ್ಲಿ ಕೆಲವರಿಗೆ ಆಗಲೇ ಗೊತ್ತಿದೆ,
ಆದರೆ ಇವತ್ತು ಎರಡೆರಡು ಸಂಭ್ರಮ.
ಇವತ್ತು ನನ್ನ ಸುಂದರ ಹಾಗೂ ಜಾಣ ಮಗಳ ಹುಟ್ಟುಹಬ್ಬ ಮಾತ್ರವಲ್ಲ,
ಅವಳು ಆಕ್ಸ್‌ಫರ್ಡ್‌ಗೂ ಹೋಗುತ್ತಿದ್ದಾಳೆ,
ಅಲ್ಲಿ ಅವಳು ಇಂಜಿನಿಯರಿಂಗ್ ಓದಲಿದ್ದಾಳೆ.
ಸಧ್ಯದಲ್ಲೇ ಅವಳು ಒಂದು ಫಾರ್ಮುಲಾ ಒನ್ ತಂಡದ ನಿರ್ದೇಶಕಿ ಆಗುವುದರಲ್ಲಿ ಸಂದೇಹವೇ ಇಲ್ಲ.
ಇದು ನೋವಾಗೆ.
ಇದು ನೋವಾಗೆ.
ಹಾಗೂ ಅವಳ ಉಜ್ವಲ ಭವಿಷ್ಯಕ್ಕೆ.
ನನಗೆ ಕೇಳುತ್ತಿರುವುದು ಇನ್ನೊಂದು ಆಶ್ಚರ್ಯವೇ?
-ಹಾಂ. ರಸ್ತೆ ಕಡೆಗೆ ನನ್ನನ್ನು ಹಿಂಬಾಲಿಸಿ. -ಬೇಗ ಬನ್ನಿ.
ಏನು ನಡೆಯುತ್ತಿದೆ?
-ಏನು ನಡೆಯುತ್ತಿದೆ? -ಹತ್ತಿರದಲ್ಲಿ.
ನೀನು ಬೆಚ್ಚಗಿದ್ದೀಯ.
ಏನು?
-ಹಾರೈಕೆಗಳು. -ಹಾರೈಕೆಗಳು.
-ಇದು ತಮಾಷೆಯಲ್ಲ ತಾನೆ? -ಅಲ್ಲ.
ನಿನ್ನ ಆಕ್ಸ್‌ಫರ್ಡ್ ಪ್ರಯಾಣ ಇನ್ನಷ್ಟು ಮಜವಾಗಿರಲಿ ಎಂದು.
ಒಂದು ನಿಮಿಷ.
ನನಗಿದು ಇಷ್ಟವಾಯಿತು.
ಧನ್ಯವಾದ!
ಏನು?
ನಡಿ, ಶುರು ಮಾಡು!
ಮಾಡು, ನೋವಾ, ಓಡಿಸು.
ಹೇಳು, ಆಚ್ಚರಿ ಇಷ್ಟವಾಯಿತಾ?
ಹಾಂ, ಆದರೆ, ನೀನು ಅಷ್ಟು ಸುಲಭವಾಗಿ ಸುಳ್ಳು ಹೇಳಿದ್ದು ಇಷ್ಟವಿಲ್ಲ.
ಹೇ, ಅಚ್ಚರಿಯ ಪಾರ್ಟಿ ಆಯೋಜಿಸುವುದು
-ಸುಳ್ಳು ಹೇಳಿದಂತಲ್ಲ, ಪ್ರೀತಿ ತೋರಿದಂತೆ. -ಸರಿ ಬಿಡು.
ನೋವಾ, ಹೇ.
ಎಬ್ಬಿಸಿದ್ದಕ್ಕೆ ಕ್ಷಮಿಸು, ಆದರೆ ನಮಗೆ ಸುಮಾರು ಮೂರು ನಿಮಿಷ ಮಾತ್ರ ಇದೆ.
ಬೇಗ ಎದ್ದೇಳು.
ನನಗೆ ಇದು ಪದೇಪದೇ ನೆನಪಾಗುತ್ತೆ.
ನನ್ನ ಮೈ ನೋಡುತ್ತಿದ್ದೀಯಾ?
ಸರಿಯಾಗಿ ವರ್ತಿಸು.
ಸರಿ, ನಿನ್ನ ಕಣ್ಣು ಮುಚ್ಚಿಕೋ.
ಯಾಕೆ?
ಸುಮ್ಮನೇ ಕಣ್ಣು ಮುಚ್ಚಿಕೋ.
ಬಾ ಇಲ್ಲಿ.
ಕಣ್ಣು ಬಿಡು.
ಹುಟ್ಟುಹಬ್ಬದ ಶುಭಾಷಯ.
ನನಗಿದು ಇಷ್ಟ ಆಯಿತು.
ಇದು… ನೀನು ಆಕ್ಸ್‌ಫರ್ಡ್‌ನಲ್ಲಿ ಇರುವಾಗ ನನ್ನನ್ನು ಮರೆಯದಿರಲಿ ಅಂತ.
ನೀನು ನನಗೆ ಇಷ್ಟ.
ನೀನು ಹೀಗೆ ಹೇಳುತ್ತಿದ್ದರೆ,
ಯಾವತ್ತೂ ಬೇಸರ ಆಗುವುದಿಲ್ಲ.
ಸರಿ ಹಾಗಾದರೆ.
ನೀನೂ ವಾಪಸ್ ಹೇಳು.
ಬೇಗ ಹೇಳು.
ನೀನೂ ನನಗೆ ಇಷ್ಟ, ನಿಕ್.
ಸರಿ ಬಿಡು.
ಇರು!
ಅವನ ಅಲಾರ್ಮ್ ಎರಡು ನಿಮಿಷದ ಹಿಂದೆ ಮೊಳಗಿತು. ಛೇ.
ಅವರಿಗೆ ಯಾವಾಗ ಹೇಳೋದು ನಾವು?
ಆದಷ್ಟು ಬೇಗ. ನಾನು--
ಈಗಂತೂ ಬೇಡ. ನನ್ನ ತಂದೆಯ ತಲೆಯಲ್ಲಿ ಏನೇನೋ ಇದೆ.
-ಸರಿನಾ? ಹೇಳೋಣ. ಆದರೆ ಈಗ ಬೇಡ. -ಸರಿ.
ಯಪ್ಪಾ, ತುಂಬಾ ಅಂದವಾಗಿದ್ದೀಯ.
ನಿನ್ನ ಜೊತೆ ಹಾಸಿಗೆಯಲ್ಲೇ ಇರಬೇಕು ಎನಿಸುತ್ತೆ.
ಸರಿ.
ತಿಂಡಿ ಸಮಯದಲ್ಲಿ ಸಿಗೋಣ.
ಶುಭೋದಯ, ನಿಕ್.
ಶುಭೋದಯ. ಹಾಯ್.
-ಇಷ್ಟು ಬೇಗ ಎದ್ದಿದ್ದೀರ. -ಹಾಂ, ನಿದ್ದೆ ಬರಲಿಲ್ಲ,
ಹಾಗಾಗಿ ಆ ಸ್ವಾಧೀನದ ಭಾಷಣಕ್ಕೆ ತಯಾರಿ ನಡೆಸೋಣ ಎಂದುಕೊಂಡೆ.
ನಿನಗೆ ಪರವಾಗಿಲ್ಲ ಎಂದರೆ, ನೀನು ಅದಕ್ಕೆ ಸಹಾಯ ಮಾಡಬೇಕು.
-ತುಂಬಾ ಖುಷಿ ಆಗುತ್ತೆ. -ಒಳ್ಳೆಯದು.
ಒಂದಂತೂ ಹೇಳಬೇಕು, ಈ ಉದ್ಘಾಟನೆಗೆ ನೀನು ತೋರುತ್ತಿರುವ ಶ್ರದ್ಧೆ ನನಗೆ ಇಷ್ಟವಾಯಿತು.
-ನನ್ನ ಕಚೇರಿಗೆ ಹೋಗೋಣ ಬಾ. -ಹಾಗೆಯೇ ಆಗಲಿ.
ಹಾಂ, ನನ್ನ ಬಳಿ ಮೂರು ರೀತಿಯ ಆರಂಭಿಕ ಮಾತುಗಳು ಇವೆ.
ಹಾಂ?
ಮತ್ತೆ, ನನ್ನ ಹುಟ್ಟುಹಬ್ಬಕ್ಕೆ ಪೋರ್ಷೆ ಸಿಗುತ್ತಾ?
ಶುಭೋದಯ.
ಇಲ್ಲ.
ಬಾಕ್ಸಿಂಗ್ ಜಿಮ್ ಹೇಗೆ ನಡೆಯುತ್ತಿದೆ? ವ್ಯಾಪಾರ ಚೆನ್ನಾಗಿದೆಯಾ?
ಚೆನ್ನಾಗಿದೆ. ಜೆನ್ನಾ ತುಂಬಾ ಚೆನ್ನಾಗಿ ಹಣ ಸಂಗ್ರಹ ಮಾಡುತ್ತಿದ್ದಾಳೆ, ಗೊತ್ತಾ?
ಬೇರೆಬೇರೆ ಹಿನ್ನೆಲೆಯ ಮಕ್ಕಳನ್ನು ತೊಡಗಿಸುತ್ತಾ ಇದ್ದಾಳೆ.
ಹಾಂ, ನಿಜವಾಗಿಯೂ, ಅದಕ್ಕೆ ತುಂಬಾ ಸಾಮರ್ಥ್ಯ ಇದೆ.
ಮಕ್ಕಳಿಗೆ ಅದರಿಂದ ತುಂಬಾ ಪ್ರಯೋಜನ ಆಗುತ್ತಿದೆ. ಅದು ಒಳ್ಳೆಯದು.
-ತುಂಬಾ ಒಳ್ಳೆಯದು. -ಅವಳದು ಉಪಾಯ, ನನ್ನದು ಶ್ರಮದಾನ.
ಅದನ್ನು ಒಂದು ಸಲ ನೋಡಬೇಕು. ನಿಜವಾಗಿಯೂ.
ಈ ನೆಕ್‌ಲೇಸ್ ಬಹಳ ಮುದ್ದಾಗಿದೆ.
ಹಾಂ, ಇದೊಂದು ಉಡುಗೊರೆ.
ಯಾರು ಕೊಟ್ಟರು?
ಜೆನ್ನಾ.
ನನ್ನ ಹುಟ್ಟುಹಬ್ಬಕ್ಕೆ ಕೊಟ್ಟಳು.
-ಏನು? -ಈ ನೆಕ್‌ಲೇಸ್.
-ಹಾಂ. ನಾನೇ ಆ ನೆಕ್‌ಲೇಸ್ ಕೊಟ್ಟಿದ್ದು. -ಹೌದಾ?
ಈ ಸಲ ಉಡುಗೊರೆಗೆ ಸಖತ್ ಖರ್ಚು ಆಗಿದೆ.
ಕ್ರಿಸ್‌ಮಸ್‌ಗೆ ಏನು ಕೊಡುತ್ತೀನಿ ನೋಡು.
ಯಾರಿಗಾದರೂ ಕಾಫಿ ಬೇಕಾ?
-ಹೌದು, ದಯವಿಟ್ಟು. -ಹೌದು, ದಯವಿಟ್ಟು. ಧನ್ಯವಾದ.
ನನಗಿದು ಬಹಳ ನೆನಪಾಗುತ್ತೆ,
ನೀನೂ ಅಷ್ಟೇ, ಪುಟಾಣಿ ಆಕ್ಸ್‌ಫರ್ಡ್ ರಾಣಿ.
No comments yet. Be the first to leave one.