Reacher

Reacher

د Kannada ژباړه ډاونلوډ کړئ

4 فصل

د خپرونې معلومات

Reacher S04E04 Karambits and Pieces 1080p WEBRip 10Bit DDP5 1 x265-NeoNoir
د لخوا تبصره chargephoton88

تګونه

webdl
په خپور شو: 2026-08-23
ډاونلوډونه: 0
د اوریدلو معیوبیت: No
FPS: 23.976

د Kannada سرليکونو مخکتنه

لومړۍ 200 کرښې.

ರೀಚರ್ ಹಿಂದಿನ ಸಂಚಿಕೆಯಲ್ಲಿ…

ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿಯ ಸಿಬ್ಬಂದಿ ಮುಖ್ಯಸ್ಥ ಇರುವ

ರೈಲಿನಲ್ಲಿಯೇ ಮಹಿಳೆ ಆತ್ಮಹತ್ಯೆ ಮಾಡಿಕೊಂಡಳಾ?

ಅದಕ್ಕಾಗಿ ಸಿ ಐ ಎ ಜನರನ್ನು ಅಪಹರಿಸಲು ಪ್ರಾರಂಭಿಸುತ್ತದೆಯೇ?

ಅದು ರೋಚಕ ಕಥೆಯೇ.

ಬೆನ್ ಎಲ್ಲಿದ್ದಾನೆಂದು ನನಗೆ ಗೊತ್ತಿಲ್ಲ, ಆದರೆ ಅವನ ಜೊತೆ ಹೋದ ಹುಡುಗಿ ನನಗೆ ಗೊತ್ತು.

- ಹಾಂ. ನಿಜ ಹೆಸರು ಮೇರಿ ಎಲ್ಲೆನ್ ಡ್ಯಾನಿಯಲ್ಸ್. - ಯಾವುದಾದರೂ ವಿಳಾಸವಿದೆಯೇ?

ಇದನ್ನು ಮಾಡಿದವರು ಯಾರೋ ಹೊಸಬರಲ್ಲ.

ಆತ್ಮಹತ್ಯೆಯವಳ ಕಾರು ಸಿಕ್ಕಿದೆ.

ಇಷ್ಟು ಒಳ್ಳೆಯ ಕಾರನ್ನು ಬಿಟ್ಟು ಸಬ್‌ವೇಯಲ್ಲಿ

ಏಕೆ ಹೋಗಿರಬಹುದು ಅವಳು?

ಇದು ಕೆಲಸದ ಬ್ಯಾಡ್ಜ್.

ಹೆಸರು, ಆನಾ ಮೆರಿಕ್. ಕೆಲಸದ ವಿಳಾಸ ಮತ್ತು ಎಂಟನೇ ಹಂತದ ಅನುಮತಿ?

ಕನಿಷ್ಠ ಮುಂದೆ ಎಲ್ಲಿಗೆ ಹೋಗುತ್ತೇವೆಂದು ತಿಳಿದಿದೆ.

ಆನಾ ಇಲ್ಲಿ ಏನು ಮಾಡುತ್ತಿದ್ದಳು?

ಪೂತ್ರ ಮತ್ತು ಅವನ ಸೈನಿಕರಿಗೆ ಒಬ್ಬ ಅಮೆರಿಕನ್

- ಡೆಲ್ಟಾ ಫೋರ್ಸ್ ತಜ್ಞ ತರಬೇತಿ ಕೊಟ್ಟಿದ್ದ. - ಜಾನ್ ಸ್ಯಾಮ್ ಸನ್.

ಆ ಡ್ರೈವ್ ಸ್ಯಾಮ್ ಸನ್‌ನನ್ನು ಇದಕ್ಕೆ ಸಂಪರ್ಕಿಸುವ ಪುರಾವೆಯನ್ನು ಹೊಂದಿದೆ.

ನಾನು ಎಂದಿಗೂ ನಾಗರಿಕರನ್ನು ಹಿಂಸಿಸಿ ಕೊಂದಿಲ್ಲ.

- ನಿಮ್ಮ ಸಿಬ್ಬಂದಿ ಮುಖ್ಯಸ್ಥರ ಬಗ್ಗೆ? - ಆತನ ಬಗ್ಗೆ ಏನು?

ಆನಾ ಮೆರಿಕ್ ಸತ್ತ ರಾತ್ರಿ ನೀವು ಅವರ ಜೊತೆ ಸಬ್‌ವೇಯಲ್ಲಿ ಏಕೆ ಇದ್ದಿರಿ?

ಕ್ಷಮಿಸಿ, ಜಾನ್.

- ನೋಲಾನ್. ನೋಲಾನ್, ನೋಲಾನ್! - ಇಲ್ಲ!

ಬಾಲ್ಟಿಮೋರ್

ಮತ್ತು ಕೇಹಿಲ್ ಅವರು ಯಾವುದೇ ಸಂಕಟದ ಲಕ್ಷಣಗಳನ್ನು ತೋರಿದ್ದರೇ?

ಇಲ್ಲ.

ಅವರಿಗೆ ಏನಾದರೂ ನಿರ್ದಿಷ್ಟ ಸಂಕಟಗಳಿದ್ದವೇ? ಪ್ರಣಯ ಅಥವಾ ಆರ್ಥಿಕವಾದದ್ದು, ಅಂತಹದ್ದೇನಾದರೂ?

ನನ್ನ ಅರಿವಿಗೆ ಬಂದಿಲ್ಲ.

ಏನನ್ನಾದರೂ ಬರೆದಿದ್ದರಾ? ಒಂದು ಪಠ್ಯ ಸಂದೇಶ, ಬಹುಶಃ ಇಮೇಲ್?

ನೋಡಿ, ಡಿಟೆಕ್ಟಿವ್, ನಿಮ್ಮ ಸಂಪೂರ್ಣತೆಯನ್ನು ನಾನು ಮೆಚ್ಚುವೆ.

ಆದರೆ ಅವರು ಏನನ್ನೂ ಬಿಟ್ಟಿಲ್ಲ.

ಅವರು ಯಾವುದೇ ಅನುಮಾನಾಸ್ಪದ ವರ್ತನೆ ತೋರಿಲ್ಲ, ಮತ್ತು ಈಗ, ನಾನು--

ಕ್ಷಮಿಸಿ, ನನ್ನ ಸ್ನೇಹಿತನ ಸಾವನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

ಅರ್ಥವಾಯಿತು. ಇನ್ನೂ ಏನಾದರೂ ಪ್ರಶ್ನೆಗಳಿದ್ದರೆ, ನಾನು ನಿಮ್ಮ ಕಚೇರಿಯನ್ನು ಸಂಪರ್ಕಿಸುತ್ತೇನೆ.

ಧನ್ಯವಾದ.

ನಿಮ್ಮನ್ನು ಹೇಗೆ ಸಂಪರ್ಕಿಸುವುದು, ಮಿ. ರೀಚರ್?

ನಿಮಗೆ ಸಾಧ್ಯವಿಲ್ಲ.

ಮಿ. ರೀಚರ್ ಬಗ್ಗೆ ನಿಮ್ಮ ಯಾವುದೇ ವಿಚಾರಣೆಗಳನ್ನು ನನ್ನ ಕಚೇರಿ ರವಾನಿಸಬಹುದು.

ಸರಿ, ಹಾಂ. ಇಷ್ಟು ಸಾಕು. ನನ್ನ ಸಂತಾಪಗಳು.

ಪರಿಚಾರಕರು ಈಗಷ್ಟೇ ಕರೆ ಮಾಡಿದರು, ಸರ್. ಸುದ್ದಿ ಸಿಬ್ಬಂದಿ ಬರುತ್ತಿದ್ದಾರೆ.

ನಾವು ನಿಮ್ಮನ್ನು ಬೇರೆ ಸ್ಥಳಕ್ಕೆ ಕರೆದೊಯ್ಯಬೇಕು.

ಸರಿ, ನಾನು ಹೋಟೆಲ್‌ನಲ್ಲಿ ತಂಗಿದ್ದೆ ಎಂಬುದು ರಹಸ್ಯವೇನಲ್ಲ.

ಅಥವಾ ನೋಲಾನ್ ನನಗೆ ಕೆಲಸ ಮಾಡಿದ್ದು.

ಆತ್ಮಹತ್ಯೆಯ ಸ್ಥಳದಲ್ಲಿ ನೀವು ಇದ್ದದ್ದು ಒಳ್ಳೆಯದಲ್ಲ--

ಅಯ್ಯೋ, ಬಿಡು, ಸ್ಪ್ರಿಂಗ್ ಫೀಲ್ಡ್.

ಆ ವ್ಯಕ್ತಿಯೊಂದಿಗೆ 11 ವರ್ಷಗಳ ಕಾಲ ಸೇವೆ ಸಲ್ಲಿಸಿದೆ,

ಮತ್ತು ನಾನು ಆತನನ್ನು ಪಾರ್ಕಿಂಗ್ ಸ್ಥಳದಲ್ಲಿ, ಟಾರ್ಪ್ ಅಡಿಯಲ್ಲಿ ಬಿಡುವುದಿಲ್ಲ!

ಜಾನ್, ಈಗ ನೀನು ಆತನಿಗಾಗಿ ಏನೂ ಮಾಡಲು ಸಾಧ್ಯವಿಲ್ಲ.

ಪತ್ರಿಕೆಗಳವರಿಗೆ ಹೇಳಿಕೆಗಳು ಬೇಕು.

ಮತ್ತು ಈಗ ನೀನು ಅಧಿಕೃತ ಹೇಳಿಕೆ ನೀಡುವ

ಸ್ಥಿತಿಯಲ್ಲಿಲ್ಲ ಎಂದು ಬದುಕಿದ್ದಿದ್ದರೆ ನೋಲಾನ್ ತಾವೇ ಹೇಳುತ್ತಿದ್ದರು.

ನೋಡು, ಇದು ನಿನ್ನ ಮಿಲಿಟರಿ ತರಬೇತಿಗಿಂತ ಭಿನ್ನವಾಗಿಲ್ಲ.

ಕೆಲವೊಮ್ಮೆ, ನೀವು ಹಿಂದಡಿ ಇಟ್ಟು ಮನಸ್ಸು ಗಟ್ಟಿ ಮಾಡಿಕೊಳ್ಳಬೇಕಾಗುತ್ತದೆ.

ನಾನು ಬಿಯರ್ ಕುಡಿಯಬೇಕು.

ಈಗ ಬೆಳಿಗ್ಗೆ 9:00 ಗಂಟೆ.

ಮೂರನೇ ಪಾಳಿಯಿರುವ ಬಾರ್ ಗೊತ್ತು.

ವಾಷಿಂಗ್ಟನ್, ಡಿ.ಸಿ.

ಹೋಲ್ ಲಾಟ್ಟಾ ಲವ್ ಬೇಗೆಲ್‌ಗಳು ಮತ್ತು ಕಾಫಿ

- ಧನ್ಯವಾದಗಳು. - ಧನ್ಯವಾದಗಳು.

ನಿಮಗೆ ಯಾವ ರೀತಿಯ ಸಿಹಿಕಾರಕ ಇಷ್ಟ ಅಂತ ಗೊತ್ತಿರಲಿಲ್ಲ, ಹಾಗಾಗಿ ಸಕ್ಕರೆ,

ಸ್ಪ್ಲೆಂಡಾ ಮತ್ತು ಸ್ವೀಟ್ 'ಎನ್ ಲೋ ತಂದೆ.

ಸಕ್ಕರೆ ಸಾಕು, ಧನ್ಯವಾದ.

ಇನ್ನೂ ಮುಂದೆ, ಹಾಗಾದರೆ ಸಕ್ಕರೆಯೇ ತರುವೆ.

ಛೆ, ನಾನು ಈಗಷ್ಟೇ ಏನು ಕಂಡುಕೊಂಡೆ ಕೇಳಿ.

ಕಳೆದ ವರ್ಷ, ಕಾಂಗ್ರೆಸ್ ನೀರಸ ದ್ವಿಪಕ್ಷೀಯ ಕೊರತೆ ಕಡಿತ ಯೋಜನೆಯನ್ನು ಅಂಗೀಕರಿಸಿತು.

ನಮ್ಮ ಬೃಹತ್ ರಾಷ್ಟ್ರೀಯ ಸಾಲವನ್ನು

ಪೂರ್ತಿಯಾಗಿ ತೀರಿಸಲು ಅದು ಲಕ್ಷಗಟ್ಟಲೆ ಬಾರಿ ಕತ್ತರಿಸಿದಂತೆ.

ನಮ್ಮ ರಾಜಕಾರಣಿಗಳು ಏನೋ ಮಾಡುತ್ತಿದ್ದಾರೆ ಎಂದು

ಜನಸಾಮಾನ್ಯರ ಮನವೊಲಿಸಲು ಒಂದು ಅಲಂಕಾರ.

- ಗಮನ ಕೊಡು. - ಸರಿ, ಕ್ಷಮಿಸಿ.

ಹಾಗಿದ್ದಾಗ, ಅಂಥ ಒಂದು ಕಡಿತವು ದುಬಾರಿ ದಾಖಲೆ ಸಂಗ್ರಹಣಾ ಸೌಲಭ್ಯಗಳನ್ನು

ಸರ್ಕಾರದಾದ್ಯಂತ ಸ್ಥಗಿತಗೊಳಿಸುವುದು.

ದಶಕಗಳಷ್ಟು ಹಳೆಯ ದಾಖಲೆಗಳನ್ನು ಸಂಗ್ರಹಿಸಿದ್ದ ಗೋದಾಮುಗಳು.

ಬಾಡಿಗೆ ಶುಲ್ಕ, ನಿರ್ವಹಣೆಗಳ ಜೊತೆ, ಅವು ನಿಜವಾಗಿಯೂ ದುಬಾರಿಯಾಗಿದ್ದವು.

ಈಗ, ಹೊಸ ಕಾನೂನಿನ ಪ್ರಕಾರ, ಹತ್ತು ವರ್ಷಗಳಿಗಿಂತ ಹಳೆಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ,

ಸುರಕ್ಷಿತ ಸರ್ವರ್‌ಗೆ ಅಪ್‌ಲೋಡ್ ಮಾಡಿ, ನಂತರ ಕಾಗದದ ಪ್ರತಿಯನ್ನು ನಾಶಪಡಿಸಲಾಗುತ್ತದೆ.

ಅವರು ಅದನ್ನು ಮಾಡುತ್ತಿರುವ ಸ್ಥಳ ಇದಾಗಿರಬೇಕು.

ಊಹೆನಾ ಅಥವಾ ನಿಂಗೊತ್ತಾ?

ಸರ್ಕಾರವು ತನ್ನ ರಹಸ್ಯ ದಾಖಲೆ-ನಾಶ ಮಾಡೋ ಡಿಪೋಗಳ ವಿಳಾಸಗಳನ್ನು

ನಿಖರವಾಗಿ ಬಹಿರಂಗ ಮಾಡುವುದಿಲ್ಲ,

ಆದರೆ ಈ ಫೆಡರಲ್ ಒಡೆತನದ ಕಟ್ಟಡಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದೇನೆ,

ಹಾಗಾಗಿ, ಆ ಹೊಗೆಯ ರಾಶಿಯು ವಾಣಿಜ್ಯ ದರ್ಜೆಯ ದಹನಕಾರಕದ

ವಾಯುವಾಹಕ ಎಂದು ಹೇಳಬಹುದು.

ಸರ್ಕಾರಕ್ಕೆ ಏನಾದರೂ ಮುಖ್ಯವಾದ ವಸ್ತು ಹೋಗಬೇಕಾದಾಗ, ಅದನ್ನು ಸುಟ್ಟು ಹಾಕುತ್ತಾರೆ.

ಅದಕ್ಕಾಗಿಯೇ ಯಾರೂ ಮೂಲ ವಾರೆನ್ ಆಯೋಗದ ವರದಿಯನ್ನು ನೋಡಿಲ್ಲ.

ಅವುಗಳನ್ನು ಏಕೆ ಚೂರುಚೂರು ಮಾಡಲ್ಲ?

ಆರ್ಗೋ ಸಿನಿಮಾ ನೋಡಿಲ್ಲವೇ? ಅವರು ಅದನ್ನು ಮತ್ತೆ ಅಂಟಿಸಬಹುದು.

ನಾವು ಅಲ್ಲಿಗೆ ಹೋಗಬೇಕು. ಆನಾಗೆ ಏನು ಸಿಗುತ್ತಿತ್ತು ಎಂದು ನಾವು ನೋಡಬೇಕು.

ಮತ್ತು ಏನು ಕದ್ದಳೆಂದು.

ಹೇ, ಅದು ನಮಗೆ ಗೊತ್ತಿಲ್ಲ.

ನೋಡಪ್ಪ, ನಾನು ನಿನ್ನ ಅಕ್ಕನನ್ನು ದೂಷಿಸಲು ನೋಡುತ್ತಿಲ್ಲ,

ಆದರೆ ಅವಳು ಉನ್ನತ ಮಟ್ಟದ ಸರ್ಕಾರಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದಳು

ಮತ್ತವಳು ಎಲ್ಲರಿಗೂ ಬೇಕಾದ ಥಂಬ್ ಡ್ರೈವ್ ಜೊತೆ ಹೊರಟುಹೋದಳು.

ಅವಳು ಇನ್ನೇನು ಮಾಡಬಹುದಿತ್ತು?

ಉದ್ಯೋಗಿ ವಾಹನ ನಿಲುಗಡೆ ಪರವಾನಗಿ

ನೋಡು, ಈ ಕಾರುಗಳಲ್ಲಿ ಬಹಳಷ್ಟು ವಾಹನ ನಿಲುಗಡೆ ಪರವಾನಗಿಗಳು ಆನಾ ಬಳಿ ಇದ್ದಂತೆಯೇ ಇವೆ.

ಬಹುಶಃ ಅಲ್ಲಿ ನಿಲುಗಡೆ ಮಾಡಲು. ಮತ್ತು ಅವರಿಗೆ ಆನಾಳಂಥ ಪರವಾನಗಿಯೇ ಇದ್ದರೆ,

ಅವರು ಬಹುಶಃ ಅಂಥದೇ ಕೆಲಸದ ಬ್ಯಾಡ್ಜ್ ಸಹ ಹೊಂದಿರಬಹುದು.

ನೀವು ನಮ್ಮ ದಾರಿಯನ್ನು ಹುಡುಕಿದಿರಿ.

ಹೇ. ಹೇ, ನಾವು ಇನ್ನೊಬ್ಬರ ಕೆಲಸದ ಬ್ಯಾಡ್ಜ್ ಕದ್ದರೆ, ನಾವು ಬಂಧನಕ್ಕೊಳಗಾಗಬಹುದು.

ನಮ್ಮನ್ನು ಹುಡುಕುತ್ತಿದ್ದಾರೆ.

ಪೊಲೀಸ್ ದಾಖಲಾತಿಗಳಲ್ಲಿ ಸೇರುವುದು ಬೇಡ!

ನಾವು ಅಲ್ಲಿಗೆ ಹೋಗಬೇಕು. ನಾವು ಆನಾಳ ಬ್ಯಾಡ್ಜ್ ಬಳಸಲಾಗದು.

ಆ ಭದ್ರತಾ ದ್ವಾರದ ಬಳಿ ಸತ್ತ ಮಹಿಳೆ ಬಂದಳು ಅಂತಾದರೆ,

ಖಂಡಿತ ಸಿಕ್ಕಿಬೀಳುವೆವು.

- ದೇವರೇ! ನೋಡಿಕೊಂಡು ಹೋಗಿ! - ದಯವಿಟ್ಟು ಕ್ಷಮಿಸಿ.

ತಗೊಳ್ಳಿ, ತಗೊಳ್ಳಿ, ತಗೊಳ್ಳಿ, ತಗೊಳ್ಳಿ.

- ತಗೊಳ್ಳಿ. ದಯವಿಟ್ಟು ನನ್ನನ್ನು ಕ್ಷಮಿಸಿ. - ಅಯ್ಯೋ. ದೇವರೇ.

ಅಯ್ಯೋ, ದೇವರೇ.

ನಿಮ್ಮ ವಸ್ತುಗಳನ್ನು ತಗೊಳ್ಳಿ. ನನ್ನನ್ನು ಕ್ಷಮಿಸಿ.

ಪರವಾಗಿಲ್ಲ. ನಾನು ನೋಡಿಕೊಳ್ಳುವೆ.

ಕೋಪಗೊಂಡಿದ್ದಕ್ಕೆ ಕ್ಷಮಿಸಿ, ಇದು ಹೊಸ ಅಂಗಿ, ಹಾಗಾಗಿ.

ತಗೊಳ್ಳಿ, ಇದು ಅಗಸರ ಖರ್ಚಿಗಾಗಿ. ದಯವಿಟ್ಟು.

ಪರವಾಗಿಲ್ಲ. ದೇವರೇ.

- ಎರಡು ನ್ಯಾಟಿ ಬೋಗಳು. - ಧನ್ಯವಾದಗಳು.

ನೋಲಾನ್ ಕೇಹಿಲ್‌ಗಾಗಿ.

ಏನು ದರಿದ್ರ.

ನಾನು ಅವನನ್ನು ಡೆಲ್ಟಾ ತರಬೇತಿಯ ಮೊದಲ ದಿನ ಭೇಟಿಯಾದೆ.

ನಮ್ಮಲ್ಲಿ ಪ್ರತಿಯೊಬ್ಬರನ್ನೂ ಭಯಪಡಿಸಿದ.

ನಾನು ಭೇಟಿಯಾದ ಅತ್ಯಂತ ನಿಷ್ಠುರ ವ್ಯಕ್ತಿ.

ಅದಕ್ಕಾಗಿಯೇ ಸಿಬ್ಬಂದಿ ಮುಖ್ಯಸ್ಥರನ್ನಾಗಿ ಮಾಡಿದಿರಾ?

ಯಾರೂ ಬೆದರಿಸಲು ಸಾಧ್ಯವಾಗದ ಸಿಬ್ಬಂದಿ ಮುಖ್ಯಸ್ಥ?

ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ತನ್ನ ಅಡಿಯಲ್ಲಿ ಸೇವೆ ಸಲ್ಲಿಸಿದವರಿಗಾಗಿ ಕೆಲಸ ಮಾಡಲು ಅವನಿಗೆ ಯಾವುದೇ

ಸಮಸ್ಯೆ ಇಲ್ಲವೆಂದು ನನಗೆ ಗೊತ್ತಿತ್ತು.

ಏಕೆಂದರೆ ಅವನಿಗೆ ಯಾವುದೇ ಅಹಂಕಾರವಿರಲಿಲ್ಲ.

ಯಾವಾಗಲೂ ಕರ್ತವ್ಯದ ಬಗ್ಗೆಯೇ ಯೋಚಿಸುತ್ತಿದ್ದ.

ಅವನ ಪ್ರತಿರೂಪದಲ್ಲೇ ನನ್ನನ್ನು ರೂಪಿಸಿದ. ನಮ್ಮೆಲ್ಲರನ್ನೂ.

ಅದು ನಿಜವಾಗಿದ್ದರೆ, ನೀವು ಛಾವಣಿಯಿಂದ ಏತಕ್ಕೆ ಜಿಗಿಯುತ್ತೀರಿ?

ಏನಂದೆ?

ನೀವು ಅವರ ಪ್ರತಿರೂಪದಂತೆಯೇ ಎಂದು ಹೇಳಿದಿರಿ.

ಅಂದರೆ ನೀವು ಒಂದೇ ರೀತಿಯ ಸ್ವಭಾವ ಅಥವಾ ನೈತಿಕತೆಯನ್ನು ಹೊಂದಿದ್ದೀರಿ.

ಆದ್ದರಿಂದ, ಅದೇ ಮಾಹಿತಿ, ಅದೇ ಪರಿಸ್ಥಿತಿ, ಅದೇ ಸಂದರ್ಭ ಎದುರಾದರೆ,

ನೀವು ಅದೇ ರೀತಿ ಪ್ರತಿಕ್ರಿಯಿಸಬಹುದು. ನಿಮಗೆ ತಿಳಿದಿಲ್ಲದ ಏನೋ ಅವರಿಗೆ ತಿಳಿದಿತ್ತು.

ಹಾಗಾದರೆ, ನೀವು ಕಟ್ಟಡದಿಂದ ಹಾರಿ ಸಾಯಲು ಕಾರಣ ಏನಿರಬಹುದೆಂದು ಯೋಚಿಸುತ್ತಿದ್ದೇನೆ.

ನನಗೆ ಏನೇನೂ ಗೊತ್ತಿಲ್ಲ.

ನಿನ್ನ ಮೂಲವು ನಿನಗೆ ಹೇಳಿದಂತೆ ಅಲ್ಲ.

ನಾವು ಎಂದಿಗೂ ನಾಗರಿಕರನ್ನು ಹಿಂಸಿಸಿಲ್ಲ ಅಥವಾ ಕೊಂದಿಲ್ಲ.

ಆದರೆ ಜನರನ್ನು ಹಿಂಸಿಸಿ ಕೊಲ್ಲಲಾಯಿತು.

ನಾವು ಹೋದ ನಂತರ.

ನೀವು ಇಂಡೋನೇಷ್ಯಾದಲ್ಲಿ ನಿಖರವಾಗಿ ಏನು ಮಾಡುತ್ತಿದ್ದಿರಿ?

ನೋಡಿ, ನಿಮಗೆ ಆನಾ ಮೆರಿಕ್ ಪರಿಚಯವಿರಲಿಲ್ಲ ಅಂತ ನನಗೆ ಗೊತ್ತು.

ಒಬ್ಬ ಸತ್ತ ಮಹಿಳೆ ನಿಮಗೆ ಮುಗಿದ ಕಥೆಯಾಗಿರಬಹುದು.

ಆದರೆ ಅವಳ ಮಗ ಇನ್ನೂ ಕಾಣೆಯಾಗಿದ್ದಾನೆ.

ಇಪ್ಪತ್ತು ವರ್ಷ ವಯಸ್ಸು ಮತ್ತು ಸಮಾಜವಿರೋಧಿ ಹಂತಕರೊಂದಿಗೆ ಇರುವ ಸಾಧ್ಯತೆ ಹೆಚ್ಚಿದೆ.

ಹಾಗಾಗಿ, ಸತ್ಯವಷ್ಟೇ ಈಗ ಸಹಾಯ ಮಾಡಬಹುದು.

ಮಿಸ್. ಸ್ಕಾಚ್.

ಸ್ಕಾಚ್ ಅಗತ್ಯವಿರುವ ಸಂಭಾಷಣೆಗಳು--

ಬಹುಶಃ ನಡೆಯಬಾರದ ಸಂಭಾಷಣೆಗಳಿಗಾಗಿ.

ಆದರೆ ನನ್ನಿಂದ ಸಹಾಯವಾಗಬಹುದು ಎಂದು ನಿನಗನಿಸಿದರೆ, ನನಗೆ ಗೊತ್ತಿದ್ದನ್ನು ಹೇಳುವೆ.

ಕಾನೂನುಬದ್ಧವಾಗಿ ನೀವು ಹೇಳಲಾಗದ ಸಂಗತಿಗಳೂನಾ?

ನೋಡು, ಆ ನಿಟ್ಟಿನಲ್ಲಿ ನನ್ನ ಪ್ರಮಾಣವಚನಕ್ಕೆ ಭಂಗ ತರದಂತೆ ಪ್ರಯತ್ನಿಸುತ್ತೇನೆ.

ಡ್ಯೂವರ್ಸ್ ಇರಲಿನಾ?

ಇರಲಿ, ಧನ್ಯವಾದಗಳು.

ನಮ್ಮ ತುಕಡಿಯನ್ನು ವಿಜ್ಞಾನಿಗಳ ತಂಡದೊಂದಿಗೆ ಇಂಡೋನೇಷ್ಯಾಕ್ಕೆ ಕಳುಹಿಸಲಾಯಿತು.

ಮಲೇರಿಯಾದ ಹೊಸ, ಪ್ರತಿಜೀವಕ-ನಿರೋಧಕ ತಳಿಗಳಿಗೆ

ಮಳೆಕಾಡಿನ ಸಸ್ಯಗಳನ್ನು ಬಳಸಿಕೊಂಡು ಚಿಕಿತ್ಸೆಯನ್ನು ಕಂಡುಹಿಡಿಯುವ ಬಗ್ಗೆ ಏನೋ,

ಅಥವಾ ಬೇರೇನೋ… ಅಂದರೆ, ಯಾರಿಗೆ ನೆನಪಿರುತ್ತದೆ?

ಸರ್ಕಾರವು ನೀವು ವಿಜ್ಞಾನಿಗಳ ಗುಂಪಿನೊಂದಿಗೆ ಏಷ್ಯಾಗೆ ಹೋಗುತ್ತಿದ್ದೀರಿ ಅಂತ ಹೇಳಿದರೆ,

ನಾವು ಏಷ್ಯಾಗೆ ಹೋಗಬೇಕು.

ವಿಜ್ಞಾನಿಗಳನ್ನು ಸುರಕ್ಷಿತವಾಗಿಡುವುದು ನಮ್ಮ ಕೆಲಸವಾಗಿತ್ತು.

ಮತ್ತು ನಾವು ಅಲ್ಲಿದ್ದಾಗ ಸ್ಥಳೀಯ

ಸರ್ಕಾರದ ಸಹಕಾರವನ್ನು ಭದ್ರಪಡಿಸಿಕೊಳ್ಳುವುದು.

ಕೇಹಿಲ್ ಆ ಕಾರ್ಯಾಚರಣೆಯ ಶಾಖೆಯ ಮೇಲ್ವಿಚಾರಣೆ ಮಾಡಿದ.

ಈಗ, ಇಂಡೋನೇಷ್ಯಾದ ಆತಿಥ್ಯಕ್ಕೆ ಬದಲಾಗಿ,

ಅಮೆರಿಕವು ಅವರ ಮಿಲಿಟರಿ ವಿಶೇಷ ಪಡೆಗಳಿಗೆ ತರಬೇತಿ ನೀಡಲು ಒಪ್ಪಿಕೊಂಡಿತು,

ಅವುಗಳ ನೇತೃತ್ವ ಜನರಲ್ ರೆಜಾ ಪೂತ್ರ ವಹಿಸಿದ್ದ.

ನಾನು ಆ ಕಾರ್ಯಾಚರಣೆಯ ಶಾಖೆಯ ಮೇಲ್ವಿಚಾರಣೆ ಮಾಡಿದೆ.

ನೋಡು, ನಾನು ಅವರಿಗೆ ಶಸ್ತ್ರಾಸ್ತ್ರ ತರಬೇತಿಯಿಂದ ಗೆರಿಲ್ಲಾ ತಂತ್ರಗಳವರೆಗೆ ಎಲ್ಲವನ್ನೂ ಕಲಿಸಿದೆ.

ರಾಜಕೀಯ ಭಿನ್ನಮತೀಯರನ್ನು ಹತ್ಯೆ ಮಾಡಿದ ಬಗ್ಗೆ ಯಾವಾಗ ಹೇಳುತ್ತೀರಿ?

ನಾವು ದೇಶಕ್ಕೆ ಹಿಂತಿರುಗಿದ ನಂತರ…

ಪೂತ್ರ ಜನರ ಹಿಂದೆ ಬಿದ್ದನು.

ಅವನ ಹೆಚ್ಚುತ್ತಿರುವ ಶಕ್ತಿಯನ್ನು ವಿರೋಧಿಸಿದವರ ಹಿಂದೆ.

ಮತ್ತು ಆ ಪ್ರಕ್ರಿಯೆಯಲ್ಲಿ, ಅವನು ಒಂದಿಡೀ ಹಳ್ಳಿಯನ್ನು ನಾಶಮಾಡಿದನು.

ನಾಗರಿಕರು, ಮಕ್ಕಳು, ವೃದ್ಧರು.

ಮುಗ್ಧ, ಒಳ್ಳೆಯ ಜನರು. ಅವನು ಯಾರ ಬಗ್ಗೆಯೂ ತಾರತಮ್ಯ ಮಾಡಲಿಲ್ಲ.

ಇದ್ದಕ್ಕಿದ್ದಂತೆ, ನಾವು ಕಾಡಿನಲ್ಲಿ ಕವಾಯತು ನಡೆಸುತ್ತಿದ್ದ ಜನರಲ್ ಅಷ್ಟೇ ಆಗಿರಲಿಲ್ಲ ಅವನು.

ಅವನು ಯುದ್ಧ ಅಪರಾಧಿಯಾಗಿದ್ದ.

ಹೇಳಲೂ ಆಗದ… ಕೃತ್ಯಗಳನ್ನು ಎಸಗುತ್ತಿದ್ದ.

ಸದ್ದಾಂ ಹುಸೇನ್, ನೋರಿಯೇಗಾ.

ಬಿನ್ ಲಾಡೆನ್ ರಷ್ಯನ್ನರ ವಿರುದ್ಧ ಹೋರಾಡುತ್ತಿದ್ದಾಗ ನಮ್ಮ ಸ್ನೇಹಿತನಾಗಿದ್ದ.

ಅಮೆರಿಕಕ್ಕೆ ದ್ರೋಹ ಬಗೆದಿರುವುದು ಇದೇ ಮೊದಲಲ್ಲ.

ಆದರೂ, ಪೂತ್ರನೊಂದಿಗಿನ ನನ್ನ ಸಂಪರ್ಕವನ್ನು ಬಹಿರಂಗಪಡಿಸಿದರೆ,

ಅದು ನನ್ನ ತಂಡ ಮತ್ತು ನಾನು ಕಳೆದ ಕೆಲವು ವರ್ಷಗಳಿಂದ

ಗಳಿಸಿರುವ ಎಲ್ಲವನ್ನೂ ಹಳಿತಪ್ಪಿಸುತ್ತದೆ, ಸರಿನಾ?

ನಿನ್ನ ಈ ಮೂಲವು ನನ್ನನ್ನು ಒಬ್ಬ ರಾಕ್ಷಸನೊಂದಿಗೆ ಸಂಪರ್ಕಿಸುವ ಕದ್ದ ದಾಖಲೆಗಳ ಬೆನ್ನಟ್ಟಿದ್ದಾರೆ.

ಅವಳು ನೀವೇ ಆ ರಾಕ್ಷಸ ಅಂತ ಭಾವಿಸುತ್ತಾಳೆ.

ಅವಳಿಗೆ ಹೇಳು, ತಪ್ಪಾದ ಮರಕ್ಕೆ ಕಲ್ಲು ಹೊಡೆಯುತ್ತಿದ್ದಾಳೆ ಅಂತ,

ಏಕೆಂದರೆ ಪೂತ್ರ ಆ ಜನರಿಗೆ ಮಾಡಿದ್ದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.

ಅಲ್ಲದೆ, ತಮಗೆ ತಿಳಿದ ತಕ್ಷಣ, ಪೂತ್ರನನ್ನು ಎದುರಿಸಲು ಅಮೆರಿಕ ಸರ್ಕಾರವು

ಅಲ್ಲಿಗೆ ಒಂದು ತಂಡವನ್ನು ಕಳುಹಿಸಿತು.

ಸರಿ, ಕೇಹಿಲ್ ಆನಾ ಮೆರಿಕ್‌ಳನ್ನು ಆ ಸಬ್‌ವೇಯಲ್ಲಿ ಹಿಂಬಾಲಿಸಲು

ಮತ್ತು ಆತ ಆ ಛಾವಣಿಯಿಂದ ಹಾರಲು ಏನೋ ಕಾರಣ ಇರಬೇಕು.

ನಾನು ಆ ಡ್ರೈವ್ ಪಡೆದು ಅದು ಏನೆಂದು ಕಂಡುಹಿಡಿಯುತ್ತೇನೆ.

ಸರಿ, ಖಂಡಿತ ಅದನ್ನು ಮಾಡು.

ಮತ್ತು ಅದು ನಿನಗೆ ಸಿಕ್ಕಾಗ, ಸರಿಯಾದ ಕೆಲಸವನ್ನು ಮಾಡು…

ಅದನ್ನು ನನಗೆ ಹಿಂತಿರುಗಿಸು.

ಅದರೊಳಗೆ ಏನಿದೆ ಅಂತ ಗೊತ್ತಿಲ್ಲದಿದ್ದರೂ ಅದು ನಿಮಗೆ ತುಂಬಾ ಅವಶ್ಯಕತೆ ಇದ್ದಂತೆ ಕಾಣುತ್ತಿದೆ.

ನಿನ್ನ ಬಗ್ಗೆಯೂ ಹಾಗೆಯೇ ಹೇಳಬಲ್ಲೆ.

ಕೊಲೆಗಾರರನ್ನು ನನ್ನ ಹಿಂದೆ ಸೈನಿಕರ ವೇಷದಲ್ಲಿ ಕಳಿಸುವಷ್ಟು ಅದರ ಅವಶ್ಯಕತೆ ನಿಮಗಿದ್ದಂತಿದೆ.

More Kannada subtitles for Reacher

تبصرې

No comments yet. Be the first to leave one.

Keep it about this subtitle — sync, quality, typos.500 characters left