لومړۍ 200 کرښې.
ಈ ಸಿನಿಮಾ ಕಾಲ್ಪನಿಕ.
ಎಲ್ಲವೂ ಕಲ್ಪಿತವಾದದ್ದು.
ಈ ಸಿನಿಮಾ ಹಿಂಸೆಯನ್ನು ಬೆಂಬಲಿಸದು. ವೀಕ್ಷಕರ ವಿವೇಚನೆಗೆ ಒಳಪಟ್ಟಿದೆ.
ಅಮ್ಮು.
ನಿಜವಾಗಲೂ ನೆರೆಮನೆಯ ರವಿ ಅಂಕಲ್ನ ಮದುವೆ ಆಗ್ತೀಯಾ?
ಹೌದು! ಯಾಕೆ?
ನಿಂಗೆ ಅವರು ಇಷ್ಟಾನಾ?
ಇಷ್ಟ ಅನ್ಸುತ್ತೆ.
ನಿಂಗೆ ಯಾಕೆ ಅವನು ಇಷ್ಟ?
ನಂಗೆ ಗೊತ್ತಿಲ್ಲ.
ಹಾಗಾದರೆ, ಯಾಕೆ ಅವನನ್ನ ಮದ್ವೆ ಆಗ್ತಿದ್ದೀಯಾ?
ಯಾಕೆ ಕೇಳ್ತಿದ್ದೀಯಾ?
ನೀನು ಮದ್ವೆ ಆಗ್ತೀಯಾ?
ನಾನಾ? ಛೀ!
ಛೀಯಾ?
ಅವನನ್ನ ಕಂಡ್ರೆ ನನಗೆ ತುಂಬಾ ಹೆದರಿಕೆ!
ಯಾಕೆ ಹೆದರಿಕೆ? ಅವನು ನಿಂಗೆ ಏನಾದ್ರೂ ಮಾಡಿದ್ನಾ?
ಇಲ್ಲಪ್ಪಾ.
ಆದರೆ, ಅವನನ್ನ ಕಂಡ್ರೆ ಹೆದರಿಕೆ!
ಎಷ್ಟು ದೊಡ್ಡದಾಗಿದ್ದಾನೆ.
ಅವನ ಬೈಕ್ ಹಿಂದ್ಗಡೆ ಆಟ ಆಡೋವಾಗ
ನಮ್ಮನ್ನೇ ಕಣ್ಣಗಲಿಸಿಕೊಂಡು ನೋಡ್ತಿರ್ತಾನೆ.
ಎಲ್ಲರಿಗೂ ಹೆದರಿಕೆ ಆಗಿ ಓಡಿ ಹೋಗ್ತೇವೆ.
ನಿಂಗೆ ಹೆದರಿಕೆ ಆಗಲ್ವಾ, ಅಮ್ಮು?
ನೀನೇ ದೊಡ್ಡ ರೌಡಿ!
ಎಲ್ಲಾ ನಿಂಗೇ ಹೆದರಿಕೋಬೇಕು.
ನಿಂಗ್ಯಾರ ಹೆದರಿಕೆ?
-ಅಮ್ಮು. -ಬೇಡ, ಅಮ್ಮು.
ಏನು ಮಾಡ್ತಿದ್ದೀಯಾ?
ಸೀರೆ ಎಲ್ಲ ಹಾಳು ಮಾಡ್ಕೊಂಡೆ!
ನೀನು ಮಗುವಾ?
ಎಲ್ಲರೂ ಕಾಯ್ತಿದ್ದಾರೆ.
ನೀ ಆಡ್ತಾ ಇದ್ದೀಯಾ.
-ಬಾ. -ಅಮ್ಮಾ!
ಏನು?
ಎಲ್ಲ ಸರಿಯಾಗಿದೆಯಾ?
ಎಲ್ಲವೂ ಸರಿ ಇದೆ!
ಬಾ.
ಬಾ, ಕೂತ್ಕೋ. ಆರಾಮಾಗಿರು.
ಮುಜುಗರ ಮಾಡ್ಕೋಬೇಡ.
ಏನು ಅಮ್ಮು?
ಮೊದಲನೇ ಸಾರಿ ನೋಡ್ತಿದ್ದೀವಾ?
ಆರಾಮಾಗಿರು!
ಅವತ್ತು ವಾಟರ್ ಟ್ಯಾಂಕ್ ಲಾರಿಯವನ ಜೊತೆ ಜಗಳ ಆಡ್ತಿದ್ದಿದ್ದು ನೋಡ್ದೆ.
ತುಂಬಾ ಜೋರು ಅಂದ್ಕೊಂಡೆ.
ಈಗ, ಪಾಪದವಳ ಹಾಗೆ ಕಾಣ್ತಾಳೆ.
ಅವಳೇ ಇವಳಾ ಅಂತ ಆಶ್ಚರ್ಯ!
ಅನುಮಾನವೇ ಇಲ್ಲ. ಅವಳೇ.
ಗ್ರೇಡ್ ಕೊಡ್ತಿದ್ದಾರೆ.
ಪಾಲಕರು-ಪೋಷಕರ ಸಭೆಯ ಹಾಗಿದೆ.
ಈಗ ನಮ್ಮ ಸೊಸೆಯಾಗ್ತಾಳೆ.
ವಿನಯವಾಗಿದ್ದರೆ ಅವಳಿಗೇ ಒಳ್ಳೆಯದು.
ಇಷ್ಟೂ ವರ್ಷ ನಾವು ನೆರೆಯವರಾಗಿದ್ದೆವು,
ಇಬ್ಬರೂ ಪ್ರೀತಿಸಿದ್ದರೆ ನಮ್ಮ ಸಮಸ್ಯೆ ತಪ್ಪುತ್ತಿತ್ತು!
-ಹೌದು. -ಮಕ್ಕಳನ್ನ ಹಾಗೆ ಬೆಳೆಸಿದ್ದೇವೆ!
ನಿಜ.
ಮಕ್ಕಳು ನಮ್ಮ ಮರ್ಯಾದೆ ಕಳೆಯಲ್ಲ.
ಅಮ್ಮು, ನಿನ್ನೇ ನೋಡ್ತಿದ್ದಾನೆ.
ನಂಗೊತ್ತು.
ಅಮ್ಮು! ಇಲ್ಬಾ, ರವಿ ಹತ್ರ ನಿಂತ್ಕೋ.
ಹೇಗೆ ಕಾಣಿಸ್ತೀರಿ ನೋಡೋಣ.
-ಹೋಗು, ರವಿ. -ಅಪ್ಪಾ.
ಹೋಗು.
ಏನಾಯ್ತು?
ಯಾಕೆ ನಗ್ತಾ ಇದ್ದೀಯ?
ಅಮ್ಮು?
ಎಷ್ಟು ಗಂಟೆಗೆ ಸ್ಟೇಷನ್ ಹೋಗ್ಬೇಕು?
ಬೆಳಗ್ಗೆ 7 ಕ್ಕೆ.
ಮೊದಲ ದಿನಾನೇ ಲೇಟ್ ಆಗೋ ಹಾಗಿಲ್ಲ.
ತಿಂಡಿ ತಿಂದು ಹೋಗಿ.
ಸರಿ.
ಊಟ? ಮನೆಗೆ ಬರ್ತೀರಾ?
ಆಗಲ್ಲ.
ಮೊದಲು ಮೊದಲು ಆಗಲ್ಲ.
ನಾನು ಮ್ಯಾನೇಜ್ ಮಾಡ್ತೀನಿ. ಹೋಟೆಲ್ ಇರುತ್ತೆ.
ಸರಿ... ಒಬ್ಬಳೇ ಇರೋಕೆ ಹೆದರಿಕೆ ಇಲ್ಲವಾ?
ಇಲ್ಲ! ಯಾಕೆ ಅದನ್ನ ನೆನಪಿಸ್ತಾ ಇದ್ದೀರಾ?
ನಂಗೆ ಈಗಲೇ ಹೆದರಿಕೆ ಆಗ್ತಿದೆ!
ಯಾವತ್ತೂ ಒಬ್ಬಳೇ ಇರ್ಲಿಲ್ಲ.
ಯಾಕೆ ಹೆದರಿಕೆ?
ಇನ್ಸ್ಪೆಕ್ಟರ್ ಹೆಂಡತಿಗೆ ಯಾರೂ ಏನೂ ಮಾಡಲ್ಲ.
ಏನಾದರೂ ಮಾಡಿದರೆ ಇನ್ಸ್ಪೆಕ್ಟರ್ ಏನು ಮಾಡ್ತಾರೆ?
ಅಮ್ಮನಾಣೆ, ಅಡ್ಡಡ್ಡ ಕತ್ತರಿಸಿ ಹಾಕ್ತೀನಿ.
ನನ್ನ ಗಂಡ ಹೀರೋ!
ಕಾಣಿಸುವ ಮೂರು ಸಿಂಹಗಳು ನ್ಯಾಯ, ನೀತಿ ಮತ್ತು ಧೈರ್ಯದ ಪ್ರತೀಕವಾಗಿದ್ದರೆ,
ನಾಲ್ಕನೇ ಅಗೋಚರ ಸಿಂಹ ಈ ಪೊಲೀಸ್.
ವಾವ್! ಅದ್ಭುತ!
ಏನು ಬೇಕು ನಿನಗೆ?
-ಡೈಲಾಗ್ಗಾ? -ಇಲ್ಲ.
ನಾವೀಗ ಮದುವೆಯಾಗಿದ್ದೇವೆ, ನಿನಗೆ ಉಡುಗೊರೆ ನೀಡಬೇಕು.
ಹೇಳು. ಏನು ಬೇಕು?
ಯೋಚನೆ ಮಾಡೋಕೆ ವಾರ ತಗೋ.
ಸಾರಿ! ಸಾರಿ! ನನಗೆ ನೆನಪಾಯ್ತು.
ನನ್ನ ಹೊಲಿಗೆ ಮಷೀನ್ ಅಮ್ಮಂಗೆ ಕೊಟ್ಟಿದ್ದೀನಿ.
ಹೊಸ ಹೊಲಿಗೆ ಮಷೀನ್ ಬೇಕು ನಂಗೆ.
ಟೆಡ್ಡಿ ಬೇರೋ, ಚಾಕೊಲೇಟ್, ಸೀರೆ ಎಂದುಕೊಂಡಿದ್ದೆ.
ಇದು ತುಟ್ಟಿ.
ನಿಜವಾಗಲೂ ಬೇಕಾ?
ಆಟಿಕೆ ಎಲ್ಲಾ ಕೇಳೋಕೆ ನಾನು ಮಗುನಾ?
ಹೌದು.
-ಅಲ್ವಾ? -ಅಲ್ವೇ ಅಲ್ಲ!
ಯಾಕೆ ಹೊಲಿಗೆ ಮಷೀನ್?
ಸ್ವಲ್ಪ ಹಣ ಮಾಡೋಕೆ.
ಬೇಡವೇ ಬೇಡ!
ಹೆಂಡತಿಯನ್ನು ದುಡಿಯೋಕೆ ಕಳುಹಿಸುವವ ಗಂಡಸೇ ಅಲ್ಲ!
ಯಾಕಲ್ಲ? ನಾನು ದುಡಿದರೆ ನಿಮಗೆ ಸಮಸ್ಯೆ ಇದೆಯೇ?
ನಿನ್ನ ಹಣ ಉಡಾಯಿಸೋಕೆ ಬೇಜಾರಿಲ್ಲ!
ಆದರೆ ನಿನ್ನ ನೋಡ್ಕೋತೀನಂತ ನಿಮ್ಮಪ್ಪ-ಅಮ್ಮನಿಗೆ ಮಾತು ಕೊಟ್ಟಿದ್ದೀನಿ.
ಒಳ್ಳೆ ಗಂಡನಾಗಿ ಹೆಂಡತಿ ಬೇಡಿಕೆ ಪೂರೈಸೋಕೆ ನಾನು ಬದ್ಧ.
ಎಲ್ಲ ಬೇಡಿಕೆ ಪೂರೈಸ್ತೀರಾ?
-ಹೌದು? -ಹೌದು.
ಹೇಯ್!
ಕಾಫೀ.
-ಇಲ್ಲಲ್ಲ. -ಏನಾಯ್ತು?
-ಇನ್ನೊಂದು ಬೇಕಾ? -ಬೇಡ.
-ಚೆನ್ನಾಗಿದೆ. -ಇಷ್ಟ ಆಯ್ತಾ?
ಇಷ್ಟ ಆಯ್ತು.
ಸ್ನಾನ ಮಾಡುವಾಗ ಸಿಕ್ತು.
ಇದು ನಿನ್ನದಾ?
ನಂದಲ್ಲ.
ನಿಂದಲ್ವ?
-ಏನು ಮಾಡಿದೆ? -ನಾನು ಹೇಳಿದೆನಲ್ಲ.
ಇವರು ಲಿನ್ನಿ, ಪಕ್ಕದ ಮನೆಯವರು.
-ಶಾಲೆಯ ಟೀಚರ್. -ಹಲೋ.
ಸರ್. ಹೊಸ ಸಿಐ ರವೀಂದ್ರನಾಥ್.
ಕೆ. ಸುರೇಂದರ್ ರೆಡ್ಡಿ
ನೀನು, ಅಮ್ಮ ಏನು ಮಾತಾಡಿದಿರಿ?
ಅವರಿಗೆ ಬೇಸರ ಆಗ್ತಿದೆ. ಯಾವಾಗ ಮಗು ಮಾಡ್ಕೋತೀರಿ ಅಂತ ಕೇಳಿದರು.
ಅವರಿಗೆ ಬೇಸರ ಬಂದಿದೆ. ನಿಂಗೆ?
ನಿಮಗೆ?
ಹೆಂಡತಿ ಊಟ ತರೋದನ್ನ ಯಾವಾಗಲೂ ನೋಡಿಲ್ಲ.
ಮೇಡಂ ನಿಮ್ಮನ್ನ ತುಂಬಾ ಪ್ರೀತಿಸ್ತಾರೆ.
ದೇವರೇ!
ದೃಷ್ಟಿ ತಗಲದಿರಲಿ!
ಮೇಡಂ, ಸಾರಿಂದ ಉಡುಗೊರೆ.
ನಿಶಾ
-ಐ ಲವ್ ಯೂ! -ಏನು?
ಐ ಲವ್ ಯೂ.
-ಹಠಾತ್ ತಪಾಸಣೆಯಾ? -ಹೌದು, ಸರ್.
ಎಂದಿನ ಹಾಗೆ ಡಿಐಜಿಯಿಂದ ಹಠಾತ್ ತಪಾಸಣೆ.
ಸಿಐ ಕೆಲಸದ ಮೇಲೆ ಠಾಣೆ ಹೊರಗೆ ಹೋಗಿದ್ರಂತೆ, ಅಷ್ಟೇ.
ವೆಪನ್ಸ್ ರೂಮ್ ಲಾಕ್ ಮಾಡಿಲ್ಲ, ಎಫ್ಐಆರ್ ಸರಿ ಇಟ್ಟಿಲ್ಲ,
ಕೆಲವರು ಕ್ಲೀನ್ ಶೇವ್ ಮಾಡ್ಕೊಂಡಿಲ್ಲ ಅಂತ.
ಅಮಾನತು ಪತ್ರ ಕೊಡುವುದಕ್ಕೆ ಸಿಐಗೆ ಕಾದು ಕೈಗೆ ಕೊಟ್ಟು ಹೋದರಂತೆ.
ಒಬ್ಬ ಸಿಐ, ಇಬ್ಬರು ಎಸ್ಐ, ಇಬ್ಬರು ಕಾನ್ಸ್ಟೆಬಲ್ಗಳನ್ನ
ಹಿಂದೆ ಮುಂದೆ ನೋಡದೇ ಮನೆಗೆ ಕಳಿಸಿದ್ದಾರೆ.
-ಅದು ಯಾವ ಸ್ಟೇಷನ್, ಸರ್? -ನಿಂಗ್ಯಾಕೋ.
ನನ್ನ ಮಗಳ ಪರಿಸ್ಥಿತಿ ನೋಡಿ...
-ಸರ್. -ಸರ್.
-ಕುಳಿತುಕೊಳ್ಳಿ. -ಏನು ಕೇಸ್?
ದೌರ್ಜನ್ಯದ ಕೇಸ್, ಸರ್. ದೂರು ತಗೋತಿದ್ದೀವಿ.
ಪ್ಲೀಸ್, ಕೂತ್ಕೊಳ್ಳಿ. ಏನು ಕೇಳಿ.
-ಇಕ್ಬಾಲ್ ಸರ್. -ಸರ್.
ನನ್ನ ಮಗಳಿಗೆ ಏನು ಮಾಡಿದ್ದಾರೆ ಅವರು ನೋಡಿ.
ನಿಮ್ಮ ಮಗಳು ಎಲ್ಲಿದ್ದಾಳೆ ಎಂಬ ಬಗ್ಗೆ ಕಾಳಜಿ ಇದ್ದಿದ್ದರೆ ನೀವು
ಇಲ್ಲಿ ಇರುತ್ತಿರಲಿಲ್ಲ.
ಈಗ ಅಳುವುದರಲ್ಲಿ ಏನು ಅರ್ಥ?
ನಾನು ಇನ್ನೇನು ಮಾಡಬಹುದು?
ಇಡೀ ದಿನ ಕೆಲಸನೇ ಆಗುತ್ತೆ, ರಾತ್ರಿ ಮನೆಗೆ ಬರುತ್ತೇನೆ.
ಅವಳ ತಂದೆ ಪ್ರಯೋಜನ ಇಲ್ಲ.
ಕಣ್ಣಿಡೋದಾದರೂ ಹೇಗೆ?
ಪೊಲೀಸರಿಗೂ ಮಿತಿ ಇರುತ್ತೆ.
ಹತ್ತು ಪೊಲೀಸರಷ್ಟೇ ಇದ್ದಾರೆ.
ಎಲ್ಲ ಕಡೆಗೂ ನಾವು ಗಸ್ತು ತಿರುಗೋಕಾಗಲ್ಲ. ಆಕೆ ನಿಮ್ಮ ಮಗಳು. ನೀವು ಅವಳ ಕಾಳಜಿ ವಹಿಸಬೇಕು.
ಮನ್ಸೂರ್!
ನಮ್ಮ ಸಹಾಯ ಪಡೆಯೋಕೆ ಬಂದಿದ್ದಾರೆ.
ನಾವೇ ಸಹಾಯ ಮಾಡದಿದ್ದರೆ?
ನಾನು ಬರಿ...
ಅವರ ರಕ್ಷಣೆ ನಮ್ಮ ಕರ್ತವ್ಯ.
ಅವರಷ್ಟೇ ಅಲ್ಲ, ಎಲ್ಲ ಮಹಿಳೆಯರನ್ನೂ ಕಾಪಾಡುವುದು.
ನಾನು ಹಾಗೆ ಹೇಳಿರ್ಲಿಲ್ಲ--
ಅಳಬೇಡಿ, ಅಮ್ಮಾ.
ಅವರನ್ನ ನಾನು ಹಿಡೀತೀನಿ.
ಅಷ್ಟೇ ಅಲ್ಲ,
ಯಾರಿಗೂ ಹೀಗಾಗದಂತೆ ನೋಡ್ಕೊತಿನಿ.
ಅಷ್ಟು ಸಾಕು.
ನೋಡಿ...
ನಾಚಿಕೆಯಿಂದ ಮುಖ ಮುಚ್ಚಿಕೊಳ್ಳಬೇಕಾಗಿಲ್ಲ.
ತಪ್ಪು ಮಾಡಿರುವವರು ಮುಚ್ಚಿಕೊಳ್ಳಬೇಕು.
ನೀನಲ್ಲ!
ಒಳ್ಳೆಯದು!
ಕರ್ಕೊಂಡು ಹೋಗಿ.
ನಮಸ್ಕಾರ.
-ಕ್ಷಮಿಸಿ, ಸರ್. -ಇರಲಿ.
-ಇಕ್ಬಾಲ್ ಸರ್. -ಸರ್.
ಜನರು ನಮಗೆ ಸಹಾಯ ಮಾಡುವುದಕ್ಕಾಗಿ ಸ್ವಯಂಸೇವೆ ಕಾರ್ಯಕ್ರಮ ಘೋಷಣೆ ಮಾಡಿ.
ಸ್ವಯಂಸೇವಕರನ್ನು ಹುಡುಕಿ.
ಗಸ್ತು ತಿರುಗಿಸಿ.
ಅನುಮಾನ ಬಂದರೆ, ನಮಗೆ ತಿಳಿಸೋಕೆ ಹೇಳಿ.
-ಓಕೆ, ಸರ್. -ನಮಗೆ ಜನ ಬೇಕು.
ಕರ್ನಾಟಕದ "ಸುರಕ್ಷಾ ಮಿತ್ರ" ಕಾರ್ಯಕ್ರಮದ ಹಾಗೆ?
-ಹೌದು. -ಓಕೆ.
ಸಮುದಾಯ ಪೊಲೀಸಿಂಗ್ ಸುಧಾರಿಸಿದರೆ ಸುರಕ್ಷತೆ ಸುಧಾರಿಸುತ್ತೆ.
ನಮಗೆ ಚೆನ್ನಾಗಿ ಮಾಹಿತಿ ಸಿಗುತ್ತೆ.
ಎಲ್ಲರಿಗೂ ಇದರ ತಿಳಿವಳಿಕೆ ಇರಬೇಕು.
ಈ ಪ್ರದೇಶದ ಪ್ರತಿ ಬೀದಿಯಲ್ಲೂ ಸ್ವಯಂಸೇವಕರು ನಮಗೆ ಬೇಕು.
ಅದು ಒಳ್ಳೆಯ ಐಡಿಯಾ.
ಆದರೆ, ಇದನ್ನು ಅನುಷ್ಠಾನ ಮಾಡಲು ಡಿಐಜಿ ಅನುಮತಿ ನಮಗೆ ಬೇಕು.
ಡಿಐಜಿ ಜೊತೆ ಮಾತನಾಡುತ್ತೇನೆ.
-ಸರಿ. -ಅವರೇ ಘೋಷಣೆ ಮಾಡಿದರೆ ಒಳ್ಳೇದು.
No comments yet. Be the first to leave one.