Msimu wa 1

Maelezo ya toleo

The Lord of the Rings The Rings of Power S01E05 1080p AVC DD 5 1-192Kbps
The Lord of the Rings The Rings of Power S01E05 1080p HEVC x265-MeGusta
The Lord of the Rings The Rings of Power S01E05 WEBRip x264-ION10
Maoni na LeZee

Lebo

1080
x265
hevc
webrip
web
x264
brip
Yamechapishwa tarehe: 2022-09-24
Upakuaji: 40
Wenye Ulemavu wa Kusikia: No

Hakikisho la manukuu ya Kannada

Mistari 200 ya kwanza.

ನನಗೆ ನಿನ್ನ ಮಾತು ಬೇಕು.

ಒಂದು ಹೊಸ ಅದಿರಿನ ಮೊದಲ ಕುರುಹುಗಳು.

ತನ್ನನ್ನಿಲ್ಲಿಗೆ ಕಳುಹಿಸಿದ ಗಿಲ್-ಗಾಲಾಡಿಗೆ ಯಾವುದೇ

ದುರುದ್ದೇಶ ಇಲ್ಲ ಅಂತ ಎಲ್ರೊಂಡ್ ಮನವರಿಕೆ ಮಾಡಿಸಿದ್ದಾನೆ.

ಅಂದುಕೊಂಡಿದ್ದಕ್ಕಿಂತ ಹೆಚ್ಚೇ ಇದೆ.

ಲಿಂಡೊನ್ನಿಗೆ ಹೋಗು.

ಏನಂತ ತಿಳಿದುಕೋ.

ಸೀ ಗಾರ್ಡಿನಿಂದ ಹೊರಗೋಗಿ! ನೀವು ಮೂವರೂ!

ಸಾಕು!

ನನ್ನ ಸ್ನೇಹಿತರ ಜೀವನ ಹಾಳು ಮಾಡಿದೆ, ನಮ್ಮ ಕುಟುಂಬದ ಹೆಸರು ಕೆಡಿಸಿದೆ.

ಕಾವಲು ಸ್ತಂಭದಲ್ಲಿ ಆಶ್ರಯ ಪಡೆದಿರುವ ಮನುಷ್ಯರ ಬಳಿ ಹೋಗು.

ಅವರಿಗೊಂದು ಸಂದೇಶವನ್ನು ಕೊಡು.

ನೀವು ಈ ನೆಲದ ಎಲ್ಲಾ ಹಕ್ಕುಗಳನ್ನು ಬಿಟ್ಟು ಅವರಿಗೆ ಶರಣಾದರೆ

ನಿಮ್ಮ ಜನರು ಬದುಕಬಹುದು ಅಂತ.

ಒಂದು ದಿನ ನಮ್ಮ ನಿಜವಾದ ರಾಜ ಬರ್ತಾನೆ.

ನಿಮ್ಮ ಕಾರಾಗೃಹದಲ್ಲಿರುವ ಆ ಮನುಷ್ಯ

ಸೌತ್ ಲ್ಯಾಂಡ್ಸಿನ ಸಿಂಹಾಸನದಿಂದ ದೂರವಾಗಿ ಗಡಿಪಾರಾಗಿರುವ ಉತ್ತರಾಧಿಕಾರಿ.

ನಂಜೊತೆ ಯುದ್ಧದಲ್ಲಿ ಭಾಗಿಯಾಗಿ...

- ನಾನು ಬರ್ತೀನಿ! - ನಾನು ಕೂಡ!

ಸೌರೊನ್ ಅವರ ಭೂಮಿಗಳ ಆಕ್ರಮಿಸಿಕೊಳ್ಳುವುದರೊಳಗೆ.

ನೀನು ಸುಳ್ಳು ಹೇಳಿ,

ನಮ್ಮ ನಡುವೆ ಒಬ್ಬ ಅಪಾಯಕಾರಿ ಆಗಂತುಕನನ್ನ ಕರೆತಂದಿದ್ದೀಯ.

ನಮ್ಮನ್ನ ಬಿಟ್ಟು ಹೊರಟುಹೋಗ್ತಾರೆ.

ಮಿಕ್ಕವರ ಜೊತೆಯಾಗಿ ನಾವು ಹೀಗೇ ಹೋಗೋದು.

ಅವನು ನಮಗೆ ನೆರವಾಗುತ್ತಾನೆ, ನಾವವನಿಗೆ ನೆರವಾಗೋಣ.

ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್

ಆಲಸಿ. ಆಲಸಿ.

ಇಲ್ಲ, ವ... ವಲಸೆ.

ವ-ಲ-ಸೆ.

ಅಂದರೆ ಬೇರೆಡೆ ಹೋಗುವುದು. ನಾವು ಹಾರ್ಫೂಟ್ಸ್ ಅದನ್ನೇ ಮಾಡುವುದು.

ಚಳಿಗಾಲದಲ್ಲಿ ಓಲ್ಡ್ ಫಾರೆಸ್ಟಿಗೆ ಹೋಗ್ತೀವಿ,

ನಡು-ಬೇಸಿಗೆಯಲ್ಲಿ ಬಸವನಹುಳು ಹಿಡಿಯೋಕೆ ನೋರ್ಫೀಲ್ಡ್ ಗ್ಲೆನ್ನಿಗೆ ಹೋಗ್ತೀವಿ.

- "ಬಸವನಹುಳು"? - ಹಾಂ, ಬಸವನಹುಳು.

ಓಕ್ ಮರದ ಎಲೆಗಳು ಕೆಂಪಾಗಲು ಶುರುವಾದಾಗ, ಗ್ರೋವಿಗೆ ಹೊರಡುತ್ತೇವೆ.

ಒಂದು ಇಡಿಯ ತೋಟ,

ಅದರ ತುಂಬೆಲ್ಲಾ ಸೇಬುಗಳು, ಜಲ್ದರಿ, ಪ್ಲಮ್ ಹಣ್ಣು, ಗಜ್ಜರಿಗಳು, ನಿನಗಿಷ್ಟ ಆಗುತ್ತೆ.

ಸಮಸ್ಯೆ ಏನೆಂದರೆ ಇಲ್ಲಿಗೂ ಅಲ್ಲಿಗೂ ಮಧ್ಯೆ ನೂರು ಅಪಾಯಗಳಿವೆ.

"ಅಪಾಯಗಳು"?

ಅಂದರೆ ಕೇಡು.

ಅಂದರೆ ದೊಡ್ಡ ಜನ, ತೋಳಗಳು, ಮಂಜು, ಮಳೆ,

ಗುಡ್ಡದ ರಾಕ್ಷಸರು, ಗುಹೆಯ ರಾಕ್ಷಸರು, ನಮ್ಮನ್ನು ಕೊಲ್ಲುವಂಥವರು.

"ಕೊಲ್ಲು"?

ಅಂದ್ರೆ ಯಾರನ್ನಾದರೂ ಸಾಯಿಸುವುದು.

ನಾನು ಅಪಾಯ.

ಇಲ್ಲ. ಇಲ್ಲ, ಅದು ನೀನಲ್ಲ.

- ಅದು... - ಇಲ್ಲ. ಮಿಂಚುಹುಳುಗಳು.

ಅದು ಆಕಸ್ಮಿಕವಷ್ಟೇ. ಅದು...

ನೀನು ಅಪಾಯ ಅಲ್ಲ.

ನೀನು ಒಳ್ಳೆಯವನು.

ನಾನು ಒಳ್ಳೆಯವನು?

ನೀನು ಒಳ್ಳೆಯವನು. ಯಾಕಂದ್ರೆ ನೀನಿಲ್ಲಿ ನೆರವಾಗೋಕೆ ಬಂದಿದ್ದೀಯಾ.

ನೋರಿ!

ಸರಿ. ಮಿಕ್ಕವರು ಈಗ ತಯಾರಿರಬಹುದು.

ಬೇಗ ಬೇಗ!

ಹೋಗೋಣ. ಬಾ.

ನಾ... ನಾನು...

ನಾನು ಒಳ್ಳೆಯವನು.

ಆ ಊರುಗೋಲಿನಿಂದ ಮತ್ತೆ ಚುಚ್ಚಿದರೆ

ನಿದ್ದೆಯಲ್ಲಿ ಕಾಲ್ಬೆರಳ ಕೂದಲು ಕಿತ್ತುಹಾಕ್ತೀನಿ.

ಹಾಗಿದ್ರೆ ನನ್ನ ಕಿವಿಯನ್ನು ಕೀಳು.

ನಿನ್ನ ಗೊರಕೆಯಿಂದ ತಪ್ಪಿಸಿಕೊಳ್ಳಬಹುದು.

ನಾನು ಗೊರಕೆ ಹೊಡೆಯಲ್ಲ.

- ಹೊಡೀತೀಯ. - ಹೊಡೀತೀಯ.

ಬನ್ನಿ ಈಗ. ಗ್ರೋವ್ ನಮ್ಮ ಬಳಿಗೆ ವಲಸೆ ಬರೋದಿಲ್ಲ.

ನಿಮ್ಮಮ್ಮನ ನಡಿಗೆಯ ಹಾಡನ್ನು ಹಾಡಿದರೆ ನಾವು ಸ್ವಲ್ಪ ಬೇಗ ನಡೆಯಬಹುದು.

ಹಾಂ, ಹಾಡಪ್ಪ, ಏನಾದರೂ ಗುನುಗು.

ಹಾಡು, ನಮಗೇನಾದರೂ ಪ್ರಯೋಜನವಾಗಬಹುದು.

ಸೂರ್ಯ ಬೇಗ ಮುಳುಗುತ್ತಿದ್ದಾನೆ

ಕಲ್ಲಿನ ಮರಗಳಡಿಯಲ್ಲಿ

ಗೋಪುರದೊಳಗಿನ ಬೆಳಕು

ನನ್ನ ತವರಾಗಿ ಉಳಿದಿಲ್ಲ

ಮಂದಾಗ್ನಿಯ ಕಣ್ಣುಗಳಾಚೆ

ಕರಿ ಮರಳೇ ನಾ ಮಲಗುವ ಹಾಸಿಗೆ

ಗೊತ್ತಿರುವುದೆಲ್ಲಾ ಕೊಟ್ಟಿದ್ದೇನೆ

ಗೊತ್ತಿರದ ಭವಿಷ್ಯಕ್ಕಾಗಿ

ಕೂಗಿ ಎನ್ನ ಕೂಗಿ ಎನ್ನ, ದೂರದ ನೆಲಗಳೇ

ರ್ಹೊವೇನಿಯನ್ ಗುಡ್ಡಗಳು - ವೀಡ್ಬ್ರೂಕ್

ಯಾಕಂದ್ರೆ ನಾನೀ ಸುತ್ತುವ ದಿನವ ಸುತ್ತಿಯೇ ಕಳೆಯಬೇಕು

ಗುಡ್ಡದಡಿ - ಗ್ರೇ ಮಾರ್ಷಸ್

ದೂರ ನಾನು ಹೋಗಬೇಕು

ಈ ಸುತ್ತುವ ದಿನದಂದು

ಕುಡಿಯಲು ಕಡಿಮೆಯಿದೆ

ತಿನ್ನಲೂ ಕಡಿಮೆಯಿದೆ

ಶಕ್ತಿ ಇಲ್ಲವೆನ್ನುತ್ತೆ ಆದರೆ ದಾರಿ ಬೇಕೆನ್ನುತ್ತೆ

ಟ್ರೌಟ್ ತಿರುವು

ನನ್ನ ಕಾಲುಗಳು ಚಿಕ್ಕವು ಹಾದಿ ತುಂಬಾ ದೊಡ್ಡದು

ವಿಶ್ರಾಂತಿಯಿಲ್ಲ, ಸುಖವಿಲ್ಲ

ಸುಖವಿಲ್ಲ, ಆದರೆ ಹಾಡಿದೆ

ಥಿಸಲ್ಡೆಲ್ - ದಿ ಬ್ರೈಡ್ಸ್

ಹಾಡಿ ಎನಗೆ, ಹಾಡಿ ಎನಗೆ, ದೂರದ ನೆಲಗಳೇ

ಓ, ಮೇಲೆದ್ದು ದಾರಿ ತೋರಿ ಈ ಸುತ್ತುವ ದಿನದಂದು

ಹುಡುಕಿಕೊಡಲು ಮಾತು ಕೊಡಿ

ಈ ಸುತ್ತುವ ದಿನ

ಕೊನೆಗೆ ಬರುವುದು ಅವರ ಉತ್ತರ

ಚಳಿಯೊಳಗಿಂದ, ಮಂಜಿನೊಳಗಿಂದ

ವಿಸ್ಮಿತರು, ವಿಹಾರಿಗಳೆಲ್ಲಾ ಕಳೆದುಹೋದವರಲ್ಲ

ದುಃಖ ಏನೇ ಇರಲಿ

ಯಾವುದೇ ಪರಿಸ್ಥಿತಿ ಇರಲಿ

ವಿಸ್ಮಿತರು, ವಿಹಾರಿಗಳೆಲ್ಲಾ ಕಳೆದುಹೋದವರಲ್ಲ

ಸುರಂಗ ಪೂರ್ಣಗೊಂಡಿದೆ, ಒಡೆಯ.

ನಿನ್ನ ತೋಳು. ನನಗೆ ತೋರಿಸು.

ಹೇಗನ್ನಿಸುತ್ತಿದೆ?

ಅಗ್ನಿಯಂತೆ, ಲಾರ್ಡ್ ಫಾದರ್.

ನನಗೆ ಅನಿಸುವ ಹಾಗೆ ನಿನಗೂ ಅನಿಸಬೇಕಿತ್ತು.

ಇದು ಬೇಗ ಹೊರಟುಹೋಗುತ್ತದೆ.

ಅದರೊಂದಿಗೆ ಇದರ ಬೆಚ್ಚನೆಯ ಅನುಭವ ಪಡೆದ ನನ್ನ ಒಂದು ಭಾಗವೂ ಸಹ.

ಅದನ್ನು ಕಳೆದುಕೊಳ್ತೇನೆ.

ಸೈನ್ಯ ದಳಗಳನ್ನು ಕರೆಸಿ. ಸಮಯವಾಗಿದೆ.

ನಮ್ಮ ಶತ್ರು ದಾಳಿಮಾಡಲು ಅನುವಾಗಿದ್ದಾನೆ.

ಕ್ಷಮಾದಾನವನ್ನು ಪಡೆಯಲು

ನಾವು ಈ ಗೋಪುರವನ್ನು ಬಿಟ್ಟುಕೊಟ್ಟು

ಅವರ ಅಧಿಪತಿಗೆ ಶರಣಾಗಬೇಕು.

ನೀವು ಎದುರುನೋಡುವ ರಾಜ ನಾನಲ್ಲ ಅಂತ ನನಗೆ ಗೊತ್ತು.

ಆದರೆ ನೀವು ನನ್ನೊಂದಿಗೆ ನಿಂತು ಸೆಣೆಸಿದರೆ,

ಈ ಗೋಪುರ ಇನ್ನೆಂದಿಗೂ ನಮ್ಮ ದೌರ್ಬಲ್ಯದ ನೆನಪಾಗಿರುವುದಿಲ್ಲ,

ಬದಲಾಗಿ ನಮ್ಮ ಶಕ್ತಿಯ ಸಂಕೇತವಾಗಿರುತ್ತದೆ.

ನನ್ನೊಂದಿಗೆ ಯಾರು ನಿಲ್ತೀರಿ?

ನಿಮ್ಮಲ್ಲಿ ಯಾರು ಜೊತೆ ನಿಂತು ಸೆಣೆಸುವಿರಿ?

- ಆಗಲಿ. ಮಾಡೋಣ. - ಆಗಲಿ.

ನಿಂತು ಸೆಣೆಸುವುದಾ?

ನಿಂತು ಸೆಣೆಸುವುದಾ?

ಸತ್ತುಹೋಗ್ತೀರಾ.

ನನ್ನ ಪ್ರಕಾರ ನಾವು ಜಾಗ್ರತೆಯಿಂದ

ಬರುವ ಶತ್ರುವಿಗೆ ಶರಣಾಗುವುದೇ ಲೇಸು.

ಆ ಶತ್ರುವಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೇನೆ.

ಅವನಿಂದ ನಿನಗೆ ವಿಮೋಚನೆ ಇಲ್ಲ.

ಮತ್ತೆ ನಿನ್ನಿಂದ ಇದೆಯಾ?

ಎಲ್ಫ್?

ನಮ್ಮ ಪೂರ್ವಜರ ಪರವಾಗಿ ಇದನ್ನು ಹೇಳುತ್ತಿದ್ದೇನೆ.

ಅವರು ಬದುಕಿದರು!

ಜೊತೆಯಾಗಿ ನಾವು ಇದರಲ್ಲಿ ಬದುಕುಳಿಯಬಹುದು.

ನನ್ನನ್ನ ಹಿಂಬಾಲಿಸಿ, ಜೊತೆಯಾಗಿ ಸಾಧಿಸೋಣ!

ಬನ್ನಿ. ನನ್ನನ್ನ ಹಿಂಬಾಲಿಸಿ. ಬನ್ನಿ!

ಬನ್ನಿ!

ನನ್ನ ಹಿಂಬಾಲಿಸಿ!

ಥಿಯೋ!

ಇದೇ ನಮ್ಮ ಅವಕಾಶ. ಇದೇ ನಮ್ಮ ಸಮಯ. ಬಾ.

ನನ್ನೊಂದಿಗೆ. ಬಾರೋ, ಹುಡುಗ. ನನ್ನನ್ನ ಹಿಂಬಾಲಿಸೋ, ಹುಡುಗ.

ಸ್ವಲ್ಪ ಸಹಾಯ ಮಾಡ್ತೀಯಾ?

ಮೇಲಕ್ಕೆ...

ಇಷ್ಟು ಸಾಕು ಬಿಡ್ರಪ್ಪ.

ಈಗ ಅದನ್ನು ಸಾಗಿಸಿ.

- ಅಪ್ಪ. - ಇಸಿಲ್ದೂರ್.

ನಾವು ಮಾತಾಡಬಹುದಾ?

ದಂಡಯಾತ್ರೆಗೆ ನನ್ನ ಯಾಕೆ ಆರಿಸಿಕೊಳ್ಳಲಿಲ್ಲ?

- ನೀನು ಪಶ್ಚಿಮಕ್ಕೆ ಹೋಗುತ್ತಲಿದ್ದೆ. - ಈಗೇನಿಲ್ಲ.

ನ್ಯೂಮೆನೊರಿನಷ್ಟು ಮೌಲ್ಯವಾದದ್ದನ್ನು ಮಾಡೋವರೆಗೂ ಇಲ್ಲ.

ಅಂದರೆ ಏನು? ನೀನೇ ಹೇಳು.

ಅದನ್ನು ಹೇಳಲು ಪದಗಳಿಲ್ಲ.

ಅದಕ್ಕೇ ಅದನ್ನು ಹುಡುಕಲು ಕಷ್ಟಪಡುತ್ತಿದ್ದೇನೆ.

ನಿಮ್ಮ ಸಹಾಯ ಕೋರುತ್ತಿದ್ದೇನೆ.

ಕೊಡೋಕಾಗಿದ್ರೆ ಚೆನ್ನಾಗಿರೋದು.

ಆದರೆ ನಾವು ಇರಿಸಿಕೊಳ್ಳಲು ಆಗುವುದಕ್ಕಿಂತ ಹೆಚ್ಚಿನ ಸ್ವಯಂಸೇವಕರು ಇದ್ದಾರೆ.

ಅರ್ಧಕ್ಕರ್ಧ ನಗರಕ್ಕೆ ಆ ದೋಣಿಗಳಲ್ಲಿ ಜಾಗ ಬೇಕು.

ಮುಂದಿರುವ ಸಾಲಿಗೆ ನನ್ನನ್ನು ಕಳುಹಿಸಿ.

ನಿನ್ನ ಅರ್ಹತೆ ಏನು?

- "ಅರ್ಹತೆ"? - ಸೀ ಗಾರ್ಡಲ್ಲಿ ನಿನಗೆ ಸ್ಥಾನ ಇದೆಯೇ?

- ನಿಮಗ್ಗೊತ್ತು ನಾನು ಒಬ್ಬ ಉತ್ತಮ ನಾವಿಕ... - ಸೀ ಗಾರ್ಡಲ್ಲಿ ನಿನಗೆ ಸ್ಥಾನ ಇದೆಯೇ?

ರಾಣಿಯ ಅಂಗರಕ್ಷಣೆ? ವ್ಯಾಪಾರಿಗಳ ಸಂಘ?

- ಇದು ಸಮವಸ್ತ್ರದ ಬಗ್ಗೆ. - ಕುದುರೆಸವಾರರ ಸಂಘ?

ಇದಕ್ಕೆ ಅರ್ಥವಿಲ್ಲ.

ಈ ದ್ವೀಪದ ಸಂಪ್ರದಾಯಗಳನ್ನು ನೀನು ಮುರಿಯುತ್ತಿದ್ದರೆ,

ಈ ಜನ ಅವುಗಳನ್ನು ತೊಡಗಿಸಿಕೊಂಡಿದ್ದರು.

ಸಹಾಯವಾಗುವ ದಾರಿಗಳನ್ನು ಹುಡುಕುತ್ತಿದ್ದರು. ಸೇವೆ ಮಾಡಲು.

ಅದರ ಬಗ್ಗೆಯಂತೂ ನಿನಗೆ ಕಿಂಚಿತ್ತೂ ಚಿಂತೆಯಿಲ್ಲ.

ಚಿಂತೆಯಿದೆ. ನಾನು ಸೇವೆ ಮಾಡಲು ತಯಾರಿದ್ದೇನೆ.

ಬೇರೆ ಯಾವುದರಿಂದಲೂ ಹೆಮ್ಮೆಯಾಗಲ್ಲ.

ಆದರೆ ನಿನಗೆ ಅವಕಾಶವಿತ್ತು.

ನಿನ್ನ ಆಯ್ಕೆಯ ನೀನು ಮಾಡಿದೆ.

ಯಾರೋ ಹುಚ್ಚು ಸೌತ್ ಲ್ಯಾಂಡವನು ಮತ್ತು ಒಬ್ಬ

ಯುದ್ಧದ ಗೀಳಿನ ಎಲ್ಫಿಗಾಗಿ ನ್ಯೂಮೆನೊರಿನ ಜೀವಗಳನ್ನು ಪಣಕ್ಕಿಡಬೇಕಾ?

ರಾಯಭಾರಿ ಫರಝೋನ್! ನಮ್ಮ ಜನರನ್ನು ಸಾಯಲು ಯಾಕೆ ಕಳುಹಿಸುತ್ತಿದ್ದೀರಾ?

ಫರಝೋನ್!

- ಫರಝೋನ್! - ನಂಜೊತೆ ಬಾ.

ವಿಷಯ ಮುಟ್ಟಿಸದಿದ್ದುದಕ್ಕೆ ಕ್ಷಮಿಸು. ಈ ವಾರ ಬಹಳ ಕಷ್ಟ ಇತ್ತು.

ಆತ ಇದನ್ನು ಯಾಕೆ ತಡೆಯಲಿಲ್ಲ?

- ಆಕೆಗೆ ನಿಷ್ಠರಾಗಿದ್ದಾರೆ. ಸರಿಯಾಗೋ... - ತಪ್ಪಾಗಿ.

ಬಹಳ ಮಂದಿಗೆ ನಿನ್ನ ಹಾಗೇ ಅನಿಸುತ್ತಿದೆ. ಆತನ ಕದಲಿಸಲು ಸಾಧ್ಯವಿಲ್ಲ…

ಅದನ್ನು ನೀನೇ ಮಾಡಬೇಕು. ಆತ ನಿನ್ನ ಮಾತನ್ನಷ್ಟೇ ಕೇಳುತ್ತಾರೆ.

ನಾನು ಮಾತಾಡುವಾಗ ಅವರ ಕಿವಿಗಳು ಮುಚ್ಚಿಹೋಗುತ್ತವೆ.

ಹಾಗಿದ್ದರೆ ಜೋರಾಗಿ ಮಾತಾಡು.

ಸೌತ್ ಲ್ಯಾಂಡವನೇ.

ನಿನಗಾಗಿ ಯಾರೋ ಬಂದಿದ್ದಾರೆ.

ಮತ್ತೆ ಶತ್ರು ಮುಂದೆ ಎಲ್ಲಿಗೆ ಹೋದನು?

ಮುಂದೆ ದಕ್ಷಿಣಕ್ಕೆ ಅಂದ್ಕೋತೀನಿ. ಒಸ್ಟಿರಿಥ್ನ ಕಾವಲು ಗೋಪುರದ ಕಡೆಗೆ.

ಸೀ ಗಾರ್ಡಿಗೆ ವಿಷಯ ತಿಳಿಸುತ್ತೇನೆ.

ಧನ್ಯವಾದಗಳು, ಲಾರ್ಡ್ ಹಲ್ಬ್ರ್ಯಾಂಡ್.

ನಾವು ದಡ ಮುಟ್ಟಿದ್ದೇ ನಿಮ್ಮ ಸಹಯೋಗ ಬಹಳ ಮೌಲ್ಯಯುತವಾದ ನೆರವಾಗಲಿದೆ ಎಂದು ನನಗ್ಗೊತ್ತು.

ದಡ ಮುಟ್ಟೋದಾ?

ನಿಮ್ಮ ಜನರನ್ನು ಒಗ್ಗೂಡಿಸುವ ನಿನ್ನ ಆಶಯದ ಬಗ್ಗೆ ಗಲಾಡ್ರಿಯಲ್ ಹೇಳಿದಳು.

ಈಗ ಹೇಳಿದಳಾ?

ಅವಳು ಆತುರದಲ್ಲಿ ಹೇಳಿಲ್ಲ ತಾನೇ?

ಸತ್ಯವಾಗಿ, ಅದು ನನ್ನ ಉದ್ದೇಶ…

ನನ್ನ ಸಹವರ್ತಿಗೆ ತನ್ನ ಕಾರ್ಯದ ಭಾರ ಅರಿವಾಗುತ್ತಿದೆಯಷ್ಟೇ.

ಸಮಯ ಬಂದಾಗ ಆತ ತನ್ನ ಕಾರ್ಯವನ್ನು ನೆರವೇರಿಸುತ್ತಾನೆಂದು ಯಾವುದೇ ಅನುಮಾನವಿಲ್ಲ.

ಇದರಲ್ಲಿ ನನ್ನ ಹೆಸರೂ ಭಾಗಿಯಾಗಿರುವುದರಿಂದ ಹಾಗೇ ಆಗಬೇಕು.

ಮಹಾರಾಣಿ ರೀಜೆಂಟ್, ನಿಮ್ಮ ತಂದೆಯವರು ಗೋಪುರದಲ್ಲಿ ನಿಮ್ಮನ್ನು ಕಾಣಲು ಬಯಸುತ್ತಿದ್ದಾರೆ.

"ಗಲಾಡ್ರಿಯಲ್ ನಮಗೆ ತಿಳಿಸಿದಳು."

ರಾಣಿ ತನ್ನ ತಂದೆಯ ಹಾಸಿಗೆ ಪಕ್ಕದಲ್ಲಿ ನನ್ನ ಹೇಗೆ ತಡೆದಳಂತ ಯೋಚಿಸುತ್ತಿದ್ದೆ.

ಸಂಘದ ಶಿಖೆಗಾಗಿ ನನ್ನನ್ನೇ ಅರ್ಪಿಸುತ್ತೀಯ ಅಂದುಕೊಳ್ಳಲಿಲ್ಲ.

Maoni

No comments yet. Be the first to leave one.

Keep it about this subtitle — sync, quality, typos.500 characters left