The Devil's Mouth

The Devil's Mouth

Tải xuống Phụ đề Kannada

Thông tin phát hành

The Devils Mouth 2026 AMZN WEB H264-ETHEL
Bình luận bởi tedi
Retail AMZN | 1:46:03

Tags

webdl
Được xuất bản vào: 2026-07-29
Lượt tải xuống: 17
Khiếm thính: No

Xem trước phụ đề Kannada

200 dòng đầu tiên.

ನಾನು ಏನೂ ಮಾಡಕ್ಕಾಗಲ್ಲ.

ಇವತ್ತಿಗೆ ದೋಣಿಗಳು ಉಳಿದಿಲ್ಲ. ಕ್ಷಮಿಸಿ.

ಕೊನೆಯಲ್ಲಿ ಏನಾಗುತ್ತೆ ಅಂತ ನಮಗೆಲ್ಲರಿಗೂ ಗೊತ್ತು.

ಸುತ್ತಿಬಳಸಿ ಮಾತಾಡದೆ, "ಹೂಂ" ಅನ್ನಿ.

ಅವಳು ಸುಳ್ಳು ಹೇಳಲ್ಲ. ನಿಮಗೆ ಇಚ್ಛೆ ಇಲ್ಲದಿದ್ದರೂ, ಖಂಡಿತಾ ಮಜಾ ಮಾಡುತ್ತೀರ.

ನೀವು ದೃಢೀಕರಿಸಲಿಲ್ಲ. ನೀವು ಬುಕ್ ಮಾಡಿದ ದೋಣಿ ಹೋಗಿಬಿಟ್ಟಿತು.

-ಆದರೆ ನಿಮ್ಮಲ್ಲಿ ಇನ್ನೂ ದೋಣಿಗಳಿವೆ. -ಎಷ್ಟು ಜಾಸ್ತಿ ಕೊಡಬೇಕಾಗುತ್ತೆ ಹೇಳಿ.

ಚಿನ್ನ, ಏಡ್ರಿಯನ್ ಮತ್ತು ಗ್ರೆಗ್ ಅನ್ನು ಇಲ್ಲಿಂದ ಕಳಿಸುತ್ತೀಯಾ?

ಆಯ್ತು.

-ಹೇ, ಹೋಗಿ ಕುಳಿತುಕೊಳ್ಳೋಣ. -ಏನು? ಏನಾಯ್ತು?

ಅವರ ಬಗ್ಗೆ ಗಮನ ಕೊಡಬೇಡಿ.

ಕೇಳಿ, ನಿಮಗೆ ನಮ್ಮ ಜೊತೆ ಮಜಾ ಬರುತ್ತೆ.

ಆ ದೊಡ್ಡ ದೋಣಿ ಸಿಗಬಹುದಾ?

ನೀವು ಆ ದೋಣಿ ಓಡಿಸಿದರೆ ಚೆನ್ನಾಗಿರುತ್ತೆ.

ಬಾ, ನನ್ನ ಮುದ್ದು ಮರಿ.

ಮುತ್ತು ಕೊಡು.

ನೋಡುತ್ತಿದ್ದೀಯಾ?

ಸಮಾಧಾನ, ಜೇಮ್ಸ್. ಇದು ಥೈಲ್ಯಾಂಡ್. ಇಲ್ಲಿ ಏನು ಮಾಡಿದರೂ ಜನ ಕೇಳಲ್ಲ.

ಹೌದು ಮಗಾ. ನಿನ್ನ ಹುಡುಗಿ ನಿನಗೆ ಅವಮಾನ ಮಾಡಿದ್ದಕ್ಕೆ ಬೇಜಾರಾಯ್ತು.

-ದೊಡ್ಡ ಮಾತುಗಳನ್ನು ಆಡಬೇಡ. -ದೊಡ್ಡ ಸಂಸ್ಥೆಯಲ್ಲಿ ಓದಿದ್ದೇನೆ, ಬುದ್ಧಿವಂತ.

-ಅರಿಜೋನಾ ವಿಶ್ವವಿದ್ಯಾಲಯ ದೊಡ್ಡದ್ದಾ? -ಸರಿ.

ನಾವು ಬಿಯರ್ ಖರೀದಿಸಿ ಬೀಚ್‌ಗೆ ಹೋಗಬಹುದಲ್ಲಾ?

ಗ್ರೆಗ್, ಒಂದು ನಿಮಿಷ ಇರು.

ಮ್ಯಾಕ್ಸ್ ಮ್ಯಾಜಿಕ್ ಬಗ್ಗೆ ನಿನಗೆ ಗೊತ್ತಿಲ್ಲ.

ಇವಳೆಷ್ಟು ತಮಾಷೆ ಮಾಡುತ್ತಾಳೆ!

-ಸರಿ, ಬನ್ನಿ. ದೋಣಿ ಈ ಕಡೆಗಿದೆ. -ನೋಡು.

ಮ್ಯಾಕ್ಸ್‌ಳ ಜಾದೂ!

ಮ್ಯಾಕ್ಸ್, ನೀನು ಅಸಾಧಾರಣ.

ಥ್ಯಾಂಕ್ಸ್.

-ಅದ್ಭುತ ಕೆಲಸ. -ರಿಸರ್ವೇಶನ್ ಇಲ್ಲ, ಠೇವಣಿ ಇಲ್ಲ, ಸಮಸ್ಯೆ ಇಲ್ಲ.

ನನಗೆ ಪ್ಲಾನ್ ಮಾಡೋದು, ತಯಾರಿ, ಎಲ್ಲ ಇಷ್ಟ ಇಲ್ಲ.

ಹಾಯ್, ಕೋತಿ. ಹಾಯ್.

ಹಾಯ್, ಕೋತಿ.

ರಾಕ್ಷಸ.

ಇದು ಕೆಟ್ಟ ಕೋತಿ ಅಲ್ಲ.

ಹೇ, ಇರಿ!

ದ ಡೆವಿಲ್ಸ್‌ ಮೌತ್

ಇದು ಜೀವನದಲ್ಲಿ ಒಮ್ಮೆ ಮಾತ್ರ ಸಿಗೋ ಅವಕಾಶ.

ಆದರೆ ಇದು ನಿಜವಾದ ಉದ್ಯೋಗನಾ?

ಗಾಯಕಿ ಸಬ್ರಿನಾ ಕಾರ್ಪೆಂಟರ್ ಅವರ ಈಜುಡುಗೆಯ ವ್ಯವಹಾರ.

ಅವಳ ಹೂಡಿಕೆಯವನು ಅಪ್ಪನಿಗೆ ಯೇಲ್‌ನಿಂದ ಗೊತ್ತು.

ಸದ್ಯಕ್ಕೆ ಅವಳ ಸೋಶಿಯಲ್ ಮೀಡಿಯಾ ನೋಡಿಕೊಳ್ಳುತ್ತೇನೆ,

ಎರಡು ವರ್ಷಗಳಲ್ಲಿ, ಅವಳ ಇಡೀ ವ್ಯವಹಾರ ನನ್ನ ಕೈಯಲ್ಲಿರುತ್ತೆ.

ನಿನಗೆ ಸಬ್ರಿನಾ ಕಾರ್ಪೆಂಟರ್ ಇಷ್ಟವಾ?

ನನಗೆ ಮೋಜು ಮಾಡೋದು ಇಷ್ಟ.

ಏನು ಯೋಚಿಸುತ್ತಿದ್ದೀಯ?

ಚೆನ್ನಾಗಿದೆ ಅನಿಸುತ್ತೆ.

ಆದರೆ ನಾವು ವರ್ಷಪೂರ್ತಿ ನ್ಯೂಯಾರ್ಕ್ ಬಗ್ಗೆ ಮಾತಾಡಿದ್ದೇವೆ, ಅದು ಒಪ್ಪಂದದಂತೆ ಇತ್ತು.

ಈಗ ಅದು ಬದಲಾಗಿದೆ. ನೀನು ಎಲ್‌ಎಗೆ ಹೋಗುತ್ತಿದ್ದೀಯ. ಎಲ್ಲ ಬದಲಾದಂತೆ ಅನಿಸುತ್ತೆ.

ಈ ಕ್ಷಣದಲ್ಲಿ ಬದುಕುತ್ತಿದ್ದೇನೆ.

ಅವಕಾಶದ ಪ್ರಯೋಜನ ಪಡೆಯುತ್ತಿದ್ದೇನೆ, ನೀನೂ ನನ್ನ ಜೊತೆ ಬರುತ್ತೀಯ.

ನಾನು ಕಷ್ಟಪಟ್ಟು ಗಿಟ್ಟಿಸಿಕೊಂಡ ಕೆಲಸವನ್ನು ಈಗ ತಾನೆ ಒಪ್ಪಿಕೊಂಡೆ.

ಅದನ್ನು ಬಿಡಲಾರೆ.

ಬಿಟ್ಟೆ ಅಂದುಕೊಳ್ಳಬೇಡ.

ದಾರಿ ಬದಲಿಸೋದಷ್ಟೇ.

ತಮಾಷೆ ಮಾಡಬೇಡ.

ಅಂದರೆ…

ಹೊಟ್ಟೆಗೆ ಏನು ತಿನ್ನಲಿ?

ಎಲ್ಲಿರಲಿ? ಎಲ್‌ಎನಲ್ಲಿ ನನಗೆ ಯಾರೂ ಗೊತ್ತಿಲ್ಲ.

ನಾನು ಗೊತ್ತಲ್ಲ, ಇನ್ನೇನು ಬೇಕು ನಿನಗೆ?

ನೀನು ನಾನು, ಚಿರಕಾಲ.

ನ್ಯೂಯಾರ್ಕ್-ಎಲ್‌ಎ ಚರ್ಚೆ ಬಿಟ್ಟು, ಈಜೋಣವಾ?

ನಾನು ಅವರಿಗೆ ಅವರಾಡುತ್ತಿರೋ ಆಟ ಕಲಿಸಬೇಕು. ಆದರೆ ನೀನು ಹೋಗು.

ನಾನೊಬ್ಬಳೇನಾ?

ಹೇ, ಏಡ್ರಿಯನ್, ನೀನು ನನ್ನ ತಂಡದಲ್ಲಿದ್ದೀಯ!

-ಸರಿ. -ನ್ಯೂಯಾರ್ಕ್ ಬೇಕಿಲ್ಲ. ನನ್ನನ್ನು ನಂಬು.

ಒಳ್ಳೆಯ ಶಾಟ್.

ಓ, ದೇವರೇ.

ಇಲ್ಲ! ನಾನು ನಿನ್ನನ್ನು ಕೊಂದುಬಿಡುತ್ತೇನೆ!

ಸರಿ, ನನ್ನ ಬದಲು ಆಡು. ಉಚ್ಚೆ ಮಾಡಿ ಬರ್ತೇನೆ.

ಸರಿ.

ಓ ದೇವರೇ.

ಹೂಂ.

ಸೇಡು ಸರಿಯಾಗಿ ತೀರಿಸಿಕೊಳ್ಳಬೇಕು.

ಇಲ್ಲ.

ಹೇ, ನಾವು ಹೊರಡಬೇಕು.

-ಇನ್ನೊಬ್ಬಳು ಹುಡುಗಿ ಎಲ್ಲಿ? -ಬಾತ್‌ರೂಮಿಗೆ ಹೋದಳು.

-ನಾವು ಗೆದ್ದೆವು. -ಹೋಗೋಲೋ. ನೀನು ಹೇಗೆ…

ಹೇ, ಹಿಂದೆ ಬನ್ನಿ!

ಹೇ! ನಾನು ಇನ್ನೂ ಇಲ್ಲೇ ಇದ್ದೇನೆ! ಓ ದೇವರೇ!

ಹೇ!

-ಗ್ರೆಗ್, ಗ್ರೆಗ್, ಗ್ರೆಗ್. -ಹೇ!

ಹೇ!

ನಾನು ಇನ್ನೂ ಇಲ್ಲೇ ಇದ್ದೇನೆ! ಓ ದೇವರೇ!

ಅಯ್ಯೋ.

ಓ ದೇವರೇ! ನನ್ನನ್ನು ಬಿಡಿ!

-ಕುಡಿಯೋಣ! -ಓ ದೇವರೇ! ಇಲ್ಲಿ.

ಹೇ, ಸಾರಾ ಎಲ್ಲಿ?

ಏನು?

ಸಾರಾ ಎಲ್ಲಿ?

ಹೇ, ಹೇ! ದೋಣಿ ನಿಲ್ಲಿಸು!

ಕ್ಷಮಿಸು, ಚಿನ್ನ. ನಮಗೆ ಗೊತ್ತಿರಲಿಲ್ಲ.

ದೇವರೇ, ಎಷ್ಟಿದ್ದವು?

-ತುಂಬಾ ಇದ್ದವು. -ಇದು ಥೈಲ್ಯಾಂಡ್ ಅಲ್ಲಿ ಸಾಮಾನ್ಯ.

ನೀವು ನನ್ನನ್ನು ಬಿಟ್ಟು ಹೋದಿರಿ.

ನೀನು ನೀರಲ್ಲಿ ಇದ್ದೆ ಅಂತ ಗೊತ್ತಿರಲಿಲ್ಲ, ನಾವಲ್ಲಿಂದ ಬಂದಿದ್ದೂ ಗೊತ್ತಿರಲಿಲ್ಲ.

ನನಗೆ ಗೊತ್ತಿತ್ತು, ಆದರೆ ಗೊಂದಲದಲ್ಲಿದ್ದೆ,

-ಯಾಕೆಂದರೆ ಕ್ಯಾಪ್ಟನ್ ನನ್ನನ್ನು ಕೇಳಿದ-- -ದೇವರೇ, ಗ್ರೆಗ್. ಸುಮ್ಮನಿರು.

ನಿಲ್ಲಿಸು.

ಒಂದು ನಿಮಿಷ ಸುಮ್ಮನಿರು.

ನೀನು ಗುಣವಾಗುತ್ತೀಯ.

ಗುಣವಾಗುತ್ತಾಳೆ, ಅಲ್ವಾ?

ನೀನು ಗುಣವಾಗುತ್ತೀಯ. ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ.

ಹೋಗೋಣ. ತಡವಾಗುತ್ತಿದೆ.

ನಮ್ಮನ್ನು ಕ್ಷಮಿಸು.

ಥ್ಯಾಂಕ್ಸ್.

ಎಲ್ಲರೂ ಶುರು ಮಾಡಿ.

ಸರಿ.

ನನಗೆ ತುಂಬಾ ಕೋಪ ಬರುತ್ತಿದೆ.

ಆ ದೋಣಿಯವನಿಗೆ ಕೆಟ್ಟ ವಿಮರ್ಶೆ ಕೊಡುತ್ತೇನೆ.

ಇದರಲ್ಲಿ ಯಾರದ್ದೂ ತಪ್ಪಿಲ್ಲ. ಆಗಿದ್ದು ಆಯ್ತು.

ಅದು ಹೇಗೆ ನೀರಿನಲ್ಲಿ ಯಾರನ್ನಾದರೂ

ಬಿಟ್ಟು ಬರುತ್ತಾರೆ?

ಹುಷಾರಾಗಿರಬೇಕು. ಸ್ವಲ್ಪ ಸುರಕ್ಷತೆ ಬೇಡವಾ?

ಎಷ್ಟು ಜನ ಇದ್ದಾರೆ ಎಂದು ಕ್ಯಾಪ್ಟನ್ ಲೆಕ್ಕ ಹಾಕಬೇಕು.

ಸಾರಾ, ನೀನು ಹೇಳಿದರೆ ಅಪ್ಪನಿಗೆ ಹೇಳಿ ದೋಣಿಯವನ ಮೇಲೆ ಕೇಸ್ ಹಾಕುತ್ತೇನೆ,

ಹೋಗಲಿ, ಅವನು ಭಯಪಡುವಂತೆ ಒಂದು ಪತ್ರ ಕಳುಹಿಸೋಣ.

ಅವನದ್ದು ತಪ್ಪಿಲ್ಲ.

ಬಹುಶಃ, ನೀನು ಸರಿಯಾಗಿ ಹೇಳುತ್ತಿದ್ದೀಯ.

ಒಂದಾದ ಮೇಲೆ ಒಂದರಂತೆ ಎಲ್ಲಾ ತಪ್ಪುಗಳೂ ಒಮ್ಮೆಲೇ ನಡೆದವು.

ನಾವು ಪಾರ್ಟಿ ಮಾಡುತ್ತಿದ್ದೆವು, ನೀನು ಎಲ್ಲೋ ಇದ್ದೆ.

-ಗಲಾಟೆ ಜೋರಾಗಿತ್ತು. -ಇದರಲ್ಲಿ ಯಾರದ್ದೂ ತಪ್ಪಿಲ್ಲ ಅಂದೆನಲ್ಲಾ?

ಮದ್ಯ ಕಂಡುಹಿಡಿದವರನ್ನು ಬಿಟ್ಟು.

ಅಲ್ವಾ?

ಮದ್ಯಕ್ಕೆ ಕೆಟ್ಟ ವಿಮರ್ಶೆ ಕೊಡೋಣವಾ?

-ಒಳ್ಳೆಯ ಐಡಿಯಾ. -ಥ್ಯಾಂಕ್ಸ್.

ಸಮಯದ ಅರಿವೇ ಆಗಲಿಲ್ಲ.

-ನೀನು ದೋಣಿಯಲ್ಲಿದ್ದೆ ಅಂದುಕೊಂಡೆ, ಸಾರಾ. -ಆದರೆ ನಾನು ನೀರಲ್ಲಿ ಇದ್ದೆ.

ಎಲ್ಲದಕ್ಕೂ ನಾನೇ ಹೊಣೆ ಅಲ್ಲ.

ಯಾವಾಗಿನಿಂದ?

ನೀವು ಊಟ ಮಾಡಿ.

ಎಲ್ಲರ ಜೊತೆ ಊಟ ಮಾಡೋಣ ಅಂದುಕೊಂಡಿದ್ದೆ.

ಹಾಗಿದ್ದರೆ ಕುಳಿತು ಊಟ ಮಾಡು.

ಇನ್ನೇನು ಒಟ್ಟಿಗೆ ಊಟ ಮಾಡೋದು?

ನಾವು ನಿನ್ನನ್ನು ಒಬ್ಬಂಟಿಯಾಗಿ ನೀರಿನಲ್ಲಿ ಬಿಟ್ಟು ಬಂದೆವು

ಈಗ ನಿನ್ನ ದೇಹದ ತುಂಬಾ ಗಾಯಗಳಿವೆ, ನಿಜ, ಆದರೆ ಇಲ್ಲಿ ನಿಜವಾದ ಬಲಿಪಶು ಬೇರೆಯವರು.

ಮ್ಯಾಕ್ಸ್.

ಕಾಲೇಜಿನ ಎರಡನೇ ವರ್ಷದಿಂದ ನೀವು ಒಬ್ಬರನ್ನೊಬ್ಬರು ಬಿಟ್ಟಿರಲಿಲ್ಲ.

ನನಗನಿಸುತ್ತೆ ನಿಮ್ಮ ಎಲ್‌ಎ-ನ್ಯೂಯಾರ್ಕ್ ಸಂಬಂಧದಲ್ಲಿ

ನೀವು ದೂರ ಕಾಯ್ದುಕೊಂಡರೆ ಒಳ್ಳೆಯದು.

ಎಲ್‌ಎ ಕೆಟ್ಟದ್ದಲ್ಲ, ಅಲ್ವಾ?

ನನಗೆ ಸ್ಟ್ರಿಪ್ ಮಾಲ್‌ಗಳು ಇಷ್ಟ.

ಅಥವಾ ನ್ಯೂಯಾರ್ಕ್‌ಗೆ ಹೋಗು.

ಅಲ್ಲಿ ನಿನ್ನ ದಾರಿ ಹುಡುಕಿಕೋ.

-ನಿನ್ನನ್ನು ನೋಡಿಕೊಳ್ಳದಿದ್ದಕ್ಕೆ ಕ್ಷಮಿಸು. -ಅತಿಯಾಗಿ ಆಡಿದ್ದಕ್ಕೆ ಕ್ಷಮಿಸು.

-ಕ್ಷಮಿಸು. -ಕ್ಷಮಿಸು. ಕ್ಷಮಿಸು.

ಥ್ಯಾಂಕ್ಸ್.

-ನಾನು ಉಚ್ಚೆ ಮಾಡಬೇಕಾಗಿ ಬಂದಿದ್ದಕ್ಕೆ ಕ್ಷಮಿಸು. -ಕ್ಷಮಿಸು.

ನಿಜ ಹೇಳೋದಾದ್ರೆ

ಏಡ್ರಿಯನ್‌ ಪದೇಪದೇ ಉಚ್ಚೆ ಮಾಡೋದು ಇದಕ್ಕಿಂತ ಮುಂಚೆಯೂ ತೊಂದರೆ ಕೊಟ್ಟಿದೆ.

-ನಿಮಗೆ ಏನೂ ಗೊತ್ತಿಲ್ಲ. -ಹೌದು.

ಗ್ರೆಗ್ ಲ್ಯಾಬ್ರಡಾರ್ ನಾಯಿಯ ಥರ, ಅಲ್ವಾ?

ಅಥವಾ ಅವನು ಗೋಲ್ಡನ್ ರಿಟ್ರೈವರಾ?

ಡೇಟಿಂಗ್ ಆ್ಯಪ್ ಅಲ್ಲಿ ಅವನು ಎರಡನ್ನೂ ಹಿಡಿದಿದ್ದ.

-ಗೊತ್ತು. -ನೀನವನನ್ನು ಕರೆತಂದಿದ್ದು ಒಳ್ಳೆಯದಾಯಿತು.

ಸದ್ಯಕ್ಕೆ ಎಲ್ಲ ಮಾನದಂಡಗಳನ್ನು ಪೂರೈಸುತ್ತಾನೆ.

-ಅವರಿಬ್ಬರೂ ಮುತ್ತಿಕ್ಕುವ ಹಾಗಿದ್ದಾರಾ? -ಹಾಗೇ ಅನಿಸುತ್ತಿದೆ.

ನಾನು ಮಜಾ ನೋಡಿ ಬರುತ್ತೇನೆ.

-ಹೂಂ, ಹೋಗಿ ನೋಡು. -ಹೋಗಿ ನೋಡು.

ಹೇ, ಇವತ್ತು ಆಗಿದ್ದಕ್ಕೆ ನನ್ನನ್ನು ಕ್ಷಮಿಸು.

ಪರವಾಗಿಲ್ಲ.

-ನನಗೆ ಬೇಜಾರಿಲ್ಲ. -ನಾನು ಜವಾಬ್ದಾರಳಾಗಿರಲು ಯತ್ನಿಸುತ್ತಿದ್ದೇನೆ.

ನನಗೆ ಎಲ್ಲ ಬೇಗ ಮುಗಿಸಬೇಕು ಅನ್ನೋ

ಕೆಟ್ಟ ಅಭ್ಯಾಸವಿದೆ.

ನಿನ್ನನ್ನು ದೂಷಿಸಿಕೊಳ್ಳಬೇಡ.

ಈ ವಾರ ನಾನೂ ವಿಚಿತ್ರವಾಗಿದ್ದೇನೆ.

ನಿನ್ನ ತಂದೆ.

-ಹೂಂ. -ಹೂಂ.

ನನಗೆ ಗೊತ್ತು, ಅವರು ಇಲ್ಲಿಗೆ ಒಮ್ಮೆ ಮಾತ್ರ ಟ್ರಿಪ್‌ಗೆ ಬಂದಿದ್ದು.

ಆದರೆ ನಾನು ಅವರಿಗೆ ಫೋಟೋ ಕಳಿಸಬೇಕು ಅನಿಸುತ್ತಿರುತ್ತೆ,

ಅವರಿಗೆ ಯಾವ ಬೀಚ್ ಇಷ್ಟ ಆಯಿತು, ಯಾವ ಖಾದ್ಯ ತಿಂದರು ಅಂತ ಕೇಳಬೇಕು ಅನಿಸುತ್ತಿರುತ್ತೆ.

ಹೂಂ.

ಅವರ ಹತ್ತಿರ ಮಾತಾಡಬೇಕು ಅಷ್ಟೇ.

ನಿನಗೆ ಇಷ್ಟವಿಲ್ಲದಿದ್ದರೆ ನಾಳೆ ಗುಹೆಗೆ ಹೋಗಬೇಕಿಲ್ಲ.

ಇಲ್ಲ. ನನಗೆ ಗೊತ್ತಿರೋದು ಅದೊಂದೇ.

ಅವರಿಗೆ ಆ ಗುಹೆಯಲ್ಲಿ ಈಜಿ ತುಂಬಾ ಖುಷಿಯಾಗಿತ್ತು.

ನಾಳೆ. ಡೆವಿಲ್ಸ್‌ ಮೌತ್.

ನಿನ್ನ ಅಪ್ಪನಿಗಾಗಿ ಮತ್ತು ನಮ್ಮೆಲ್ಲರಿಗಾಗಿ.

ಅವರು ಸತ್ತಾಗ ನೀನು ಮುಂದೆ ಬಂದಿರದಿದ್ದರೆ,

ಬಹುಶಃ ನಾನು ಶಾಲೆಗೆ ಹೋಗುವುದನ್ನು ಬಿಡುತ್ತಿದ್ದೆ.

ನೀನು ನನ್ನನ್ನು ಸೋಲಲು ಬಿಡಲಿಲ್ಲ.

ನೊಂದ ಜೀವಕ್ಕೇ ಇನ್ನೊಂದು ಜೀವದ ನೋವು ಅರ್ಥವಾಗೋದು. ತೀರಿಕೊಂಡ ಹೆತ್ತವರು, ಸಮಾಜ.

ಹೌದು. ನನ್ನನ್ನು ಪಾರ್ಟಿಗಳಿಗೆ ಎಳೆದುಕೊಂಡು ಹೋಗುತ್ತಿದ್ದೆ…

ವಿಚಿತ್ರ ಬಟ್ಟೆಗಳಲ್ಲಿ.

-ಒಂದೇ ಥರದ ಬಟ್ಟೆ ಯಾಕೆ ಹಾಕುತ್ತಿದ್ದೆವು? -ಒಂದೇ ಥರದ ಬಟ್ಟೆ ಹಾಕುತ್ತಿದ್ದೆವು.

ಆಗ ನೀನೇ ನನ್ನನ್ನು ಉಳಿಸಿದ್ದು.

ನಿಜವಾಗಿಯೂ.

ಮ್ಯಾಕ್ಸ್ ಮ್ಯಾಜಿಕ್.

-ಸರಿ, ಹೇಳಿಬಿಡು. -ಹೇಳಲ್ಲ.

-ಹೇಳು. -ನನ್ನನ್ನು ಒಂಟಿಯಾಗಿ ಬಿಟ್ಟರೆ ಮಾತ್ರ.

ಇಲ್ಲ. ನೀನು ನಾನು…

-ಚಿರಕಾಲ. -ಹೌದು! ಒಳ್ಳೆ ಹುಡುಗಿ.

-ಬಾ, ಬೆತ್ತಲಾಗೋಣ! ನೀರಿಗೆ ಇಳಿಯೋಣ! -ಬೆತ್ತಲು--

-ಹೂಂ ಹೋಗೋಣ! -ಓ ದೇವರೇ.

-ಬಾ. -ನೀವು ಹೋಗಿ ಬನ್ನಿ.

-ನಾನು ಇಲ್ಲೇ ಇರುತ್ತೇನೆ. -ಓಹ್, ಛೇ. ಕ್ಷಮಿಸು.

ಪರವಾಗಿಲ್ಲ ಬಿಡು. ಅವರು ಈಜಲಿ.

-ಜೇಮ್ಸ್ ಮತ್ತು ಗ್ರೆಗ್… -ಇಲ್ಲ. ನೀವು ಹೋಗಿ.

…ಒಟ್ಟಿಗೆ ಬೆತ್ತಲಾಗಲಿ.

-ಅವರಿಗೆ ಬೇಕಿದ್ದು ಅದೇ. -ದಯವಿಟ್ಟು ಹೋಗಿ.

Bình luận

No comments yet. Be the first to leave one.

Keep it about this subtitle — sync, quality, typos.500 characters left