Ride or Die

Ride or Die

Kannada സബ്ടൈറ്റിൽ ഡൗൺലോഡ് ചെയ്യുക

സീസൺ 1

റിലീസ് വിവരങ്ങൾ

Ride or Die S01E05 The Count of Monte Carlo 1080p WEBRip 10Bit DDP5 1 x265-NeoNoir
കമന്ററി എഴുതിയത് chargephoton88

ടാഗുകൾ

webdl
പ്രസിദ്ധീകരിച്ചത്: 2026-08-21
ഡൗൺലോഡുകൾ: 0
ശ്രവണ വൈകല്യമുള്ളവർക്ക്: No
FPS: 23.976

Kannada സബ്ടൈറ്റിൽ പ്രിവ്യൂ

ആദ്യത്തെ 200 വരികൾ.

ಬೇಡ!

ರೈಡ್ ಆರ್ ಡೈನಲ್ಲಿ ಈ ಹಿಂದೆ…

ನಾನು ಅವಳನ್ನು ವಿಪ್ಟೇಲ್ ಜೊತೆ ನೋಡಿದೆ. ನಿನ್ನ ಮನೆಯಲ್ಲಿ ವಿಪ್ಟೇಲ್ ಅನ್ನು ನೋಡಿದೆ.

ಅವರು 20 ವರ್ಷಗಳಿಂದ ಸ್ನೇಹಿತೆಯರಾಗಿದ್ದಾರೆ!

- ಸುಳ್ಳ! - ಅವರು ಆತ್ಮೀಯ ಸ್ನೇಹಿತೆಯರು.

ಹೇ.

ಗಾಜಿನ ಬಾಗಿಲಿಗೆ ಬಡಿದು ಏಟಾಗಿತ್ತು.

ಎಲ್ಲಾ ಏಜೆಂಟರ ದಾಖಲೆಗಳು ಲಾಕರ್‌ನಲ್ಲಿಡುತ್ತಾರೆ.

ನನ್ನ ಅಮ್ಮ. ಅವಳು ಹಂತಕಿಯಾಗಿದ್ದಳು.

ಸಿಕ್ಕಿದಳು!

ಐದು ವರ್ಷಗಳ ಹಿಂದೆ ವಿಪ್ಟೇಲ್‌ನೊಂದಿಗಿನ ಕಾರ್ಯಾಚರಣೆಯಲ್ಲಿ ಸತ್ತಳು ಎಂದಿದೆ.

- ನಾವು ವಿಪ್ಟೇಲ್‌ಗೆ ಹೇಳಬೇಕು. - ಸರಿ, ಸ್ಯಾಮ್.

ಈ ಡೆಬ್ಬಿ ಕ್ಲೇಬೋರ್ನ್ ನಿನಗೆ ಏನಾಗಬೇಕು?

ಅವಳು ನನ್ನ ಸ್ನೇಹಿತೆ.

ಆಯ್ಕೆ ಮಾಡು. ಅವಳು ಅಥವಾ ನಾನು.

ಕೆಲಸವನ್ನು ಮುಗಿಸು. ಮುಗಿಸದಿದ್ದರೆ ನೀನು ಆಚೆ ಹೋದಂತೆ.

ಎಣಿಕೆಯ ಪ್ರಕಾರ ಎಲ್ಲಾ ಪ್ರಯಾಣಿಕರೂ ಇದ್ದಾರೆ.

ಇಬ್ಬರು ಮಹಿಳೆಯರನ್ನು ಹೊರತುಪಡಿಸಿ. ಅವರು ಇಳಿದ ಬಗ್ಗೆ ನಮ್ಮ ಬಳಿ ದಾಖಲೆಗಳಿಲ್ಲ.

ಅಲ್ಬೇನಿಯನ್ ಕ್ರಿಮಿನಲ್ ಮಾಫಿಯಾ ಬೆಳಿಗ್ಗೆ ರೈಲು ನಿಲ್ದಾಣದಲ್ಲಿತ್ತು.

ಛೇ. ಅವರಿಗೆ ಏನು ಬೇಕು?

ಅವರು ನನ್ನ 24 ದಶಲಕ್ಷ ಪೌಂಡ್ ಕದ್ದಿದ್ದಾರೆ.

- ಹೋಗಿ ಅವರನ್ನು ಹುಡುಕು. - ಮಿಸಸ್ ಕ್ಲೇಬೋರ್ನ್?

- ನೀನಿದನ್ನು ಮಾಡುವ ಅಗತ್ಯವಿಲ್ಲ. - ಹೌದು, ಮಾಡಬೇಕು.

ನಿನಗೆ ಆಯ್ಕೆ ಇದೆ.

ಅಲ್ಬೇನಿಯನ್ನರು ಬಂದಿದ್ದಾರೆ.

ನನ್ನ ಬಿಟ್ಟು ಹೋಗಬೇಡಿ. ಕೊಲ್ಲುತ್ತಾರೆ.

ನಿಮ್ಮನ್ನು ಹುಡುಕಿ ಬರುತ್ತಾರೆ. ನೀವು ಇವರಿಗೆ 24 ದಶಲಕ್ಷ ಪೌಂಡ್ ನೀಡಬೇಕಿದೆ.

- ಅದನ್ನು ಮರಳಿ ಪಡೆಯುವುದು ಹೇಗೆಂದು ಗೊತ್ತು. - ಹೇಗೆ?

ಐದು ವರ್ಷಗಳ ಹಿಂದೆ

ಟರ್ಕಿ

ಮರಳಿ ಸ್ವಾಗತ.

ನಿನಗೆ ಸ್ವಲ್ಪ ಸಮಯ ಪ್ರಜ್ಞೆ ಇರಲಿಲ್ಲ.

ನಿನ್ನನ್ನು ಯಾರು ಕಳುಹಿಸಿದರು?

ಯಾರಿಗಾಗಿ ಕೆಲಸ ಮಾಡುತ್ತೀಯ?

ಅವನ ಹೆಸರು…

ಅವರು ನನ್ನ ಹಿಂದೆ ಬರುತ್ತಾರೆ.

ಯಾರೂ ನಿನ್ನ ಹಿಂದೆ ಬರುತ್ತಿಲ್ಲ.

ರೈಡ್ ಆರ್ ಡೈ

ಒಳಗೆ ಬಾ.

ಸ್ಯಾಮ್, ಒಳಗೆ ಬಾ.

ಕುಡಿಯುವೆಯಾ?

ಬೇಡ, ಧನ್ಯವಾದ.

ಬಾ. ಒಂದು ಪೆಗ್ ಕುಡಿ.

ನನ್ನ ಕಛೇರಿಯಲ್ಲಿ ನೀನು ಏನು ಮಾಡುತ್ತಿದ್ದೆ?

ನನ್ನ ಏಜೆಂಟ್‌ನ ರಕ್ಷಿಸಲು ಪ್ರಯತ್ನಿಸುತ್ತಿದ್ದೆ.

ಬಿಲ್ಲಿ ಡೊನೊವನ್‌ನ ಕೊಲೆಯ ಆದೇಶ ಒಂದು ಬಲೆಯಾಗಿತ್ತು.

ಯಾರು ಬೀಸಿದ ಬಲೆ?

ಮಾಜಿ ಆಪರೇಟಿವ್.

ರೆಡ್‌ಬ್ಯಾಕ್.

ರೆಡ್‌ಬ್ಯಾಕ್ ಸತ್ತಿದ್ದಾಳೆ.

ಇಲ್ಲ, ಸರ್, ಅವಳು ಸತ್ತಿಲ್ಲ. ನಾನೇ ಅವಳನ್ನು ನೋಡಿದೆ.

ಅವಳ ಫೈಲ್‌ನಲ್ಲಿ ಐದು ವರ್ಷ ಹಿಂದೆ ಟರ್ಕಿಯಲ್ಲಿ‌ ವಿಪ್ಟೇಲ್ ಜೊತೆ ಮಿಷನ್‌ನಲ್ಲಿ ಸತ್ತಳು ಎಂದಿತ್ತು.

ಆದರೆ ಅವಳು ಜೀವಂತವಾಗಿದ್ದಾಳೆ.

- ವಿಪ್ಟೇಲ್ಗೆ ಹೇಳಲು ಪ್ರಯತ್ನಿಸ್ತಿದ್ದೇನೆ. - ಬೇಡ.

ಆದರೆ ನಾವು ಅವಳಿಗೆ ಹೇಳಬೇಕು.

ವಿಪ್ಟೇಲ್ ಸುಳ್ಳು ಹೇಳಿದಳು.

ಅವಳು ಇನ್ನು ಮುಂದೆ ಈ ಸಂಸ್ಥೆಯ ಸದಸ್ಯಳಲ್ಲ.

ಇಲ್ಲ, ಆದರೆ, ಸರ್, ಈ ಮಹಿಳೆ, ರೆಡ್‌ಬ್ಯಾಕ್, ಅವಳನ್ನು ಕೊಲ್ಲಲಿದ್ದಾಳೆ.

ಹೌದು. ನಿಯಮಗಳು ನಿಮಗೆ ಅನ್ವಯಿಸುವುದಿಲ್ಲ ಎಂದು ಭಾವಿಸಿದಾಗ ಹೀಗೇ ಆಗುವುದು.

ಆಚೆ ಹೋಗು.

ಮತ್ತು, ಸ್ಯಾಮ್…

ನೀನು ನನಗೆ ಹೇಳಿದ್ದನ್ನು ಯಾರಿಗಾದರೂ ಹೇಳಿದರೆ…

ನಿನ್ನನ್ನು ಕೊಲ್ತೇನೆ.

ನಾವು ಸುಮಾರು 20 ನಿಮಿಷಗಳ ದೂರದಲ್ಲಿದ್ದೇವೆ.

ಸಮಯ ಕಳೆದದ್ದು ಗೊತ್ತಾಗಲಿಲ್ಲ.

ತಮಾಷೆಯೇ?

ಹೌದು, ತಮಾಷೆಯೇ!

ಹಲವಾರು ಗಂಟೆಗಳ ಹಿಂದೆ

ನೀವು ನನಗೆ ಒಂದು ಫ್ರೈ ಕೂಡ ಕೊಡಲ್ಲವಾ?

- ಕ್ಲಚ್ ಹೆಚ್ಚು ಒತ್ತಬೇಡ. - ಕ್ಲಚ್…

ಸುಟ್ಟ ವಾಸನೆ ಬರುತ್ತಿದೆ. ಕ್ಲಚ್ ಹೆಚ್ಚು ಒತ್ತಬೇಡ!

- ಒಂದು ಗೇರ್ ಮೇಲೆ ಹೋಗಬೇಕು. - ಸುಮ್ಮನಿರಿ, ಇಬ್ಬರೂ! ನಾನು ಓಡಿಸಬಲ್ಲೆ!

ಅವನಿಗೆ ಏನಾದರೂ ತಿನ್ನಲು ಕೊಡಬಹುದು. ಅವನು ನಮ್ಮ ಕೈದಿ ಅಲ್ಲ.

ಅವನು ಅಕ್ಷರಶಃ ನಮ್ಮ ಕೈದಿ.

- ನೇರವಾಗಿ ಹೋಗು… - ಬಲ ಬದಿಗೆ!

- ಏನು? - ಇದು ಏಕಮುಖ ರಸ್ತೆ!

…ಸಾಗರ ಸೇರುವವರೆಗೆ.

- ನಿಲ್ಲಿಸು! - ನಿಲ್ಲಿಸಿ!

ಹಾಗಾದರೆ… ಅವನಿಗೆ ಏನಾದರೂ ಗೊತ್ತಿತ್ತಾ?

ಬ್ಲಾಕ್ ಮಾರ್ಕ್ ಬಗ್ಗೆ ಏನಾದರೂ?

ಏನೂ ಇಲ್ಲ.

ನಾನು ಕೆಲಸ ಬಿಟ್ಟೆ.

ಯಾಕೆ?

ಅದನ್ನು ಮಾಡುತ್ತಾ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗಲ್ಲ.

- ಈಗ ಹೇಗೆ ಅನಿಸುತ್ತಿದೆ? - ನನಗೆ ಗೊತ್ತಿಲ್ಲ.

ಇದುವರೆಗೂ ನಾನು ಬೇರೆ ಏನನ್ನೂ ಮಾಡಿಲ್ಲ.

ಮತ್ತು ನನ್ನನ್ನು ನೇಮಿಸಿದ ಡೈರೆಕ್ಟರ್,

ನನ್ನ ಜೀವನದುದ್ದಕ್ಕೂ ನನ್ನೊಂದಿಗಿದ್ದರು.

ಮತ್ತು ಮೊದಲ ಬಾರಿಗೆ, ನಾನು…

ನಾನು ಒಬ್ಬಂಟಿ.

ನೀನು ಒಬ್ಬಂಟಿಯಲ್ಲ.

ನಾನು ಬೋಧಿ ಜೊತೆ ಸೆಕ್ಸ್ ಮಾಡಿದೆ.

- ಏನು? - ಏನಂದೆ?

ಬೋಧಿ ಯಾರು?

ಖಾಸಗಿ ಕ್ಷಣಗಳು.

ಮೊನಾಕೊ

ನಾವು ಭೇಟಿಯಾಗಲಿರುವ ಈ ವ್ಯಕ್ತಿ ಯಾರು?

ಡೇವಿಡ್ ಖಾತೆ ಮಾಡಿಸಿದವನು. ಅವನು ಮನಿ ಮ್ಯೂಲ್.

ಏನು?

ಅಕ್ರಮ ಹಣ ಸಾಗಣೆ ಮಾಡುವವನು.

ಹೌದು, ಅವನು ಸಾಗಣೆ ಮಾಡುತ್ತಾನೆ. ಮರೆಮಾಡುತ್ತಾನೆ.

ಅವನ ಹೆಸರಿನಲ್ಲಿ ಕಂಪನಿ ಸ್ಥಾಪಿಸಲು ಜನ ಅವನಿಗೆ ಹಣ ನೀಡುತ್ತಾರೆ.

ಯಾಕೆ?

ಕಂಪನಿಯು ಮೊನಾಕೊದಲ್ಲಿ ನೋಂದಾಯಿಸಲ್ಪಡುತ್ತದೆ, ಅಂದರೆ ಶೂನ್ಯ ಕಾರ್ಪೊರೇಷನ್ ತೆರಿಗೆ.

ಅದು ತೆರಿಗೆ ವಂಚನೆ.

ಅವಳ ಕವರ್ ಫೋರೆನ್ಸಿಕ್ ಅಕೌಂಟೆಂಟ್.

ಅದು ಬರೀ ಕವರ್ ಅಲ್ಲ.

ನಾನು ಕಾನೂನುಬದ್ಧವಾಗಿ ಅರ್ಹ ಫೋರೆನ್ಸಿಕ್ ಅಕೌಂಟೆಂಟ್.

ನಾನು ಆರ್ಥಿಕ ಅಪರಾಧವನ್ನು ಗಂಭೀರವಾಗಿ ಪರಿಗಣಿಸುತ್ತೇನೆ.

ನೀನು ಯಾರು?

ಅದು ಇಲ್ಲೇ ಕೆಳಗೆ ಇದೆ.

ನಾವು ಎಲೈಜಾನನ್ನು ನೋಡಲು ಬಂದಿದ್ದೇವೆ.

ಪಾಸ್ವರ್ಡ್.

ಗೊತ್ತಿಲ್ಲ. ಬಿಲ್ಲಿ ಬಂದಿದ್ದಾನೆ ಎಂದು ಹೇಳು, ಸರಿಯಾ?

ದೇವ…

ಲಾರ್ಡ್ ಆಫ್ ದ ರಿಂಗ್ಸ್‌ನ ಯಾವುದೋ ಪದ?

ಸರಿ.

- ನೋರ್ಡೋರ್. - ಅದು "ಮೋರ್ಡೋರ್", ಮೂರ್ಖ.

ಮತ್ತು ಅದು ಪಾಸ್ವರ್ಡ್ ಅಲ್ಲ.

ಬ್ರಯನ್? ನೀನಾ?

ವಿಪ್ಟೇಲ್?

ಹಾಯ್. ಸಿಂಗಾಪುರದ ನಂತರ ನಾನು ನಿನ್ನನ್ನು ನೋಡಿಲ್ಲ.

ನಿನ್ನ ಅಮ್ಮ ಹೇಗಿದ್ದಾರೆ?

ಹೌದು, ಚೆನ್ನಾಗಿದ್ದಾಳೆ. ಧನ್ಯವಾದಗಳು. ಜೈಲಿನಲ್ಲಿದ್ದಾಳೆ.

ಹೌದು, ನಾನು ಕೇಳ್ಪಟ್ಟೆ. ಆಕೆಗೆ ನನ್ನ ವಂದನೆಗಳನ್ನು ತಿಳಿಸುವೆಯಾ?

ಕೇಳು, ನಮ್ಮನ್ನು ಹಾಗೇ ಒಳಗೆ ಬಿಡಬಹುದಾ? ನಾವು ಸ್ವಲ್ಪ ಆತುರದಲ್ಲಿದ್ದೇವೆ.

- ಹೌದು. - ನನ್ನಿಂದ ಆದರೆ ಬಿಡುತ್ತಿದ್ದೆ.

ಪಾಸ್ವರ್ಡ್ ಇಲ್ಲದಿದ್ದರೆ ಬಿಡಲು ಸಾಧ್ಯವಿಲ್ಲ. ಮತ್ತು ಅದು "ನೋರ್ಡೋರ್" ಅಲ್ಲ.

- ಮೂರ್ಖ. - ಲಾರ್ಡ್ ಆಫ್ ದ ರಿಂಗ್ಸ್ ಓದಿದ್ದೀಯಾ?

ಇಲ್ಲ, ಆದರೆ ನನಗೆ ಗೊತ್ತು. ಅದರಲ್ಲಿ ಎಲ್ಫ್ ಮತ್ತು…

- ಮತ್ತು ಗಾಬ್ಲಿನ್. - ಅವನು ಡ್ವಾರ್ಫ್.

- ಇಲ್ಲ, ಓರ್ಕ್‌ನ ಬಳಿ ಉಂಗುರವಿದೆ. - ಅವನು ಹಾಬಿಟ್!

ಅಂದರೆ, ಎಲ್ಫ್, ಡ್ವಾರ್ಫ್ ಮತ್ತೆ ಹಾಬಿಟ್ ಇದ್ದಾರೆ.

ಮತ್ತು ಒಂದು ಹಂತದಲ್ಲಿ, ಅವರು ಬೀಗ ಹಾಕಿದ ದೊಡ್ಡ ಬಾಗಿಲಿನ ಮುಂದೆ ಹೋಗುತ್ತಾರೆ,

ಮತ್ತು ಆ ಬಾಗಿಲಿನ ಹಿಂದೆ…

ಬಿಲ್ಬೋ ಇದ್ದಾನಾ?

ಮೋರಿಯಾದ ಮೈನ್‌ಗಳಿವೆ.

ಹೇ.

ಸರಿ. ದೊಡ್ಡ ಬಾಗಿಲು ಇದೆ.

ಬಾಗಿಲಿನ ಮೇಲೆ, "ಗೆಳೆಯ ಮಾತನಾಡಿ ಪ್ರವೇಶಿಸು" ಎಂದು ಬರೆದಿದೆ.

ನಾನು ಮಾತನಾಡುತ್ತಿದ್ದೇನೆ. ನಾನು ಹೇಳುತ್ತಿದ್ದೇನೆ, "ನನ್ನನ್ನು ಒಳಗೆ ಬಿಡು."

"ಗೆಳೆಯ ಮಾತನಾಡಿ ಪ್ರವೇಶಿಸು." ಗೆಳೆಯ. ಪಾಸ್ವರ್ಡ್ "ಗೆಳೆಯ".

ಗೆಳೆಯ.

ಎಲ್ವಿಶ್‌ ಭಾಷೆಯಲ್ಲಿ.

- ಏನಿದು, ಬ್ರಯನ್! - ಏನಿದು, ಬ್ರಯನ್!

- ದೇವರೇ. - ಡಬ್ಬಾ ಎಲ್ವಿಶ್‌.

ಸರಿ, ಅದು "ಮೆಲ್ಲನ್", ಸರಿಯಾ? "ಮೆಲ್ಲನ್." ಲ ಗೆ ಅಡಿವತ್ತಿದೆ, "ಮೆಲ್ಲನ್".

ಏನು ನಾಟಕವಿದು?

ಅದು "ಮೆಲ್ಲೊನ್."

- ಸರಿಯಾದ ಧ್ವನಿಯಲ್ಲಿ ಹೇಳಬೇಕು. - ಹೌದು.

"ಮೆಲನ್" ಥರ ಕೇಳಿಸುತ್ತೆ, ಅಲ್ಲವಾ?

ದಾಡಿ ಚೆನ್ನಾಗಿದೆ.

ಧನ್ಯವಾದ. ಅದು ಮಹಿಳೆಯರಿಗಾಗಿ.

- ನಿಜವಾಗಿಯೂ? - ನಿಯಮಗಳನ್ನು ಪಾಲಿಸಲೇಬೇಕು.

ಇದು…

ಸೆಕ್ಸ್‌ಗಾಗಿ ಮಾಡಿದ್ದು.

ಸೆಕ್ಸ್‌ಗಾಗಿ ಮಾಡಿದ್ದಲ್ಲ.

ವಿಪ್ಟೇಲ್, ನೋಡಿ ಸಂತೋಷವಾಯಿತು.

ಈಗ ಜೂಡಿಥ್ ಅಷ್ಟೇ. ನಾನು ಹೊರಬಂದೆ.

- ವಿಪ್ಟೇಲ್ ಆ? - ಹೌದು.

ಮಾರಣಾಂತಿಕ ಮೆಕ್ಸಿಕನ್ ಮರುಭೂಮಿಯ ಹಲ್ಲಿ.

ಹೆಣ್ಣು ಗಂಡನ್ನು ತಿನ್ನುತ್ತದೆ.

ಹೆಸರು ಆರಿಸಿದಾಗ ಇಷ್ಟವಾಗಿತ್ತು.

- ಇಷ್ಟವಾಗಿರಲೇಬೇಕು. - ಬಾಯಿ ಮುಚ್ಚು.

ಬಿಲ್ಲಿ ಡೊನೊವನ್.

ಮತ್ತು ಸ್ನೇಹಿತರು.

ಹೇಗೆ ಸಹಾಯ ಮಾಡಲಿ?

ಡೇವಿಡ್ ಕ್ಲೇಬೋರ್ನ್‌ಗಾಗಿ ನಿನ್ನ ಬಳಿ ಮಾಡಿಸಿದ ಖಾತೆಯೊಳಕ್ಕೆ ಹೋಗು.

ಹೂಂ, ಅಪ್ರಾಮಾಣಿಕ ವ್ಯಕ್ತಿ. ರಾಜಕಾರಣಿ.

ಅಲ್ಬೇನಿಯನ್ನರೊಂದಿಗೆ ಸೇರಿಕೊಂಡ. ಅವನ ಹೆಂಡತಿಗೆ ಅದರ ಬಗ್ಗೆ ಏನೂ ತಿಳಿದಿರಲಿಲ್ಲ.

ಇಲ್ಲ. ಅವನ ಹೆಂಡತಿಗೆ ಅದರ ಬಗ್ಗೆ ಏನೂ ತಿಳಿದಿರಲಿಲ್ಲ.

ಅದೇನಾ ನೀನು ಮಾಡುವ ಕೆಲಸ?

ಇಲ್ಲಿ ಅಡಗಿ ಕುಳಿತು ಜನರ ಹಣವನ್ನು ಅವರ ಹೆಂಡತಿಯಿಂದ ಮರೆಮಾಡುವುದಾ?

ಹೌದು, ಪೊಲೀಸರು ಮತ್ತು ಮಾಫಿಯಾ ಮತ್ತು ತೆರಿಗೆದಾರರಿಂದ ಮರೆಮಾಡುವುದು.

ಹೇಳಬೇಕು ಅಂದರೆ,

ನನ್ನನ್ನು ಹುಡುಕಿದ ಮೊದಲ ಹೆಂಡತಿ ನೀನೇ.

ಈಗ ನಾವು ಅದನ್ನು ಅಲ್ಬೇನಿಯನ್ನರಿಗೆ ಹಿಂತಿರುಗಿಸಬೇಕಾಗಿದೆ. 24 ದಶಲಕ್ಷ ಪೌಂಡ್.

ಸರಿ. ತೊಂದರೆಯಿಲ್ಲ.

ಅದನ್ನು ಹಿಂದಕ್ಕೆ ವರ್ಗಾಯಿಸೋಣ.

ನನಗೆ ಒಟ್ಟು ಮೊತ್ತದ 10% ಬೇಕು.

ದೇವರೇ, ಬ್ರಯನ್, ನಾನು ನಿನಗೆ ಸಂಬಳ ಯಾಕೆ ಕೊಡುವುದು?

ನೋಡು, ನೀನು ನನ್ನನ್ನು ಕೊಂದರೆ, ಹಣ ಈಗೆಲ್ಲಿದೆಯೋ ಅಲ್ಲೇ ಇರುತ್ತದೆ ಎಂದು ಗೊತ್ತಲ್ಲಾ?

ನಾನು ನಿನ್ನನ್ನು ಕೊಲ್ಲಲ್ಲ.

ಸರಿ. 5%.

ಸರಿ, ಸರಿ, ಸರಿ. ಯಾವ ಶೇಕಡವೂ ಬೇಡ.

ಉತ್ತಮ ರಾಜಿ.

ಈ ಬಹಳ ನಿರ್ದಿಷ್ಟ, ಉದಾಹರಣೆಗೆ ಪರಿಗಣಿಸಲಾಗದ ಪರಿಸ್ಥಿತಿಯಲ್ಲಿ,

ನಾನು ನನ್ನ ಪಾಲನ್ನು ಕೇಳುವುದಿಲ್ಲ.

ಸರಿ, ನೋಡೋಣ.

"ಮಿಸ್ಟರ್ ಡೇವಿಡ್ ಕ್ಲೇಬೋರ್ನ್."

- ಅದು ಹೋಗಿದೆ. - ಅದು ಹೋಗಿದೆ ಅಂದರೆ ಅರ್ಥವೇನು?

ಅವನು ಖಾತೆಯನ್ನು ಖಾಲಿ ಮಾಡಿದ್ದಾನೆ.

ಹಣ ತೆಗೆದಿದ್ದಾನೆ. ಎಲ್ಲ ಖಾಲಿ ಮಾಡಿದ್ದಾನೆ.

ಏನು?

ಕ್ಷಮಿಸಿ. ಹೀಗಾಗೋದು ಸಾಮಾನ್ಯ.

ಈಗ ಅವನು ಬಹುಶಃ ಕೋಸ್ಟಾ ರಿಕಾದ ಯಾವುದೋ ಬೀಚ್‌ನಲ್ಲಿರಬೇಕು.

ಕೋಸ್ಟಾ ರಿಕಾ ಅಲ್ಲ

ನಾನು ಈಗಾಗಲೇ ಹಣದ ಬಗ್ಗೆ ಹೇಳಿದ್ದೇನೆ! ನನ್ನಿಂದ ಇನ್ನೇನು ಬೇಕು?

ಯಾರಾದರೂ ನನಗೆ ಸಹಾಯ ಮಾಡಿ!

ಹಲೋ, ಡಯಾನ್.

അഭിപ്രായങ്ങൾ

No comments yet. Be the first to leave one.

Keep it about this subtitle — sync, quality, typos.500 characters left