Ride or Die

Ride or Die

Download Kannada Subtitle

Season 1

Release info

Ride or Die S01E03 Strangers on a Train 1080p WEBRip 10Bit DDP5 1 x265-NeoNoir
A Commentary by chargephoton88

Tags

webdl
Published on: 2026-08-21
Downloads: 0
Hearing Impaired: No
FPS: 23.976

Kannada subtitle preview

The first 200 lines.

ರೈಡ್ ಆರ್ ಡೈನಲ್ಲಿ ಈ ಹಿಂದೆ…

ಇದರ ಅರ್ಥವೇನು?

ಇದು ಬ್ಲಾಕ್ ಮಾರ್ಕ್.

ಪೈರೇಟ್ ಕೋಡ್. ಇದರರ್ಥ ಯಾರೋ ನಿಮ್ಮ ಸಾವು ಬಯಸುತ್ತಾರೆ.

- ನಿನ್ನೆ ರಾತ್ರಿ ಒಂದು ದೇಹವಿತ್ತು. - ನೋಡು, ರಾತ್ರಿಯ ವಿಷಯ ನಿಯಂತ್ರಣದಲ್ಲಿದೆ.

ಫುಟೇಜ್ ಅಳಿಸಲಾಗಿದೆ. ಘಟನೆಯ ಸ್ಥಳ ಸ್ವಚ್ಛವಾಗಿದೆ.

ಇಲ್ಲ. ನನಗಾಗಿ ಒಂದು ದೇಹವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು.

ದಿನ ಕಠಿಣವಾಗಿತ್ತೇ?

ಹೌದು.

ಸುಳ್ಳು ಹೇಳುವಂತಿಲ್ಲ.

ಇನ್ನು ಮುಂದೆ ಕೊಲ್ಲುವಂತಿಲ್ಲ.

ನೇಮಿಸಿದ ಕೆಲಸವನ್ನು ಪೂರ್ಣಗೊಳಿಸುವವರೆಗೆ ನೀನು ನನ್ನ ಏಜೆಂಟ್ ಅಲ್ಲ.

ನಗರದ ಹೊರಗಿನ ಖಾಸಗಿ ವಿಮಾನ ನಿಲ್ದಾಣದಲ್ಲಿ ಡೊನೊವನ್‌ನ ಪಾಸ್‌ಪೋರ್ಟ್ ಕಾಣಿಸಿಕೊಂಡಿದೆ.

ವಿಮಾನ ಮಾರ್ಗವು ಉತ್ತರ ಸ್ಪೇನ್ ಕಡೆ ಹೋಗುತ್ತಿದೆ, ಅಲ್ಲಿ ಅವನ ಸುರಕ್ಷಿತ ಮನೆ ಇದೆ.

"ವೆರೋನಿಕಾ ಗಿಲ್ಲಿಂಗ್ಸ್ಬಿ"? ಯಾರದು?

ನೀನೇ.

ಓ ದೇವರೇ, ಇದು ಬ್ರಿಟಿಷ್ ಪಾಸ್‌ಪೋರ್ಟ್.

ಅವಳು ಯಾರು?

ಅವಳು ನನಗೆ ಜಗತ್ತಿನಲ್ಲಿ ಅತ್ಯಂತ ಮುಖ್ಯ ವ್ಯಕ್ತಿ.

ನನ್ನ ಬೆಸ್ಟ್ ಫ್ರೆಂಡ್.

ಸಮಸ್ಯೆಯನ್ನು ನಿವಾರಿಸಿ.

ಕ್ಷಮಿಸಿ. ಕ್ಷಮಿಸಿ. ದಾರಿ ಬಿಡಿ.

- ದೇವರೇ. - ದೇವರೇ, ನನ್ನನ್ನು ಕ್ಷಮಿಸಿ.

ಇಲ್ಲ, ಇದು ನನ್ನ ತಪ್ಪು. ನಾನು ಬೇರೆ ದಿಕ್ಕಿನಲ್ಲಿ ನೋಡುತ್ತಿದ್ದೆ.

- ಬಾರ್ಸಲೋನಾ ಬೋರ್ಡಿಂಗ್ ನಡೆಯುತ್ತಿದೆ… - ನಾನು ಹೋಗಬೇಕು.

ನನ್ನನ್ನು ಕ್ಷಮಿಸಿ, ನಾನು ಪ್ಲಾಟ್‌ಫಾರ್ಮ್ ಡಿ ಗೆ ಹೋಗಬೇಕು.

ಹೌದಾ, ಆದರೆ ಡಿ ಆ ಕಡೆಯಿದೆ.

ಓಹ್, ಹೌದಾ?

ಏನು ಗೊತ್ತಾ? ನನಗೆ ಶಾರ್ಟ್‌ಕಟ್ ಗೊತ್ತು. ನನ್ನ ಜೊತೆ ಬನ್ನಿ.

- ನಾನು ಬಹಳಷ್ಟು ಹಾನಿ ಮಾಡಿದ್ದೇನೆ. - ಹೌದು.

- ಕ್ಷಮಿಸಿ. - ಇಲ್ಲ, ಪರವಾಗಿ… ನಾನೇನೂ ಹಾಳು ಮಾಡಿಲ್ಲ ಅಲ್ವಾ?

- ಇಲ್ಲ. - ಡ್ರೆಸ್ ಚೆನ್ನಾಗಿದೆ.

ಯಾವುದೇ ಯೋಜನೆ ಇಲ್ಲದೆ ಇಷ್ಟು ದೂರ ಬಂದಿದ್ದೀಯಾ?

ಯಾವುದೇ ಯೋಜನೆಗಳಿಲ್ಲ, ಕೇವಲ ಇಂಟರ್ರೈಲ್ ಪಾಸ್

ಮತ್ತು ನಿಜವಾದ ಪ್ರಪಂಚಕ್ಕೆ ಹಿಂತಿರುಗುವ ಮೊದಲು ಕೆಲವು ದೊಡ್ಡ ಕನಸುಗಳು.

ನಿಜವಾದ ಪ್ರಪಂಚ ಯಾವುದು?

- ಕಾನೂನು. ನಾನೊಬ್ಬ ವಕೀಲೆ. - ಓಹ್, ಹೌದಾ. ನಾನೂ ವಕೀಲ.

- ಯಾವ ರೀತಿಯ ವಕೀಲೆ? - ನಾನು ಕಾರ್ಪೊರೇಟ್ ವಕೀಲೆಯಾಗಿದ್ದೆ,

ಆದರೆ ನಂತರ ನನಗೆ ಸಾರ್ವಜನಿಕ ರಕ್ಷಕಿಯ ಅದ್ಭುತ ಕೆಲಸ ಸಿಕ್ಕಿತು.

ಹಾಗಾಗಿ ಜಗತ್ತನ್ನು ಉಳಿಸಲು ಪ್ರಾರಂಭಿಸುವ

ಮತ್ತು ಬೇರೆ ಏನನ್ನೂ ಮಾಡಲು ಸಾಧ್ಯವಾಗದ ಮೊದಲು ನನ್ನ ದೊಡ್ಡ ಸಾಹಸವನ್ನು ಮಾಡುತ್ತಿದ್ದೇನೆ.

ನಿನ್ನ ಯುರೋಪಿನ ಸಾಹಸದ ಪಟ್ಟಿಯಲ್ಲಿ ಏನಿದೆ?

ಎಲ್ಲ ಪ್ರಸಿದ್ಧ ಸ್ಥಳಗಳು.

ಮತ್ತು ಸೂರ್ಯಾಸ್ತ.

ಸೂರ್ಯಾಸ್ತವಾ?

ನನ್ನ ಮಾರ್ಗದರ್ಶಿ ಪುಸ್ತಕದಲ್ಲಿ ಒಂದು ಹಳ್ಳಿಯ ಬಗ್ಗೆ ಓದಿದೆ,

ಅಲ್ಲಿ ಸೂರ್ಯನು ಪರ್ವತಗಳ ನಡುವೆ ಅಸ್ತಮಿಸುತ್ತಾನೆ,

ಆದ್ದರಿಂದ ಇಡೀ ಗ್ರಾಮವು ಬೆಂಕಿಯಂತೆ ಬೆಳಗುತ್ತದೆ.

ನಾನು ತುಂಬಾ ಮಾತನಾಡುತ್ತೇನೆ. ಕ್ಷಮಿಸು.

ಇಲ್ಲ, ದಯವಿಟ್ಟು, ಎಂದಿಗೂ ಮಾತನಾಡುವುದನ್ನು ನಿಲ್ಲಿಸಬೇಡ.

- ಧನ್ಯವಾದಗಳು-- - ಇದು…

- ಇಲ್ಲ. ನೀನು ಮೊದಲು. - ಕ್ಷಮಿಸು, ಇಲ್ಲ, ನೀನು ಹೋಗು.

ಧನ್ಯವಾದ.

ಇದು ನಿಜವಾಗಿಯೂ ನನ್ನ ದಿನದ ಹೈಲೈಟ್ ಆಗಿದೆ.

ಬಹುಶಃ ವಾರದ ಹೈಲೈಟ್.

ಇರು!

ನೀನು ಈ ರೈಲಿನಲ್ಲಿ ಹೋಗದಿದ್ದರೆ? ಬದಲಿಗೆ ಮುಂದಿನದರಲ್ಲಿ ಹೋದರೆ ಏನಾಗುತ್ತದೆ?

ನಂಬಲಾಗದಷ್ಟು ಸುಂದರ, ಬುದ್ಧಿವಂತ, ತಮಾಷೆಯ ವಕೀಲೆ,

ಜಗತ್ತನ್ನು ಉಳಿಸ ಹೊರಟವಳು,

ಅವಳ ಪಟ್ಟಿಯಲ್ಲಿರುವ ಎಲ್ಲದರ ಬಗ್ಗೆಯೂ ಹೇಳಿದರೆ ಹೇಗಿರುತ್ತದೆ?

ಜಗತ್ತಿನ ಅತ್ಯಂತ ಬೇಸರದ ಕೆಲಸ ಮಾಡುತ್ತಿರುವ, ಕಡಿಮೆ ಸಂಬಳದ ಕಚೇರಿ ಸಹಾಯಕನಾದ ನಾನು,

ನಿನ್ನ ಮೆಚ್ಚುಗೆ ಪಡೆಯಲು ಪ್ರಯತ್ನಿಸಿದರೆ?

ನಿನ್ನ ಅನಿಸಿಕೆ ಏನು?

ವಾಟರ್‌ಲೂ ಅಂತರಾಷ್ಟ್ರೀಯ ನಿಲ್ದಾಣ

ರೈಡ್ ಆರ್ ಡೈ

ಏನು ಯೋಚಿಸುತ್ತಿರುವೆ?

ನಾನು ಯೋಚಿಸುತ್ತಿದ್ದೆ…

ಒಂದು ಬರ್ನರ್ ಫೋನ್ ಇದೆ,

ನೀನು ಬಯಸಿದರೆ ಅದರಲ್ಲಿ ಮಕ್ಕಳಿಗೆ ಕರೆ ಮಾಡಬಹುದು.

ಇಲ್ಲ, ಇನ್ನೂ ಸಿದ್ಧವಾಗಿಲ್ಲ.

ಅದರ ಬಗ್ಗೆ ಮಾತನಾಡಲು ಬಯಸುವೆಯಾ?

ಹೌದು. ಹೌದು.

ಆದರೆ ನಿನ್ನ ಬಳಿ ಅಲ್ಲ.

ಡೆಬ್, ದಯವಿಟ್ಟು. 11-ಗಂಟೆಗಳ ಪ್ರಯಾಣದಲ್ಲಿ ಮೌನವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ.

ನನ್ನಿಂದ ಆಗುತ್ತದೆ.

ಸರಿ. ನಾನು ಸಲಹೆ ನೀಡಲೇ?

ನಾವು ಬಿಲ್ಲಿ ಡೊನೊವನ್‌ನನ್ನು ಹುಡುಕಿ

ಉತ್ತರಗಳನ್ನು ಪಡೆಯುವವರೆಗೆ,

ಸ್ನೇಹಿತರಾಗಿರೋಣ ಮತ್ತು ನಂತರ

ನೀನು ಕೋಪ ಮಾಡಿಕೊಳ್ಳಬಹುದು.

ಕ್ಷಮಿಸು.

ಆತ್ಮೀಯ ಸ್ನೇಹಿತೆ ಕೊಲೆಗಾರ್ತಿ ಎಂದು ಗೊತ್ತಾದಾಗ ನೀಡಬೇಕಾದ ಸರಿಯಾದ ಪ್ರತಿಕ್ರಿಯೆ ಏನು?

ನಾನು ಕೊಲೆಗಾರ್ತಿಯಲ್ಲ, ನಾನು ಹಂತಕಿ.

ನಾನು ಕೆಟ್ಟವರನ್ನು ಕೊಲ್ಲುತ್ತೇನೆ.

ನಿಜವಾಗಿಯೂ ಭಯಾನಕ, ಭಯಂಕರವಾದ ಜನರನ್ನು.

ಹಣಕ್ಕಾಗಿ.

ಉಚಿತವಾಗಿ ಮಾಡಿದರೆ, ನಾನು ಸರಣಿ ಕೊಲೆಗಾರ್ತಿಯಾಗುತ್ತೇನೆ.

ಅಲ್ಲದೆ, ನಾನಿದನ್ನು ಹೆಚ್ಚು ಕಾಲ ಮಾಡದಿರಬಹುದು.

ಕೆಲಸದವರು ನಿವೃತ್ತಿ ನೀಡುತ್ತಿದ್ದಾರೆ.

ನಿವೃತ್ತಿ ನೀಡುತ್ತಿದ್ದಾರೆ ಅಂದರೇನು?

ನನ್ನನ್ನು ವಮ ಎಂದು ಕರೆದರು.

- ಏನೆಂದು ಕರೆದರು? - "ವಯಸ್ಸಾದ ಮಹಿಳೆ" ಎಂದು.

ಹಾಗೆ ಹೇಳಿದರಾ?

ನಾನು 50ನೇ ವರ್ಷಕ್ಕೆ ಕಾಲಿಡುತ್ತಿರುವುದರಿಂದ ನನಗೆ ತಲೆ ಕೆಡುತ್ತಿದೆ ಎಂದರು.

- ನಿನಗೆ 50 ಆಗಿಲ್ಲ. - ಹೌದು. ನಾನೂ ಅದನ್ನೇ ಹೇಳಿದೆ.

ಮತ್ತು ನನಗೆ 50 ವರ್ಷವಾಗಿದ್ದರೂ ಸಹ, ಕೆಲಸದಲ್ಲಿ ಉತ್ತಮಳಾಗಿದ್ದೇನೆ.

ಏನಾಯಿತು?

ಹಿಂದೆ ಇರುವ ಕಾರು.

ಸುರಂಗದಿಂದಲೂ ನಮ್ಮನ್ನು ಹಿಂಬಾಲಿಸುತ್ತಿದೆ.

ಬಹುಶಃ ನಾವು ಬೇರೆ ಮಾರ್ಗ ಹಿಡಿಯಬೇಕು, ಮುಖ್ಯ ರಸ್ತೆಗಳಿಂದ ದೂರವಿರಬೇಕು.

- ಮುಂದೆ ಬಲಕ್ಕೆ ತಿರುಗು. - ಸರಿ.

ಸರಿ, ಬಿಲ್ಲಿ ಡೊನೊವನ್‌ನ ಸುರಕ್ಷಿತ ಮನೆ ಇಲ್ಲೇ ಎಲ್ಲೋ ಇದೆ.

ನಾವು ಈ ರಸ್ತೆಯಲ್ಲಿ ಹೋದರೆ--

ಛೇ.

ಓಹ್.

ಇಲ್ಲಿ ಟೈರ್ ಜಾಕ್ ಇಲ್ಲ.

- ನಿಜವಾಗಿಯೂ? - ಹೌದು.

- ಮಿಸಸ್ ವಿಲಿಯಮ್ಸ್ ಹಾಕಿದ್ದನ್ನು ನೋಡಿದೆಯಾ? - ಇಲ್ಲ, ಆದರೆ ಯಾವಾಗಲೂ ಹಾಕುತ್ತಾಳೆ.

ಅವರು ಪೆಟ್ರೋಲ್ ಬಂಕ್‌ನಲ್ಲಿ ಟೈರ್‌‌‌ಗೆ ಏನೋ ಮಾಡಿ ಕಾರು ಜ್ಯಾಕ್ ತೆಗೆದಿರಬೇಕು.

ಯಾರು? ಅಲ್ಬೇನಿಯನ್ನರಾ?

ಗೊತ್ತಿಲ್ಲ.

ಹತ್ತಿರದ ಪಟ್ಟಣ ತಲುಪುವವರೆಗೆ ರಿಮ್‌ನಲ್ಲಿ ಓಡಿಸುತ್ತೇನೆ.

ನಿಮ್ಮ ಟೈರ್ ಸ್ಫೋಟವಾಯಿತಾ?

- ಅದಾ ನಮ್ಮನ್ನು ಹಿಂಬಾಲಿಸುತ್ತಿದ್ದ ಕಾರು? - ಹೌದು.

ಟೈರ್‌ನಲ್ಲಿ ಗಾಳಿ ಕಡಿಮೆ ಇದ್ದದ್ದು ನೋಡಿದೆ.

ನಿಮಗೆ ತಿಳಿಸಲು ಪ್ರಯತ್ನಿಸುತ್ತಿದ್ದೆ, ಆದರೆ ನೀವು ತುಂಬಾ ವೇಗವಾಗಿ ಹೋಗುತ್ತಿದ್ದಿರಿ.

ಅಸಮ ಒತ್ತಡ ಇರುವಾಗ ಚಾಲನೆ ಮಾಡುವುದು ತುಂಬಾ ಅಪಾಯಕಾರಿ.

ಜೂಡಿಥ್!

- ಯಾರು ಕಳುಹಿಸಿದ್ದು? - ಜೂಡಿಥ್.

ನಿನ್ನನ್ನು ಯಾರು ಕಳುಹಿಸಿದ್ದು?

- ನಿಲ್ಲಿಸು! - ಏನು?

- ಅವನು ಕೇವಲ ಒಳ್ಳೆಯ ಅಪರಿಚಿತನಾಗಿದ್ದರೆ? - ಇಲ್ಲ, ಅವನು ನಮ್ಮನ್ನು ಹಿಂಬಾಲಿಸುತ್ತಿದ್ದ.

- ಟೈರ್ ಬಗ್ಗೆ ನಮಗೆ ಎಚ್ಚರಿಕೆ ನೀಡಲು! - ಆದರೆ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದ!

ಏಕೆಂದರೆ ನಾವು ಇಂಗ್ಲಿಷ್ ಕಾರನ್ನು ಓಡಿಸುತ್ತಿದ್ದೇವೆ!

ಅವನ ಬಳಿ ಶಸ್ತ್ರವಿದೆ, ಡೆಬ್ಬಿ! ಅವನ ಬಳಿ ಚಾಕು ಇದೆ!

ಅವನು ಮರ ಕೆತ್ತುವವನು!

ಅವನು ವನ್ಯಜೀವಿಗಳ ತುಂಬಾ ಕೆಟ್ಟ ಪ್ರತಿರೂಪಗಳನ್ನು ಮಾಡುತ್ತಾನೆ.

ಈ ವಿಚಿತ್ರವಾದ ಪುಟ್ಟ ಪ್ರಾಣಿಗಳು.

ಮತ್ತು ಅವನ ಐಸ್ ಕ್ರೀಮ್ ಕರಗುತ್ತಿದೆ.

ಜನರನ್ನು ಕೊಲ್ಲಲು ಹೊರಟಾಗ ಯಾರು ಐಸ್ ಕ್ರೀಮ್ ಖರೀದಿಸುತ್ತಾರೆ?

ಛೇ.

ಹಲೋ, ಸ್ಯಾಮ್ ಮಾತಾಡುತ್ತಿದ್ದೇನೆ.

ನೀನು ಇನ್ನೊಂದು ದೇಹವನ್ನು ನೋಡಿಕೊಳ್ಳಬೇಕು.

- ಕೊನೆಗೂ ಬಿಲ್ಲಿ ಡೊನೊವನ್ ಸಿಕ್ಕಿದನಾ? - ಇನ್ನೂ ಇಲ್ಲ.

ಇದು ಜರ್ಮನ್ ವ್ಯಕ್ತಿ.

ನಾಗರಿಕ.

ನಾಗರಿಕನಾ?

ಏನು? ಇನ್ನೂ ಜೀವಂತವಾಗಿದ್ದಾನೆ.

ಬದುಕಿದ್ದರೆ ಇನ್ನೂ ಕೆಟ್ಟದ್ದು.

ಎಲ್ಲಿದ್ದೀಯ?

ಕ್ಯಾಲೈ ಹೊರಗೆ ಎಲ್ಲೋ.

ನಾನು ಕಾರಿನ ಮೇಲೆ ಟ್ರ್ಯಾಕರ್ ಇರಿಸಿ, ಅದನ್ನು ರಸ್ತೆಯಿಂದ ಸರಿಸುತ್ತೇನೆ.

- ಮತ್ತೆ ಏನು-- - ಛೇ.

ಛೇ!

ಸ್ಯಾಮ್?

ನಿನ್ನ ಹತ್ತಿರ ಹಾಲು ಇದೆಯಾ?

ಪರವಾಗಿಲ್ಲ ಬಿಡು. ನನಗೆ ಸಿಕ್ಕಿತು.

ಹೇ.

ಇಲ್ಲ, ಚೆನ್ನಾಗಿದೆ.

ಆದರೆ, ಕ್ಷಮಿಸು, ಅದು ದುಬಾರಿ ಶರ್ಟ್.

ಓಹ್.

ಎತ್ತಿಕೊಳ್ಳುತ್ತೇನೆ.

ಗಾಜಿನ ಬಾಗಿಲಿಗೆ ಬಡಿದು ಏಟಾಗಿತ್ತು.

ನಾನು ದೊಡ್ಡ ಮೂರ್ಖಳು.

ಕಾಫಿ ಮಾಡಿದ್ದೆ. ನಿನಗೆ ಬೇಕಾ?

ಹೌದು.

ನಿನಗೆ ಯಾರಾದರೂ ಒಡಹುಟ್ಟಿದವರಿದ್ದಾರೆಯೇ?

ಅಥವಾ… ನೀನು…

ಕ್ಷಮಿಸು. ಸಾಮಾನ್ಯವಾಗಿ ನಾನು ಈ ರೀತಿಯ ಕೆಲಸ ಮಾಡುವುದಿಲ್ಲ.

ಆದರೆ ಈ ರೀತಿಯ ಕೆಲಸ ಮತ್ತೆ ಮಾಡಲು ಬಯಸಿದರೆ, ನನಗೆ ಹೇಳು.

ನಿನ್ನ ಫೋನ್‌ನಲ್ಲಿ ನನ್ನ ಸಂಖ್ಯೆ ನಮೂದಿಸುತ್ತೇನೆ.

ಆಯ್ತು. ಇಲ್ಲ, ಅಂದರೆ, ಅದನ್ನು ನಾನೇ ಮಾಡಬಹುದು.

0-7-7-0-0-9-0-0-4-0-3.

ಅದ್ಭುತ. ನಮೂದಿಸಿದೆ.

ಸರಿ, ಆದರೆ ಈಗ, ನನಗೆ ಕರೆ ಮಾಡು, ನನ್ನ ಬಳಿ ನಿನ್ನ ಸಂಖ್ಯೆ ಇರುತ್ತದೆ.

ಸರಿ, ಸರಿ, ಖಂಡಿತ.

ಸಿಕ್ಕಿತು.

ಬೈ, ಸ್ಯಾಮ್.

ಸಾರಿಗೆ ಮಸೂದೆ ಪಾಸ್ ಆಯಿತು

ಘಟನೆಗಳ ಅಚ್ಚರಿಯ ತಿರುವಿನಲ್ಲಿ,

ಸಂಸದ ಡೇವಿಡ್ ಕ್ಲೇಬೋರ್ನ್ ಅವರು ತುಂಬಾ ಶ್ರದ್ಧೆಯಿಂದ ಪ್ರಚಾರ ಮಾಡಿದ

- ಸಾರಿಗೆ ಮಸೂದೆಯ ಮೇಲಿನ ಮತದಾನಕ್ಕೆ… - ದೇಹ.

- …ಇಂದು ಗೈರುಹಾಜರಾಗಿದ್ದರು. - ಛೇ!

ಕಾಲುಗಳಿಂದ ಎತ್ತು. ಬೆನ್ನು ಬಳಸಿ ಎತ್ತುತ್ತಿದ್ದೀಯ.

- ಮೊಣಕಾಲುಗಳನ್ನು ಬಗ್ಗಿಸು. - ಬಗ್ಗಿಸುತ್ತಿದ್ದೇನೆ!

- ನಾವು ಅವನನ್ನು ಬೀಸಿ ಸ್ಥಳಾಂತರಿಸೋಣ. - ನನಗೆ ಹಿಡಿತ ಸಿಗುತ್ತಿಲ್ಲ.

ಸರಿ. ಸರಿ. ಆಯ್ತು. ಸರಿ.

ಏನು ಮಾಡುತ್ತಿದ್ದೀರಿ?

ಕ್ಷಮಿಸಿ, ಸರ್, ನೀವು ನಮ್ಮನ್ನು ಕೊಲ್ಲುತ್ತೀರಿ ಅಂದುಕೊಂಡೆವು.

ನನ್ನ ಗಾತ್ರ ದೊಡ್ಡದಿರುವ ಕಾರಣಕ್ಕಾ?

ನನ್ನನ್ನು ನೋಡಿದರೆ ಜನರು ಭಯ ಪಡುತ್ತಾರೆ.

ಇಲ್ಲ, ಇಲ್ಲ, ಇಲ್ಲ, ಇಲ್ಲ. ಇದು ನಮ್ಮ ತಪ್ಪು, ನೀವು ಸರಿಯಾದ ಅನುಪಾತದಲ್ಲಿದ್ದೀರಿ.

ನಾವು ನಿಮ್ಮ ಕಾರನ್ನು ಕದಿಯುತ್ತೇವೆ.

ಆದರೆ ನಿಮ್ಮ ದಿನಸಿ ಸಾಮಾನು ಮತ್ತು ಈ ವಸ್ತುಗಳನ್ನು ಇಲ್ಲಿ ಇರಿಸುತ್ತಿದ್ದೇನೆ.

ಅದೊಂದು ಕುರಿ.

- ಇದು ಕುರಿಯಾ? - ಕುರಿ.

ಹೌದು. ತುಂಬಾ ಮುದ್ದಾಗಿದೆ.

ಬೈ. ಬೈ.

ನಾನು ಸ್ಯಾಮ್.

ಇದು ಅವನಲ್ಲ. ಡೇವಿಡ್ ಕ್ಲೇಬೋರ್ನ್ ಎಲ್ಲಿ?

ಅವನು ನನ್ನ ಬಳಿ ಇಲ್ಲ.

ನಿನ್ನ ಅರ್ಥವೇನು? ಅವನು ಎಲ್ಲಿದ್ದಾನೆ?

ನನಗೆ ಗೊತ್ತಿಲ್ಲ. ನಾನವನನ್ನು ಪಿಕ್ ಮಾಡಿಲ್ಲ.

ಪಿಕ್ ಮಾಡಿದ್ದೀಯ, ಅವನು ಹೋಟೆಲ್ ಕೋಣೆಯಲ್ಲಿದ್ದ.

ಇಲ್ಲ, ಅವನು ಇರಲಿಲ್ಲ. ಇದ್ದದ್ದು ಇಷ್ಟೇ ಮಂದಿ.

ಓ ದೇವರೇ.

ಸಂಸದರನ್ನು ಕಳೆದುಕೊಂಡಿದ್ದೇವೆ ಎಂದು ಡೈರೆಕ್ಟರ್‌ಗೆ ಗೊತ್ತಾದರೆ, ನಮ್ಮ ಕಥೆ ಮುಗಿಯಿತು.

"ಕಥೆ ಮುಗಿಯಿತು" ಎಂದರೆ "ನಾವು ಸತ್ತೆವು" ಎಂದರ್ಥ.

ಹೌದು, ನನಗೆ ಅರ್ಥವಾಯಿತು. ಧನ್ಯವಾದ.

ಓಯ್!

Comments

No comments yet. Be the first to leave one.

Keep it about this subtitle — sync, quality, typos.500 characters left