The Peripheral

The Peripheral

Download Kannada Subtitle

Season 1

Release info

The Peripheral S01 WEBRip x264-ION10 23 kan
A Commentary by Barel
Complete S01; Original, no changes.

Tags

webrip
web
x264
BRip
Published on: 2022-12-03
Downloads: 38
Hearing Impaired: No

Kannada subtitle preview

The first 200 lines.

ದಿ ಪೆರಿಫೆರಲ್

ಲಂಡನ್

ಈಗ ಯಾವ ಅನಾಹುತದಲ್ಲಿ ಸಿಲುಕಿದ್ದೀಯಾ, ಎಲೀಟಾ?

ನೀನು ನನ್ನ ಯಾವ ಅನಾಹುತದಲ್ಲಿ ಸಿಲುಕಿಸಿದ್ದೀಯ ಅಂತಾನಾ?

ಇಷ್ಟು ಅಪಾಯಕಾರಿ ಮಿತ್ರರನ್ನು ಮಾಡಿಕೊಳ್ಳುತ್ತೀ ಅಂತ ಯಾರು ಊಹಿಸಿದ್ದರು?

ಒಂದು ಬಾರಿ ಆರು ತಿಂಗಳು ನಾನು ಶೂನೇ ಹಾಕಲಿಲ್ಲ.

ನೆನಪಿದೆಯಾ?

ನಮ್ಮ ಪಾದಗಳು ಗಟ್ಟಿಯಾಗುವುದು ಅಥವಾ ಮೃದುವಾಗುವುದು ಅದ್ಭುತವೇ ಸರಿ.

ಪರಿಸರದ ಮೇಲೆ ಅವಲಂಬಿತವಾಗಿದೆ. ಬೇರೆ ಥರದ ಆತ್ಮದ ಹಾಗೆ.

ಅವಕ್ಕೆ ಏನಾಯಿತು ನೆನಪಿದೆಯೇ? ನನ್ನ ಶೂಗಳಿಗೆ?

ನೀನು ನನಗೆ ಕೊಟ್ಟೆ.

ನೀನು ಮೊದಲು ಸಿಕ್ಕಿದಾಗ, ಒಂದು ಪ್ರತಿಜ್ಞೆ ಮಾಡಿದೆ.

ನಿನ್ನನ್ನು ಕಾಪಾಡುತ್ತೇನೆಂದು.

ಮತ್ತು ಕಾಪಾಡಿದೆ.

ಹೌದಾ?

ಏನು ಮಾಡ್ತಿದ್ದೀಯಾ, ಎಲೀಟಾ?

ಜಗತ್ತನ್ನು ಕಾಪಾಡುತ್ತಿದ್ದೇನೆ.

ಅದಕ್ಕೆ ಕಾಲ ಮೀರಿ ಹೋಗಿದೆ. ನೀನೇ ಹೇಳಿದ್ದು.

ನಮ್ಮ ಜಗತ್ತು ಎನ್ನಲಿಲ್ಲ.

ವಿದಾಯ, ವುಲ್ಫ್.

ಎಲೀಟಾ?

ಎಲೀಟಾ?

ಬ್ಲೂ ರಿಡ್ಜ್ ಬೆಟ್ಟಗಳು

ಶುಭೋದಯ, ಅಮ್ಮ.

ಸ್ವಲ್ಪ ಕಾಫಿ ತಂದಿದ್ದೇನೆ. ಹುಷಾರು. ಬಿಸಿಯಿದೆ.

ಧನ್ಯವಾದ.

ತಗೋ. ನಿನಗೆ ಸ್ಯಾಂಡ್ವಿಚ್ ಮಾಡಿದ್ದೇನೆ. ಫ್ರಿಡ್ಜ್ ಒಳಗಿದೆ.

ಬರ್ಟನಿಗೆ ಬೇಕಿದ್ದರೆ, ಅವನೇ ಮಾಡಿಕೊಳ್ಳಲಿ.

ನಿನ್ನದನ್ನು ತಿಂದಿದ್ದಾನೆ. ಇಲ್ಲ ಅನ್ನಬೇಡ.

ನನಗೆ ಹಸಿವಿರಲಿಲ್ಲ.

ನೀನು ಹೀಗೆ ತೂಕ ಕಳೆದುಕೊಳ್ಳಬಾರದು.

ಮತ್ತೆ ಆಸ್ಪತ್ರೆಗೆ ಸೇರುತ್ತೀಯ.

ಬರ್ಟನ್!

ಛೆ.

ಬರ್ಟನ್, ತೆಗೆ!

ಬರ್ಟನ್.

ಅಮ್ಮನ ಕೊನೆಯ ಟಮೊಸೀನ್ ಕೇವಲ 10 ಮಿಲಿಗ್ರಾಂ ಯಾಕಿದೆ?

ಬಂದು ಆಡು. ನಾನು ಉಚ್ಚೆ ಮಾಡಬೇಕು.

ಮಾತ್ರೆ ಬದಲಿಸುತ್ತಿದ್ದೀಯಾ?

ಬರ್ಟನ್, ಅಮ್ಮನ ಮಾತ್ರೆ ಬದಲಿಸುತ್ತಿದ್ದೀಯಾ?

ದೇವರೇ, ಫ್ಲಿನ್. ನಾನು ಹಾಗೆ ಮಾಡ್ತೀನಾ?

ಆಕೆಯ ಮಾತ್ರೆ 10 ಮಿಲಿಗ್ರಾಂ.

ಅದೊಂದೇ ಕೂಡ.

ಅಂದ್ರೆ ನೀನು ಬದಲಾಯಿಸುತ್ತಿಲ್ಲ ಅದನ್ನು ಕದಿಯುತ್ತಿದ್ದೀಯ.

ಹಾಗಾಗಿ ನನಗೀಗ ದುಡ್ಡು ಬೇಕು.

-ಎಷ್ಟು? -ಎಷ್ಟಿದೆ?

ಮುಂದಿನ ಹಂತಕ್ಕೆ ಹೋದರೆ ಸಾವಿರ. ನೀನು ಸಹಾಯ ಮಾಡಿದರೆ.

-ಒಂದೇ ಮಾತ್ರೆಗೆ. -ಒಂದು ದಿನಕ್ಕೆ ಅಲ್ವೇ?

ರಾತ್ರಿ ಏನೋ ದೊಡ್ಡದು ಬರುತ್ತಿದೆ, ಹಾಗಾಗಿ ಮಿಕ್ಕಿದ್ದು ನಾಳೆ ಸಿಗುತ್ತೆ.

ವಿವರಿಸು.

ಹೆಡ್ಸೆಟ್ ಸಂಪರ್ಕಗೊಂಡಿದೆ

ನಾಜಿ ಪಡೆ ಮನೆಯಲ್ಲಿದೆ. ನಾವು ಹೊಲದಲ್ಲಿ.

"ನಾವು" ಅಂದ್ರೆ?

ನಾನು, ರೀಸ್, ಮತ್ತು ಕ್ಯಾಲಿಫೋರ್ನಿಯಾದ ಯಾರೋ ಒಬ್ಬ.

20ನೇ ಹಂತದಾಚೆ ಕರೆದೊಯ್ಯಲು ಸೇರಿಸಿಕೊಂಡ.

"ಆರಾಮಿರಿ" ಅಂತಾ ಇರ್ತಾನೆ. ಕಿರಿಕಿರಿಯಾಗುತ್ತದೆ.

ಬೆರೆಟ್ ಟೋಪಿಯವನು ರೀಸ್.

ಬೇಗ ಬಾ! ಈಗಾಗಲೇ ತಡವಾಗಿದೆ.

ಆಟ ಮುಂದುವರೆಯುತ್ತದೆ: ಈಜಿ ಐಸ್

ಈಜಿ ಐಸ್ ರೀಸ್106 - ಟಾಮ್217

ನಿಮಗೆ ಸ್ವಲ್ಪನೂ--

ಮರ್ಯಾದೆ ಇಲ್ಲವೇ?

ಕುರಿಗಳನ್ನಾದರೂ ಹೊರಗೆ ಕಳಿಸು.

ನಿನ್ನ ಬೆರೆಟ್ ಚೆನ್ನಾಗಿದೆ, ರೀಸ್. ನಿಜವಾಗಿಯೂ ಶ್ರೇಷ್ಠವಾಗಿದೆ.

ಫ್ಲಿನ್?

ಬರ್ಟನ್ ಎಲ್ಲಿ?

ಶೌಚಾಲಯದಲ್ಲಿದ್ದಾನೆ.

-ಏನನ್ನು ಹುಡುಕುತ್ತಿದ್ದೇವೆ? -ನಕ್ಷೆ ಇರಬೇಕು.

ನಿಮಗೆ ಸಿಕ್ಕಿತಾ?

ಏನು ಮಾಡ್ತಾ ಇದ್ದೀಯ?

ಆ ಬಾಗಿಲನ್ನು ತೆರೆ.

ನಾನು ಬಂದೆ.

ಒಂದು ಕ್ಷಣ ಇರು.

ಹೊರಡುತ್ತಿರಿ!

ಆರಾಮ್, ಗುರು.

-ನಿಮಗೆ ಆ ನಕ್ಷೆ ಯಾಕೆ ಸಿಗಲಿಲ್ಲ ಗೊತ್ತೇ? -ಯಾಕೆ?

ಅದು ಇನ್ನೂ ಬಂದಿರಲಿಲ್ಲ.

ಹಣವನ್ನು ನನ್ನ ಫೋನಿಗೆ ಕಳುಹಿಸು.

ಸುಸ್ವಾಗತ.

ರೀಸ್!

ಏನೋ ಆಯ್ತು?

ಫ್ಲಿನ್ ಆಡ್ತಿದ್ಲು.

ಎಟಿಎಮ್ - ಹೆಫ್ಟಿ 24 ಗಂಟೆ ನಗದು

ಹಿಂಪಡೆ

ಪ್ರತಿ ಬಾರಿ ಹಣ ತೆಗೆದಾಗಲೂ ಹೋಂಲ್ಯಾಂಡ್ ಸೆಕ್ಯೂರಿಟಿ ನೋಡ್ತಾರಂತೆ.

ಅದು ಹಾಗೇ ಇರೋದು.

ಏನಾದರೂ ಅನುಮಾನಾಸ್ಪದವಾಗಿದ್ರೆ ಮಾತ್ರ ನಗದು ಉಪಯೋಗಿಸ್ತಾರೆ.

ಈಗ, ಅದರಲ್ಲೇನಾದರೂ ಪ್ರಶ್ನೆ ಅಡಗಿದೆಯೇ, ಟಾಮಿ?

ನಿಮ್ಮಮ್ಮ ಹೇಗಿದ್ದಾರೆ?

ಪರವಾಗಿಲ್ಲ.

ಹಾಂ. ಕೇಳಿದ್ದಕ್ಕೆ ಧನ್ಯವಾದ.

ನೀನಿಲ್ಲೇನು ಮಾಡ್ತಿದ್ದೀಯಾ?

ಮೇಕನ್ ಮತ್ತು ಎಡ್ವರ್ಡ್ ಮತ್ತೆ ಕಾನೂನಿಗೆ ತೊಡಕು ಮಾಡಿದ್ರಾ?

ಸದ್ಯಕ್ಕಿಲ್ಲ, ಆದರೆ ಮಾಡಬಹುದು.

ಡೀ ಡೀಗೆ ಒಂದು ಆರ್ಡರ್ ಹೇಳುತ್ತಾ ಇದ್ದೆ.

ನಮ್ಮ ಮದುವೆಯ ಕೇಕ್ ಮೇಲೆ ಪ್ರಿಂಟ್ ಹಾಕಿಸಬೇಕಿತ್ತು.

ಸರಿ, ನಾನು ಹೋಗಿ ಅವರಿಗೆ ಸಹಾಯ ಮಾಡುತ್ತೇನೆ.

ದೊಡ್ಡವರಿಲ್ಲ ಅಂದರೆ ಎಲ್ಲಾ ಹಾಳು ಮಾಡ್ತಾರೆ.

ಸರಿ, ಬಿಲ್ಲಿ ಆನ್ ನಿನಗಾಗಿ ಕಾಯುತ್ತಿದ್ದಾಳೆ. ನಬ್ಬಿನ್ಸ್ ಇಟ್ಕೊಂಡು.

-ಈಗಲೇ ಹೇಳಿದ್ದೇನೆ ಮತ್ತೆ. -ಧನ್ಯವಾದ.

ಸಿಗೋಣ, ಟಾಮಿ.

ನೀನೇನೂ ಹೇಳಲಿಲ್ಲ ತಾನೇ?

-ಏನು ಹೇಳಬೇಕಿತ್ತು? -ನೀನು ಹೋಗಿ…

ಫಾರೆವೆರ್ ಫ್ಯಾಬ್ 3ಡಿ ಪ್ರಿಂಟಿಂಗ್

"ನೀನಾಗಿದ್ದರೆ ಹೇಗಿರುತ್ತೆ ಅಂತ ಊಹಿಸುತ್ತಿದ್ದೇನೆ,

"ಅಲ್ಲಿ ನಿಂತ್ಕೊಂಡು."

ಆಗ ನೀನು, "ನನಗಾಗಲ್ಲ. ನೀನು ತುಂಬಾ ಹ್ಯಾಂಡ್ಸಮ್ ಆಗಿದ್ದೀಯಾ.

"ನನ್ನನ್ನು ಸಿಂಹದೊಳಗೆ ಊಹಿಸಿಕೊಂಡಂತೆ ಇದೆ."

ಬಿಲ್ಲಿ, ಸಿಂಹವಾ?

ಒಂದು ಪ್ರಾಣಿಯನ್ನು ಆರಿಸು.

ಮತ್ತೆ ವಿಷಯಾಸಕ್ತಳಾಗಿ,

"ನಿನ್ನ ಸಮಯ ಮುಖ್ಯವೇ?" ಅಂದೆ.

ಅವನು "ಖಂಡಿತ" ಅಂದ, ಇನ್ನೇನು ಹೇಳೋಕಾಗುತ್ತೆ?

ಆಮೇಲೆ ನೀನು, "ಮತ್ತೆ ಮಹತ್ವದ ಸಮಯವನ್ನು ಮಾತಾಡ್ತಾ ಯಾಕೆ ಹಾಳುಮಾಡುವುದು…"

ಹೇ, ಫ್ಲಿನ್? ಟಾಮಿ ಆರ್ಡರ್ ಬಂದಿದೆ.

"...ನಾವಿಬ್ರೂ ಅಪ್ಪಿಕೊಂಡು ನಮ್ಮ ಬೆವರಿದ--"

ಇಬ್ಬರು ಮದುಮಗಂದಿರು ಮತ್ತು ಒಬ್ಬ ಮದುಮಗಳಿಗೆ ಯಾಕೆ ಆರ್ಡರ್ ಮಾಡಿದರು?

"ಹೇ, ಬಿಲ್ಲಿ ಆನ್! ನಬ್ಬಿನ್ ಕೊಡ್ತೀಯಾ?"

ಯಾಕಂದ್ರೆ ನೀನು ಫಾರಂ ಸರಿ ಓದಲಿಲ್ಲ.

ಅಯ್ಯೋ.

ಈಗೆಲ್ಲಾ ಸರಿಯಿದೆ.

"ಸಿಕ್ಕಿದ್ದು ಸಂತೋಷವಾಯಿತು! ಧನ್ಯವಾದ!"

ನಾನೇ ಹೇಳಬೇಕು.

ಈ ಮೂರ್ಖ ಗುಹೆಯಲ್ಲಿ ನಿನ್ನ ಕೌಶಲ್ಯ ಮತ್ತು ವ್ಯಕ್ತಿತ್ವದ ಸದುಪಯೋಗವಾಗುತ್ತಿಲ್ಲ.

ಪ್ರಿಂಟರ್ 15 ಜಾಮ್ಡ್.

ನಿನ್ನ ಕೈಬೆರಳಲ್ಲೇ ಇನ್ನೂ ಒಳ್ಳೆಯ

ಕೆಲಸದ ಅವಕಾಶವಿರುವಾಗ.

ಶ್ರೀಮಂತರಿಗಾಗಿ ಕೆಲಸ ಮಾಡಿ ಬರ್ಟನ್ ಎಷ್ಟು ಸಂಪಾದಿಸುತ್ತಾನೆ?

ಬೇಕಾಗಿದ್ದಕ್ಕಿಂತ ಹೆಚ್ಚು.

ನೀನು ಇನ್ನೂ ಹೆಚ್ಚು ದುಡಿಯಬಹುದು. ಅವನ ಅವತಾರ ಉಪಯೋಗಿಸಿದರೆ.

ಹುಡುಗಿ ಅಂತಾನೂ ಅವರಿಗೆ ಗೊತ್ತಾಗಲ್ಲ.

ಅದು ನನಗೆ ಸಾಕಾಯಿತು, ಬಿಲ್ಲಿ ಆನ್. ಈಗಾಗಲೇ ಹೇಳಿದ್ದೇನೆ.

ಹೌದು, ಹೇಳಿದ್ದೀಯ. ಆದರೆ ಯಾಕೆ ಅಂತಲ್ಲ.

ಸ್ವಾರಸ್ಯ ಇರೋದೇ ಅಲ್ಲಿ.

ಅದು ನಿಜವಲ್ಲ.

ಇಷ್ಟವಾಗಲಿ ಬಿಡಲಿ, ನನಗಿರುವುದು ಇದೊಂದೇ ಪ್ರಪಂಚ.

ಸರಿ,

ಹಾಗಿದ್ದಾಗ, ಈ ಜಗತ್ತನ್ನು ಶುಭ್ರಗೊಳಿಸುವ ಮುಂಚೆ,

ಇದರ ಬಗ್ಗೆ ಹೇಳಲು ಒಂದು ಕೊನೆಯ ಮಾತಿದೆ.

ಯಾರಾದರೂ ನನ್ನ ಬಗ್ಗೆ ಆಸಕ್ತಿ ತೋರಿದ್ದರೆ,

ನಾನು ಜಾಸ್ಪರ್ ನ ಮದುವೆಯಾಗುವ ಮುಂಚೆ,

ಖಂಡಿತ ತಿಳಿಯಲು ಯತ್ನಿಸುತ್ತಿದ್ದೆ.

ಯಾಕಂದ್ರೆ ನೀನು ಹೇಳಿದ ಹಾಗೆ, ಜೀವನ ಕ್ಷಣಿಕ,

ಮತ್ತೆ ಭಯದಲ್ಲಿ ಇನ್ನೊಂದು ನಿಮಿಷ ಯಾಕೆ ಕಳೆಯಬೇಕು?

ಅದೊಂದೇ ವಿಷಯವಲ್ಲದೆ ಅದರಲ್ಲಿ ಇನ್ನೂ ಹೆಚ್ಚು ಇತ್ತು.

ಶುಭದಿನ, ಚಿನ್ನಾರಿ.

ಅದು ಎದ್ದುನಿಲ್ಲುವಂತೆ ಮಾಡಿ ನಮ್ಮೆಲ್ಲರನ್ನೂ ಹೆಮ್ಮೆಪಡಿಸು.

-ಬೈ, ಬಿಲ್ಲಿ ಆನ್. -ಬೈ. ಹೇ, ಮಹಿಳೆಯರೇ.

ಕ್ಲೀನ್ಸ್

ಛೇ.

ಏನು?

ಬರ್ಟನ್ ಇದನ್ನು ಮನೆಗೆ ತರಲು ಹೇಳಿದ.

ಏನಿದು?

ನಾವು ತಯಾರಿಸಿದ ಅದ್ಭುತವಾದ ವಸ್ತು.

-ಅದಕ್ಕೆ ದುಡ್ಡು ಹೇಗೆ ಕೊಟ್ಟ? -ಕೊಟ್ಟಿಲ್ಲ.

ಏನೋ ಮಿಲಾಗ್ರೋಸ್ ಕೋಲ್ಡ್ಐರನ್ ಅನ್ನೋರು ಮಾಡಿದ್ರು.

ನಮ್ಮ ತಿಂಗಳ ಬಾಕಿಯನ್ನೆಲ್ಲಾ ನೋಡಿಕೊಂಡರು.

ಮತ್ತು ಇದು ಏನು ಮಾಡುತ್ತೆ?

ಇದೊಂಥರ ದೂರಗಾಮಿ ವಿಮಾನಯಾನದ ವಸ್ತು.

ಹಾಗೆ ಅಂತ ಅಂದುಕೊಳ್ತೀವಿ.

ಇದರಲ್ಲಿರುವ ಅರ್ಧದಷ್ಟು ವಸ್ತುಗಳಿಗೆ ಪೇಟೆಂಟುಗಳೇ ಇಲ್ಲ ಅನ್ನಬಹುದು.

ಇದು ಸುಪಾರಿ ಕೊಲೆಗಾರರ ವಸ್ತು ಇದ್ದಹಾಗಿದೆ.

-ಇದು ಎಲ್ಲಿಂದ ಬಂತು? -ಮಿಲಾಗ್ರೋಸ್ ಕೋಲ್ಡ್ಐರನ್.

ಇದೊಂದು ಕೊಲಂಬಿಯಾದ ಕಂಪನಿ. ಹುಡುಕಿದೆವು.

-ಯಾವ ಥರ? -ಬೊಗೋಟಾದಲ್ಲಿ ನೋಂದಣಿ ಆಗಿರುವಂಥದ್ದು.

ಅಷ್ಟು ಬಿಟ್ಟರೆ ಅವರು ಬೇರೇನನ್ನೂ ಹೇಳುವುದಿಲ್ಲ.

ಬರ್ಟನ್ ಕೆಲಸ ಇಂಥ ಗ್ಯಾಂಗಿಗಾ?

ಮುಚ್ಕೊಂಡು ಹೋಗು.

ಅವನು ಇದಕ್ಕೆ ಏನೂ ಕೊಡ್ತಿಲ್ಲ ಅಂತ ನಿಮಗೆ

-ಖಾತ್ರಿ ಇದೆಯೇ? -ನಯಾಪೈಸೆ ಇಲ್ಲ.

ನೀನು ಇದನ್ನು ಸ್ಕ್ಯಾನ್ ಮಾಡಬೇಕು.

ಇರು. ನಿಜವಾಗಲೂ?

ವೈಯಕ್ತಿಕ ಏನಿಲ್ಲ. ಗ್ರಾಹಕರು ಸುಪರ್ದಿಯ ಮೂಲವನ್ನು ಕೇಳಿದರು.

ಅಮ್ಮನ ಮಾತ್ರೆಗಳ ಬಗ್ಗೆ ನನಗೆ ನಿಜವನ್ನು ಹೇಳ್ತೀಯಾ?

ಮಾಡು. ನಿನಗೆ ಬೇಕೆನಿಸುತ್ತಿರೋದು ಗೊತ್ತು ನನಗೆ.

ಏನು?

ಕೇಳು ಇದೇನಂತ.

ಇದು ಹಿಂದೆ ಮಾಡಿದಾಗ ನನ್ನ ವಯಸ್ಸು ಎಷ್ಟಿತ್ತು ಅಂದುಕೊಂಡೆ?

ನನಗೊಂದು ಆಟಿಕೆ ಕೊಟ್ಟು ಗಮನ ಕಳೆಯುವುದು.

ಆಶ್ಚರ್ಯವಾಗಬಹುದು. ಅದು ಕೆಲಸಮಾಡುವುದು ನಿನಗೆ ಗೊತ್ತಾಗುವುದೇ ಇಲ್ಲ.

ಅದೇ ವಿಷಯ.

ವಿಚಿತ್ರವಾಗಿ ಕಾಣುತ್ತೆ.

ಆ ಬೆಳ್ಳಿಯ ಹಿಡಿಕೆಗಳು ಯಾಕೆ?

ಪರದೆಯೇ ಇಲ್ಲ.

ಆಧುನಿಕ ವಿಆರ್, ಫ್ಲಿನ್.

ದೊಡ್ಡ ಮೊತ್ತದ ಹಣಕ್ಕೆ ನಾನು ಜನರಿಗಾಗಿ ಇದನ್ನು ಪರೀಕ್ಷಿಸಬೇಕಿದೆ.

ತಿಂಗಳಾನುಗಟ್ಟಲೆ ಚಿಂತೆ ಇರಲ್ಲ.

ನೀನೇ ಯಾಕೆ?

ಹಾಲ್ಸಿಯೋನಿನ 100ನೇ ಹಂತ ತಲುಪಿರುವ ಕೆಲವೇ ಜಾಕಿಗಳಲ್ಲಿ ನಾನೂ ಒಬ್ಬ.

ನೀನು ಅಗ್ನಿ ಗುಹೆಗಳ 83ನೇ ಹಂತದಿಂದ ಮುಂದೆ ಹೋಗಲೇ ಇಲ್ಲ.

ಖಂಡಿತ, ಆದರೆ ಬೇರೆ ಯಾರೋ ನನ್ನ ಅವತಾರ ಉಪಯೋಗಿಸುತ್ತಿದ್ದರು. ಈಜಿ ಐಸ್ ಹೆಸರಲ್ಲಿ.

ಮತ್ತು ಅವಳು 107ನೇ ಹಂತವನ್ನು ತಲುಪಿದ್ದಳು.

ಇಲ್ಲ, ಬರ್ಟನ್.

ಸಮಯವಿಲ್ಲ. ರಾತ್ರಿಯೂಟ ತಯಾರಿಸಬೇಕು.

ಅಮ್ಮನ ಟಮೊಸೀನ್ ಕೊಳ್ಳಲು ಇದೊಂದೇ ಮಾರ್ಗ.

ನಿನ್ನ ಬಗ್ಗೆ ಹೆಮ್ಮೆಯಿದೆ, ನೀನು ಚೆನ್ನಾಗಿ ಆಡ್ತೀಯಾ.

ಬಾಯಿ ಮುಚ್ಚು. ಎಷ್ಟು ತಲೆಹರಟೆ

ಅಂದ್ರೆ ನಿನ್ನನ್ನು ನೀನೇ ಹೇಗೆ ತಡೆದುಕೊಳ್ತೀಯಾ?

ಗೊತ್ತು. ಆದರೆ ಇದು ನಿಜ.

ನಿನ್ನ ಬಗ್ಗೆ ಹೆಮ್ಮೆ.

More Kannada subtitles for The Peripheral

Comments

No comments yet. Be the first to leave one.

Keep it about this subtitle — sync, quality, typos.500 characters left