The first 200 lines.
ರೈಡ್ ಆರ್ ಡೈನಲ್ಲಿ ಈ ಹಿಂದೆ…
ಬಿಲ್ಲಿ ಡೊನೊವನ್‌ನ ಕೊಲೆಯ ಆದೇಶ ಒಂದು ಬಲೆಯಾಗಿತ್ತು.
ಯಾರು ಬೀಸಿದ ಬಲೆ?
ಮಾಜಿ ಆಪರೇಟಿವ್. ರೆಡ್‌ಬ್ಯಾಕ್.
ರೆಡ್‌ಬ್ಯಾಕ್ ಸತ್ತಿದ್ದಾಳೆ.
ವಿಪ್ಟೇಲ್ ರೆಡ್‌ಬ್ಯಾಕ್ ಬಗ್ಗೆ ಸುಳ್ಳು ಹೇಳಿದ್ದಾಳೆ.
ನಾನು ನಿಮ್ಮ ನೆಚ್ಚಿನ ಹುಡುಗಿಯನ್ನು ಕೊಲ್ಲುತ್ತೇನೆ.
ಅವರ ವಿರುದ್ಧ ಹೋದರೆ, ಕೆಲಸ ಹೋಗುತ್ತದೆ.
- ಎಲ್ಲ ಹೋಗುತ್ತದೆ. - ನಿನ್ನ ಏಜೆಂಟಿಗೆ
ಹೇಳದಿದ್ದರೆ, ಅವಳನ್ನೂ ಕಳೆದುಕೊಳ್ಳುತ್ತೀಯ.
ನಿನಗಾಗಿ ನನ್ನ ಬಳಿ ಕೆಲಸವಿದೆ.
ಆನಾ ಬಗ್ಗೆ ಏನು ತಿಳಿದಿದೆ ಎಂದು ಭಾವಿಸಿರುವೆಯೋ, ಅದೆಲ್ಲದರಿಂದ ದೂರವಿರು.
ನಾವು ಎಲೈಜಾನನ್ನು ನೋಡಲು ಬಂದಿದ್ದೇವೆ.
ಡೇವಿಡ್ ಕ್ಲೇಬೋರ್ನ್‌ಗಾಗಿ ನಿನ್ನ ಬಳಿ ಮಾಡಿಸಿದ ಖಾತೆಯೊಳಕ್ಕೆ ಹೋಗು.
ಅದು ಹೋಗಿಬಿಟ್ಟಿದೆ. ಹಣ ತೆಗೆದಿದ್ದಾನೆ.
ಕ್ಲಾರಾ?
ಇದೇ. ಅಲ್ಬೇನಿಯನ್ನರಿಗೆ ಪಾವತಿಸುವ ದಾರಿ ಇದೇ.
ಅವನನ್ನು ದೋಚೋಣ.
ಅದರ ಮೌಲ್ಯ ಎಷ್ಟು?
18 ದಶಲಕ್ಷ ಪೌಂಡ್.
ಅವನೂ ನಮ್ಮ ದೋಣಿಯಲ್ಲೇ ಇದ್ದಾನೆ. ಅಲ್ಬೇನಿಯನ್ನರು ಅವನನ್ನೂ ಹುಡುಕ್ತಿದ್ದಾರೆ.
ಇದರರ್ಥ ಅವನಿಗೆ ಅವಕಾಶ ಸಿಕ್ಕ ಕೂಡಲೇ ಓಡಿಹೋಗುತ್ತಾನೆ.
ಡೆಬ್ಬಿ ಕ್ಲೇಬೋರ್ನ್.
ನನ್ನ ಹೆಸರು ಜಾಕ್ ಭೂಷೆ. ನಾನು ಇಂಟರ್ಪೊಲ್‌ನವನು.
ಅಲ್ಬೇನಿಯನ್ನರು ನಿನ್ನ ಹಿಂದೆ ಬಿದ್ದಿರುವುದು ಗೊತ್ತು.
ನಿನ್ನನ್ನು ಕ್ರೆಷ್ನಿಕ್‌ನಿಂದ ರಕ್ಷಿಸುತ್ತೇನೆ, ನಾವಿದನ್ನು ಕೊನೆಗೊಳಿಸಬಹುದು.
ನಮ್ಮ ಹಣ ಎಲ್ಲಿ?
ಜೂಡಿಥ್.
ಜೂಡಿಥ್.
ಜೂಡಿಥ್, ಎದ್ದೇಳು.
ಎದ್ದೇಳು, ಚಿನ್ನ. ನಾವು ಹೋಗಬೇಕು. ನಾನಿದ್ದೇನೆ.
ಬಾ. ಹುಷಾರು. ನಾನಿದ್ದೇನೆ. ನಾನಿದ್ದೇನೆ.
ನಾವು ಬಿಲ್ಲಿನ ಬಿಟ್ಟು ಹೋಗಲು ಸಾಧ್ಯವಿಲ್ಲ.
- ಅವನನ್ನು ಮರೆತು ಬಿಡು. - ನಾನು…
ಅವನು ಹೋದ. ಚೀಲವನ್ನು ತೆಗೆದುಕೊಂಡು ಹೋಗಿದ್ದಾನೆ.
ನಾನಿದ್ದೇನೆ. ನಿನಗೇನೂ ಆಗಿಲ್ಲ.
ನೀವು ಸವಾರಿ ಹುಡುಕುತ್ತಿದ್ದೀರಾ?
ನಾನು ದೋಣಿ ಕದ್ದಿದ್ದೇನೆ!
ನೀನು ಮರಳಿ ಬಂದೆ.
ಖಂಡಿತ ನಾನು ಹಿಂತಿರುಗಿದೆ.
ಇಷ್ಟು ಬೇಗ ಅಲ್ಲ!
ಸರಿ.
ಕೇಳು, ನಿನ್ನ ಹಣ ನನ್ನ ಬಳಿಯಿದೆ, ಸರಿಯಾ? ನನ್ನ ಬಳಿಯಿದೆ.
ಬಿಲ್ಲಿ!
ಬಿಲ್ಲಿ, ಅವನಿಗೆ ತೋರಿಸು!
ಕೆಳಗೆ ಬಗ್ಗಿ ತೆಗೆಯುತ್ತಿದ್ದೇನೆ, ಸರಿಯಾ? ಅದು ಆಯುಧವಲ್ಲ.
ಅದು ಋಣ ತೀರಿಸಲು.
ಇದು ನಗದು ಅಲ್ಲ, ಆದರೆ ನಗದಿಗೆ ಸಮ, ಆಯ್ತಾ?
ಯೋಚಿಸಿದ್ದಕ್ಕಿಂತ ಸ್ವಲ್ಪ ಜೋರಾಗಿ ನಾನದನ್ನು…
ದೋಣಿಯಲ್ಲಿ ಎಸೆದಿರಬಹುದು.
ಛೇ!
ಹೆಂಡತಿಯನ್ನು ಕರೆದೊಯ್ದು ಇತರರನ್ನು ಕೊಲ್ಲು.
- ಬೇಡ! - ಬೇಡ!
ಸ್ಯಾಮ್ ಕೊಟ್ಟಿದ್ದು.
ಬನ್ನಿ. ನಾವು ಹೋಗಬೇಕು.
ಬಾ. ನಾವು ಹೋಗಬೇಕು.
ಕ್ಷಮಿಸಿ, ನಾವೀಗ ತೆರೆದಿಲ್ಲ.
ಹಾಗಿದ್ದರೆ ಬಾಗಿಲನ್ನು ಲಾಕ್ ಮಾಡಬೇಕಿತ್ತು.
ನೀನು ನನ್ನನ್ನು ನೋಡಿ ಆಶ್ಚರ್ಯ ಪಡುತ್ತಿಲ್ಲ.
ಸುದ್ದಿ ವೇಗವಾಗಿ ಚಲಿಸುತ್ತದೆ, ಅಲ್ಲವಾ?
ನಿನಗೆ ಆಗಿದ್ದಕ್ಕೆ ನನಗೆ ವಿಷಾದವಾಗಿದೆ, ಆನಾ, ನಿಜವಾಗಿಯೂ ಖೇದವಿದೆ.
ಆದರೆ ನೀನು ಎಲ್ಲಿದ್ದೀಯ ಎಂದು, ಬದುಕಿರುವೆ ಎಂದೂ ತಿಳಿದಿರಲಿಲ್ಲ.
ಅದರಲ್ಲಿ ನನ್ನ ಪಾತ್ರ ಇರಲಿಲ್ಲ.
ನನಗೆ ಗೊತ್ತು.
ನಿನ್ನನ್ನು ಶಿಕ್ಷಿಸಲು ಬಂದಿಲ್ಲ.
ಅವರನ್ನು ಶಿಕ್ಷಿಸಲು ಬಂದಿದ್ದೇನೆ.
ಹೇ, ನಾನು ಬಂದಿರುವುದು.
ನಾನು ಮಾಡಿದೆ. ವಿಪ್ಟೇಲ್ ಅನ್ನು ಸಂಪರ್ಕಿಸಿ…
ಇಲ್ಲ, ಇಲ್ಲ.
ಅದು ಯಾರು?
ಅದರಲ್ಲೇನು ಬರೆದಿದೆ?
ಜೂಡಿಥ್, ಅದರಲ್ಲೇನು ಬರೆದಿದೆ?
"ರೆಡ್‍ಬ್ಯಾಕ್ ಜೀವಂತವಾಗಿದ್ದಾಳೆ."
ರೆಡ್‍ಬ್ಯಾಕ್ ಜೀವಂತವಾಗಿದ್ದಾಳೆ
ರೆಡ್‍ಬ್ಯಾಕ್ ಜೀವಂತ ಇದ್ದಾಳಾ?
ರೈಡ್ ಆರ್ ಡೈ
ಮೆಕ್ಸಿಕೋ ನಗರ
ಆರು ವರ್ಷಗಳ ಹಿಂದೆ
ಸರಿ. ನನ್ನ ಬಳಿ ಹೇಳಲು ಒಂದು ಇದೆ.
ಇಲ್ಲ, ನನ್ನ ಬಳಿ ಹೇಳಲು ಇದೆ.
ನಾನು ಜೀವನದಲ್ಲಿ ಎಂದಿಗೂ…
ಬೊಲಿವಿಯನ್ ರಾಯಭಾರ ಕಚೇರಿಯನ್ನು ಗುರಿಯಾಗಿಸಿಲ್ಲ.
- ನನಗೆ ಗೊತ್ತಿತ್ತು! - ಬೊಲಿವಿಯನ್…
ಅದು ನೀನೆಂದು ನನಗೆ ಗೊತ್ತಿತ್ತು!
ದೇವರೇ.
ಸಾಮಾನ್ಯವಾಗಿ, ಜೋಡಿಯಾಗಿ ಕೆಲಸ ಮಾಡುವುದನ್ನು ದ್ವೇಷಿಸುತ್ತೇನೆ.
ಆದರೆ ನಿನ್ನ ಜೊತೆ ಕೆಲಸ ಇಷ್ಟ.
ನಿನ್ನ ಜೊತೆ ಕೆಲಸ ಮಾಡಲಿಷ್ಟ.
ಹಾಗಾದರೆ… ನೀನು ಈ ಕೆಲಸಕ್ಕೆ ಹೇಗೆ ಬಂದೆ?
- ಈ ಮೊದಲು ನೀನಿದನ್ನು ಕೇಳಲಿಲ್ಲ. - ಈಗ ಕೇಳುತ್ತಿದ್ದೇನೆ.
ನನಗೆ ಗೊತ್ತಿಲ್ಲ.
ಬಹುಶಃ ನೀನು ಬಂದಂತೆಯೇ.
ಬರುವ ಮೊದಲಿನ ಕಥೆ ಏನು?
ನಿನಗೆ ನಿಯಮ ಗೊತ್ತು. "ಮೊದಲು" ಎನ್ನುವುದಿಲ್ಲ.
ಬೇಗ ಬಂದರು.
ನೀವು ಯಾರು?
ನಾನು ರೆಡ್‌ಬ್ಯಾಕ್.
ಇವಳು ವಿಪ್ಟೇಲ್, ನನ್ನ ಬೆಸ್ಟ್ ಫ್ರೆಂಡ್.
ಮೊನಾಕೊ
- ಪಾಸ್ವರ್ಡ್? - "ಮೆಲ್ಲನ್," ಬ್ರಯನ್.
- ಮೆಲ್ಲನ್! - ಬೇಗ ಬಾಗಿಲು ತೆರೆ.
- ಹುಷಾರು. - ಛೇ.
- ಬಾಗಿಲು ಮುಚ್ಚು. - ನಾನು ಮುಚ್ಚುತ್ತೇನೆ.
ನೋಡಿಕೊಂಡು ಹೆಜ್ಜೆ ಇಡು.
ಅವಳನ್ನು ಇಲ್ಲಿ ಮಲಗಿಸು. ಇರು.
ಇಲ್ಲಿ ಮಲಗು. ಇಲ್ಲಿ ಮಲಗು.
ಆರಾಮವಾಗಿ, ಆರಾಮವಾಗಿ.
ಮುಂದೆ ಹೋಗುತ್ತಿರಬೇಕು.
ರೆಡ್‍ಬ್ಯಾಕ್ ಜೀವಂತವಾಗಿದ್ದಾಳೆ.
ರೆಡ್‍ಬ್ಯಾಕ್ ಜೀವಂತ ಇದ್ದಾಳೆ!
ಏನಾಗುತ್ತಿದೆ?
- ರೆಡ್‍ಬ್ಯಾಕ್ ಯಾರು? - ಶಾಂತನಾಗು.
ಶಾಂತನಾಗಬೇಕಾ?
ಒಬ್ಬ ವ್ಯಕ್ತಿ ಈಗಷ್ಟೇ ಮೂವರ ತಲೆಗೆ ಗುಂಡು ಹೊಡೆದು,
ನಾಪತ್ತೆಯಾಗಿಬಿಟ್ಟ.
ನೀನು ಈಗಷ್ಟೇ ಮಹಲಿಗೆ ಬೆಂಕಿ ಹಚ್ಚಿದೆ, ನಾವು ಶಸ್ತ್ರಾಸ್ತ್ರ ವ್ಯಾಪಾರಿಯನ್ನು ದೋಚಿದೆವು.
ಹೀಗಿರುವಾಗ ಹೇಗೆ ಶಾಂತನಾಗಿರಲಿ?
ಈ ಕ್ಷಣದಲ್ಲಿ ಮುಖ್ಯವಾದ ಏಕೈಕ ವಿಷಯ ಇವಳನ್ನು ಉಳಿಸುವುದು,
ಆದ್ದರಿಂದ ಶಾಂತನಾಗು. ಸರಿಯಾ?
ಹಾಯ್.
ಹಾಯ್, ಚಿನ್ನ.
ಓ, ದೇ…
ಕೈಗವಸು ಇಲ್ಲವಾ?
ಓ, ದೇವರೇ… ಇದು ಹುಚ್ಚಾಟ, ನಾವು ಅವಳನ್ನು ಆಸ್ಪತ್ರೆಗೆ ಕರೆದೊಯ್ಯಬೇಕು.
ಅಲ್ಬೇನಿಯನ್ನರು ಹುಡುಕುವ ಮೊದಲ ಸ್ಥಳವೆಂದರೆ ಆಸ್ಪತ್ರೆ.
ನಾವು ಹೋದ ತಕ್ಷಣ ಕೊಲ್ಲುತ್ತಾರೆ.
- ಏನು ಮಾಡುತ್ತಿದ್ದೀಯ ಎಂದು ಗೊತ್ತಲ್ಲಾ? - ಬ್ರಯನ್ ಸೈನ್ಯದಲ್ಲಿ ವೈದ್ಯನಾಗಿದ್ದ.
ನಾನು ಗಾದಿಗಳನ್ನೂ ಹೊಲಿಯುತ್ತೇನೆ.
ವಿದಾಯ, ಡಯಾನ್.
ಇರಿ. ಅವರು ಒಳಗಿದ್ದಾರೆ.
ಸರಿ, ಸರಿ, ಕಾಯುತ್ತೇವೆ.
ಗಂಭೀರವಾಗಿ ಹೇಳುತ್ತಿದ್ದೀಯಾ? ಇಲ್ಲ, ನಾನು ಕಾಯುವುದಿಲ್ಲ.
- ಕ್ವೀನಿ. - ಇಲ್ಲ. ನೀನು, ಅವನು, ಇಬ್ಬರೂ ಹಾಳಾಗಿಹೋಗಿ.
ಬೇಡ, ಕ್ವೀನಿ!
- ಕ್ಷಮಿಸಿ, ಸರ್. ಕ್ಷಮಿಸಿ. - ಹಾಳಾಗಿ ಹೋಗು.
ಪರವಾಗಿಲ್ಲ, ಸ್ಯಾಮ್.
ಹಲೋ, ವಿಕ್ಟೋರಿಯಾ.
ನನ್ನನ್ನು ಹಾಗೆ ಕರೆಯಬೇಡ.
ನಿನ್ನಿಂದಾಗಿ ಅವಳು ಸತ್ತಿದ್ದಾಳೆ. ನಿನಗದು ಗೊತ್ತು, ಅಲ್ಲವಾ?
ಈ ರೆಡ್‌ಬ್ಯಾಕ್ ಹುಚ್ಚಿ ಜೀವಂತವಾಗಿದ್ದಾಳೆ ಎಂದು ಸ್ಯಾಮ್ ನಿನಗೆ ಹೇಳಿದ್ದ,
ನೀನದರ ಬಗ್ಗೆ ಏನಾದರೂ ಮಾಡಿದ್ದರೆ,
ಇವಳ ಬದಲು ಅವಳು ಸಾಯುತ್ತಿದ್ದಳು…
ನೀನಿದ್ದು ಏನು ಪ್ರಯೋಜನವಾಯಿತು?
ಅವಳನ್ನು ಉಳಿಸಲು ಸಾಧ್ಯವಾಗದಿದ್ದ ಮೇಲೆ,
ನಿನ್ನ ಶಕ್ತಿಯ ಮತ್ತು ನಿನ್ನ ಮೂರ್ಖ ಸಂಸ್ಥೆಯ ಪ್ರಯೋಜನವೇನು?
ನಾನು ಜೀವ ಉಳಿಸುವ ವ್ಯವಹಾರದಲ್ಲಿಲ್ಲ, ಕ್ವೀನಿ.
ನನ್ನನ್ನು ಹಾಗೂ ಕರೆಯಬೇಡ, ಆಯ್ತಾ? ನಿನಗೆ ನನ್ನ ಪರಿಚಯವಿಲ್ಲ.
ನಿನ್ನಲ್ಲಿ ಹಲವಾರು ಅಸಾಧಾರಣ ಪ್ರತಿಭೆಗಳಿವೆ ಎಂದು ನನಗೆ ಗೊತ್ತು,
ಆದರೆ ಸಾವು ಅವುಗಳಲ್ಲಿ ಒಂದಲ್ಲ.
ನಿನ್ನ ಮುಂದಿನ ಯೋಜನೆಯ ಕುರಿತು ನಿನಗೆ ಎಚ್ಚರಿಕೆ ನೀಡುತ್ತೇನೆ.
ನೀನು ಏನು ಎಚ್ಚರಿಕೆ ನೀಡಿದರೂ ನಾನು ಹೆದರುವುದಿಲ್ಲ, ನಾನು ಅವಳನ್ನು ಕೊಲ್ಲುತ್ತೇನೆ.
ಹಾಗಾದರೆ ನೀನು ಬಹಳ ಧೈರ್ಯದಿಂದ ಹೋರಾಡುತ್ತೀಯ ಮತ್ತು ಬೇಗನೆ ಸಾಯುತ್ತೀಯ.
ನಿನಗೆ ಬೇಕಾದುದಕ್ಕೆ ತರಬೇತಿ, ಸಮಯ ಮತ್ತು ತಾಳ್ಮೆ ಅಗತ್ಯವಿದೆ.
ಹೌದಾ?
ಮತ್ತು ನಿನ್ನ ತಾಳ್ಮೆ ನನ್ನ ಅಮ್ಮನಿಗೆ ಏನು ಮಾಡಿತು ನೋಡು.
ಕೋಪ ನಿಯಂತ್ರಿಸು, ಇಲ್ಲದಿದ್ದರೆ ಅದು ನಿನ್ನನ್ನು ನಾಶಪಡಿಸುತ್ತದೆ.
ನೀನೂ ನಿನ್ನ ತಾಯಿಯ ಗತಿಯನ್ನೇ ಕಂಡರೆ, ಸೇಡು ತೀರಿಸಿಕೊಳ್ಳಲು ಸಾಧ್ಯವಿಲ್ಲ.
ಅವಳನ್ನು ನೋಡಿಕೋ, ಸ್ಯಾಮ್.
ಈ ಹಿಂದೆ ಯಾರಾದರೂ ಅವರೊಂದಿಗೆ ಹೀಗೆ ಮಾತಾಡಿ ಬದುಕುಳಿದವರನ್ನು ನೋಡಿರುವೆಯಾ?
ಎಂದಿಗೂ ಇಲ್ಲ.
ಸ್ಟಿಚ್ ಗಟ್ಟಿಯಾಗಿದೆ, ಆದರೆ ಗಾಯ ಬಹಳ ಆಳವಾಗಿದೆ.
ಸೋಂಕು ತಗುಲಿದರೆ, ಪ್ರತಿಜೀವಕಗಳಿಲ್ಲದೆ ಅವಳು ಬದುಕುವುದಿಲ್ಲ.
ಆದ್ದರಿಂದ ಆಕೆಗೆ ಈ ಪಟ್ಟಿಯಲ್ಲಿರುವ ಎಲ್ಲವೂ ಬೇಕು.
ನಾವೊಬ್ಬರಿಗೆ ಕರೆ ಮಾಡಬಹುದು, ಆಕೆ ನಕಲಿ ಶೂ ಅಂಗಡಿ ನಡೆಸುತ್ತಾರೆ. ಏನು ಮಾಡಬೇಕೆಂದು
- ಆಕೆಗೆ ಗೊತ್ತಿರುತ್ತೆ. - ಮಿಸಸ್ ವಿಲಿಯಮ್ಸ್?
ಆಕೆಯೇ.
ಇದನ್ನು ನಿಮಗೆ ಹೇಳಲು ನಾನು ವಿಷಾದಿಸುತ್ತೇನೆ, ಆದರೆ ಆಕೆ ಸತ್ತಿದ್ದಾರೆ.
ಏನು?
ಏನು?
ಏನಾಯಿತು?
ಯಾರು?
ಮಿಸಸ್ ವಿಲಿಯಮ್ಸ್.
ಇದು ನನ್ನ ತಪ್ಪು.
- ಇಲ್ಲ, ಇಲ್ಲ, ಇಲ್ಲ, ಇಲ್ಲ. - ಹೌದು. ಇದು ನನ್ನದೇ ತಪ್ಪು.
ಏನಾಗುತ್ತಿದೆ? ನೀವು ಮೂವರು ಇಲ್ಲಿ ಏನು ಮಾಡುತ್ತಿದ್ದೀರಿ?
ಇಡೀ ನಗರವೇ ನಿಮ್ಮನ್ನು ಹುಡುಕುತ್ತಿದೆ.
- ಆಚೆ ನಡೆಯಿರಿ! - ಏನು?
ಎಲೈಜಾ, ಅವಳನ್ನು ನೋಡು.
ನಾವು ಬೇರೆಲ್ಲಿಗೆ ಹೋಗುವುದು?
ನೀವು ಎಲ್ಲಿಗೆ ಹೋದರೂ ನನಗೆ ಚಿಂತೆಯಿಲ್ಲ.
- ನೀವು ಇಲ್ಲಿ ಇರಲು ಸಾಧ್ಯವಿಲ್ಲ. - ನಿನಗೇನು ತೊಂದರೆ ಹೇಳು?
ನೋಡು, ಕೆಟ್ಟ ಕುಳ್ಳನೇ.
- "ಕುಳ್ಳನಾ"? - ಕುಳ್ಳನೇ.
ಹೇ! ನೋಡಿ, ನನ್ನ ಅಮ್ಮನ ಮನೆ ಖಾಲಿಯಿದೆ, ಆಯ್ತಾ?
ಅವಳು ಜೈಲಿನಲ್ಲಿದ್ದಾಳೆ. ನನ್ನ ಚೀಲ ತೆಗೆದುಕೊಳ್ಳಿ.
ನಗರದ ಹೊರಗಿದೆ. ಅಲ್ಲಿ ಯಾರೂ ನಿಮ್ಮನ್ನು ಹುಡುಕುವುದಿಲ್ಲ.
ಧನ್ಯವಾದ.
ಬೇಗ ಹೋಗಿ!
ಅವಳು ನನ್ನ ಪೈಜಾಮಾ ಧರಿಸಿದ್ದಾಳೆ!
ಪೂರ್ಣ ಪರಿಧಿ ಸುರಕ್ಷಿತವಾಗಿಸಿದ್ದೇವೆ.
ಜಾಕ್!
ಏನಾಯಿತು?
ನಿನಗೆ 24 ಗಂಟೆ ನೀಡಿದೆ, ಈಗ ಮೂವರು ಅಲ್ಬೇನಿಯನ್ ದರೋಡೆಕೋರರು ಶವ ಆಗಿದ್ದಾರೆ.
ಇದೊಂದು ದುಃಸ್ವಪ್ನ ಆಗುತ್ತಿದೆ.
ಬೇರೆಯವರನ್ನು ಕೊಲ್ಲೋ ಮೊದಲು ನಾವು ಆ ಮಹಿಳೆಯರನ್ನು ಕರೆತರಬೇಕು.
ಇದು ಅವರೇ ಅಂತ ನಿನಗೆ ತಿಳಿದಿಲ್ಲ.
ಇದು ಅವರಲ್ಲ ಅಂತ ಹೇಗೆ ಹೇಳುತ್ತೀಯ?
ಅವರು ರೈಲಿನಲ್ಲಿ ಹೋದಾಗ ಒಬ್ಬ ಸತ್ತ.
ಅವರು ಕಾಸ್ಟಿಲ್ ತಲುಪಿದಾಗ, ನಾಲ್ಕು ಡ್ರಗ್ ಡೀಲರ್ಸ್ ಆಸ್ಪತ್ರೆ ಸೇರಿದರು.
ಅವರು ಮೊನಾಕೊಗೆ ಹೋದಾಗ ಮೂವರು ಅಲ್ಬೇನಿಯನ್ನರು ಬೀದಿಯಲ್ಲಿ ಸತ್ತರು.
No comments yet. Be the first to leave one.