Ride or Die

Ride or Die

Download Kannada Subtitle

Season 1

Release info

Ride or Die S01E02 The Yellow Wood 1080p WEBRip 10Bit DDP5 1 x265-NeoNoir
A Commentary by chargephoton88

Tags

webdl
Published on: 2026-08-21
Downloads: 0
Hearing Impaired: No
FPS: 23.976

Kannada subtitle preview

The first 200 lines.

ನನ್ನ ಹೆಸರು ಡೆಬ್ಬಿ ಕ್ಲೇಬೋರ್ನ್.

ನನ್ನ ಮದುವೆ ಬಲವಾಗಿದೆ ಅಂದುಕೊಂಡಿದ್ದೆ.

ನಾವು ವಿಚ್ಛೇದನ ಪಡೆಯಬೇಕು.

ಜೂಡಿಥ್!

ಸ್ನೇಹಿತೆ ಗೊತ್ತೆಂದುಕೊಂಡಿದ್ದೆ.

ನೀನು ಹಂತಕಿಯಾ?

ಹೌದು.

ನನ್ನ ಹೆಸರು ವಿಪ್ಟೇಲ್.

ನಾನೊಬ್ಬ ಅಂತಾರಾಷ್ಟ್ರೀಯ ಹಂತಕಿ.

ಅದು ನನ್ನ ಮುಂದಿನ ಕೆಲಸವಾ? ಬಿಲ್ಲಿ ಡೊನೊವನ್‌?

ನೀನು ಗೋಲ್ಡ್ ಸ್ಟ್ಯಾಂಡರ್ಡ್ ಆಗಿದ್ದೆ. ಈಗ ಮುಟ್ಟಿದ್ದೆಲ್ಲವೂ ಅವ್ಯವಸ್ಥೆಯಾಗುತ್ತಿದೆ.

ನಮ್ಮ ಮೇಲೇಕೆ ಗುಂಡು ಹಾರಿಸುತ್ತಿದ್ದಾರೆ?

ನಿನ್ನ ಬಳಿ ಗನ್ ಯಾಕಿದೆ?

ಮತ್ತು ಈಗ, ನಮ್ಮಿಬ್ಬರ ಜೀವನವೂ ಸಂಪೂರ್ಣವಾಗಿ ತಲೆಕೆಳಗಾಗಿದೆ.

ಇದು ಬ್ಲಾಕ್ ಮಾರ್ಕ್. ಪೈರೇಟ್ ಕೋಡ್. ಇದರರ್ಥ ಯಾರೋ ನಿಮ್ಮ ಸಾವು ಬಯಸುತ್ತಾರೆ.

ಅವರನ್ನು ಹುಡುಕುವುದು ಹೇಗೆಂದು ಗೊತ್ತು.

ನನ್ನ ಮೇಲೆ ಗುಂಡು ಹಾರಿಸಲಾಗಿದೆ. ನನ್ನನ್ನು ಬೆನ್ನಟ್ಟಲಾಗಿದೆ.

ನನಗೆ ವಿಮೆ ಇಲ್ಲದ ವಾಹನವನ್ನು ಓಡಿಸಿದೆ.

ಮತ್ತು ನನ್ನ ಗಂಡ…

ಡೇವಿಡ್ ಬಗ್ಗೆ ನೀನು ಏನೋ ತಿಳಿದುಕೊಳ್ಳಬೇಕಿದೆ.

- ಅವನು ಸತ್ತಿದ್ದಾನೆ. - ನನ್ನನ್ನು ಬಿಟ್ಟ.

- ಏನು? - ಏನು?

ಎಲ್ಲಾ ಘಟಕಗಳು, ಸಶಸ್ತ್ರ ಪ್ರತಿಕ್ರಿಯೆ ತಂಡ, ನಾರ್ತ್‌ವುಡ್ ಹಿಲ್ಸ್.

ಗುಂಡೇಟಿನ ವರದಿಗಳು, ಬಿ34 ನಲ್ಲಿ.

ಸಾಕ್ಷಿಗಳು ಒಂದು ಡ್ರೈವರ್ ಇದ್ದದ್ದು ಸೂಚಿಸುತ್ತಿವೆ, ಬಹುಶಃ ಹೆಣ್ಣು.

ಛೇ.

ಜಾಕ್‌ಪಾಟ್.

ಏನಾದರೂ ತೊಂದರೆಯಾ?

ಇದಕ್ಕೆ ಏನಾಗಿದೆಯೋ ಗೊತ್ತಿಲ್ಲ.

ಓ ದೇವರೇ, ನಿನ್ನ ಕಾರು ತುಂಬಾ ಅಚ್ಚುಕಟ್ಟಾಗಿದೆ.

ನನ್ನದು ತುಂಬಿದೆ. ನಾನು ಎಲ್ಲವನ್ನೂ ಮುಂಭಾಗದ ಸೀಟಿನಲ್ಲಿ ಎಸೆಯುತ್ತೇನೆ.

ಜೊತೆಗೆ, ನನ್ನ ಆಸನವನ್ನು ಹಿಂದೆ ತಳ್ಳಿರುತ್ತೇನೆ, ಏಕೆಂದರೆ ನಾನು ಗರ್ಭಿಣಿ.

ಕೈಗಳು ಸಂಪೂರ್ಣ ನೇರವಾಗಿ ಚಾಚಿಕೊಂಡಿರುತ್ತವೆ. ದೇವರೇ.

ಅದು ಸೀಟ್ ವಾರ್ಮರ್ ಆ? ಉತ್ತಮ ಸೀಟ್ ವಾರ್ಮರ್ ನನಗಿಷ್ಟ. ಅದು…

ಏನು? ನೀನು ಯಾಕೆ ನಗುತ್ತಿರುವೆ?

ನೀನು ತುಂಬಾ ಮಾತಾಡುತ್ತೀಯ.

- ಹೌದು. ಕ್ಷಮಿಸು. - ಇಲ್ಲ, ಇಲ್ಲ.

ಜಾಸ್ತಿ ಮಾತಾಡಿದರೆ ಚೆನ್ನಾಗಿರುತ್ತದೆ.

ನನ್ನದು ಗಂಭೀರವಾದ, ನೀರಸ ಕೆಲಸ.

- ನನಗೆ ಹೆಚ್ಚು ಮಾತಾಡಲು ಅವಕಾಶವಿಲ್ಲ. - ಏನು ಕೆಲಸ ನಿನ್ನದು?

ಫೋರೆನ್ಸಿಕ್ ಅಕೌಂಟೆಂಟ್.

ಅದ್ಭುತ. ಅದರ ಬಗ್ಗೆ ಹೇಳು.

ಎರಡನೇ ಪುಸ್ತಕ ಓದಿದ್ದೀಯಾ? ಏಕೆಂದರೆ ನನ್ನ ಪ್ರಕಾರ--

- ಅಷ್ಟು ಚೆನ್ನಾಗಿಲ್ಲ. - ಅಷ್ಟು ಚೆನ್ನಾಗಿಲ್ಲ.

- ಹಳೆಯ ಯಶಸ್ಸಿನ ನಂತರ ಅವನೇನೂ ಮಾಡಲೇ ಇಲ್ಲ. - ಅಕ್ಷರಶಃ ಸರಿ.

- ಕಥೆ ಆತುರವಾಗಿ ಮುಂದುವರೆಯಿತು. - ಹೌದು. ಆತುರವಾಗಿ ಮುಂದುವರೆಯಿತು.

- ಕ್ಷಮಿಸು. ಕ್ಷಮಿಸು. ನಾನು ಇಳಿಯಬೇಕು. - ಓಹ್, ಇಲ್ಲ.

- ಸರಿ, ನಿನ್ನನ್ನು ಭೇಟಿಯಾಗಿ ಸಂತೋಷವಾಯಿತು. - ನನಗೂ ಅಷ್ಟೇ.

- ಹೇ. - ಹಾಯ್.

- ಹಾಯ್. - ಒಳಗೆ ಬರುತ್ತೀಯಾ?

ಹೌದು. ಹೌದು, ಬರುತ್ತೇನೆ.

ಇಂದು

ಇದು ಎಲ್ಲಿದೆ? ಎಲ್ಲಿಗೆ ಹೋಗುತ್ತಿದ್ದೇವೆ?

ನನ್ನ ಮನೆಗೆ.

ಏನು? ಇದು ನಿನ್ನ ಮನೆ ಅಲ್ಲ. ನಾನು ನಿನ್ನ ಮನೆಗೆ ಬಂದಿದ್ದೇನೆ.

ಅದು ನನ್ನ ನಿಜವಾದ ಮನೆ ಅಲ್ಲ.

- ನಿನ್ನ ಬಳಿ ನಕಲಿ ಮನೆ ಇದೆಯಾ? - ಇಲ್ಲ, ಅದು ನಿಜವಾದ ಮನೆ.

- ಯಾರ ಬಳಿ ನಕಲಿ ಮನೆ ಇರುತ್ತದೆ? - ನಾನು--

ಏನು ಗೊತ್ತಾ? ನನಗೆ ಇದನ್ನು ತಡೆದುಕೊಳ್ಳಲು ಆಗುತ್ತಿಲ್ಲ.

ನಿನ್ನ ನಕಲಿ ಮನೆ ಅಥವಾ ನಕಲಿ ಜೀವನ ಅಥವಾ ನಕಲಿ ಸ್ನೇಹಿತರ ಬಗ್ಗೆ ಕೇಳಲು ಇಷ್ಟವಿಲ್ಲ.

ನನ್ನ ಗಂಡ ಸತ್ತಿದ್ದಾನೆ…

ಮತ್ತು ನನ್ನ ಮಕ್ಕಳಿಗೆ ಕರೆ ಮಾಡಿ

ಅವರ ತಂದೆ ಒಂದು ರೀತಿಯ ಅಪರಾಧಿ ಎಂದು ಹೇಳಬೇಕು.

ಹಾಗಾಗಿ ನನಗೆ, ನನ್ನ ಸಾಮಾನ್ಯ, ನಿಜವಾದ ಮನೆಗೆ ಹೋಗಬೇಕು.

- ಸಾಧ್ಯವಿಲ್ಲ. ಅದು ತುಂಬಾ ಅಪಾಯಕಾರಿ. - ನನ್ನನ್ನು ಮನೆಗೆ ಕರೆದುಕೊಂಡು ಹೋಗು, ಜೂಡಿಥ್.

ಇಲ್ಲ! ಮನೆಯೊಳಗೆ ಬಾ.

- ಇಲ್ಲ! - ಸರಿ. ಹಾಗಿದ್ದರೆ ವ್ಯಾನ್‌ನಲ್ಲೇ ಇರು.

ಸರಿ! ಇರುತ್ತೇನೆ!

ಸರಿ. ಬರುತ್ತೇನೆ!

ರೈಡ್ ಆರ್ ಡೈ

ಮತ್ತೆ ನಾನೇ, ವಿಪ್ಟೇಲ್. ನಾವು ಎಷ್ಟು ತೊಂದರೆಯಲ್ಲಿದ್ದೇವೆಂದು

ನಿಖರವಾಗಿ ತಿಳಿಯಲು ನಾನು ಮತ್ತೆ ಕರೆ ಮಾಡುತ್ತಿದ್ದೇನೆ.

ಎಲ್ಲಿದ್ದೀಯ?

ಅಮಾಂಡಾ. ನಾನು ನಿನ್ನನ್ನೇ ಹುಡುಕುತ್ತಿದ್ದೆ.

ಅವಳು ಎಲ್ಲಿದ್ದಾಳೆ?

ಮಾಹಿತಿ ಸಂಗ್ರಹಿಸುತ್ತಿದ್ದಾಳೆ ಮತ್ತು ಪುನಃ ಪ್ರಯತ್ನಿಸಲು ತಯಾರಾಗುತ್ತಿದ್ದಾಳೆ.

ಎಲ್ಲಿದ್ದಾಳೆಂದು ನಿನಗೆ ತಿಳಿದಿಲ್ಲ. ನಿನ್ನ ಏಜೆಂಟ್‌ನ ಮೇಲಿನ ನಿಯಂತ್ರಣವನ್ನು

ಕಳೆದುಕೊಂಡಿದ್ದೀಯ, ಅವಳು ಕೆಲಸ ಮುಗಿಸಲು ವಿಫಲಳಾಗಿದ್ದಾಳೆ.

ನನಗೆ ಸಂಪೂರ್ಣವಾಗಿ ತಿಳಿದಿದೆ.

ಡೈರೆಕ್ಟರ್ ಸ್ಪಷ್ಟವಾಗಿ ಹೇಳಿದ್ದರು. ನಿನ್ನೆ ರಾತ್ರಿ ಅವಳ ಅಂತಿಮ ಅವಕಾಶವಾಗಿತ್ತು.

ನಾನು ಡೈರೆಕ್ಟರ್‌ಗೆ ತಿಳಿಸುತ್ತೇನೆ.

ದಯವಿಟ್ಟು, ಕಾಯಿ. ಅವಳು ಮಾಡುತ್ತಾಳೆ. ಇದು ನನ್ನ ಭರವಸೆ.

ನೋಡಿದೆಯಾ? ಸ್ವಲ್ಪ ತಾಳ್ಮೆ ಇಟ್ಟುಕೋ.

- ಹೇಳು? - ಕ್ಷಮಿಸಿ, ಬಾಸ್.

- ಎಲ್ಲೆಡೆ ಹುಡುಕಿದ್ದೇವೆ. ನಾಪತ್ತೆಯಾಗಿದ್ದಾಳೆ. - ಸರಿ, ವಾಪಸ್…

ವಾಪಸ್ ಬನ್ನಿ.

ನಿನಗೆ ಕೆಲಸ ಕೊಟ್ಟವರು ನಿನಗಾಗಿ ಖರೀದಿಸಿದ ಮನೆಯಾ?

ಇಲ್ಲ. ಏಜೆನ್ಸಿಗೆ ಈ ಸ್ಥಳದ ಬಗ್ಗೆ ಏನೂ ತಿಳಿದಿಲ್ಲ.

ಯಾರಿಗೂ ಗೊತ್ತಿಲ್ಲ.

ಇದೆಲ್ಲವನ್ನೂ ನೀನೇ ವಿನ್ಯಾಸಗೊಳಿಸಿದ್ದೀಯಾ?

ತುಂಬಾ ಸುಂದರವಾಗಿದೆ.

ನಿನ್ನ ಸಾಮಾನೆಲ್ಲಿ?

ಪ್ರಾಚೀನ ವಸ್ತುಗಳೆಲ್ಲಿವೆ?

ಕುಕ್ಕರ್‌ನಲ್ಲಿ ಗನ್‌ಗಳಿವೆ ಎಂದು ಗೊತ್ತಾ?

ಹೌದು.

ನೀನು ಯಾರು?

ನಾನು ಯಾವಾಗಲೂ ಇದ್ದ ಅದೇ ವ್ಯಕ್ತಿ, ಡೆಬ್.

ನಾನು ನಿನ್ನ ಸ್ನೇಹಿತೆ. ನೀನು ಯಾರು ಅಂದುಕೊಂಡಿದ್ದೀಯೋ ಅವಳೇ ನಾನು.

- ನಾನು ಕೇವಲ-- - ನಾವು ಎಲ್ಲಿದ್ದೇವೆ ನೋಡು.

ಯಾರು ಈ ರೀತಿ ಬದುಕುತ್ತಾರೆ?

ನಾನು ಯಾರ ಸ್ನೇಹಿತೆಯಾಗಿದ್ದೆನೋ ಅವಳು ನಿಜವಲ್ಲ.

ನೀನು ನನಗೆ ಸುಳ್ಳು ಹೇಳಿದೆ. ಡೇವಿಡ್ ನನಗೆ ಸುಳ್ಳು ಹೇಳಿದ.

ನನಗೆ ವಿಚ್ಛೇದನ ನೀಡಿದ. ಈಗ ಸತ್ತಿದ್ದಾನೆ.

ಮತ್ತು ನಾನು ಕರೆ ಮಾಡಿ ಹೇಳಲು ಬಯಸುವ ವ್ಯಕ್ತಿಯ ಕುಕ್ಕರ್‌ನಲ್ಲಿ ಗನ್‌ಗಳಿವೆ!

ನಾನು… ನಾನು…

ಇರು. ಎಲ್ಲಿಗೆ ಹೋಗುತ್ತಿದ್ದೀಯ?

ನಾನು ಕೆಲಸಕ್ಕೆ ಹೋಗಿ ನನಗಿದನ್ನು ಕೊಟ್ಟವರನ್ನು ಕಂಡುಹಿಡಿಯಬೇಕು.

ಈಗ, ದಯವಿಟ್ಟು ಸ್ನಾನ ಮಾಡುತ್ತೀಯಾ? ಮನೆಯಲ್ಲಿ ಸಾಕಷ್ಟು ಆಹಾರವಿದೆ.

ಮತ್ತು ನಾನು ಸಾಧ್ಯವಾದಷ್ಟು ಬೇಗ ವಾಪಸ್ ಬರುತ್ತೇನೆ.

ನಾನು ಇಲ್ಲಿ ಇರುವುದಿಲ್ಲ.

ನೀನು ನನ್ನೊಂದಿಗೆ ಬರುವ ಹಾಗಿಲ್ಲ, ನಿನ್ನನ್ನು ನಾನು ಬೇರೆಲ್ಲೂ ಬಿಡುವ ಹಾಗಿಲ್ಲ.

ನಾನು ನಿನ್ನನ್ನು ಸುರಕ್ಷಿತವಾಗಿಡಬೇಕು.

ಆದರೆ ನಾನು ನಿನಗೆ ಭರವಸೆ ನೀಡುತ್ತೇನೆ, ಇದೆಲ್ಲ ಮುಗಿದ ನಂತರ,

ನಾನು ಎಲ್ಲವನ್ನೂ ವಿವರಿಸುತ್ತೇನೆ.

ಈಗ, ದಯವಿಟ್ಟು, ನನ್ನನ್ನು ನಂಬು.

ನಿನ್ನನ್ನು ನಂಬಬೇಕಾ?

ಚಿನ್ನ, ಇದು ಮುಗಿದ ನಂತರ, ನಿನ್ನನ್ನು ಮತ್ತೆ ನೋಡಲು ಬಯಸುವುದಿಲ್ಲ.

ಸಮಾಧಾನವಾಗಿರು.

ಮಕ್ಕಳಿಗೆ ಕರೆ ಮಾಡಬೇಕು, ಮತ್ತು ಅವರಿಗೆ ಏನು ಹೇಳಲಿ?

"ಮಕ್ಕಳೇ, ಅಮ್ಮ ಮಾತಾಡೋದು.

ಅಮ್ಮ ಮಾತಾಡೋದು, ನಿಮ್ಮ ಅಪ್ಪ…"

ಗಾಬರಿಯಾಗಬೇಡ, ಡೆಬ್ಬಿ. ಗಾಬರಿಯಾಗಬೇಡ!

ನೀನು ಅವರಿಗೆ ಹೇಳಲೇಬೇಕು.

ನೀನು ಅವರಿಗೆ ಹೇಳಲೇಬೇಕು.

ಇಲ್ಲದಿದ್ದರೆ ಅವರಿಗೆ ನ್ಯೂಸ್ ನೋಡಿ ಗೊತ್ತಾಗುತ್ತದೆ.

ನ್ಯೂಸ್. ಓ ದೇವರೇ. ನ್ಯೂಸ್.

ಡೇವಿಡ್ ಕ್ಲೇಬೋರ್ನ್

ಪಾರ್ಟಿಯಲ್ಲಿ ಕ್ಲೇಬೋರ್ನ್, ಪತ್ನಿ

ಡೇವಿಡ್ ಕ್ಲೇಬೋರ್ನ್, ಗಾರ್ಡನ್ ಪಾರ್ಟಿ?

"ಡೇವಿಡ್ ಕ್ಲೇಬೋರ್ನ್ ಸಾವು."

"ಜೀವನ ವೆಚ್ಚ ಕಡಿಮೆಯಾಗುತ್ತದೆ ಎಂದು ನಂಬಿರುವ ಡೇವಿಡ್ ಕ್ಲೇಬೋರ್ನ್."

ಏನು?

ಹೋಟೆಲ್ ಮಾಂಟ್‌ಕ್ಲೇರ್

ನಮಸ್ಕಾರ. ಹೋಟೆಲ್ ಮಾಂಟ್‌ಕ್ಲೇರ್.

- ನನ್ನ ಹೆಸರು ಡೆಬ್ಬಿ ಕ್ಲೇಬೋರ್ನ್. - ಹಲೋ, ಮಿಸಸ್ ಕ್ಲೇಬೋರ್ನ್.

ನಾನು ನನ್ನ ಪತಿ ಡೇವಿಡ್ ಕ್ಲೇಬೋರ್ನ್ ಅನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇನೆ.

ಖಂಡಿತ. ಅವರು ನಮ್ಮಲ್ಲಿ ತಂಗಿರುವ ಅತಿಥಿಯೇ?

ಇಲ್ಲ. ಅವರು…

ನಿನ್ನೆ ರಾತ್ರಿಯ ಘಟನೆಯಲ್ಲಿ ಭಾಗಿಯಾಗಿದ್ದರು.

ಯಾವ ಘಟನೆ?

ಪಾರ್ಟಿಯಲ್ಲಿ. ಭಯಾನಕ ವಿಷಯ.

ಬಿಲ್ಲಿ ಡೊನೊವನ್ ಅವರ ಹೋಟೆಲ್ ಕೋಣೆಯಲ್ಲಿನ ಜನ?

ಹೌದು, ಮೇಡಂ, ಭಯಾನಕ ವಿಷಯ.

ಮಿಸ್ಟರ್ ಡೊನೊವನ್ ಅವರ ಕೊಠಡಿಯಲ್ಲಿ ಶಿಲೀಂಧ್ರ ಸೋಂಕು ಕಂಡುಬಂದಿದೆ ಎಂದು ತಿಳಿಸಲಾಯಿತು

ಮತ್ತು ಸ್ಥಳ ಸ್ವಚ್ಛಗೊಳಿಸಲು ತ್ವರಿತ ಶುದ್ಧೀಕರಣ ತಂಡವನ್ನು ಕರೆತಸಿದೆವು.

ಘಟನೆ ಪರಿಹರಿಸಲಾಗಿದೆ ಎಂದು ನಾನು ಭರವಸೆ ನೀಡುತ್ತೇನೆ

ಮತ್ತು ಹೋಟೆಲ್‌ನ ಉಳಿದ ಭಾಗ ಸಂಪೂರ್ಣವಾಗಿ ಸುರಕ್ಷಿತವಾಗಿದೆ.

- ಆದರೆ-- - ನಿಮ್ಮ ಪತಿ ಅದರಲ್ಲಿ ಭಾಗಿಯಾಗಿದ್ದರೇ?

ಅವರು ಶಿಲೀಂಧ್ರವನ್ನು ಮುಟ್ಟಿದರೇ?

- ಹಲೋ. - ನನ್ನ ಗಂಡನ ಶವ ಎಲ್ಲಿದೆ?

ಅದು, "ಅವನು" ಏಜೆನ್ಸಿಯ ಬಳಿಯಿದ್ದಾನೆ.

ಸಂಪೂರ್ಣ ಸುರಕ್ಷಿತವಾಗಿದ್ದಾನೆ.

ಇಲ್ಲ, ಇಲ್ಲ. ಒಂದು ಶಿಲೀಂಧ್ರದ ಕಂಪನಿಯ ಬಳಿಯಿದ್ದಾನೆ.

- ಅದು ನಿನಗೆ ಹೇಗೆ ಗೊತ್ತು? - ಹೋಟೆಲ್‌ಗೆ ಕರೆ ಮಾಡಿದೆ.

- ಹಾಗೆ ಏಕೆ ಮಾಡಿದೆ? - ಏಕೆ ಮಾಡಬಾರದು?

ನ್ಯೂಸ್‌ನಲ್ಲಿ ಅವನ ಸುದ್ದಿ ಬರಲಿಲ್ಲ.

ಖಂಡಿತ ಅವನು ಸುದ್ದಿಯಲ್ಲಿಲ್ಲ.

ನಾನು ನಿನಗೆ ಹೇಳಿದೆ, ಏಜೆನ್ಸಿ ಎಲ್ಲವನ್ನೂ ನೋಡಿಕೊಂಡಿದೆ.

ಇವರು ಯಾರು?

ತಿಳಿಯದಿದ್ದರೆ ಒಳ್ಳೆಯದು.

ಫೈಲ್‌ಗಳನ್ನು ಅಳಿಸಲಾಗುತ್ತಿದೆ…

ಥ್ಯಾಂಕ್ ಗಾಡ್. ಮುಗಿಯಿತಾ?

- ಏನು ಮುಗಿಯಿತಾ? - ಬಿಲ್ಲಿ ಡೊನೊವನ್, ಅವನು ಸತ್ತನಾ?

ಇನ್ನೂ ಇಲ್ಲ.

ಕೇಳು, ನಿನ್ನೆ ರಾತ್ರಿ ಒಂದು ದೇಹವಿತ್ತು.

ರಾತ್ರಿಯ ವಿಷಯ ನಿಯಂತ್ರಣದಲ್ಲಿದೆ.

ಫುಟೇಜ್ ಅಳಿಸಲಾಗಿದೆ. ಘಟನೆ ನಡೆದ ಸ್ಥಳ ಸ್ವಚ್ಛವಾಗಿದೆ.

ಇಲ್ಲ, ಇಲ್ಲ, ಇಲ್ಲ. ನನಗಾಗಿ ಒಂದು ದೇಹವನ್ನು ಹಿಡಿದಿಟ್ಟುಕೊಳ್ಳಬೇಕು.

ಅದನ್ನು ಸುರಕ್ಷಿತವಾಗಿ ಇರಿಸು.

ಏನು? ಯಾರ ದೇಹ?

ಡೇವಿಡ್ ಕ್ಲೇಬೋರ್ನ್ ಎಂಬ ವ್ಯಕ್ತಿ. ಅವನು ಸಂಸದ.

ಸಂಸದರೇ? ಸಂಸದರ ಮೇಲೆ ಗುಂಡು ಹಾರಿಸಿದೆಯಾ?

ನಾನು ಅವನನ್ನು ಶೂಟ್ ಮಾಡಲಿಲ್ಲ. ಅವನು ಆಗಲೇ ಸತ್ತಿದ್ದ.

ಸಹಜವಾಗಿ, ಎಂದಿಗೂ ನಿನ್ನ ತಪ್ಪೇನೂ ಇರುವುದಿಲ್ಲ.

ಸರಿ, ನಾನು ಕೆಳಗೆ ಹೋಗಿ ದೇಹ ತರುತ್ತೇನೆ.

ಈಗ, ದಯವಿಟ್ಟು, ದಯವಿಟ್ಟು, ನಿನ್ನ ಕೆಲಸ ಮುಗಿಸುವೆಯಾ?

ನಾನು ಬರುತ್ತಿದ್ದೇನೆ.

ಹಲೋ?

- ಏನು? - ಸರ್, ನಮಗೆ ಅವಳು ಸಿಕ್ಕಳು.

- ನಿನ್ನ ಏಜೆಂಟ್ ಇಲ್ಲಿ ಏನು ಮಾಡುತ್ತಿದ್ದಾಳೆ? - ಅಮಾಂಡಾ, ನಿನ್ನನ್ನು ನೋಡಿ ತುಂಬಾ ಸಂತೋಷವಾಯಿತು.

ದಯವಿಟ್ಟು ಇದನ್ನು ಮಾಡಬೇಡ. ಇಲ್ಲಿ ಏಜೆಂಟ್‌ಗಳು ಬರುವ ಹಾಗಿಲ್ಲ.

ಪ್ರೋಟೋಕಾಲ್ ಇದೆ, ನಿನಗೆ ತಿಳಿದಿದೆ! ಇದನ್ನು ನಿರ್ಬಂಧಿಸಲಾಗಿದೆ.

ಬೇಡ.

ಮೇಲೆ ಬರಲು ಹೇಳಿದ್ದಾರೆ.

ಜೂಡಿಥ್! ಜೂಡಿಥ್!

ಸರಿ.

ಸರಿ, ಇದನ್ನು ಮಾಡೋಣ.

ನಾಲ್ಕು ಸಂಖ್ಯೆಗಳಿವೆ, ಅಂದರೆ…

ಹತ್ತು ಸಾವಿರ ಸಂಭವನೀಯ ಸಂಯೋಜನೆಗಳು.

ಯೋಚಿಸು, ಯೋಚಿಸು, ಯೋಚಿಸು.

ತಪ್ಪಲ್ಲದ ಹೊರತು…

ನನಗೆ ಆ ನಾಲ್ಕು ಸಂಖ್ಯೆಗಳು ಗೊತ್ತು.

ಬೇಕಿಂಗ್ ಸೋಡಾ

ನಿಜವಾಗಿಯೂ, ಜೂಡಿಥ್?

ಹೌದು, ಅವುಗಳನ್ನು ಮುರಿದುಹಾಕು, ಏಕೆ ಮುರಿದುಹಾಕಬಾರದು?

ತುರ್ತು ಇದ್ದಾಗ, 200 ವರ್ಷಗಳ ಮೊರೊಕ್ಕೋ ಕರಕುಶಲಕ್ಕೆ ಏನು ಬೆಲೆ?

ಏನಿದು?

ಬ್ಲಾಕ್ ಮಾರ್ಕ್. ರೋಮಾಂಚಕವಾಗಿದೆ.

ಕೊನೆಗೂ ಇದನ್ನು ಯಾರೋ ತಂದರು.

ಮತ್ತು ಜೂಡಿಥ್‌ಳ ಪುಸ್ತಕದಿಂದ, ಯಾರೋ ಇದನ್ನು ಎಚ್ಚರಿಕೆಯಿಂದ ಯೋಜಿಸಿದ್ದಾರೆ.

Comments

No comments yet. Be the first to leave one.

Keep it about this subtitle — sync, quality, typos.500 characters left