The first 200 lines.
ಈ ಸರಣಿಯನ್ನು ಮನರಂಜನೆಗಾಗಿ ರಚಿಸಲಾಗಿದೆ ಮತ್ತು ಇದು ಕಾಲ್ಪನಿಕವಾಗಿದೆ. ಇದರಲ್ಲಿನ ಹೆಸರು, ಸ್ಥಳ,
ಘಟನೆ ಇತ್ಯಾದಿ ಲೇಖಕರ ಕಲ್ಪನೆ ಅಥವಾ ಕಾಲ್ಪನಿಕವಾಗಿದೆ. ಯಾವುದೇ
ಹೋಲಿಕೆಯು ಕಾಕತಾಳೀಯ. ಇದು ಕೆಟ್ಟ ಪದ ಹಾಗೂ ಕತೆಯನ್ನು ಬೆಂಬಲಿಸುವ ಪ್ರಣಯ
ದೃಶ್ಯಗಳನ್ನು ಒಳಗೊಂಡಿದೆ. ಯಾವುದೇ ಸಂಭಾಷಣೆ ಅಥವಾ
ಪಾತ್ರವನ್ನು ಯಾವುದೇ ವ್ಯಕ್ತಿ, ಜಾತಿ, ಸಂಸ್ಕೃತಿ, ಜನಾಂಗ ಅಥವಾ ಧರ್ಮ
ಅಥವಾ ಯಾವುದೇ ಸಂಸ್ಥೆ, ರಾಜಕೀಯ ಪಕ್ಷ, ವ್ಯಕ್ತಿಯನ್ನು ಅವಮಾನಿಸುವ ಸಲುವಾಗಿ ರಚಿಸಿಲ್ಲ.
ಇದು ಡ್ರಗ್, ಮದ್ಯ, ತಂಬಾಕು ಸೇವನೆಯನ್ನು ಪ್ರೋತ್ಸಾಹಿಸುವುದಿಲ್ಲ. ಚಿತ್ರೀಕರಣದಲ್ಲಿ ಯಾವುದೇ
ಪ್ರಾಣಿಗಳಿಗೆ ಹಾನಿಯಾಗಿಲ್ಲ. ಇಲ್ಲಿನ ಅನಿಸಿಕೆ, ಅಭಿಪ್ರಾಯಗಳನ್ನು ಅಮೆಜಾನ್ ಅನುಮೋದಿಸುವುದಿಲ್ಲ.
ಬಾಲ ಕಲಾವಿದರ ದುರುಪಯೋಗ, ನಿರ್ಲಕ್ಷ್ಯ, ಶೋಷಣೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.
ಚಿತ್ರೀಕರಣದ ವೇಳೆ ನೈಜ ಕರೆನ್ಸಿಯನ್ನು ಬಳಸಿಲ್ಲ.
ಸರಣಿಯ ವಿಷಯ ಸೂಕ್ಷ್ಮವಾಗಿದೆ. ವೀಕ್ಷಕರ ವಿವೇಚನೆಯನ್ನು ಪಾಲಿಸಿ.
ಬೇಗ, ಬೇಗ. ಅವರನ್ನು ಒಳಗೆ ತನ್ನಿ.
ಬಾಸ್ ಇವತ್ತೇ ಹೊರಡಬೇಕು.
ಹೋಗು! ಹೋಗು!
-ಸನ್ನಿ? -ಫಿರೋಝ್?
-ಸನ್ನಿ? -ಆರಾಮ ಇದೀಯಾ?
ಅವರು ನಂಗೆ ತುಂಬಾ ಹೊಡೆದ್ರು.
-ನೀನು ಆರಾಮಾ? -ಹಾಂ.
-ನೀನೇನಾದ್ರೂ ಮಾಡಿದ್ಯಾ? -ಇಲ್ಲ. ನೀನು?
ಇಲ್ಲ! ಸುಮ್ನೆ ವಿಡಿಯೋ ನೋಡ್ತಿದ್ದೆ.
ಶ್! ಯಾರೋ ಬರ್ತಿದಾರೆ.
ಮಿ. ಆರ್ಟಿಸ್ಟ್.
ಯಾರು ಮಾಡಿದ್ದು?
ನಿಜ ಹೇಳುವುದಾದರೆ,
ಭೂಮಿ ಮೇಲಿನ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಫೋಟೋನ ನಾವು ಅತಿ
ಮೋಸದ ವಸ್ತು ಮೇಲೆ ಪ್ರಿಂಟ್ ಮಾಡಿದೀವಿ.
ಎಂಥ ವಿಚಿತ್ರ ಅಲ್ವಾ?
ಫ಼ರ್ಝಿ
ಚಾಪ್ಟರ್ 1 ಆರ್ಟಿಸ್ಟ್
5 ನಿಮಿಷದಲ್ಲಿ ಯಾವುದೇ ಚಿತ್ರ ಕೇವಲ 500 ರೂಪಾಯಿ
ವಾವ್.
ಥ್ಯಾಂಕ್ಯೂ ಸರ್.
-ಸೂಪರ್ ಇದೆ ಅಲ್ವಾ! -ಹಾಂ, ಸೂಪರ್ ಇದೆ.
ಈ ವಾನ್ ಗೋ ನಿಮ್ದಾ?
ಹೌದು, ಸರ್.
ಏನೂ ವ್ಯತ್ಯಾಸ ಗೊತ್ತಾಗಲ್ಲ. ತುಂಬಾ ಚೆನ್ನಾಗಿದೆ.
-ಥ್ಯಾಂಕ್ಯೂ ಸರ್. -ಬೆಲೆ ಎಷ್ಟು ಇದಕ್ಕೆ?
6,000 ರೂಪಾಯಿ.
ಅಷ್ಟಕ್ಕೆ ಅಸಲಿಯೇ ಸಿಗುತ್ತೆ. ಎಷ್ಟಕ್ಕೆ ಕೊಡ್ತೀರ ಹೇಳಿ.
ನನ್ನ ಪ್ರಕಾರ ಇದರ ಬೆಲೆ ರೂ.1,000.
ನಿಜ ಪ್ರತಿ ಬಿಡಿಸೋಕೆ ತುಂಬಾ ಪ್ರತಿಭೆ ಬೇಕು, ಸರ್.
ಇದು ಅಸಲಿಯ ಪ್ರತಿರೂಪ.
ಅಯ್ಯೋ. ಎಷ್ಟೇ ಆದರೂ ನಕಲಿ ನಕಲೀನೇ ಅಲ್ವಾ.
ಇದನ್ನು ತೂಗಿಹಾಕಿದ್ರೆ ಜನ ಮೂಲ ಪ್ರತಿ ಅಂದುಕೊಳ್ತಾರಾ?
ನಿಮಗೆ 100 ಕೋಟಿ ಪೇಂಟಿಂಗ್ ತಗೊಳೋ ಯೋಗ್ಯತೆ ಇದ್ರೆ, ಜನ ಮೂಲಪ್ರತಿ ಅಂತ ನಂಬ್ತಾರೆ.
ನಾನು ಸಾವಿರ ರೂಪಾಯಿ ಕೊಡ್ತೀನಿ. ತಗೋ ಇಲ್ಲಾ ಬಿಡು.
ಜನಕ್ಕೆ ಕಲೆಯ ಬೆಲೆ ಗೊತ್ತಿಲ್ಲ.
ಇದರ ಮೇಲೆ ಪ್ರಸಿದ್ಧ ಚಿತ್ರಕಾರನ ಸಹಿ ಹಾಕಿದ್ರೆ ಎಲ್ಲರಿಗೂ ಬೇಕು, ಅದೂ ಕಡಿಮೆ ಬೆಲೆಗೆ.
ನಾನೂ ಅದನ್ನೇ ಮಾಡ್ತೀನಿ.
ಕೆಲವರು ಲ್ಯಾಂಡ್ಸ್ಕೇಪ್ ರಚಿಸ್ತಾರೆ, ಕೆಲವರು ಪೋರ್ಟ್ರೇಟ್, ಕೆಲವರು ಸ್ಟಿಲ್ ಲೈಫ್,
ಕೆಲವರು ಮಾಡರ್ನ್ ಆರ್ಟ್, ಆಯಿಲ್ ಪೇಂಟಿಂಗ್, ವಾಟರ್ ಕಲರ್, ಸ್ಕೆಚಸ್ ಮಾಡ್ತಾರೆ.
ಆದ್ರೆ ನಾನು ಎಲ್ಲದರಲ್ಲೂ ಪರಿಣತ. ನಾನು ಎಲ್ಲದರ ನಕಲು ಮಾಡಬಲ್ಲೆ.
ನಂಗೆ ಬೇರೆ ಯಾವುದೇ ಆಯ್ಕೆಯಿಲ್ಲ.
ಚಿತ್ರಕಾರ ಪ್ರಸಿದ್ಧನಲ್ಲಾಂದ್ರೆ ಯಾರೂ ಖರೀದಿಸಲ್ಲ.
ನನ್ನ ಅಜ್ಜ ಒಬ್ಬ ಮಹಾನ್ ಚಿತ್ರಕಾರ. ಅವರು ತಾವೇ ಮೂಲ ಚಿತ್ರಗಳನ್ನು ಬಿಡಿಸಿದ್ದಾರೆ.
ಅವರು ಮಹಾನ್.
ಆದರೆ ಪ್ರಸಿದ್ಧರಲ್ಲ.
ಆದರೆ ಅವರ ಮೆಚ್ಚಿನ ವಿಷಯ ಇನ್ನೊಂದಿದೆ. ಅದು ಅವರ ಕ್ರಾಂತಿ ಪತ್ರಿಕೆ.
ಕ್ರಾಂತಿ ಪತ್ರಿಕೆ
ಅದಂದ್ರೆ ಅಜ್ಜನಿಗೆ ಬಹಳ ಪ್ರೀತಿ, ನನಗಿಂತ ಹೆಚ್ಚು ಪ್ರೀತಿಸ್ತಾರೆ.
ಹೇಯ್, ಫಿರೋಝ್! ಏನು ಸಮಾಚಾರ?
ಅಜ್ಜ ನಿನ್ನ ಹುಡುಕ್ತಿದ್ರು.
ಅವರು ಏಳುವುದಿಲ್ಲ, ಮಲಗಲು ಬಿಡು ಅವರಿಗೆ.
ಎದ್ದೇಳಿ! ಇವನ್ನೆಲ್ಲ ತಗೊಂಡು ಹೋಗಿ.
ಅಷ್ಟು ಕೆಲಸ ಮಾಡಿಸಬೇಡ, ಸತ್ತೋಗ್ತಾರೆ.
ನಿಧಾನ ಹೋಗಿ. ತುಂಬಾ ಸಮಯವಿದೆ ನಿಮಗೆ.
ಹೊಸ ಪ್ರತಿಗಳು ಬಂದಿವೆ. ಕೇಳಿಸಿತಾ?
ನಿನ್ನ ಪೇಂಟಿಂಗ್ ಮಾರಾಟ ಆಯ್ತಾ?
ವಾವ್ ಚಿಕ್ಕಪ್ಪಾ, ಈ ವಾರದ ಪತ್ರಿಕೆ ಅದ್ಭುತವಿದೆ.
ಅಯ್ಯೋ ನಮಗೆ ಮಾತ್ರ ಅದ್ಭುತ ಅನ್ಸುತ್ತೆ. ನೋಡು, ಈಗ ಯಾರೂ ಪತ್ರಿಕೆ ತಗೋಳಲ್ಲ.
ಗುಜರಿ ಅಂಗಡಿಯವರು ದುಡ್ಡು ಮಾಡ್ತಿದಾರೆ.
-ಅಜ್ಜ ಮೇಲೆ ಇದ್ದಾರಾ? -ಹೌದು
ಕೇಳಿಲ್ಲಿ, ಅವರನ್ನು ಮನೆಗೆ ಕರ್ಕೊಂಡ್ ಹೋಗು.
ನಮ್ಮಿಂದ 15ಗಂಟೆ ಕೆಲಸ ಮಾಡಿಸ್ತಾರೆ
ಎಷ್ಟು ದೂರುತ್ತೀರಾ ಚಿಕ್ಕಪ್ಪಾ?
ಇರಲಿ ಬಿಡಿ. ಅಷ್ಟು ಕೆಲಸ ಮಾಡೋದ್ರಿಂದ ಈಗಲೂ ಆರಾಮಾಗಿದಾರೆ.
-ಹಾಸಿಗೆ ಹಿಡೀತಾರೆ. -ಅವರಲ್ಲ, ನಾವು ಹಾಸಿಗೆ ಹಿಡಿಯೋದು.
ಬೇಕಿದ್ರೆ ನಿದ್ದೆ ಮಾತ್ರೆ ಕೊಡು, ಮನೆಗೆ ಕರ್ಕೊಂಡ್ ಹೋಗು!
-ಆಗುತ್ತಾ ಅದು. -ಸನ್ನಿ...
ಸನ್ನಿ, ಇದನ್ನು ಮುಗಿಸು.
ಯಾಕೋ ಗೊತ್ತಿಲ್ಲ, ಇವತ್ತು ನನ್ನ ಕೈ ನಡುಗುತ್ತಾ ಇದೆ.
ಇವತ್ತಿನ ಸಂಚಿಕೆ ಓದಿದ್ಯಾ?
ಹೂಂ. ಅದ್ಭುತ, ಅಜ್ಜಾ.
ಸುಳ್ಳು. ನೀನು ನೋಡಿಯೂ ಇಲ್ಲ.
ಅಜ್ಜಾ, ನಾನು ಯಾವಾಗ್ಲೂ ನಿಮ್ಮ ಜೊತೆ ಇರ್ತೀನಿ ಇದರಲ್ಲಿ ಏನು ಬರೆದಿದೆ ಅಂತ ನಂಗೊತ್ತು.
ನಿಮ್ಮ ಪೀಳಿಗೆಯ ಸಮಸ್ಯೆಯೇ ಇದು.
ನೀವು ತುಂಬಾ ವಿಷಯ ನೋಡ್ತೀರಿ, ತುಂಬಾ ವಿಷಯ ಕೇಳ್ತೀರಿ,
ಆದ್ರೆ ಏನನ್ನೂ ಅರ್ಥಮಾಡಿಕೊಳ್ಳಲ್ಲ.
ಪತ್ರಿಕೆಯನ್ನು ಅಂತರ್ಜಾಲದಲ್ಲಿ ಪೋಸ್ಟ್ ಮಾಡು, ಆಗ ಮಕ್ಕಳು ಕನಿಷ್ಠ ಅದನ್ನು ನೋಡ್ತಾರೆ.
ಅಜ್ಜ, ಅಂಗಡೀಲಿ ಇಟ್ಟಿದ್ದನ್ನೇ ಯಾರೂ ತಗೋತಿಲ್ಲ, ನೀವು ಆನ್ಲೈನ್ ಆವೃತ್ತಿ ಬಗ್ಗೆ ಹೇಳ್ತಿದೀರಿ.
ಜನರಲ್ಲಿ ಜಾಗೃತಿ ಮೂಡಿಸಬೇಕು. ನಾನು ಕ್ರಾಂತೀನ ಜನರಿಗೆ ತಲುಪಿಸಬೇಕು ಅಂತಿದೀನಿ.
ಪೇಪರ್ ಮೂಲಕ ಆಗದಿದ್ರೆ, ಬೇರೆ ಯಾವುದೇ ರೀತಿಲಾದ್ರೂ.
ನಾನು ಹಗಲು ರಾತ್ರಿ ಕೆಲಸ ಮಾಡೋಕೆ ಸಿದ್ಧ. ಯಾರಾದ್ರೂ ಹೇಗಂತ ದಾರಿ ತೋರಿಸಿದ್ರೆ ಸಾಕು.
ತಗೋ.
ಒಂದು ಮಾತಿದೆ, ನಾವು ನಮ್ಮ ಸ್ನೇಹಿತರನ್ನು ಆರಿಸಬಹುದು, ಬಂಧುಗಳನ್ನಲ್ಲ.
ಫಿರೋಝ್ ನನ್ನ ಗೆಳೆಯ.
ಆದರೆ ಹಳೇ ಕಾಲದ ಈ ಕ್ರಾಂತಿ ಪತ್ರಿಕೆ ನನ್ನ ಸಂಬಂಧಿ.
ನಾನು ಅದನ್ನು ಎಷ್ಟೇ ದ್ವೇಷಿಸಿದರೂ ಜೀವನವಿಡೀ ಅದರ ಜೊತೆಗೇ ಇರಬೇಕು.
ಸಮಾಜವನ್ನು ಬದಲಿಸಬೇಕು ಅಂತ ಅಜ್ಜ ಕ್ರಾಂತಿ ಪತ್ರಿಕೆ ಆರಂಭಿಸಿದರು.
ಇಲ್ಲಿನ ಎಲ್ಲಾ ಕೆಲಸಗಾರರು ಅಜ್ಜನ ವಿಚಾರಧಾರೆ ಪ್ರಕಾರ ದುಡೀತಾರೆ.
-ಹೋಮ್ ವರ್ಕ್ ಕೊಟ್ಟರಾ? -ಹೂಂ.
ಶಾಲೆ ಮುಗಿದ ಮೇಲೆ ಎಲ್ಲಾ ಮಕ್ಕಳು ಆರಾಮವಾಗಿ ಆಟ ಆಡ್ತಿದ್ರು,
ಆದ್ರೆ ನಾವು ಕ್ರಾಂತಿ ಪೇಪರ್ ಮಾರಾಟ ಮಾಡ್ತಿದ್ವಿ.
ಆದರೆ ಯಾರೂ ಕೊಳ್ಳಲಿಲ್ಲ.
ದಯವಿಟ್ಟು, ತಗೊಳ್ಳಿ!
ಅಜ್ಜ ಹೇಳ್ತಾರೆ, ಕ್ರಾಂತಿ ಜಗತ್ತನ್ನು ಬದಲಿಸುತ್ತೆ.
ಬದಲಿಸೋಕೆ, ಮೊದಲು ಜನ ಅದನ್ನು ಓದ್ಬೇಕು.
ನನಗನ್ನಿಸುತ್ತೆ ಇದನ್ನು ತಗೊಂಡವರು ಕೂಡಾ ಇದನ್ನು ಓದೋದಿಲ್ಲ ಅಂತ.
-ಹೊರಗೆ ನೋಡುತ್ತಿರು. -ಹೋಗು!
ನಾವು ಉಳಿಸಿದ ಹಣವನ್ನು ಅಜ್ಜನ ಡ್ರಾಯರಲ್ಲಿಡ್ತಿದ್ವಿ.
ದುಡ್ಡು ಹೇಗೆ ಬರುತ್ತಿದೆ ಅಂತ ಅವರಿಗೆ ಗೊತ್ತಾಗುತ್ತಿರಲಿಲ್ಲ.
-ಎರಡು ಪೆಪ್ಸಿ ಕೊಡಿ. -ಬೇಡ, ಒಂದೇ ಕೊಡಿ.
ಇಲ್ಲೂ ನಾವು ದುಡ್ಡು ಉಳಿಸ್ಬೇಕಾ?
120 ರೂಪಾಯಿ, ಸೋಡಾದ 5 ರೂಪಾಯಿ ಕಳೆದು 115 ರೂಪಾಯಿ!
ಏನಾದ್ರೂ ಮಾಡಿ ದಿನಾ 500 ರೂಪಾಯಿ ಸಂಪಾದಿಸ್ಬೇಕು.
-ಜಾಸ್ತಿ ಆಯ್ತು, 100 ರೂಪಾಯಿ ಇರ್ಲಿ. -ಸರಿ 250 ಇರ್ಲಿ.
-ಅಂದ್ರೆ, ಎಷ್ಟು ದಿನ ಬೇಕು ನಾವು... -ಲಕ್ಷಾಧಿಪತಿ ಆಗೋಕಾ?
ಅಲ್ಲ, ಕೋಟ್ಯಾಧಿಪತಿ
109.75 ವರ್ಷ ಬೇಕು ನಾವು ಕೋಟ್ಯಾಧಿಪತಿ ಆಗೋಕೆ.
ದುಡ್ಡು ಉಳಿಸಿ ಯಾರಾದ್ರೂ ಶ್ರೀಮಂತರಾಗಿದ್ದಾರಾ?
ನಾವು ನಮ್ಮ ಬಾಲ್ಯ ಕಳೆದಿದ್ದು ಪ್ರೆಸ್ ಅಲ್ಲೇ.
ಇಪ್ಪತ್ತೈದು?
ನಂಗೆ ಅಜ್ಜನ ವರ್ಣಚಿತ್ರ ಇಷ್ಟ ಆಗ್ತಿತ್ತು, ಫಿರೋಝನಿಗೆ ಪ್ರೆಸ್ ಯಂತ್ರಗಳು.
ಅಜ್ಜ ನಂಗೆ ಚಿತ್ರಕಲೆ ಕಲಿಸಿದ್ರು,
ಫಿರೋಝಂಗೆ ಚಿಕ್ಕಪ್ಪ ಮುದ್ರಣ ಕಲಿಸಿದ್ರು.
ಒಂದು ವರ್ಷ ಅಜ್ಜ ಯಾವ ಕ್ರಾಂತಿ ಹರಡಿದ್ರಂದ್ರೆ, ಬರೀ ಬನ್ ತಿಂದು ಬದುಕಿದ್ವಿ.
ಬೆಳಗ್ಗೆ, ಸಂಜೆ, ಹಗಲು, ರಾತ್ರಿ ಬರೀ ಬನ್ ತಿಂದ್ವಿ.
ಬನ್, ಬನ್, ಬನ್.
ನಮ್ಮ ಬದುಕು. ''ಬನ್-ಧನ್'' ಆಗಿತ್ತು.
ಹ್ಯಾಪಿ ಬರ್ತ್ ಡೇ ಟು ಯೂ
ಕಟ್ ಮಾಡು!
ಸದ್ಯ ಇದರಲ್ಲಿ ಟುಟ್ಟಿ-ಫ್ರೂಟಿನಾದ್ರೂ ಇದೆ.
ನಮ್ಮ ಬದುಕು ಬರೀ ಬನ್ ಆಗಿಬಿಟ್ಟಿತ್ತು. ಬನ್ ಬಿಟ್ಟು ಬದುಕಿಲ್ಲ.
ನೋಡಲ್ಲಿ! 25,000 ರೂಪಾಯಿ.
ಇಲ್ಲ. ಕನಿಷ್ಠ 50,000.
ಅಲ್ಲಿ, ಅಲ್ಲಿ! ಅದಂತೂ ಪಕ್ಕಾ ಒಂದು ಲಕ್ಷ!
100,000 ರೂಪಾಯಿ
-75,000 ರೂಪಾಯಿ. -20,000 ರೂಪಾಯಿ.
20,000 ರೂಪಾಯಿ
50,000 ರೂಪಾಯಿ.
50,000 ರೂಪಾಯಿ
ಅದೂ ಒಂದು ಲಕ್ಷ ಇರುತ್ತೆ.
300,000 ರೂಪಾಯಿ
ಒಂದು ಕೋಟಿ!
10,000,000 ರೂಪಾಯಿ
ಯಾವಾಗ ಜೇಬಲ್ಲಿ ದುಡ್ಡಿರಲ್ವೋ ಆಗ ಎಲ್ಲಾ ಕಡೇನೂ ಬರೀ ದುಡ್ಡೇ ಕಾಣಿಸುತ್ತೆ.
ಹೇಗೆ ಇಷ್ಟು ಚಂದ ಕಾಣಿಸ್ತಿ?
ನಿಂಗೆ ನನ್ನ ಪ್ರಯತ್ನ ಕಾಣಿಸೋದೇ ಇಲ್ಲ.
ಹೊಸ ವರ್ಷದ ದಿನಕ್ಕೆ ಏನು ಯೋಜನೆ?
ನನ್ನ ಫ್ರೆಂಡ್ಸ್ ಕ್ಲಬ್ ವೆಲಾಸಿಟಿಯಲ್ಲಿ ಪಾರ್ಟಿ ಮಾಡ್ತಿದಾರೆ. ನಾನೂ ಅಲ್ಲಿಗೆ ಹೋಗ್ಬೋದು.
-ನಾನು ಕರ್ಕೊಂಡ್ ಹೋಗ್ತೀನಿ ಅಲ್ಲಿಗೆ. -ಪರವಾಗಿಲ್ಲ. ತುಂಬಾ ದುಬಾರಿ ಜಾಗ ಅದು.
ಬೇಬ್, ನಾನು ಹೋಗ್ಬೇಕು ಈಗ.
ಸರೀನಾ?
ನಂಗೆ ನಿನ್ನ ಆ ಕ್ಲಬ್ಗೆ ಕರೆದೊಯ್ಯಲು ಆಗಲ್ವ?
ನಾನು ಹಾಗೆ ಹೇಳಿಲ್ಲ, ಸನ್ನಿ.
ಅದು ತುಂಬಾ ದುಬಾರಿ ಅಂದೆ ಅಷ್ಟ್ರೇ.
ನಿಂಗೆ ಇವತ್ತೇನಾಗಿದೆ?
ಸರಿ. ನಿಂಗೆ ನನ್ನ ಜೊತೆ ಪಾರ್ಟಿ ಮಾಡ್ಬೇಕು ಅಂತಿದ್ರೆ,
ನಾವಿಬ್ರೂ ಕ್ಲಬ್ ವೆಲಾಸಿಟಿಗೆ ಹೋಗೋಣ. ಸರೀನಾ?
-ಸರಿ. -ಪ್ರಾಮಿಸ್.
ಸರಿ, ನಾನೀಗ ಹೋಗಲೇಬೇಕು.
ಐದು ನಿಮಿಷದಲ್ಲಿ ಹೊರಗೆ ಬಾ, ಸರೀನಾ?
ಕಾರಿನ ಕೀನ ಟೈರ್ ಮೇಲಿಡು.
ಬಾಯ್.
ಏಯ್, ನೀನು! ಇಲ್ಲಿ ಬೈಕ್ ಪಾರ್ಕ್ ಮಾಡೋ ಹಾಗಿಲ್ಲ.
-ಕೇಳಿಸ್ತಾ ಹೇಳಿದ್ದು? -ಹೊರಟೆ.
-ನಾನು ಹೊರಡ್ತಿದ್ದೀನಿ. -ಸರಿ. ಹೊರಡು!
ಸಾರಿ! ಸ್ಲಿಪ್ ಆಯ್ತು.
ಅವಳಲ್ಲಿ ಇವನಿಗೆ ಏನ್ ಕಾಣಿಸ್ತೋ? ಇವರೆಲ್ಲಾ ಒಂದೇ ಥರ!
ಬಾಯ್ ಫ್ರೆಂಡ್ ಬಡವ ಆಗಿದ್ರೂ ಸರಿ ಗಂಡ ಶ್ರೀಮಂತ ಇರಬೇಕು.
ಬೀದಿನಾಯೀನ ಮುದ್ದು ಮಾಡ್ತಾರೆ ಆದರೆ ಮನೆಗೆ ಶಿಜ಼ು ಕೊಳ್ತಾರೆ.
ನೀನು ಬರೀ ಸುತ್ತಾಡೋಕೆ ಸರಿ ಆದ್ರೆ, ನಿನ್ನನ್ನು ಅವಳು ತನ್ನ ವರ್ತುಲದೊಳಗೆ ಬಿಡ್ಕೊಳಲ್ಲ.
ಏನಾದ್ರೂ ಒಳ್ಳೇದು ಹೇಳು. ಯಾವಾಗ್ಲೂ ಇನ್ನೊಬ್ಬರಿಗೆ ಬೈತೀಯಾ.
ಅವಳು ನನ್ನ ಗರ್ಲ್ ಫ್ರೆಂಡ್.
ಪಾರ್ಕಿಂಗ್ ಅಲ್ಲಿ ಮಾತ್ರ ಗರ್ಲ್ ಫ಼್ರೆಂಡ್.
ನೀನು ನಿಜವಾಗ್ಲೂ ಅವಳ ಬಾಯ್ ಫ್ರೆಂಡ್ ಆಗಿದ್ರೆ,
ಅವಳ ಸ್ನೇಹಿತರಿಗೆ ಯಾಕೆ ಪರಿಚಯಿಸಿಲ್ಲ?
ನನ್ನನ್ನು ಬಿಟ್ರೆ ಬೇರೆ ಯಾರೂ ಈ ಕಹಿಸತ್ಯ ಹೇಳಲ್ಲ.
-ನಿಂಗೆ ಇನ್ನೊಂದು ಕಹಿಸತ್ಯ ಹೇಳ್ತೀನಿ. -ಹೇಳು.
ಅವಳು ನಿನ್ನ ಯೋಗ್ಯತೆಗೆ ಮೀರಿದವಳು ಆ ಕಾರಣಕ್ಕೇ ನೀನು ಅವಳ ಜೊತೆ ಇದ್ದೀಯ.
ನಿನ್ನ ಬಗ್ಗೆ ನನಗೆ ಗೊತ್ತಿಲ್ವ?
ಕೇಳಿಲ್ಲಿ.
ಸುಮ್ನೆ ಇರು ನೀನು.
ನೀನು ಹುಡುಗಿ ಹಿಂದೆ ಬಿದ್ದು ಹಣ ಹಾಳು ಮಾಡೋದು ಬಿಡು.
ನಮ್ಮ ದುಡ್ಡು ಖಾಲಿ ಆಗುತ್ತೆ. ಅವಳಿಗೆ ದೊಡ್ಡ ವಿಷಯವೇ ಅಲ್ಲ.
ಮಾತು ಕೊಟ್ಟಿದೀನಿ.
ಮುಂದಿನ ವರ್ಷ ದುಡಿಯೋಣ ಅದನ್ನು. ಎಷ್ಟು ಬೇಕಾಗ್ಬೋದು ಅಲ್ಲಿ ಹೋಗೋಕೆ?
ಒಂದು ಜೋಡಿಗೆ 27,000 ರೂಪಾಯಿಗಳು. ಆದರೆ ನೀವು ಜೋಡಿ ಅಲ್ಲ.
ಅಂದರೆ, ಒಬ್ಬರಿಗೆ 27,000 ರೂಪಾಯಿಗಳು.
27,000 ರೂಪಾಯಿಗಳು?
-27,000 ರೂಪಾಯಿಗಳು. -ಅನುವಾದ ಮಾಡೋದೇನೂ ಬೇಡ.
ಒಂದು ನಿಮಿಷ.
ಯಾಕೆ ಅಷ್ಟು ದುಬಾರಿ?
ಸರ್, ಇಲ್ಲಿ ಅದ್ದೂರಿ ಪಾರ್ಟಿ ನಡೆಯುತ್ತೆ.
27,000 ರೂಪಾಯಿ.
ಡಿಸ್ಕೌಂಟ್ ಹಾಕಿ ಹೇಳಿ ಎರಡು ಟಿಕೆಟಿಗೆ ಎಷ್ಟು ದುಡ್ಡು ಬೇಕು?
ಒಂದು ಐಡಿಯಾ, ಹೊರಗೆ ಹೋಗಿ ಐದಾರು ಕ್ವಾಟರ್ ಬಾಟಲಿ ತಗೋಳಿ
ಟೆರೇಸ್ ಅಲ್ಲಿ ಜಿಗಜಿಗ ಲೈಟ್ ಹಾಕಿ ಇಷ್ಟ ಬಂದ ಹಾಡು ಹಾಕಿ,
ಸ್ನೇಹಿತರ ಜೊತೆ ನಿಮ್ಮ ವರ್ಗದ ಪಾರ್ಟಿ ಮಾಡಿ ಮಜಾ ಇರುತ್ತೆ. ಹೊರಡಿ ಇಲ್ಲಿಂದ.
ಕುಲದೀಪ್. ಕುಲದೀಪ್ ಶರ್ಮಾ.
No comments yet. Be the first to leave one.