Ride or Die

Ride or Die

Download Kannada Subtitle

Season 1

Release info

Ride or Die S01E01 The Book of Judith 1080p WEBRip 10Bit DDP5 1 x265-NeoNoir
A Commentary by chargephoton88

Tags

webdl
Published on: 2026-08-21
Downloads: 0
Hearing Impaired: No
FPS: 23.976

Kannada subtitle preview

The first 200 lines.

ಆಸ್ಟ್ರಿಯಾ

ಒಲೆಗ್ ವಿಕ್ಟೋರೊವಿಚ್ - ದ ಸ್ಪೈಡರ್ ಕಮಿಷನ್: 1.5 ದಶಲಕ್ಷ ಡಾಲರ್

ಗುರಿ ಲಾಕ್ ಮಾಡಲಾಗಿದೆ. ಗಾಳಿಯ ವೇಗ 2.4.

ಗುಂಡು ಹೊಡೆ.

ಗುರಿ ಲಾಕ್ ಆಗಿದೆ.

ಗುಂಡು ಹೊಡೆ.

ವಿಪ್ಟೇಲ್, ಗುಂಡು ಹೊಡೆ.

ವಿಪ್ಟೇಲ್, ಇಲ್ಲ. ಏನು ಮಾಡು…

ಓ ದೇವರೇ, ವಿಪ್ಟೇಲ್. ಪುನಃ ಹಾಗೇ ಮಾಡಬೇಡ. ಬೇಡ.

ಬೇಡ.

ನಿನ್ನ ಸಹೋದರ ನಿನಗೆ ಶುಭ ಹಾರೈಸಿದ್ದಾನೆ.

ಸ್ಕೀ ಬೋಧಕ!

ಮೊದಲ ಯತ್ನದ ಯಶಸ್ಸು.

- ಮತ್ತೆ ಅದೇನಾ? - ನಮಸ್ತೆ. ಹೌದು.

ಎಂಟು.

ಅಥವಾ ಒಂಭತ್ತು.

ಜರ್ಮನ್ನರು ಅದನ್ನು ಬ್ರೂಡರ್ಶಾಫ್ಟ್ ಎಂದು ಕರೆಯುತ್ತಾರೆ.

ಭ್ರಾತೃತ್ವ.

ಜರ್ಮನ್ ಮಾತನಾಡುತ್ತೀರಾ?

ಸ್ವಲ್ಪ.

ಹೇ…

ಕೆಲಸ 2:00 ಕ್ಕೆ ಮುಗಿಯುತ್ತೆ.

ಓ ದೇವರೇ.

ಏನು ಕೆಲಸ ಮಾಡುತ್ತೀಯ ಎಂದು ಹೇಳಿದೆ?

ನಾನು ಅಕೌಂಟೆಂಟ್.

ಹಾಗಾದರೆ,

ನಿನಗೆ ಕರೆ ಮಾಡಬಹುದಾ?

ಖಂಡಿತ ಇಲ್ಲ.

ನೀನು ಯಾರು?

ನಾನು ಯಾರಾ? ಒಳ್ಳೆಯ ಪ್ರಶ್ನೆ.

ಬ್ಯಾಗ್‌ನಲ್ಲಿರುವ ಪಾಸ್‌ಪೋರ್ಟ್‌ನಲ್ಲಿರುವುದು "ಜೂಡಿಥ್ ಬರ್ಟನ್, ಫೋರೆನ್ಸಿಕ್ ಅಕೌಂಟೆಂಟ್".

ಕೆಲಸ ಎಷ್ಟು ಗೊಂದಲಮಯ ಮತ್ತು ನೀರಸವಾಗಿದೆಯೆಂದರೆ,

ಯಾರೂ ಅದು ಎಂತಹ ಕೆಲಸ ಎಂದು ಕೇಳುವುದಿಲ್ಲ.

ಆದರೆ ನನ್ನ ಬಳಿ ಎಫ್‌ಬಿಐ, ಸಿಐಏ, ಎಂಐ6, ಸ್ಪೆಷಲ್ ಆಪ್ಸ್‌ನ ಐಡಿ ಬ್ಯಾಡ್ಜ್‌ಗಳಿವೆ.

ನಿಮ್ಮ ದೇಶ ಮಿಲಿಟರಿ ಗುಪ್ತಚರ ಘಟಕ ಹೊಂದಿದ್ದರೆ,

ನಾನಲ್ಲಿ ಕೆಲಸ ಮಾಡುವ ಬ್ಯಾಡ್ಜ್ ನನ್ನ ಬಳಿ ಇದೆ.

ನನ್ನ ಹೆಸರು ವಿಪ್ಟೇಲ್.

ಮತ್ತು ನನ್ನ ಕೆಲಸ ಜನರನ್ನು ಕೊಲ್ಲುವುದು.

ಲಂಡನ್

ರಕ್ತ ಚಿಮ್ಮುವಿಕೆಯ ಬಗ್ಗೆ ನಾವು ಹೇಳಿದೆವು…

ಕ್ರೈಮ್ಸ್ ಪಾಡ್‌ಕಾಸ್ಟ್

ಚಾಕುವಿನ ಕೋನ…

ರೈಲ್ ಚೇರ್ಮನ್ ಸಾರಿಗೆ ಮಸೂದೆಯ ವಿರುದ್ಧ

- ಒಂದು ವಿಷಯ ಅವರು ಪರಿಗಣಿಸಿರಲಿಲ್ಲ. - ದೇವರೇ, ಏನದು?

ಅವನು ಎಡಗೈಯವನಾಗಿದ್ದ.

ಆಸ್ಟ್ರಿಯದ ಸ್ಕೀ ರೆಸಾರ್ಟ್ ಇಂದು ಬೆಳಿಗ್ಗೆ ಆಘಾತಕ್ಕೊಳಗಾಯಿತು--

ಛೇ.

ಅಲ್ಲಿ ಜಾಗ ಸಾಕಾಗಲ್ಲ.

ಹೋಗು, ಒಳ ಹೋಗು.

ದೇವರೇ.

ಛೇ.

ಹಲೋ. ನಾನು… ನೀನು ಏದುಸಿರು ಬಿಡುತ್ತಿದ್ದೀಯ.

- ಪಾರ್ಕಿಂಗ್? - ಪಾರ್ಕಿಂಗ್.

ಹೌದು. ಹೇಗಿದ್ದೀಯ? ಅಕೌಂಟಿಂಗ್ ಸಮ್ಮೇಳನ ಹೇಗಿದೆ?

ನೀರಸವಾಗಿದೆ. ಮುಂಚೆ ಇದ್ದ ಹಾಗೇ ಇದೆ.

ಇಷ್ಟರಲ್ಲೇ ಮನೆ ಸೇರುತ್ತೇನೆ, ಹಾಗಾಗಿ ಬುಕ್ ಕ್ಲಬ್‌ಗೆ ಬರುತ್ತೇನೆ.

ನಾನು ತಲುಪಿದ್ದೇನೆ. ಕೇಳು, ನಾನು ಮಾತನಾಡಲಾರೆ.

- ನಾನು ಮುಖ್ಯವಾದ ಕೆಲಸದಲ್ಲಿದ್ದೇನೆ. - ಶುಭವಾಗಲಿ.

ಆ ದೀಪಗಳು ಅಥವಾ ತಾಮ್ರದ ಹರಿವಾಣಗಳು ಕಂಡರೆ…

ಮತ್ತು ಆ ಔಷಧಿ ಸಂಗ್ರಹದ ಕ್ಯಾಬಿನೆಟ್ ಅಲ್ಲಿದ್ದರೆ--

ನಿನ್ನ ಪಟ್ಟಿ ನನ್ನ ಬಳಿ ಇದೆ. ನಾನು ಮರೆಯಲ್ಲ.

ಕೇಳು, ನಾನು ಒಳ್ಳೆಯ ಜಾಗ ಹುಡುಕಿಕೊಳ್ಳಬೇಕು.

- ಲವ್ ಯು. - ಐ ಲವ್ ಯು!

ಬೈ.

ಸೆಕ್ಯುರಿಟಿ

ಜ್ಯಾಕ್ ಟೀ ವ್ಯಾಗನ್

ಮಹಿಳೆಯರೆ ಮತ್ತು ಮಹನೀಯರೆ, ಸುಸ್ವಾಗತ! ದಯವಿಟ್ಟು, ಗಾಬರಿಯಾಗಬೇಡಿ.

ಪುರಾತನ ಗೋದಾಮು ಒಂದೆರಡು ನಿಮಿಷಗಳಲ್ಲಿ ತೆರೆಯುತ್ತದೆ.

ಆಕಸ್ಮಿಕವಾಗಿ ವ್ಯಾನ್‌ನಲ್ಲಿ ನನಗೆ ಎರಡು ಚಹಾ ನೀಡಿದರು.

ನಾನು ಎರಡು ಚಹಾ ಕುಡಿಯಲಾರೆ,

ಮತ್ತು ಚಳಿಯಲ್ಲಿ ಆಚೆ ನಿಲ್ಲುವುದು ಕಷ್ಟಕರವಾಗಿರಬೇಕು.

ಹಾಗಾಗಿ, ನೀವು ಕುಡಿಯಬಯಸುವಿರೇನೋ ಅನಿಸಿತು.

ಹೌದು, ಧನ್ಯವಾದ.

ಪರವಾಗಿಲ್ಲ.

ನೀವು ಊಹಿಸುವುದಾದರೆ, ಇವುಗಳಲ್ಲಿ ಯಾವ ಬಾಗಿಲನ್ನು ಮೊದಲು ತೆರೆಯುತ್ತಾನೆ?

ಡಿ.

ತುಂಬಾ ಧನ್ಯವಾದ. ನಿಮ್ಮ ದಿನ ಅದ್ಭುತವಾಗಿರಲಿ.

ಅವರ ಬಳಿ ಬ್ರಿಟಿಷರ ಕಾಲದ ಔಷಧಿ ಸಂಗ್ರಹದ ಸುಂದರ ಕ್ಯಾಬಿನೆಟ್ ಇದೆ.

ನಾನು ಅದನ್ನು ಪಡೆಯದೆ ಹೋಗಲಾರೆ.

ಹೇ, ನೋಡು!

ದಯವಿಟ್ಟು, ದಯವಿಟ್ಟು, ಗಾಬರಿಯಾಗಬೇಡಿ.

ಸಮಾಧಾನ! ಗಾಬರಿಯಾಗಬೇಡಿ!

ಮಾರಾಟವಾಗಿದೆ

ಛೇ.

ಅದು ಯಾರು?

ಆ ಸಂಸದರ ಪತ್ನಿ ಅಲ್ಲವಾ ಅವರು?

"ಅದು ಯಾರು"?

ಅದ್ಭುತ ಪ್ರಶ್ನೆ. ಮತ್ತು, ಹೌದು, ನಾನು ಆ ಸಂಸದರ ಪತ್ನಿಯೇ.

ಡೇವಿಡ್ ಕ್ಲೇಬೋರ್ನ್, ಸಂಸತ್ ಸದಸ್ಯ.

ನಿಮ್ಮ ಮತ ನಮಗೇ ಸಿಗುತ್ತದೆ ಅಂದುಕೊಳ್ಳುತ್ತೇನೆ.

ನಾನು ಯೇಲ್‌ನಲ್ಲಿ ಲಾ ರಿವ್ಯೂಗೆ ಆಯ್ಕೆಯಾದೆ,

ಪ್ರೀತಿಯಲ್ಲಿ ಬಿದ್ದು ಇಂಗ್ಲೆಂಡಿಗೆ ಸ್ಥಳಾಂತರವಾದೆ, ಇಬ್ಬರು ಮಕ್ಕಳನ್ನು ಬೆಳೆಸಿದೆ

ಮತ್ತು ಈಗ ಒಬ್ಬಳೇ ಆ ವ್ಯಕ್ತಿಯನ್ನು ಮುಂದಿನ ಪ್ರಧಾನಮಂತ್ರಿಯನ್ನಾಗಿ ಮಾಡುತ್ತಿದ್ದೇನೆ.

ಆದರೆ ನನ್ನ ಬಳಿ ಒಂದು ರಹಸ್ಯವಿದೆ, ಅದು ನನ್ನ ಜೀವನವನ್ನೇ ಚೂರುಚೂರಾಗಿಸಬಹುದು.

ನನ್ನ ಹೆಸರು ಡೆಬ್ಬಿ ಕ್ಲೇಬೋರ್ನ್.

ನಾಳೆ ಬುಕ್ ಕ್ಲಬ್ ಇದೆ,

ಮತ್ತು ನಾನು ಪುಸ್ತಕ ಓದಿಲ್ಲ.

ರೈಡ್ ಆರ್ ಡೈ

ಇಗೋ ಬಂದಳು.

ನೀನು ನನಗೆ ರೆಸ್ಟೋರೆಂಟ್‌ನ ಹೆಸರನ್ನು ಹೇಳಬಹುದು, ಸ್ಯಾಮ್.

ಯಾವಾಗಲೂ ನನಗೆ ಎನ್‌ಕ್ರಿಪ್ಟ್ ಮಾಡಿದ ನಿರ್ದೇಶಾಂಕಗಳನ್ನು ನೀಡಬೇಕಾಗಿಲ್ಲ.

ದಯವಿಟ್ಟು. ನಿರ್ದೇಶಾಂಕಗಳು ಪ್ರೋಟೋಕಾಲ್.

ನನ್ನ ಯಾಕೆ ಕರೆದೆ?

ನೆಚ್ಚಿನ ಆಪರೇಟಿವ್ ಅನ್ನು ನೋಡಲು ನನಗೆ ಕಾರಣ ಬೇಕೇ?

- ಅಂದರೆ ನಿನಗೆ ಕೋಪ ಬಂದಿಲ್ಲವೇ? - ಯಾಕೆ ಕೋಪ ಮಾಡಿಕೊಳ್ಳಲಿ?

ಅದ್ಭುತ. ನಿನಗೆ ಕೋಪ ಬಂದಿಲ್ಲ.

ನನಗೆ ಖಂಡಿತ ಕೋಪ ಬಂದಿದೆ.

ಆ ಸ್ನೈಪರ್ ರೈಫಲ್‌ಗೆ ಒಂದು ಕಿಲೋಮೀಟರ್ ವ್ಯಾಪ್ತಿ ಇದೆ.

ಆದರೆ ಈಗ, ಒಬ್ಬಳು ಸ್ಕೀ ಬೋಧಕಿ

ವಾಂಟೆಡ್ ಕ್ರಿಮಿನಲ್ ಅನ್ನು ಸಾಯಿಸಿದ್ದನ್ನು ನೋಡಿದ 100 ಪ್ರತ್ಯಕ್ಷ ಸಾಕ್ಷಿಗಳಿದ್ದಾರೆ.

- ಮಚ್ಚು ಅಲ್ಲವಾ? - ಮಾಂಸ ಕತ್ತರಿಸುವ ಚಾಕು.

ಮಾಂಸ ಕತ್ತರಿಸುವ ಚಾಕುವಾ?

ಸಿಕ್ಕಿಹಾಕಿಕೊಳ್ಳಲು ಮಾಡಿದಂತಿದೆ.

ಮುಂಚೆ ಪ್ರತಿಯೊಂದು ಯೋಜನೆ, ಪ್ರತಿಯೊಂದು ಕಂಪನಿ ನಿಯಮವನ್ನು ಅಕ್ಷರಶಃ ಅನುಸರಿಸುತ್ತಿದ್ದೆ.

ನೀನು ಗೋಲ್ಡ್ ಸ್ಟ್ಯಾಂಡರ್ಡ್ ಆಗಿದ್ದೆ.

ಮತ್ತು ಈಗ ನೀನು ಮುಟ್ಟಿದ್ದೆಲ್ಲವೂ ಅವ್ಯವಸ್ಥೆಗೆ ತಿರುಗುತ್ತಿದೆ.

ಕೆಲಸ ಮುಗಿಯುತ್ತದೆ. ನಿನಗೆ ಹಣ ಸಿಗುತ್ತದೆ. ನಾನು ಹಣ ಪಡೆಯುತ್ತೇನೆ. ಕ್ಲೈಂಟ್‌ಗೆ ಸಂತೋಷವಾಗುತ್ತದೆ.

ನೀನು ಚಿಂತಿಸಬೇಕಾದದ್ದು ಕ್ಲೈಂಟ್ ಬಗ್ಗೆ ಅಲ್ಲ.

ನಿರ್ದೇಶಕರು ನಿನ್ನ ಫೈಲ್‌ಗಳನ್ನು ಪರಿಶೀಲಿಸುತ್ತಿದ್ದಾರೆ.

- ಒಂದು ಕೆಲಸದಿಂದಾಗಾ? - ಕೇವಲ ಒಂದು ಕೆಲಸದಿಂದಾಗಿ ಅಲ್ಲ.

ಬೈರುತ್, ಬ್ರಸೆಲ್ಸ್. ದುಬೈನಲ್ಲಿ ಏನಾಯಿತು ಎಂದು ನೆನಪಿಸಬೇಕಾ?

ನೀನು ಎಲ್ಲಿ ಸಿಕ್ಕಿದೆ ಎಂದು ನೆನಪಿಸಬೇಕಾ?

ನೀನು ನನಗಾಗಿ ಮಾಡಿದ ಎಲ್ಲವನ್ನೂ ನಾನು ಪ್ರಶಂಸಿಸುತ್ತೇನೆ.

ಆದರೆ ಗಂಭೀರವಾಗಿ, ನಿನಗೇನಾಗುತ್ತಿದೆ?

ವಯಸ್ಸು 50 ಆದ ಕಾರಣವಾ?

ನನಗೆ 50 ಆಗಿಲ್ಲ.

ಇಲ್ಲವಾ? ನಿನ್ನ ನಕಲಿ ಗುರುತೊಂದಕ್ಕೆ ಈಗಷ್ಟೇ 50 ವರ್ಷವಾಗಿದೆ.

ನನಗೆ ಅರ್ಥವಾಗುತ್ತದೆ, ನಕಲಿ ಗುರುತಿಗೆ 50 ಆಗುವುದು,

ಗಾಬರಿಗೊಳಿಸುವ ವಿಷಯವೇ.

ನನ್ನ ಅಮ್ಮನಿಗೆ ಕಳೆದ ವರ್ಷ 50 ವರ್ಷವಾಯಿತು, ಮತ್ತು ಅವಳು ತಲೆ ಕೆಟ್ಟ ಹಾಗೆ ಆಡುತ್ತಿದ್ದಳು.

ಹೋಗಲಿ, ನಮ್ಮ ಕಡೆಯಿಂದ ನಿನಗೊಂದು ಸಣ್ಣ ಉಡುಗೊರೆ.

ಏನಿದು?

ಇದು ಪಾಟೆಕ್ ಫಿಲಿಪ್,

- ಗ್ರ್ಯಾಂಡ್ ಕಾಂಪ್ಲಿಕೇಶನ್ಸ್-- - ಹೌದು.

ನನಗೆ ವಾಚ್ ಏಕೆ ಕೊಡುತ್ತಿದ್ದೀಯ?

ನಿವೃತ್ತಿಯ ಉಡುಗೊರೆಯಾ?

ನೀನು ಬಯಸಿದರೆ.

- ಎಷ್ಟು? - ಎಷ್ಟು ಏನು?

ಗೊತ್ತಿಲ್ಲ ಎನ್ನುವಂತೆ ನಟಿಸಬೇಡ.

ಮೂವರು ವೈಟರ್‌ ಬಳಿ ಶಸ್ತ್ರ ಇದೆ.

ಹೊಸ್ಟೆಸ್ ತನ್ನ ತೊಡೆಯ ಮೇಲೆ ರಿವಾಲ್ವರ್ ಕಟ್ಟಿಕೊಂಡಿದ್ದಾಳೆ,

ಬಾರಿನಲ್ಲಿದ್ದವನ ಬೆರಳಿನ ಗೆಣ್ಣು ನೋಡು, ಕೀಬೋರ್ಡ್‌ನಲ್ಲಿ ಕೆಲಸ ಮಾಡಿ ಹಾಗಾಗಿಲ್ಲ.

ಐದು.

ಸರಿ. ಏಳು.

ಎಂಟು. ಪ್ರಾಮಾಣಿಕವಾಗಿ. ಅವರೆಲ್ಲ ಮುನ್ನೆಚ್ಚರಿಕೆಗಾಗಿ ಮಾತ್ರ.

ನಿಸ್ಸಂಶಯವಾಗಿ, ನೀನು ಹಿಂದೆ ಸರಿಯುವ ಬಗ್ಗೆ ಶಾಂತವಾಗಿ ಚರ್ಚಿಸಿದ ನಂತರ

ನಾವಿಬ್ಬರೂ ಹಾನಿಗೊಳಗಾಗದೆ ಆಚೆ ಹೋಗಬೇಕೆಂದು ನಾನು ಬಯಸುತ್ತೇನೆ.

ನಾನು ಹಿಂದೆ ಸರಿಯುವುದಿಲ್ಲ.

ಹೌದು, ನೀನು ವಮ.

- ನಾನು ಏನು? - ವಮ. ವಯಸ್ಸಾದ ಮಹಿಳೆ.

ನನಗೆ ಕಾರಣ ತಿಳಿದಿಲ್ಲ, ಆದರೆ ಊಹಿಸಬೇಕಾದರೆ,

ನಿನಗೆ 50 ಆದ ಕಾರಣದಿಂದಾಗಿ, ನೀನು ವಿಚಿತ್ರವಾಗಿ ವರ್ತಿಸುತ್ತಿರುವೆ, ಸರಿಯಾ?

ಮತ್ತು ಇದು ನಮ್ಮೆಲ್ಲರಿಗೂ ಅಪಾಯಕಾರಿ.

ಅದು ನನ್ನ ಮುಂದಿನ ಕೆಲಸವಾ? ಏಕೆಂದರೆ ನಾನು ಎಲ್ಲಿಯೂ ಹೋಗುವುದಿಲ್ಲ.

ಸರಿ. ನೀನು ಮಾಡಬೇಕೆಂದು ವಿನಂತಿಸಿ ಒಂದು ಕೆಲಸ ಬಂದಿದೆ.

ನಿನ್ನನ್ನು ನಂಬಲು ಸಾಧ್ಯವಿಲ್ಲ ಎಂದು ನಿರ್ದೇಶಕರು ಹೇಳಿದರು. ನಾನು ಅವರಿಗೆ ಭರವಸೆ ನೀಡಿದ್ದೇನೆ.

ನಾನು ನಿನಗಾಗಿ ಗಂಭೀರ ಅಪಾಯವನ್ನು ತೆಗೆದುಕೊಂಡಿದ್ದೇನೆ,

ನೀನು ಇದನ್ನು ಮಾಡುವಂತಿದ್ದರೆ,

ತಪ್ಪಿಗೆ ಆಸ್ಪದವೇ ಇಲ್ಲ, ನಿಯಮ ಉಲ್ಲಂಘನೆ ಬೇಡ. ಸರಿಯಾ?

ಸರಿ.

ಬಿಲ್ಲಿ ಡೊನೊವನ್?

ನಾನು ಯುದ್ಧ ಅಪರಾಧಿಗಳ ಕೆಲಸ ಮಾಡುತ್ತೇನೆ. ಅಪರಾಧ ಮಾಫಿಯಾಗಳ ಕೆಲಸಗಳನ್ನಲ್ಲ.

- ಈಗಷ್ಟೇ ಇದನ್ನು ನಿಯಮಾನುಸಾರವಾಗಿ-- - ಇಲ್ಲ--

- …ಮಾಡಲು ಒಪ್ಪಿಕೊಂಡೆವು. - ಸರಿ.

ಏನೂ ಸಂಶಯ ಬರದಂತೆ ಮಾಫಿಯಾದ ಮನಿ ಲಾಂಡರಿಂಗ್ ಮಾಡುವ

ದಾನ ಸಂಸ್ಥೆಯಾದ ವಾಟರ್ ರಿಲೀಫ್‌ ನಡೆಸುವ

ಚಾರಿಟಿಯಲ್ಲಿ ಮಾಡಬೇಕೆಂದು ಕ್ಲೈಂಟ್‌ ತಿಳಿಸಿದ್ದಾರೆ.

ಅನುಮಾನ ಬರಬಾರದು. ಅದಕ್ಕೇ ವಿಷದಿಂದ ಕೆಲಸ ಮುಗಿಸಬೇಕು.

ಹೃದಯಾಘಾತ.

ನಮ್ಮಿಬ್ಬರಿಗೂ ಗೊತ್ತು, ವಿಷ ಹೇಡಿಗಳ ಆಟ.

- ಆ ವೈಭವ ಎಲ್ಲಿದೆ? - ಅದನ್ನೇ ಹೇಳುತ್ತಿದ್ದೇನೆ.

ಇನ್ನು ಮುಂದೆ ಏನೇ ಮಾಡಿದರೂ ವೈಭವ ಬೇಡ.

ವಿಪ್ಟೇಲ್, ಗಂಭೀರವಾಗಿದ್ದೇನೆ.

ನೀನು ಈ ಕೆಲಸವನ್ನು ಸರಿಯಾಗಿ ಮಾಡಬೇಕು, ಇಲ್ಲದಿದ್ದರೆ ಅವರು ಒಪ್ಪಂದವನ್ನು…

ಕೊನೆಗೊಳಿಸುತ್ತಾರೆ.

ವಿಪ್ಟೇಲ್, ಇದು ನಿನ್ನ ಕೊನೆಯ ಅವಕಾಶ.

ಜನ್ಮದಿನದ ಶುಭಾಶಯಗಳು.

ಮುಚ್ಚಿಕೊಂಡು ಹೋಗು.

ನೀನೂ ಅಷ್ಟೇ, ಡ್ಯಾನಿ!

- ಕ್ಷಮಿಸು. ನನಗೆ ಹಣದ ಅವಶ್ಯಕತೆಯಿತ್ತು. - ನಾಚಿಕೆ ಇಲ್ಲದವನೇ.

ಇದನ್ನು ತೆಗೆದುಕೋ, ದಯವಿಟ್ಟು.

ನಮಗೆ ಬೇಡದ ಇನ್ನಷ್ಟು ವಸ್ತುಗಳು.

ಇದೇನು?

ಒಲೆತಟ್ಟೆ.

"ಒಲೆತಟ್ಟೆ." ಇದೊಂದು ಮರದ ತುಂಡು. ಈ ಹಂದಿ ಏನು?

ಅದು ಸಾರಿಗೆ ಮಸೂದೆ‌ಗೆ.

- ಇದು ಹೇಗೆ ಸಾರಿಗೆ ಮಸೂದೆ‌ಗೆ ಸಹಾಯ ಮಾಡುತ್ತೆ? - ನೀನು ತಿಳಿಯಬೇಕಾದ ವಿಷಯವಲ್ಲ.

ಈಗ ನೀನು ತಿಳಿಯಬೇಕಿರುವುದು ನಾನು ನಿನಗೋಸ್ಕರ ಅಡುಗೆ ಮಾಡಿದ್ದೇನೆಂದು.

ಮೀನಿನ ಪೈ? ಮ್ಯಾಕರೋನಿ ಜೊತೆಗೆ?

- ನೀನಿಲ್ಲದೆ ನಾನು ಏನು ಮಾಡುತ್ತೇನೆ? - ಹಸಿದಿರುತ್ತೀಯ.

ಓಹ್, ಬೇಡ.

ಹೌದು. ನೀನು ಸಾರಿಗೆ ಮಸೂದೆ‌ ಬಗ್ಗೆ ಮಾಡಬೇಕಾದ ಭಾಷಣವನ್ನು ಒಮ್ಮೆ ಪರಿಶೀಲಿಸಬೇಕು.

- ನನ್ನ ಟಿಪ್ಪಣಿ. - ಇನ್ನಷ್ಟು ಟಿಪ್ಪಣಿಯಾ? ಬಾಯಿಪಾಠ ಮಾಡಿದ್ದೇನೆ.

ನಿನಗೆ ಪ್ರಧಾನಿಯಾಗಬೇಕಾ?

ಹೌದು.

ಹಾಗಾದರೆ, ಭಾಷಣವನ್ನು ಬಾಯಿಪಾಠ ಮಾಡು, ನಾವು ನಾಳೆ ಅದನ್ನು ಪುನಃ ನೋಡೋಣ.

ಹಠಾತ್ತಾಗಿ

ಹೇಳುತ್ತಿದ್ದೇನೆ, ಚಾರಿಟಿ ಈವೆಂಟ್‌ನಲ್ಲಿ ನಾಳೆ ರಾತ್ರಿ ಕ್ಲೈಂಟ್ ಭೇಟಿಗೆ ಹೋಗುತ್ತಿದ್ದೇನೆ.

- ಯಾವ ಚಾರಿಟಿ? - ವಾಟರ್ ರಿಲೀಫ್.

- ನಾವು ವಾಟರ್ ರಿಲೀಫ್‌ನ ದಾನಿಗಳಲ್ಲ. - ಗೊತ್ತು. ಆದರೆ ಇದು ವ್ಯವಹಾರದ ಬಗ್ಗೆ.

Comments

No comments yet. Be the first to leave one.

Keep it about this subtitle — sync, quality, typos.500 characters left