The first 200 lines.
ಈ ಸರಣಿಯು ಕೇವಲ ಕಾಲ್ಪನಿಕ. ತೋರಿಸಿರುವ ಹೆಸರುಗಳು, ಸ್ಥಳಗಳು, ಘಟನೆಗಳು ಕಾಲ್ಪನಿಕ.
ಯಾವುದೇ ಹೋಲಿಕೆಯಿದ್ದಲ್ಲಿ ಅದು ಸಂಪೂರ್ಣ ಕಾಕತಾಳೀಯ.
ಸಂವಾದಗಳಲ್ಲಿ ಯಾವುದೇ ಸಮುದಾಯವನ್ನು ನೋಯಿಸುವ ಉದ್ದೇಶ ಇಲ್ಲ. ಸರಣಿಯು ಕೆಟ್ಟ ಪದಗಳನ್ನು ಒಳಗೊಂಡಿದೆ.
ಈ ಸರಣಿಯು ಯಾವುದೇ ನಶೆಗಳ ಬಳಕೆಯನ್ನು ಅಥವಾ ನಿಸರ್ಗಾತೀತ ಅಭ್ಯಾಸಗಳನ್ನು ಅನುಮೋದಿಸುವುದಿಲ್ಲ.
ಉತ್ಪಾದನೆಯ ಸಮಯದಲ್ಲಿ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿಲ್ಲ. ಸರಣಿಯು ಸ್ವಯಂಹಾನಿಯ ನಿದರ್ಶನಗಳನ್ನು ಒಳಗೊಂಡಿದೆ. ತಯಾರಕರು ಸ್ವಯಂ-ಹಾನಿಯನ್ನು ಅನುಮೋದಿಸುವುದಿಲ್ಲ.
ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಅಮೆಜಾನ್ ಅನುಮೋದಿಸುವುದಿಲ್ಲ. ಬಾಲ ಕಲಾವಿದರ ಮೇಲೆ ದೌರ್ಜನ್ಯ ನಡೆದಿಲ್ಲ.
ಒಳಗೊಂಡಿರುವ ವಿಷಯ ಸೂಕ್ಷ್ಮವಾಗಿರಬಹುದು. ಸರಣಿಯು ಗ್ರಾಫಿಕ್ ಚಿತ್ರಗಳು ಮತ್ತು ಹಿಂಸೆಯ ದೃಶ್ಯಗಳನ್ನು ಒಳಗೊಂಡಿದೆ, ಅದು ಎಲ್ಲಾ ಪ್ರೇಕ್ಷಕರಿಗೆ ಸೂಕ್ತವಲ್ಲ.
ವೀಕ್ಷಕರು ವಿವೇಚನೆಯನ್ನು ಬಳಸುವಂತೆ ಸಲಹೆ ನೀಡಲಾಗಿದೆ.
ತೂತುಕುಡಿ ಬಳಿ ಎಲ್ಲೋ
ಏನಾಯಿತು, ಅಣ್ಣ?
ರಸ್ತೆಯಲ್ಲಿ ಮರ ಬಿದ್ದಿದೆ, ತಮ್ಮ.
ಮರ ಬಿದ್ದಿದೆಯಾ?
ಏನಾಗಿದೆ ಎಂದು ನೋಡಿಕೊಂಡು ಬರ್ತೀನಿ, ಮಾಲಾ.
ಅಣ್ಣ, ಮಾವ, ಬನ್ನಿ, ಹೋಗೋಣ.
ಬೇಗ ಬನ್ನಿ, ಬೇಗ.
- ಮಾವ, ಬೇಗ ಬನ್ನಿ. - ಬೇಗ ಬಾರೋ.
- ಬನ್ನಿ. - ಎಲ್ರೂ ಒಂದ್ ಕೈ ಹಾಕಿ.
ಹಿಡಿಯಿರಿ. ಎತ್ತಿ.
ಎತ್ತಿ ಬೇಗ.
ಏಯ್, ಇದು ಇಷ್ಟು ಭಾರ ಯಾಕಿದೆ?
ಎತ್ತೋ, ಸ್ವಲ್ಪ ಬಲ ಹಾಕು.
ಕೆಳಗಿಂದ ಎತ್ತು.
ಕೆಳಗಿಂದ ಎತ್ತಿಹಾಕು.
- ಜಾರ್ತಿದೆ - ಆಕಡೆ ಹೋಗು.
ಅಮ್ಮ!
ಏನಾಯ್ತು, ಕಂದ? ಅಯ್ಯಯ್ಯೋ
ಅಮ್ಮ! ಸೇತು! ಅಮ್ಮ!
ಮಾಲಾ!
ಚಿಂತೆ ಮಾಡ್ಬೇಡ.
- ಏನಮ್ಮ ಇದು? - ಅಮ್ಮ!
- ಅಮ್ಮ! - ಸ್ವಲ್ಪ ತಡ್ಕೊಳಮ್ಮ.
ಅಯ್ಯೋ ದೇವ್ರೆ ಈಗೇನ್ಮಾಡದು.
- ಏನಾಯ್ತು? - ನೋವಾಗ್ತಿದೆ.
ಊರಲ್ಲೇ ಇದ್ನ ಸರಿಮಾಡ್ಬಹುದಿತ್ತು
ಈಗ ನಡುದಾರಿಲ್ ಸಿಕ್ಬಿದ್ದೀದೀವಿ.
ಅಮ್ಮ, ಹೆದರ್ಸ್ಬೇಡ ಮ್ಮ.
ಅತ್ತೆ, ಭಯ ಪಡ್ಬೇಡಿ. ಏನೂ ಆಗಲ್ಲ. ನಾನಿದೀನಿ.
ಮಾಲಾ, ಧೈರ್ಯವಾಗಿರು. ಈಗ್ ಬಂದೆ.
ಅವಳ ಜೊತೆ ಇರು. ಅಮ್ಮ, ಮಾಲಾನ ನೋಡ್ಕೋ.
- ಬೇಗ ಬಾ. - ಎರಡೇ ನಿಮಿಷ, ಬಂದೆ.
ಅಣ್ಣ, ಅವಳಿಗೆ ನೋವು ಶುರು ಆಗಿದೆ.
ಈಗೇನಣ್ಣ ಮಾಡದು?
ನನ್ ಕಂದ, ಸ್ವಲ್ಪ ತಡ್ಕೊಳಮ್ಮ .
ಹೇಳಣ್ಣ.
ಆ ಹಳೆ ಫ್ಯಾಕ್ಟರಿ ಕಡೆ ಹೋಗಿ,
ಉಪ್ಪಾಲಂ ರಸ್ತೆ ಹಿಡಿದು,
ಬೈಪಾಸ್ ಸೇರ್ಕೊಂಡ್ರೆ, ಬೇಗ್ ಹೋಗ್ಬಿಡ್ಬಹುದು.
- ಸರಿ, ಹೊರಡೋಣ. - ಬನ್ನಿ.
ಮಾವ, ಬನ್ನಿ. ಬಸ್ ಹತ್ತಿ, ಬೇಗ.
ಹೇ, ಏನೂ ಆಗಲ್ಲ.
- ಅಣ್ಣ,ಬೇಗ್ ಗಾಡಿ ತೆಗೀರಿ ಅಣ್ಣ. - ಸರಿನಪ್ಪ.
ಸ್ವಲ್ಪ ತಡೆದುಕೋ.
ಬೇಗ.
ಬೇಗ, ಅಣ್ಣ!
ಸ್ವಲ್ಪ ಜೋರಾಗಿ ಓಡ್ಸಿ.
ಸೇತು...
ವಾಪಾಸ್ ಊರ್ ಕಡೇಗೆನೇ ಹೋಗ್ಬಿಡೋಣ್ವಾ, ಸೇತು?
ನನಗ್ಯಾಕೋ ಇದು ಸರಿ ಅನ್ಸ್ತಿಲ್ಲ.
ಅದು ಅಷ್ಟು ಒಳ್ಳೇದಲ್ಲ, ಮಾಲಾ.
ಇದು ಸಾಧಾರಣ ಹೆರಿಗೆ ಅಲ್ಲ.
ಇದ್ರಲ್ಲಿ ಕೆಲವು ತೊಡಕುಗಳಿವೆ. ನೀನೂ ಅಮ್ಮನ ಹಾಗೇ ಮಾತಾಡ್ತೀಯಲ್ಲ.
ಅಮ್ಮ, ನವಮಲೈ ಆಸ್ಪತ್ರೆಲಿ ಇದನ್ನೆಲ್ಲಾ ಮಾಡಕ್ಕಾಗಲ್ಲ ಮ್ಮ...
ಅರ್ಥ ಮಾಡಿಕೋ ಮ್ಮ.
ಮಾಲಾ, ಇದ್ನೇಲ್ಲ ಈಗಾಗಲೇ ಮಾತಾಡಿದೀವಲ್ವಾ.
ನೋಡು, ಮಾಲಾ.
ಮಗುವಿಗಿಂತ ಹೆಚ್ಚಾಗಿ, ನಿಂಗೇನು ಆಗದ ಹಾಗೆ ನಾನ್ನೋಡ್ಕೋತೀನಿ.
ನಂಗಿಂತ ನಂಗೆ, ನನ್ ಮಗನೇ ಮುಖ್ಯ.
ಮಗಳು.
ಏನೂ ಗೊತಾಗ್ತಿಲ್ಲ, ಸೇತು.
ಈಗ ಯಾವ್ ಕಡೆಯಿಂದ ಹೋಗ್ತಿದೀವಿ?
ಆ ಹಳೇ ಫ್ಯಾಕ್ಟರಿ ಕಡೆಯಿಂದ.
ಎನ್ಎಚ್-38 ಕಟ್ಟಿಯಲ್ 5 ಕಿ.ಮೀ.
ಅಂದ್ರೆ, ಆ ಕಟ್ಟಿಯಲ್ ರಸ್ತೆಯಲ್ಲಾ?
ಅಲ್ ಯಾರು ಇಲ್ವಲ್ಲ ಯಾಕ್ ಭಯ?
ಬೇಡ, ಸೇತು. ಆ ಕಡೆಯಿಂದ ಹೋಗೋದು ಬೇಡ.
ಏನೇ ನೀನು...
ಇಲ್ನೋಡು. ನಿನಗೇನೂ ಆಗಲ್ಲ.
ಭಯ ಪಡ್ಬೇಡ. ನನ್ ಭುಜದ್ ಮೇಲ್ ಒರ್ಗ್ಕೊಂಡ್ ಮಲಗು.
ನಿಂಗೇನು ಆಗಲ್ಲ.
ಹುಷಾರು!
ಏನಿದು?
ಹುಷಾರಾಗಿ ಓಡ್ಸಬೇಕಿತಣ್ಣ ನೀವು.
ಏನೂ ಹೊಳೀಲಿಲ್ಲ. ಅದೆಲ್ಲಿಂದ ಬಂದ್ನೋ ಗೊತ್ತಾಗ್ಲಿಲ್ಲ.
ಸರಿ, ಇರಿ ನಾನ್ಹೋಗಿ ನೋಡಿ ಬರ್ತೀನಿ.
ಅಯ್ಯೋ ಬೇಡ! ಸುಮ್ಮನೆ ಹೋಗಿಬಿಡೋಣ.
ನನಗೆ ಸಂಸಾರ ಇದೆ. ಇದೆಲ್ಲಾ ಬೇಡ. ಅರ್ಥ ಮಾಡಿಕೊಳ್ಳಿ.
ನಿನಗೆ ಮನುಷ್ಯತ್ವ ಇಲ್ವಾ? ಹಾಗೆ ಬಿಟ್ಹೋಗಣ ಅಂತೀಯಲ್ಲ.
ಇರಿ, ನಾನ್ ನೋಡಿ ಬರ್ತೀನಿ.
ಸೇತು, ಏನ್ ಮಾಡ್ತಿದ್ದೀಯಾ?
- ಏನೂ ಆಗಲ್ಲ. - ಹೋಗ್ಬೇಡ.
ಇರು. ಹೋಗಿ ಬಂದ್ಬಿಡ್ತೀನಿ...
- ಸೇತು! ಸೇತು! - ಬೇಗ ಬಂದ್ಬಿಡ್ತೀನಿ., ಕಣೇ.
ಸೇತು!
ಸೇತು!
ಅವನಿಗೇನೂ ಮಾಡಬೇಡಿ!
ನೀವಾ?
ಅಣ್ಣ, ಆ ಮೆಡಿಕಲ್ ಕಿಟ್...
ಪಾಂಡಿ!
ಸೇತು! ಸೇತು!
ಪಾಂಡಿ!
ಅಣ್ಣ!
ಅಣ್ಣ...
ಸೇತು!
ಮಾಲಾ!
ಬೇಗ ಬಾಗಿಲು ಮುಚ್ಚಿ!
ಅಮ್ಮ! ಅಮ್ಮ!
ಸೇತು...
ಸೇತು.
ಸೇತು.
ಸೇತು!
ನನ್ನ ಬಿಟ್ಟು ಹೋಗಬೇಡ, ಸೇತು.
ಸೇತು!
ಬಾ, ತಾಯಿ, ಮನೆ ಬಾಗಿಲಿಗೆ ಬಾ
ಬಾ, ತಾಯಿ, ಮನೆ ಬಾಗಿಲಿಗೆ ಬಾ
ಮೂರು ರಸ್ತೆ ಸೇರುವ ಮೈಲಿಗಲ್ಲು ಮಿದುಳ ಸೀಳುವ ಕೋರೆಹಲ್ಲು
ಈಟಿಯಂತಹ ಆ ಕಣ್ಣುಗಳು ನಮ್ಮ ಕಣ್ಣೀರಿಗೆ ಪರಿಹಾರ ಕೊಡಲಿ
ಬಾ, ತಾಯಿ, ಮನೆ ಬಾಗಿಲಿಗೆ ಬಾ
ಬಾ, ತಾಯಿ, ಮನೆ ಬಾಗಿಲಿಗೆ ಬಾ
ದಿ ವಿಲೇಜ್
ಸಿಂಗಾಪುರ್ ಇವತ್ತಿನ ದಿನ
ಸರ್, ಅವ್ರನ್ನ ಬರಕ್ಕೆ ಹೇಳ್ಲಾ?
ಹಾಂ, ಒಳಗೆ ಬರಕ್ಕ್ ಹೇಳು.
ಹಾಂ.
ಫರ್ಹಾನ್, ಬನ್ನಿ.
ಬನ್ನಿ.
ಮಿಸ್ಟರ್ ಫರ್ಹಾನ್ ಹಮೀದ್,
ನಾವು ನೇಮಿಸಿದ ವ್ಯಕ್ತಿ ನೀವೇನಾ?
- ಆ ಬಾಡಿಗೆ ಬಂಟ. - ಸರ್...
ಹಾಗೆ ಕರಿಬೇಡಿ.
ನಮ್ಮನ್ನ ಸ್ವಚ್ಛತಾ ಪಡೆ ಅಂತ ಕರೀಬಹುದು.
ನಾನು ಪ್ರಕಾಶ್. ಇವರು ಜಗನ್ ಅಂತ ಗೊತ್ತಲ್ಲ.
ಹಾಂ.
ಎಕ್ಸೋಜೆನಿಕ್ಸ್ ವಾಯುನೆಲೆಯಲ್ಲಿ ನಿಮಗಾಗಿ ಒಂದು ಜೆಟ್ ಕಾದಿರುತ್ತೆ. ಈ ಸಂಜೆ.
ನೀವು ತಮಿಳುನಾಡಿನ ಕರಾವಳಿ ಊರು ಕಟ್ಟಿಯಲ್ಗೆ ಹೋಗಬೇಕು.
ವಿಳಂಬ ಅಥವಾ ಪ್ರಶ್ನೆ ಮಾಡಬಾರದು.
ಅರ್ಥ ಆಯ್ತಾ?
ಸುರಕ್ಷಾ ಸಲಕರಣೆ ಹಾಗೂ ಅಸ್ತ್ರಗಳು ಜೊತೆಗಿರಲಿ.
ನಿಮ್ಮ ಬಳಿ ತಂಡ ಇದೆ ತಾನೆ?
ಹಾಂ, ಮೂರು ಜನ, ನನ್ನನ್ನ ಬಿಟ್ಟು.
ನಮ್ಮದು ಅನುಭವಿ ಸ್ವಚ್ಛತಾ ಪಡೆ.
ಚಿಂತೆ ಮಾಡಬೇಡಿ.
ಸರಿ. ನಿಮ್ಮ ಮಾತು ನಂಬ್ತೀನಿ.
ನಿಮ್ಮ ಜೊತೆ ಬರುವ ವಿಜ್ಞಾನಿಗಳು, ಅವರು ಸಂಗ್ರಹಿಸುವ ಮಾದರಿ
ಜೋಪಾನವಾಗಿ ಬಂದು ಸೇರಬೇಕು.
ಮಾದರಿಯ ಸುರಕ್ಷತೆ...
ನಿಮ್ಮ ಜವಾಬ್ದಾರಿ.
ನಿಮಗೆ ಈಗಾಗಲೇ ಅರ್ಥ ಆಗಿರುತ್ತೆ...
ಆದ್ರಿದು ಬಹಳ ಗೌಪ್ಯ ಕೆಲಸ, ಫರ್ಹಾನ್.
ನೀವು ಅದನ್ನು ಮನಸಿನಲ್ಲಿಡಿ.
ಇದನ್ನ ಹೇಳುವ ಅಗತ್ಯನೆೇ ಇಲ್ಲ.
ಇದು ಗೌಪ್ಯ ಹಾಗೂ ಕಣ್ಗಾವಲಿನಲ್ಲಿ ಇದೆ.
ಅದಕ್ಕೇ ತಾನೇ ನಮ್ಮನ್ನ ಕರೆಸಿದ್ದೀರಿ.
ಅದ್ಭುತ.
ಜಗನ್.
ಇದು ನಿಮ್ಮ ಮಾದರಿ ಸಂಗ್ರಹಣೆ ಹಾಗೂ ವಿಲೇವಾರಿ ನಿರ್ದೇಶಾಂಕ.
ನೀವು ಬಂದರಿನಲ್ಲಿ ಇಳೀತೀರಾ.
ನನಗೆ ಕಾಡು, ಬಂದರು ಮತ್ತೆ ಕಾರ್ಖಾನೆಯಿಂದ ಮಾದರಿಗಳು ಬೇಕು.
ಅರ್ಥ ಅಯ್ತಾ?
ಹಾಂ.
ಆದಷ್ಟು ಬೇಗ ಮಾದರಿಗಳನ್ನು ತನ್ನಿ.
- ಸರಿಯೇ? - ಸರಿ.
ಒಂದು ನಿಮಿಷ ಸರ್, ಆದರೆ ನನಗೆ...
ನಾನು ಮೊದಲೇ ಹೇಳಿದ್ದೆ, ಫರ್ಹಾನ್, ಚರ್ಚೆ ಅಥವಾ ಪ್ರಶ್ನೆಗಳು ಬೇಡ.
ಅಂದಹಾಗೆ...
ಜಗನ್ ನಿಮ್ ಜೊತೆ ಬರ್ತಾರೆ.
ಸರ್, ನಾನಾ?
ಒಳ್ಳೆಯದಾಗಲಿ!
ಜಗನ್, ನನಗೆ ಅರ್ಥ ಆಗ್ತಿಲ್ಲ.
ಶಸ್ತ್ರ, ಸುರಕ್ಷತೆ ಇದಕ್ಕೆಲ್ಲಾ ಮಾರ್ಗಸೂಚಿ ಇದೆ.
ಒಂದು ನಿಮಿಷ ಇರಿ.ಬರ್ತೀನಿ.
ಪ್ರಕಾಶ್ ಸರ್, ಸರ್, ಏನ್ ಹೇಳ್ತಿದ್ದೀರಿ ನೀವು?
ನಾನ್ ಹೇಗ್ ಸರ್ ಹೋಗ್ಲಿ? ಅದೂ ಯಾವುದೇ ಮುನ್ಸೂಚನೆ ಇಲ್ದೆ.
ದಿಢೀರನೇ ಹೇಗ್ ಸರ್ ಹೋಗ್ಲಿ ನಾನು?
ಸರ್! please, ಸರ್!
ನಂಗೇನೂ ಅರ್ಥ ಆಗ್ತಿಲ್ಲ ಸರ್.
ನಂಗೂ ಅರ್ಥ ಆಗ್ತಿಲ್ಲ, ಜಗನ್.
ಆ ಜಾಗದ ಬಗ್ಗೆ ಎಲ್ಲಾ ವಿಷ್ಯ ಗೊತ್ತಿರೋ ಏಕೈಕ ಜೀವಂತ ವ್ಯಕ್ತಿ ನೀವು.
ಹೇಗ್ ಕಳ್ಸ್ದೆ ಇರೋಕ್ಕಾಗುತ್ತೆ?
ಹೇಳಿ.
ನೀವೇ ತಾನೆ...
ಏಕೈಕ ವ್ಯಕ್ತಿ...
ಜೀವಂತ ಇರೋದು?
ನನಗೆ ನಿನ್ನ ಬಗ್ಗೆ ಚೆನ್ನಾಗಿ ಗೊತ್ತು, ಜಗನ್. ತುಂಬಾ ದಿನದಿಂದ.
ನಿನ್ನ ಮನೆಯವರಿಗೆ ಹೇಳಬೇಕಾ?
ಸರ್...
ಸಿದ್ಧವಾಗಿರಿ. ಇವತ್ತು ಸಂಜೆ.
ಇದ್ನ ಹಳ್ಳ ಹಿಡಿಸಬೇಡಿ!
ಲಿಕ್ಕರ್ ಕ್ವೀನ್
ನವಮಲೈ
ಹಬ್ಬದಲ್ಲಿ ಚೆನ್ನಾಗ್ ಆಡ್ದೆ ಕಣ್ಲ. ಅದ್ಕೆ ನಾನೆ ನಿಂಗೆ ಎಣ್ಣೆ ಹಾಕ್ಸ್ತೀನಿ.
Thanks, ಬಾಸು.
ತಗೋ. ಕುಡಿ, ಮಜಾ ಮಾಡು.
ತಮ್ಮ ಕೈಯಾರೆ ಎಣ್ಣೆ ಸುರಿದ ಧರ್ಮಾತ್ಮನಿಗೆ!
ಸಾಕು. ಅವನನ್ನು ತುಂಬಾ ಕಾಯಿಸಬೇಡ. ಬೇಗ ಎಣ್ಣೆ ಕೊಡು.
- ಬೇಗ ಕೊಡು. - ಈಗಲೇ ಕೊಟ್ಟೆ.
- ನಿನ್ ಸೈಕಲ್ ಹೊರಗೆ ಬಿಡಕ್ಕ್ ಹೇಳಿದ್ದೆ ತಾನೇ! - ಏನು?
ನಿನ್ ಸೈಕಲ್ ಹೊರಗೆ ಬಿಡು! ಒಳಗೆ ತರಬೇಡ, ಮಂಕುದಿಣ್ಣೆ!
ಮತ್ತೆ ಒಳಗಡೆ ಹೋಗ್ತಿದ್ದಾನೆ ಎಲ್ಲಾ ನನ್ ಕರ್ಮ!
ಶೇಖರ್.
ಅಣ್ಣ, ಮುಂದುವರೆಸಿ. ಮಜಾ ಮಾಡಿ.
No comments yet. Be the first to leave one.