The first 200 lines.
ರೈಡ್ ಆರ್ ಡೈನಲ್ಲಿ ಈ ಹಿಂದೆ…
ನಿನ್ನ ಯೋಜನೆ ಏನು?
ಆನಾಳನ್ನು ಕೊಲ್ಲುತ್ತೇನೆ.
ಟಾಕ್.
ಕಾರು ಸ್ಟಾರ್ಟ್ ಮಾಡು! ಅವರು ಹಿಂಭಾಗದಿಂದ ನಿರ್ಗಮಿಸುತ್ತಾರೆ.
ನಂತರ ನಾನು ಹಣವನ್ನು ಹಿಂದಿರುಗಿಸಿ ಡೆಬ್ಬಿಯಿಂದ ಸಾಧ್ಯವಾದಷ್ಟು ದೂರ ಹೋಗುತ್ತೇನೆ.
ನ್ಯೂಯಾರ್ಕ್‌ನ ಕಾನೂನು ಸಂಸ್ಥೆಯ ಬಗ್ಗೆ ನಿನ್ನ ವಿನಂತಿಯನ್ನು ನೀನು ವಿವರಿಸಬಹುದೇ?
ನಾನು ಅವಳಿಗೆ ಕೆಲಸದ ಆಫರ್ ನೀಡಿರುವ ಆರಂಭಿಕ ಇಮೇಲ್ ಅನ್ನು ಅಳಿಸಿದೆ.
ಡೆಬ್ಬಿ!
ಕಾಂಬೋಡಿಯಾದಲ್ಲಿ ಒಂದು ಚಿಕ್ಕ ಸ್ಥಳವಿದೆ.
ಹೆಸರಿನ ಅರ್ಥ "ದೂರ ಮತ್ತು ನೋಡಲು ಕಷ್ಟ."
ನನ್ನ ಜೊತೆ ಬಾ.
ಕಾರು ನಿಲ್ಲಿಸು!
ಸರಿ, ಶೂಟ್ ಮಾಡು! ಮಾಡು, ಸ್ಯಾಮ್!
ಅವಳು ಹೋಗುತ್ತಿದ್ದಾಳೆ!
ಭಾವನಾತ್ಮಕ ಬಾಂಧವ್ಯ ಬೆಳೆಸಿಕೊಳ್ಳುವ ಅಪಾಯವಿದೆಯೇ?
ಅವಳೊಂದಿಗಾ?
ಖಂಡಿತ ಇಲ್ಲ.
ಅವಳು ಯಾರು?
ಅವಳೊಬ್ಬ ಹಂತಕಿ.
ಲಂಡನ್
ಈ ವಾರದ ಆರಂಭದಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ಕೊಲ್ಲಲ್ಪಟ್ಟ ಅಲ್ಬೇನಿಯನ್ ಮಾಫಿಯಾ ಮುಖ್ಯಸ್ಥ
ಎರ್ಗುನ್ ಕ್ರೆಷ್ನಿಕ್ ಅವರ ಬೇಡಿಕೆಗಳ ಮೇರೆಗೆ,
ಯುಕೆ ಸಾರಿಗೆ ಮಸೂದೆಯನ್ನು ತಡೆಯುವ ಪ್ರಯತ್ನದಲ್ಲಿ ಭ್ರಷ್ಟಾಚಾರದ ಪಿತೂರಿ,
ಲಂಚ ಸ್ವೀಕರಿಸಿದ ಆರೋಪದ ಮೇಲೆ ಇದುವರೆಗೆ 12ಕ್ಕೂ ಹೆಚ್ಚು ಸಂಸತ್ ಸದಸ್ಯರನ್ನು
ವಿಚಾರಣೆಗೆ ಕರೆಯಲಾಗಿದೆ.
ಪ್ರಧಾನಿ ಕಾನೂನು ಜಾರಿಯನ್ನು ಶ್ಲಾಘಿಸಿದ್ದಾರೆ
ಮತ್ತು ಪರಿಸ್ಥಿತಿಯನ್ನು "ಬ್ರಿಟಿಷ್ ರಾಜಕೀಯದ ಮೇಲಿನ ಕಳಂಕ" ಎಂದು ಕರೆದಿದ್ದಾರೆ.
ಕ್ಯಾಮೆರಾ ಹಿಡಿದುಕೊಳ್ಳಿ!
- ಅವರು ಬಂದರು! - ಇನ್ನಷ್ಟು ವರದಿಗಾರರು.
ನಾನು ಮುಖ ಮುಚ್ಚಿಕೊಳ್ಳಬೇಕಾ? ಜನ ಹಾಗೇ ಮಾಡೋದಾ?
- ಡೇವಿಡ್. - ಹಾಗೆ ಮಾಡಿದರೆ ತಪ್ಪಿತಸ್ಥ ಅನ್ನಿಸುತ್ತಾ?
- ನಾನು ನಗಬೇಕಾ? ಹುಚ್ಚನಂತೆ ಕಾಣುತ್ತದು. - ಇಲ್ಲಿ, ಡೇವಿಡ್! ಬನ್ನಿ! ಓಯ್!
ದಯವಿಟ್ಟು, ನೀನಿಲ್ಲದೆ ಇದನ್ನು ಮಾಡಲಾರೆ, ಸರಿಯಾ? ನನಗೆ ನೀನು ಬೇಕು.
ಡೇವಿಡ್, ಏನು ಗೊತ್ತಾ?
ಹೋಗಿ ಸಾಯಿ.
ಡೇವಿಡ್!
ಧೈರ್ಯವಾಗಿರು.
ಸೀನ್ ಮಾಡಬೇಡ.
ಡೆಬ್ಬಿ!
ಮಿಸಸ್ ಕ್ಲೇಬೋರ್ನ್…
ನೀವು ಈ ಗುಂಡಿಯನ್ನು ಒತ್ತಿದರೆ, ಎಲ್ಲವನ್ನೂ ಕೇಳಬಹುದು.
ನಾನು ಅವನನ್ನು ಕೇಳಬೇಕಾಗಿಲ್ಲ, ಅವನು ಏನು ಹೇಳುತ್ತಿದ್ದಾನೆಂದು ನನಗೆ ಗೊತ್ತು.
ಸಿಹಿ ಸುದ್ದಿ.
ನಿನಗೆ ಆರೋಪಗಳಿಂದ ವಿನಾಯಿತಿಯಿದೆ.
ಡೇವಿಡ್ ಏನು ಮಾಡುತ್ತಿದ್ದಾನೆಂದು ನಿನಗೆ ತಿಳಿದಿರಲಿಲ್ಲ, ಆದ್ದರಿಂದ…
ಮತ್ತು ಪಾಸ್ಪೋರ್ಟ್?
ಅದು ಸಾಕ್ಷ್ಯದ ಫೈಲ್‌ನಿಂದ ಹೇಗೋ ಕಾಣೆಯಾಗಿದೆ.
ನೀನೀಗ ಹೋಗಲು ಸ್ವತಂತ್ರಳು.
ಅಲ್ಬೇನಿಯನ್ನರು ನಿನಗೆ ತೊಂದರೆ ಕೊಡುತ್ತಾರೆ ಅನ್ನಿಸುವುದಿಲ್ಲ,
ಆದರೆ ನಿನ್ನ ರಕ್ಷಣೆಗಾಗಿ ನಾವು ನಿನ್ನ ಮನೆಗೆ ಸೆಕ್ಯೂರಿಟಿಯನ್ನು ನಿಯೋಜಿಸಬಹುದು.
ಜನರಿಂದ ರಕ್ಷಣೆ ಪಡೆದು ಸಾಕಾಗಿದೆ.
ಡೆಬ್ಬಿ?
ಜಿನೀವಾದಲ್ಲಿ ನಿನ್ನ ಸ್ನೇಹಿತೆಯ ಬಗ್ಗೆ ಹೇಳಿದ್ದು--
ಅವಳು ನನ್ನ ಸ್ನೇಹಿತೆಯಲ್ಲ.
ಮತ್ತು ನಾನು ಹೇಳುವುದು ಅಷ್ಟೆ.
ಆಪ್ಟಿಕ್ ನರಕ್ಕೆ ಏನೂ ಆಗಿಲ್ಲ.
ಆ ಹೊಲಿಗೆಗಳು ಚೆನ್ನಾಗಿವೆ. ಯಾರು ಹೊಲಿದದ್ದು?
ಮೊನಾಕೊದಲ್ಲಿನ ವ್ಯಕ್ತಿ.
ಅವನು ಸತ್ತು ಹೋದ.
ನನ್ನನ್ನು ಮರಳಿ ಸೇರಿಸಿ. ನಾನು ರೆಡ್‌ಬ್ಯಾಕ್ ಅನ್ನು ಹುಡುಕಬೇಕು.
ಸರಿ. ಮೂರು ವಾರಗಳಲ್ಲಿ ನೀನು ಕೆಲಸಕ್ಕೆ ಮರಳಲು…
ಒಪ್ಪಿಗೆ ನೀಡುತ್ತೇನೆ.
ಎರಡು ವಾರಗಳು.
ನೀನು ಹೋಗಬಹುದು. ನಿನ್ನ ಆರೋಗ್ಯ ಚೆನ್ನಾಗಿದೆ.
ಕೆಲಸಕ್ಕೆ ಮರಳಬಹುದು ವಿಪ್ಟೇಲ್. ಕೆಲಸಕ್ಕೆ ಮರಳಬಹುದು.
ವ್ಯಕ್ತಿಯನ್ನು ತೆಗೆದುಹಾಕುವ ಕಾರ್ಯ
ಸಂಪೂರ್ಣ
ಕರೆ ತಿರಸ್ಕಾರ ಸ್ಯಾಮ್
ಕ್ವೀ.ಜ.ದಿ.ಶು
ಕ್ವೀ, ಜನ್ಮದಿನದ ಶುಭಾಶಯಗಳು.
ಕ್ವೀ, ಜನ್ಮ…
ಕ್ವೀನಿ
"ನನ್ನ ಕ್ವೀನಿ.
ಈ ಪತ್ರ ಪ್ರತಿ ವರ್ಷ ಬರೆಯುತ್ತೇನೆ, ಮತ್ತು ಪ್ರತಿ ವರ್ಷ, ನೀನಿದನ್ನು ಓದಲ್ಲವೆಂದು ಆಶಿಸುತ್ತೇನೆ.
ಪ್ರತಿ ಮಗುವಿನ ಜೀವನ ಪೋಷಕರ ಆಯ್ಕೆಗಳ ಮೇಲೆ ಅವಲಂಬಿಸಿರುತ್ತದೆ,
ಮತ್ತು ನಾನು ಒಳ್ಳೆಯ ಆಯ್ಕೆಗಳನ್ನು ಮಾಡಲಿಲ್ಲ.
ಆದರೆ ನಾನು ಇಡೀ ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸುತ್ತೇನೆ.
ನೀನು ಮತ್ತೆ ಪ್ರಾರಂಭಿಸಲು
ಸಾಕಷ್ಟು ಹಣ ಮತ್ತು ಸಾಕಷ್ಟು ವಿಭಿನ್ನ ಹೆಸರುಗಳಿವೆ.
ಇಲ್ಲಿಂದ ದೂರ ಹೋಗು.
ನಿನಗೆ ನಾನು ಉತ್ತಮ ಜೀವನ ಕೊಡಬೇಕಾಗಿತ್ತು…
ಜನನ ಪ್ರಮಾಣಪತ್ರ
…ಹಾಗೆಯೇ ಸತ್ಯವನ್ನು ಹೇಳಬೇಕಾಗಿತ್ತು.
ಎಲ್ಲಾ ಉತ್ತರಗಳು ಇಲ್ಲಿವೆ.
ಐ ಲವ್ ಯು.
ಅಮ್ಮ."
ಈಗಲೇ ಬರಬೇಕಿತ್ತಾ?
ಸರಿ.
ನಮಸ್ತೆ. ಕ್ಷಮಿಸಿ. ನಾವು ಮುಚ್ಚಿದ್ದೇವೆ.
ಈ ಜಾಗ ಚೆನ್ನಾಗಿದೆ.
- ಮುಚ್ಚಿದ್ದೇವೆ ಎಂದು ಈಗಷ್ಟೇ ಹೇಳಿದೆ. - ಕಾಬ್ಲರ್, ಅಲ್ಲವಾ?
ಶೂಗಳನ್ನು ಸರಿಪಡಿಸುತ್ತೀರಿ.
ನನ್ನ ಭಾಷೆಯನ್ನು ಕ್ಷಮಿಸಿ… ನನ್ನನ್ನು ಕ್ಷಮಿಸಿ.
ಆದರೆ "ಕಾಬ್ಲರ್"
ಎಂದರೆ ನಕಲಿ ಪಾಸ್‌ಪೋರ್ಟ್ ಮಾಡುವವರು ಎಂಬ ಅರ್ಥವೂ ಇದೆ ಅಲ್ಲವಾ?
ನಿಮಗೆ ಏನು ಬೇಕು?
ಇಂಟರ್ಪೊಲ್.
ನನಗೆ ಕೆಲವು ಉತ್ತರಗಳು ಬೇಕು.
ನೀನು ಜಿನೀವಾದಲ್ಲಿ ಏನು ಮಾಡುತ್ತಿದ್ದೆ?
ಜಿನೀವಾ?
ನಾನು ಎಂದಿಗೂ ಜಿನೀವಾಗೆ ಹೋಗಿಲ್ಲ. ಆದರೆ ಒಮ್ಮೆ ಹೋಗಬೇಕು ಅಂದುಕೊಂಡಿದ್ದೇನೆ.
ಹೌದು, ನೀನು ಹೋಗಿರುವೆ.
ನಾವು ನಿನ್ನನ್ನು ಇಲ್ಲಿಗೆ ಹಿಂಬಾಲಿಸಿ ಬಂದಿದ್ದೇವೆ.
ಅಕ್ರಮ ದಾಖಲೆಗಳನ್ನು ಮಾಡುವ ಈ ಅಂಗಡಿಯವರೆಗೆ.
ಮತ್ತು ಇದನ್ನು ನೀನೇ ಮಾಡಿರುವುದು ಎಂದು ನನಗೆ ಗೊತ್ತು.
ಕೇಳು, ನೀನು ಏನು ಮಾತನಾಡುತ್ತಿದ್ದೀಯೋ ನನಗೆ ಗೊತ್ತಿಲ್ಲ.
ಒಂದೋ ನಾನು ಆ ಕೊಳಕು ಶೂ ಸರಿಪಡಿಸಬಹುದು,
ಇಲ್ಲದಿದ್ದರೆ ನೀನು ನನ್ನ ಅಂಗಡಿಯಿಂದ ಹೋಗಬಹುದು.
ನೀನು ನನಗೆ ಏನಾದರೂ ಹೇಳಲು ಬಯಸಿದರೆ…
ಇದು ನನ್ನ ಸಂಖ್ಯೆ.
ನನಗೆ ನನ್ನ ಶೂ ಇಷ್ಟ.
ಫ್ರೆಂಚ್ ಗುಣಮಟ್ಟದ್ದು.
ರೈಡ್ ಆರ್ ಡೈ
ಮಕಲನ್ '35,
ಒಂದೇ ಐಸ್ ಕ್ಯೂಬ್.
ಇದು ತಪ್ಪು, ಆದರೆ ನೀನು ಇಷ್ಟಪಡುವುದು ಇದೇ.
ನಾನು ನಿನ್ನನ್ನು ನೇಮಕ ಮಾಡಿದ ವರ್ಷ ಆ ವಿಸ್ಕಿಯನ್ನು ಖರೀದಿಸಿದೆ.
ನನ್ನ ಅತ್ಯಂತ ಅಮೂಲ್ಯವಾದ ಆಸ್ತಿಗಳಲ್ಲಿ ಒಂದದು.
ನನಗೆ ಫೈಲ್ ಕೊಡಿ.
ರೆಡ್‌ಬ್ಯಾಕ್ ಬಗ್ಗೆ ನನ್ನ ಬಳಿ ಇರುವುದೆಲ್ಲವೂ ಇಲ್ಲಿದೆ.
ನನ್ನ ಸ್ವಂತ ಏಜೆಂಟ್‌ಗೆ ವಿರುದ್ಧವಾಗಿ ನಿಯೋಜನೆ ನೀಡಿರುವುದು ಇದೇ ಮೊದಲು.
ನೀನು ಇದನ್ನು ಕೊನೆಗೊಳಿಸಬೇಕು.
ಇದನ್ನು ಪೂರ್ಣಗೊಳಿಸಿ, ನಂತರ ಹಿಂತಿರುಗಿಸು.
ನಾವು ಮತ್ತೆ ತಂಡವಾಗುತ್ತೇವೆ, ನೀನು ಮತ್ತು ನಾನು.
ಲಂಡನ್ ನನಗೆ ಮುಗಿದಿದೆ, ನನ್ನ ಕವರ್ ಇನ್ನಿಲ್ಲ.
ನನ್ನನ್ನು ಸ್ಥಳಾಂತರಿಸಬೇಕು.
ಜೂಡಿಥ್ ಬರ್ಟನ್ ಸತ್ತಿದ್ದಾಳೆ.
ಮತ್ತು ಡೆಬ್ಬಿ ಕ್ಲೇಬೋರ್ನ್?
ಅದು ಮುಗಿದ ಕಥೆ.
ಡೇವಿಡ್!
ಬಾಗಿಲು ತೆರೆ!
ಡೇವಿಡ್!
ಕ್ಷಮಿಸು. ಅದೊಂದು ಸರ್ಪ್ರೈಸ್ ಆಗಬೇಕಿತ್ತು.
ಯಾವುದು?
- ಡೆಬ್ಬಿ, ಹಲೋ! - ಬುಕ್ ಕ್ಲಬ್ ಅನ್ನು ಆಹ್ವಾನಿಸಿದೆಯಾ?
- ನಿನಗೆ ಅದಿಷ್ಟ. - ನಾವು ನಿನಗೆ ತೊಂದರೆ ಕೊಡಲು ಬಯಸಲ್ಲ.
- ಬುಕ್ ಕ್ಲಬ್. - ಹುರಿದುಂಬಿಸಲು.
- ಹಾಸಿಗೆ ಬಿಡುತ್ತಿಲ್ಲ ನೀನು. - ಏಕೆಂದರೆ ನೀನಿನ್ನೂ ಇಲ್ಲಿರುವೆ.
- ನನಗೆ ಹೊರಡಲು ಅನುಮತಿ ಇಲ್ಲ. - ನನ್ನ ಮನೆ ಬಿಟ್ಟು,
ನೀನು ವಾಸಿಸಲು ಬೇರೆ ಜಾಗ ಹುಡುಕಿಕೊಳ್ಳಬೇಕಿತ್ತು.
- "ನಮ್ಮ ಮನೆ", ಮತ್ತು ನಾನು ಯೋಚಿಸಿದೆ-- - ಏನು?
ನಿನ್ನೊಂದಿಗೆ ಇದ್ದರೆ ನಾನು ಮತ್ತೆ ಒಟ್ಟಾಗಲು ಬಯಸುವೆ ಎಂದಾ?
ಒಂದು ಬಾರಿ ಅಡುಗೆ ಮಾಡಿದರೆ ನೀನು ಮಾಡಿದ್ದು ಸರಿಹೋಗುತ್ತೆ ಎಂದಾ?
ಹೋಗಬೇಕೆಂದರೆ ಹೋಗುತ್ತೇವೆ.
- ನಾನು ಬಾಗಿಲು ತೆರೆಯಲ್ಲ. - ನಿನಗಾಗಿ ಬಂದಿದ್ದಾರೆ.
ಸಂಕಷ್ಟದಲ್ಲಿ ನಿನಗೆ ಬೆಂಬಲ ನೀಡಲು ಬಂದಿದ್ದಾರೆ.
ಅವರು ಸಹಾಯ ಮಾಡಬಹುದಾ?
- ನನ್ನ ಟ್ರೈಫಲ್. - ಬರಬಾರದಿದ್ದಾಗ ಬಂದೆವಾ, ಡೆಬ್ಬಿ?
- ನಾವು ಹೋಗುತ್ತೇವೆ. - ಟ್ರೈಫಲ್ ಬೇಯಿಸಿ ಮಾಡುವುದಲ್ಲ.
ಯಾರಾದರೂ ಶುರು ಮಾಡುತ್ತೀರಾ?
ನನಗೆ ಬುಕ್ ಕ್ಲಬ್ ಇಷ್ಟವಿಲ್ಲ.
ಮುಂಚಿನಿಂದಲೂ ಇಷ್ಟವಿರಲಿಲ್ಲ.
ನಾನು ಪುಸ್ತಕ ಓದುವುದಿಲ್ಲ.
ನೀವು ಕೆಟ್ಟ ಪುಸ್ತಕಗಳನ್ನು ಆರಿಸುತ್ತೀರಿ.
ಸಹೋದರ ಮಾಡಿದ್ದಾ?
ಹೌದು.
ವಿಸ್ಕಿಯಾ, ಡೆಬ್ಬಿ?
ನೀನು ವಿಸ್ಕಿ ಕುಡಿಯುವುದಿಲ್ಲ.
ನಿನಗೆ ನನ್ನ ಬಗ್ಗೆ ಏನೂ ಗೊತ್ತಿಲ್ಲ.
ನಾನು ಕೊಕೇನ್ ಮಾಡಿದ್ದೇನೆ.
ಅವಳು ಎಲ್ಲಿದ್ದಾಳೆ?
ನೀನಲ್ಲಿಗೆ ಹೋಗಬೇಡ, ಅವಳು ನಿನ್ನನ್ನು ನೋಡಲು ಬಯಸುವುದಿಲ್ಲ!
- ಹೊರಹೋಗು. - ಡೆಬ್ಬಿ.
ನಿನ್ನ ಮಾತು ಕೇಳಲ್ಲ.
ಹೊರ…
- ಹೋಗು. - ಹೋಗುತ್ತೇನೆ.
- ನೀನು ನನ್ನನ್ನು ಪುನಃ ನೋಡಲ್ಲ. - ಒಳ್ಳೆಯದು.
- ನೀನು ಕೇಳಬೇಕಾದ ಕೆಲವು ವಿಷಯಗಳಿವೆ. - "ಕೇಳಬೇಕಾದ"?
"ಕೇಳಬೇಕಾದ". ನನಗೆ ಕೇಳಬೇಕಿಲ್ಲ.
ನಾನು ಏನೂ ಮಾಡಬೇಕಿಲ್ಲ. ನನಗೆ ಬೇಕಿಲ್ಲ.
ನನ್ನ ಅಸಮರ್ಥ ಗಂಡನನ್ನೋ ಅಥವಾ ಅಡುಗೆಮನೆಯಲ್ಲಿ ಅವನು ಮಾಡುತ್ತಿರುವ
ನಿಷ್ಪ್ರಯೋಜಕ ಪ್ರಯತ್ನಗಳನ್ನೋ ನಾನು ಸಹಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ!
ಮತ್ತು ನಾನು ಆ ಮೂರ್ಖ ಪುಸ್ತಕವನ್ನು ಓದಿದ್ದೇನೆ ಎಂದು ನಟಿಸಬೇಕಾಗಿಲ್ಲ,
ಮತ್ತು ನಿನ್ನ ಕ್ಷಮೆಯಾಚನೆ ನಾನು ಕೇಳಬೇಕಾಗಿಲ್ಲ.
- ಹೊರಹೋಗು. - ಇಲ್ಲ.
ಸರಿ! ಹಾಗಿದ್ದರೆ, ನಾನು ಹೋಗುತ್ತೇನೆ.
ಡೆಬ್ಬಿ.
ಡೆಬ್ಬಿ.
ದೇವರೇ.
ಡೆಬ್ಬಿ, ಇರು! ಡೆಬ್ಬಿ. ಡೆಬ್ಬಿ.
ನನ್ನ ಮಾತು ಕೇಳು. ಡೆಬ್ಬಿ, ಇರು!
- ಬಾಯಿ ಮುಚ್ಚು, ಡೇವಿಡ್. - ಮುಚ್ಚು, ಡೇವಿಡ್.
ನೀನು ನನ್ನನ್ನು ದ್ವೇಷಿಸುವುದೇ ಆಗಿದ್ದರೆ, ನಾನು ಕೆಲವು ವಿಷಯಗಳನ್ನು ಹೇಳಬೇಕಿದೆ--
ಇನ್ನೂ ಇದೆಯೇ? ನಾನು ಕೇಳಬೇಕಾದ ನನ್ನ ಬಗೆಗಿನ ಹೆಚ್ಚು ಅಭಿಪ್ರಾಯಗಳಾ?
ನಾನು ನೀರಸ, ಸರಾಸರಿ, ಮಧ್ಯವಯಸ್ಕ ಮಹಿಳೆ ಎಂಬಂತಹ ಹೆಚ್ಚಿನ ವಿಶೇಷಣಗಳಾ?
ನಾನು ಸುಳ್ಳು ಹೇಳುತ್ತಿದ್ದೆ! ನಿನ್ನನ್ನು ರಕ್ಷಿಸಲು ಹಾಗೆ ಹೇಳಬೇಕಾಯಿತು.
ಮತ್ತು ನನ್ನ ಕೆಲಸದ ಆಫರ್ ಅಳಿಸುವುದು, ಅದೂ ನನ್ನನ್ನು ರಕ್ಷಿಸಲು ಮಾಡಿದ್ದಾ?
ಸರಿ. ಅದು ನನ್ನನ್ನು ರಕ್ಷಿಸಿಕೊಳ್ಳಲು ಮಾಡಿದ್ದು.
ಆಗಷ್ಟೇ… ಅತ್ಯಂತ ಭಯಾನಕ ಕೆಲಸ ಮಾಡಿದ್ದೆ,
ಮತ್ತು ನೀನು ನನ್ನನ್ನು ಬಿಟ್ಟು ಹೋಗುವ ಆಲೋಚನೆ ಸಹಿಸಲಾಗಲಿಲ್ಲ. ಹಾಗಾಗಿ, ನಾನು… ಹೌದು.
ಹೌದು, ನಾನು ಅದನ್ನು ಅಳಿಸಿದೆ. ನನ್ನನ್ನು ನಂಬು, ನನ್ನ ಜೀವನದುದ್ದಕ್ಕೂ ಅದನ್ನು ವಿಷಾದಿಸುತ್ತೇನೆ.
ಅದು ಒಂದು ಕೆಲಸವಾಗಿತ್ತು. ಒಂದು ಬಾರಿಯಾಗಿತ್ತು.
ನಿನಗೆ ಅನೇಕ ಉದ್ಯೋಗ ಆಫರ್‌ಗಳನ್ನು ಕೊಡಿಸಿದ್ದೇನೆ.
- ಅದಕ್ಕಿಂತ ಚೆನ್ನಾಗಿರುವವು. - ಅದು ನೀನಾ?
ಹೌದು, ಅದು ನಾನೇ!
- ನೀನು ಅವುಗಳಲ್ಲಿ ಯಾವುದೂ ತೆಗೆದುಕೊಳ್ಳಲಿಲ್ಲ! - ಏಕೆಂದರೆ ನಾನು ಆ ಸ್ಥಾನಗಳಿಗೆ
ಅರ್ಹತೆ ಹೊಂದಿರಲಿಲ್ಲ ಮತ್ತು ಅವು ತಪ್ಪು ಸಮಯದಲ್ಲಿ ಸಿಕ್ಕಿದವು.
ಡೇವಿಡ್ ವೃತ್ತಿಜೀವನದ ಆರಂಭ, ಮಕ್ಕಳು ನ್ಯೂಯಾರ್ಕ್‌ಗೆ ತೆರಳಿದ್ದರು.
ನೋಡು? ನೀನು ಮಾಡುವುದು ಇದನ್ನೇ!
No comments yet. Be the first to leave one.