The first 200 lines.
ಸಮುದಾಯದಲ್ಲಿ ಸೇವಾ ಕಾರ್ಯಗಳಿಗೆ ಹೆಸರು ಮಾಡಿದ್ದ ವೈದ್ಯೆಯೊಬ್ಬರು
ಸ್ಥಳೀಯ ಹಣ್ಣಿನ ಮಾರ್ಕೆಟಿನಲ್ಲಿ ಪಾದಚಾರಿಗಳ ಒಂದು ಗುಂಪಿನ ಮೇಲೆ ವಾಹನ ಹರಿಸಿ
ಮೂವರನ್ನು ಕೊಂದು ಐವರಿಗೆ ಗಾಯಗೊಳಿಸಿದ್ದರು.
ದೀರ್ಘ ಶಿಫ್ಟ್ ನಂತರ, ಮನೆಗೆ ಮರಳುವ ಮುನ್ನ ವೈದ್ಯೆ ಕೆಲವೊಮ್ಮೆ ತಮ್ಮ ಕೊಠಡಿಯಲ್ಲಿ
ನಿದ್ದೆ ಮಾಡುತ್ತಿದ್ದರು.
ಈ ನಿರ್ದಿಷ್ಟ ದಿನ, ಆಕೆ ಹಾಗೆ ಮಾಡಲಿಲ್ಲ.
ತಮ್ಮ ಮಗಳ ಜನ್ಮದಿನ
ಪಾರ್ಟಿಗೆ ಹೋಗುವಾಗ ಗಾಡಿ ಚಲಾಯಿಸುತ್ತಲೇ ನಿದ್ದೆಗೆ ಜಾರಿದ್ದರು.
ಆ ದಿನ ಆಕೆ ಪಾರ್ಟಿಗೆ ಹೋಗಲಿಲ್ಲ ಮತ್ತು ತನ್ನ ಮಗಳ ಹುಟ್ಟುಹಬ್ಬವನ್ನು
ಎಂದಿಗೂ ಆಚರಿಸಲಿಲ್ಲ.
ಆ ದಿನ ಬೇರೊಂದು ವಿಧದ ವಾರ್ಷಿಕೋತ್ಸವವಾಯಿತು.
ವೈದ್ಯೆ ನೆನೆಯಲು ಬಯಸದಂತಹ ದಿನ.
ಮೂವರು ಪೈಲಟುಗಳಿದ್ದ ಸಣ್ಣ ವಿಮಾನ ಸ್ಕೀ ಲಿಫ್ಟಿಗೆ ತೀರಾ ಸನಿಹದಲ್ಲಿ ಹಾರಿತು.
ಆ ದಿನ ದಟ್ಟ ಮಂಜು ಗೋಚರತೆಯನ್ನು ಬಾಧಿಸಿತ್ತು.
ಪರ್ವತದ ಮೇಲೆ, ಕೆಳಗೆ ಸ್ಕೀ ಪಟುಗಳನ್ನು ಹೊತ್ತ ಗೊಂಡೊಲ ಅವರ ಕಣ್ಣಿಗೆ ಬೀಳಲಿಲ್ಲ,
ವಿಮಾನದ ಬಲ ರೆಕ್ಕೆ ಉಕ್ಕಿನ ತಂತಿಗಳನ್ನು ತುಂಡರಿಸಿತು.
ಕೇಬಲ್ ಕಾರು 264 ಅಡಿ ಆಳಕ್ಕೆ ಬಿದ್ದು
ಅದರಲ್ಲಿದ್ದ 20 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ನಂತರ, ಒಬ್ಬ ಪೈಲಟ್ ಸಂತ್ರಸ್ತರ ಕುಟುಂಬಗಳನ್ನು ಸಂಪರ್ಕಿಸಲು ಯತ್ನಿಸಿದರು,
ಆದರೆ ಯಾರೂ ಕರೆಗಳಿಗೆ ಉತ್ತರಿಸಲಿಲ್ಲ.
12 ವರ್ಷದ ಬಾಲಕನೊಬ್ಬ ತನ್ನ ಅವಳಿ ಸೋದರನಿಗೆ ಉಂಟುಮಾಡಿದ
ಸಿ7 ಬೆನ್ನು ಹುರಿ ಗಾಯದಿಂದ ಆತ ಕುತ್ತಿಗೆ ಕೆಳಭಾಗ ದೇಹದ ಸ್ವಾಧೀನ ಕಳೆದುಕೊಂಡ.
ಗುದ್ದಾಡದಂತೆ ತಾಯಿಯ ಎಚ್ಚರಿಕೆಗಳ ಹೊರತಾಗಿ,
ಹುಡುಗರ ಆಟ ಸಾಮಾನ್ಯವಾಗಿರಲಿಲ್ಲ.
ಯಾವ ಕಾಫಿ ಟೇಬಲ್ ಮೇಲೆ ಆತ ಬಿದ್ದನೋ ಅದು ಯಾವತ್ತೂ ಅಲ್ಲಿಯೇ ಇತ್ತು.
ಅವಳಿಗಳು ತದ್ರೂಪಿಗಳಾಗಿದ್ದರು, ಆದರೆ ಆ ಹಂತದ ನಂತರ
ಅವರ ಜೀವನಗಳಲ್ಲಿ ಒಂದೇ ರೀತಿಯದ್ದು ಏನೂ ಇರಲಿಲ್ಲ.
ಈ ಕಥೆಗಳು ಯಾವತ್ತೂ ಸಂತ್ರಸ್ತರ ಮೇಲೆ ಗಮನ ಕೇಂದ್ರೀಕರಿಸುತ್ತವೆ.
ಈ ತೊಂದರೆಗೆ ಕಾರಣನಾದ ವ್ಯಕ್ತಿಯನ್ನು ಯಾವತ್ತೂ ಉಲ್ಲೇಖಿಸಲಾಗುವುದಿಲ್ಲ.
ತನ್ನ ಸ್ವಂತ ಸೋದರನಿಗೆ ಈ ರೀತಿ ಮಾಡಿದವನ ಬಗ್ಗೆ, ಚಲಾಯಿಸುತ್ತಾ ನಿದ್ದೆ ಹೋದ ಚಾಲಕನ ಬಗ್ಗೆ
ಅಥವಾ ಕೇಬಲ್ ಕಾರು ಅಪಘಾತಕ್ಕೆ ಕಾರಣರಾದ
ಪೈಲಟುಗಳ ಬಗ್ಗೆ ಯಾರೂ ತಿಳಿಯಲು ಬಯಸುವುದಿಲ್ಲ.
ಕೃತ್ಯವೆಸಗಿದವರ ಬಗ್ಗೆ ನನಗೆ ತಿಳಿಯಬೇಕಿದೆ...
ಎಲ್ಲವೂ ವೇಗವಾಗಿ ನಡೆದು ಹೋಯಿತು.
ದುರಂತಗಳಿಗೆ ಕಾರಣರಾದ ಜನರ ಬಗ್ಗೆ ನನಗೆ ತಿಳಿಯಬೇಕಿದೆ...
ನನ್ನಂತಹ ಜನರು.
ಅವರನ್ನು ಎಂದಿಗೂ ಕ್ಷಮಿಸಲಾಗುವುದೇ?
ಅವರು ಮುಂದೆ ಸಾಗುವರೇ?
ನಾನೇನು ಮಾಡಿದೆ ಎಂಬುದನ್ನು ನಾ ಯೋಚಿಸದ ಕ್ಷಣವಿಲ್ಲ.
ನಿನ್ನ ಬಗ್ಗೆ ನಾ ಯೋಚಿಸದ ಕ್ಷಣವಿಲ್ಲ.
ನೀನೇನು ಮಾಡುತ್ತಿರುವೆ ಎಂದು...
ನೀ ಹೇಗೆ ಇರುವೆ ಎಂದು...
ನೀ ಹೇಗೆ ಬದುಕುತ್ತಿರುವೆ ಎಂದು...
ನಾ ನಿನ್ನ ಜೀವನ ಸಂಪೂರ್ಣ ಛಿದ್ರಗೊಳಿಸಿರುವಾಗ.
ಎಕ್ಸ್ಪಾಟ್ಸ್
ನಾ ಹೂ ಮಾರಾಟಗಾರರೊಂದಿಗೆ ಮಾತನಾಡಿದ್ದೆ... ಎಲ್ಲಾ ಏರ್ಪಾಟು ಮುಗಿದಿವೆ
ನಾಳೆ ಬೆಳಿಗ್ಗೆ ಮೊದಲು ತಲುಪಿಸಲಾಗುತ್ತದೆ ಆದರೆ ಖಾತ್ರಿಪಡಿಸಿ
ಭೇಟಿಯಾಗಲು ಬೆಳಿಗ್ಗೆ ಯಾರಾದರೂ ಇರುವರೆಂದು.
ಆ ಬ್ಯಾನರ್ ಹಾಕುವ ಬಗ್ಗೆ ಸ್ಥಳದವರ ಜೊತೆ ಮಾತನಾಡಿದೆಯಾ?
ಅವುಗಳನ್ನು ನಿರ್ಗಮನ ದ್ವಾರಗಳಿಂದ ಹೊರಗಿಡುವವರೆಗೆ ಸಮಸ್ಯೆಯಿಲ್ಲ.
ಅದ್ಭುತವಾಗಿದೆ.
ನಿಮಗೆ ಪರಿಶೀಲಿಸಲು ಅಂತಿಮ ಮೆನು ಇಲ್ಲಿದೆ.
ಆಂಟನಿ'ಸ್ ಅತ್ಯುತ್ತಮವೆಂದು ಪರಿಗಣಿತವಾಗಿದೆ.
ನೀವು ಹಾಂಕಾಂಗಿಗೆ ಏಕೆ ಬಂದಿರೆಂದು ಕೇಳಬಹುದೇ?
ನನ್ನ ಗಂಡನ ಕಂಪನಿ ಅವರನ್ನು ವಿದೇಶಕ್ಕೆ ಕಳಿಸಿದೆ. ಸಾಮಾನ್ಯ, ಅಲ್ಲವೇ?
ನೀವು ಕೆಲಸದಲ್ಲಿದ್ದೀರಾ?
ಮಾಡ್ತಿದ್ದೆ. ಮಾಡ್ತಿರುವೆ.
ನಾನು ಗೃಹಿಣಿಯಲ್ಲ.
ಕ್ಷಮಿಸಿ, ನಾನು... ಹಾಗಂದುಕೊಂಡಿಲ್ಲ...
ಕ್ಷಮಿಸಿ. ಅದು ನನಗೆ ಕಷ್ಟಕರ ವಿಚಾರ.
ಲ್ಯಾಂಡ್ಸ್ಕೇಪ್ ಆರ್ಕಿಟೆಕ್ಚರ್ ಕೆಲಸ.
ಜನರಿಗೆ ತೋಟಗಳನ್ನು ವಿನ್ಯಾಸಗೊಳಿಸುತ್ತೇನೆ.
ಇಲ್ಲಿ ಮಾಡಲು ಕಷ್ಟ. ಯಾರ ಬಳಿಯೂ ಜಾಗವಿಲ್ಲ.
ಹೌದು, ಅದು ಹಾಂಕಾಂಗ್.
ಎಷ್ಟು ಒಳ್ಳೆಯ ಹುಡುಗ.
ಅವನ ವಯಸ್ಸಿನ ಸೋದರಳಿಯ ನನಗಿದ್ದಾನೆ, ಈ ರೀತಿ ಸುಮ್ಮನೆ ಅವನನ್ನು ಕೂರಿಸಲು ಸಾಧ್ಯವಿಲ್ಲ.
ನೀವೇನು ಹೇಳುತ್ತೀರಿ?
ಅವನು ಒಳ್ಳೆಯ ಹುಡುಗ.
ನನ್ನ ಅರ್ಥ ಮೆನು.
- ಚಿಂತೆಯಿಲ್ಲ. - ನಿಮ್ಮದು ಮುಗಿಯಿತೇ? ನನಗೆ ಮನೆಗೆ ಹೋಗಬೇಕು.
ಬಹುತೇಕ. ತಿಳಿಯಲು ನಮಗೆ ಇನ್ನೂ ಒಂದೆರಡು ವಿಚಾರಗಳಿವೆ, ಸರಿಯೇ?
- ಇನ್ನು ಕೆಲವು ನಿಮಿಷಗಳಷ್ಟೇ. - ವಾವ್, ನಿಮ್ಮ ಮಗಳು ತುಂಬಾ ಚೆಲುವೆ.
ನಿಮ್ಮಂತೆಯೇ ಕಾಣುತ್ತಾಳೆ. ನಿಮಗೆ ಇವರಿಬ್ಬರು ಮಾತ್ರವೇ?
ಮಾರ್ಗರೆಟ್?
- ಅಂತಿಮ ಅತಿಥಿಗಳ ಪಟ್ಟಿಯನ್ನು ನೋಡಬಹುದೇ? - ಹೌದು, ಖಂಡಿತ.
ಅದನ್ನು ಮುದ್ರಿಸಿಲ್ಲ, ಇಲ್ಲಿ ನನ್ನ ಐಪ್ಯಾಡ್ನಲ್ಲಿ ನೋಡಬಹುದು.
ಇವೆರಲ್ಲರೂ ದೃಢೀಕರಿಸಿದ ಜನರು.
ಕೆಲವೊಮ್ಮೆ, ಕೊನೆ ಕ್ಷಣದಲ್ಲಿ ನಾಪತ್ತೆ ಆಗ್ತಾರೆ, ಇಲ್ಲಿ ಹಾಗಾಗದು ಅಂದುಕೊಂಡಿದ್ದೇನೆ.
ಬಹಳಷ್ಟು ಜನರಿದ್ದಾರೆ.
ಇದು ತುಂಬಾ ಎಂದು ಅಂದುಕೊಂಡರೆ, ಕಳೆದ ವಾರ ನಾವು ಯೋಜಿಸಿದ್ದ ವಿವಾಹ ನೋಡಬೇಕಿತ್ತು.
ಅರ್ಧದಷ್ಟು ನಗರ ಅಲ್ಲಿತ್ತು.
ದೊಡ್ಡ ಪಾರ್ಟಿ ಆಯೋಜಿಸುವುದು ಸದಾ ಭಯ ಹುಟ್ಟಿಸುತ್ತದೆ,
ಆದರೆ ನಿಮಗೆ ಅಗತ್ಯವಿರುವ ಬೆಂಬಲ ನೀಡಲು ನನ್ನ ತಂಡ ಅಲ್ಲಿರಲಿದೆ.
ನಾವು ತುಂಬಾ ಪಾರ್ಟಿ ಆಯೋಜಿಸಿದ್ದೇವೆ,
ನನ್ನನ್ನು ನಂಬಿ, ನಗರದ ಅತ್ಯುತ್ತಮ ಸ್ಥಳ ನಿಮಗಿದೆ.
ಈ ಸ್ಥಳದಲ್ಲಿ ಕಡಿಮೆಗಿಂತ ಹೆಚ್ಚು ಜನರಿರುವುದು ಒಳ್ಳೆಯದು,
ತುಂಬಾ ಕಡಿಮೆ ಜನರಿದ್ದರೆ ಸ್ವಲ್ಪ ಬೇಸರವಾಗಬಹುದು.
ಏನಿದ್ದರೂ, ಇದು ನಿಮ್ಮ ಗಂಡನ 50ನೇಯದ್ದು, ಅದು ಆಚರಿಸುವ ವಿಚಾರ,
ಎಲ್ಲಾ ಯೋಜಿಸುವಿಕೆಗಳು ಮುಗಿದಾಗ,
ನೀವು ಅದ್ಭುತವಾಗಿ ಸಮಯ ಕಳೆಯಲಿದ್ದೀರಿ.
- ನೀವು ಹೇಳಿದ್ದು ಸರಿಯೆಂದು ಆಶಿಸುವೆ. - ಅದು ಚಂದದ ಪಾರ್ಟಿ ಆಗಲಿದೆ.
- ನಾವು ಮನೆಗೆ ಹೋಗಬೇಕು. - ಸರಿ.
ಹೋಗೋಣ, ಡೈಸಿ.
ಎಷ್ಟು ಸುಂದರ ಚಿತ್ರ.
ಅದು ನೀನಿರಬೇಕು, ನಿನ್ನ ಸೋದರಿ, ಮತ್ತು ನಿನ್ನ ತಾಯಿ?
ಮತ್ತೆ ಅವರು ಯಾರು?
ಅವನು ಗಸ್.
- ಗಸ್ ಯಾರು? - ಡೈಸಿ, ಹೋಗೋಣ.
ಕ್ಷಮಿಸಿ, ನಾವು ತೆರಳಬೇಕು.
ಧನ್ಯವಾದ.
- ಆಯಿತು. - ಹೋಗೋಣ.
ಬೈ.
ದಿ ಪೀಕ್
- ನನಗೆ ಗೊತ್ತು, ಆದರೆ ನಾನು ಸಹಾಯ ಮಾಡಲಾಗದು. - ಏಕಿಲ್ಲ?
ಏಕಂದ್ರೆ, ಇದು ನಿಮ್ಮ ಪ್ರಾಜೆಕ್ಟ್.
ಆಂಟಿ ಹಿಲರಿ! ಬಾಗಿಲು ಹಿಡಿದುಕೊಳ್ಳಿ!
- ಬಾಗಿಲು ಹಿಡಿದುಕೊಳ್ಳಿ, ದಯವಿಟ್ಟು. - ಓಡಬೇಡಿ.
ಮಕ್ಳೇ, ನಾನೇನು ಹೇಳಿದೆ...
ನೀವು...
ನಾಳೆ ಕ್ಲಾರ್ಕ್ ಜನ್ಮದಿನಾಚರಣೆಗೆ ಆಮಂತ್ರಣ ಸಿಕ್ಕಿದೆಯೇ?
ಹೌದು. ನಮಗೆ ಬರಲು ಸಾಧ್ಯವಿಲ್ಲ. ನಮಗೆ... ನಮಗೆ ಬೇರೆ ಕಾರ್ಯಕ್ರಮವಿದೆ.
ನಮ್ಮ ಶುಭಕಾಮನೆಗಳನ್ನು ಕ್ಲಾರ್ಕ್ ಗೆ ತಿಳಿಸಿ.
ನನಗೆ ಅರ್ಥವಾಗಿದೆ.
ನನಗೆ ಗೊತ್ತು, ವಿಷಯಗಳು...
ಅಂದರೆ ನಾನು...
ನೀನು ಬಂದಿದ್ದರೆ ತುಂಬಾ ಒಳ್ಳೆಯದಿತ್ತು.
ನಾನು ಡೇವಿಡ್ ಜೊತೆ ಮಾತನಾಡುವೆ.
- ಎಸ್ಸಿ, ನಾವು ಮನೆಗೆ ಬಂದೆವು. - ಹಾಯ್, ಎಸ್ಸಿ.
- ಹಲೋ. - ಹೇ.
- ಹಾಯ್, ಎಸ್ಸಿ. - ಅಜ್ಜಿ, ಅಜ್ಜ.
ಕ್ಷಮಿಸಿ, ಅವರು ಈಗ ಬಂದರು. ನಾನು...
- ಚಿಂತೆಯಿಲ್ಲ. - ಹಾಯ್, ಅಜ್ಜ.
ನೀವು ಇಂದು ಹೋಟೆಲಿನಲ್ಲಿ ವಿಶ್ರಾಂತಿ ಪಡೆಯುವಿರಿ ಅಂದುಕೊಂಡೆ.
- ನಮಗೆ ಬೇಜಾರಾಯಿತು, ಮಕ್ಕಳನ್ನು ನೋಡಬೇಕಿತ್ತು. - ಅಂಕಲ್ ಪೀಟರ್ ಎಲ್ಲಿ?
- ಅವನು ಮಲಗಿದ್ದಾನೆ. ಅವನಿಗೆ ಜೆಟ್ ಲ್ಯಾಗ್. - ನಂಗೆೆ ಹಸಿವಾಗುತ್ತಿದೆ.
ಆಸ್ಟ್ರೇಲಿಯಾ ಶೋಧ ಪ್ರದೇಶ
ಸ್ವಲ್ಪ ತಾಜಾ ಹಣ್ಣು ತಂದಿರುವೆ.
- ಮ್ಯಾಂಗೊ! - ವಾಹ್!
ನಿಲ್ಲಿ. ಕೈತೊಳೆಯಿರಿ.
ಎಸ್ಸಿ, ಮನೆಗೆ ಬಂದ ನಂತರ ಅವರು ಕೈತೊಳೆಯುವಂತೆ ನೋಡಿಕೋ.
- ಆಯಿತು, ಮ್ಯಾ'ಮ್. - ಧನ್ಯವಾದ, ಎಸ್ಸಿ.
ಇಂತಹ ಕೆಟ್ಟದ್ದನ್ನು ನೋಡಲು ಆಕೆಗೆ ಏಕೆ ಅನುಮತಿಸುವೆ?
ಆಕೆಗೆ ಸುದ್ದಿಯೆಂದರೆ ಅಚ್ಚುಮೆಚ್ಚು. ಅದರ ಬಗ್ಗೆ ನನಗೇನೂ ಮಾಡಲು ಸಾಧ್ಯವಿಲ್ಲ.
ಜಿಂಗ್, ನನ್ನ ಕಪ್ಗಳನ್ನು ತೆಗೆದೆಯಾ?
ಅದನ್ನು ಆ ಕ್ಯಾಬಿನೆಟಿನಲ್ಲಿ ಇರಿಸಿದೆ. ಅಲ್ಲಿಯೇ ಅದು ಸರಿ.
ಈ ಪಾರ್ಟಿ ಒಳ್ಳೆಯ ಐಡಿಯಾ ಎಂದು ನನಗನಿಸದು.
- ತುಂಬಾ ಬೇಸರ ಮೂಡಿಸ್ತದೆ. - ಒಪ್ತೇನೆ.
ನಾವು ಇಲ್ಲಿ ಒಂದು ರೀತಿಯ ಸಹಜತೆ ಮೂಡಿಸಲು ಯತ್ನಿಸುತ್ತಿರುವೆವು.
ಆದರೆ ಮಾರ್ಗರೆಟ್, ನಿಮ್ಮ ಜೀವನ ಇನ್ನು ಸಹಜವಲ್ಲ.
- ಎಲ್ಲಾ ಮಾವಿನ ಹಣ್ಣ ತಿನ್ನಬೇಡ. - ಹಾಗೆಂದು ಏಕೆ ನಟಿಸಬೇಕು?
ಹೇ, ಯಾರಿಗೆ ಆಟ ಆಡಬೇಕು?
- ಒಂದು ಆಟ ಆಡೋಣ. - ನಾವು ಟಿವಿ ನೋಡುತ್ತಿದ್ದೇವೆ.
ಅಮ್ಮಾ? ನಾನು ಚಾಕಲೇಟ್ ಹಾಲು ಕುಡಿಯಲೇ?
ಆಯಿತು. ಸರಿ, ಸರಿ, ಖಂಡಿತ.
- ಫಿಲಿಪ್? - ಏನು?
ಯಾರು...
ಈ ಚಿತ್ರದಲ್ಲಿ ಯಾರಿದ್ದಾರೆ?
ಅದು ಏಸು ಕ್ರಿಸ್ತ.
ಏಸು ಕ್ರಿಸ್ತ? ಏಕೆ ಕ್ರಿಸ್ತನ ಚಿತ್ರ ಬಿಡಿಸುವೆ?
ಅವನ ಚಿತ್ರ ನೀನು ಬಿಡಿಸುವುದು ಬೇಕಿಲ್ಲ, ಸರಿಯಾ?
ಸರಿ, ಅಮ್ಮಾ.
ಹೇ, ಮಗು. ಇಲ್ಲಿ ಬಾ.
ನಿನ್ನನ್ನು ತುಂಬಾ ಪ್ರೀತಿಸುವೆ.
ಅದು ನಿನಗೆ ಗೊತ್ತಲ್ಲವೇ?
ನಾನೂ ನಿನ್ನ ತುಂಬಾ ಪ್ರೀತಿಸುವೆ.
ಹೋಗಿ ಚಾಕಲೇಟ್ ಹಾಲು ಕುಡಿ.
ಧನ್ಯವಾದ, ಅಮ್ಮಾ.
"ದೇವರು ನಿಮ್ಮನ್ನು ಆಶೀರ್ವದಿಸಲಿ, ನಿಮ್ಮನ್ನು ಪ್ರತಿದಿನ ಸುರಕ್ಷಿತವಾಗಿರಿಸಲಿ.
- ದೇವರು ನಿಮ್ಮ ಜೊತೆಗಿರಲಿ. - ನಿನ್ನ ಜೊತೆಗೂ ಇರಲಿ.
"ದೇವರ ಉಪಸ್ಥಿತಿ ಮತ್ತು ಪ್ರೀತಿ ನಿಮ್ಮನ್ನು ಸುತ್ತುವರಿದಿದೆ ಎಂದು ತಿಳಿಯಿರಿ."
"ದೇವರ ದಯೆ ಸದಾ ಇರಲಿದೆ."
ತಾಯಿ ಕೋಳಿಯಂತೆ, ದೇವರು ಆಕೆಯ ರೆಕ್ಕೆಗಳಡಿ ನಿಮಗೆ ಆಶ್ರಯ ನೀಡುತ್ತಾನೆ.
ಮಾನವ ಜನಾಂಗದ ಮೇಲಿನ ನಿನ್ನ ಪ್ರೀತಿಯಲ್ಲಿ ದೇವರು ಸದಾ ನೆಲೆಸಿದ್ದಾನೆ.
ನೀ ನಿನ್ನ ಪುತ್ರ ಏಸುವನ್ನು ಕಳಿಸಿದೆ
ಈ ಭೂಮಿಯಲ್ಲಿ ನಡೆದಾಗ ಇಲ್ಲಿರುವ ಮನುಷ್ಯರಂತೆಯೇ ಇದ್ದ.
ನಮ್ಮಂತೆಯೇ ಆತನೂ ಕಷ್ಟಪಟ್ಟವನು.
ಆತ ನೋವು ಮತ್ತು ಭಯ ಅನುಭವಿಸಿದವನು.
- ಕೆಟ್ಟ ಹುಡುಗಿಯಾಗಿದ್ದೆ, ಅಲ್ಲವೇ, ಬನ್ನಿ? - ನಾನು ತುಂಬಾ ಕೆಟ್ಟವಳಾಗಿದ್ದೆ.
- ನೀನು ಶಿಕ್ಷೆಗೆ ಅರ್ಹಳು. - ನಿಜವಾಗಿಯೂ. ನನಗೆ ಹೊಡಿ.
- ಏನು ಮಾಡಬೇಕು? - ನನಗೆ ಹೊಡಿ, ಡರ್ಕ್.
ಇನ್ನೂ ಜೋರಾಗಿ. ಹೊಡಿ.
ನಂತರ ಭೇಟಿಯಾಗುವೆ.
- ನಂತರ ಭೇಟಿಯಾಗುವೆ ಎಂದೆ. - ಸರಿ.
"ಡರ್ಕ್" ಯಾವ ರೀತಿಯ ಹೆಸರು?
ಅದು ಬಿಳಿಯ ವ್ಯಕ್ತಿಯ ಹೆಸರು.
ಚೆಟ್ ಅಥವಾ ಟಕ್ಕರ್ ಅಥವಾ ಸ್ಕೀಟ್ ಅಥವಾ ಡೇವಿಡ್ ಥರ.
ಕೊರಿಯನ್ನರಿಗೆ ಸಹ ಸಾಕಷ್ಟು ವಿಚಿತ್ರ ಹೆಸರುಗಳಿವೆ.
- ಉರಿ, ಯುಕಿ, ಸುಕಿ ರೀತಿ. - ಅವುಗಳು ಜಪಾನಿ ಹೆಸರುಗಳು.
ನಿಜವಾಗಿ, ಅಲ್ಲ. ಸುಕಿ ಹೆಸರಿನ ಕೊರಿಯನ್ ಹುಡುಗಿ ನನಗೆ ಗೊತ್ತು.
ನಿನಗೆ ಗೊತ್ತಿತ್ತು ಖಂಡಿತ.
ಸರಿ.
ನಂತರ ಭೇಟಿಯಾಗುವೆ, ಡರ್ಕ್.
ಎಷ್ಟು?
60.
ತಗೊಳ್ಳಿ.
ಧನ್ಯವಾದ.
ಈ ಬಸ್ ದೇವಸ್ಥಾನದ ರಸ್ತೆ ಮೂಲಕ ಸಾಗುತ್ತದೆಯೇ?
ಮರೆತುಬಿಡು. ಮುಂದಿನ ಸ್ಟಾಪಿನಲ್ಲಿ ಇಳಿಯೋಣ.
ನಾವು ತಪ್ಪಾದ ಬಸ್ ಹತ್ತಿದ್ದೇವೆಯೇ?
ನನಗೆ ಹಾಗನಿಸುತ್ತಿಲ್ಲ.
ಯುವತಿ.
ಈ ಬಸ್ ದೇವಸ್ಥಾನದ ರಸ್ತೆಯಲ್ಲಿ ನಿಲ್ಲುತ್ತದೆಯೇ?
ನಾನು ಕೊರಿಯನ್.
ಅಲ್ಲಿ ನಿಲುಗಡೆ ಇದೆಯೇ?
ಆಕೆ ಕೊರಿಯನ್.
ಕೊರಿಯನ್?
ಆಕೆೆ ಕ್ಯಾಂಟೊನೀಸ್ ಮಾತನಾಡುವುದಿಲ್ಲವೇ?
ಇಲ್ಲ ಅನಿಸುತ್ತದೆ.
ಆಕೆ ಕೊರಿಯನ್ ಎಂದು ಹೇಳಿದಳು.
ಹೇ, ಪೂರಿ.
No comments yet. Be the first to leave one.