The Sheep Detectives

The Sheep Detectives

Muat Turun Sari Kata Kannada

Maklumat siaran

The Sheep Detectives 2026 1080p WEBRip 10Bit DDP5 1 x265-NeoNoir
Ulasan oleh chargephoton88

Tag

webdl
Diterbitkan pada: 2026-08-21
Muat Turun: 0
Masalah Pendengaran: No
FPS: 24

Pratonton sari kata Kannada

200 baris pertama.

ಪ್ರೀತಿಯ ರೆಬೆಕ್ಕಾ:

ನಿನಗೆ ತುಂಬಾ ಪ್ರಶ್ನೆಗಳಿವೆ ಎಂದು ನಾನು ಬಲ್ಲೆ.

ನನಗೂ ಅಷ್ಟೇ.

ಎಷ್ಟೇ ಆಗಲಿ, ಜೀವನ ಒಂದು ಮರ್ಮ.

ಆದರೆ ಜಗತ್ತಿನ ಎಲ್ಲಾ ಒಗಟುಗಳಿಗೂ ಒಂದು ಉತ್ತರ ಅಂತ ಇದ್ದರೆ,

ಸಂತೋಷಕ್ಕೆ ಒಂದು ರಹಸ್ಯವಿದ್ದರೆ,

ನಾನು ಅದನ್ನು ಹೀಗೆ ಪ್ರಸ್ತಾಪಿಸುತ್ತೇನೆ:

ಕುರಿಗಳು.

ಇಲ್ಲ, ನಿಜವಾಗಲೂ.

ಅದು ನಿಜವಾಗಲೂ ಕುರಿಗಳೇ.

ಸರಿ, ಬರುತ್ತಿದ್ದೇನೆ.

ನಿನ್ನ ಹಿಂದಿನ ಪತ್ರದಲ್ಲಿ ನೀನು ಕೇಳಿದ್ದೆ,

ನನ್ನ ಕುರಿಗಳಲ್ಲಿ ಯಾವುದಾದರೂ ವಿಶೇಷವಾದದ್ದು ಇದೆಯಾ ಅಂತ.

ಅಂದರೆ, ಅವೆಲ್ಲವೂ ವಿಶೇಷವಾದವೇ. ಹಾಗಾಗಿ ಪ್ರತಿಯೊಂದಕ್ಕೂ ಹೆಸರಿಟ್ಟಿದ್ದೇನೆ.

ಉದಾಹರಣೆಗೆ:

ಈ ಅವಳಿ ರೌಡಿ ಟಗರುಗಳಿಗೆ ರಾನಿ ಮತ್ತು ರೆಜ್ಜಿ ಅಂತ ಹೆಸರಿಟ್ಟಿದ್ದೇನೆ.

ಮತ್ತು ಇವರು ಹೆಮ್ಮೆಯ ಮತ್ತು ಗೌರವಾನ್ವಿತ ಸರ್ ರಿಚ್‌ಫೀಲ್ಡ್.

ತುಪ್ಪಳ ತುಂಬಿದ ಕ್ಲೌಡ್.

ಒಂಥರಾ ವೈಯಾರಿ ಬಿಡು ಅವಳು.

ಅತ್ಯಂತ ಕುತೂಹಲಭರಿತ ಝೋರಾ.

ತಾಳ್ಮೆಭರಿತ ಮಾಪಲ್.

ಮತ್ತು ವುಲ್-ಐಯ್ಸ್…

ಅದು ಯಾಕೆಂದರೆ, ನನಗೆ ಅದಕ್ಕಿಂತ ಉತ್ತಮವಾದ ಹೆಸರು ಇನ್ನೂ ಹೊಳೆದಿಲ್ಲ.

ಆಮೇಲೆ, ಸರಿ, ಅವೆಲ್ಲವೂ ವಿಶೇಷವಾದವೇ ಅಂತ ನಾನು ಹೇಳಿದ್ದೇನೆ,

ಆದರೆ ನಾನು ಒಂದಂತೂ ಒಪ್ಪಬೇಕು, ನನ್ನ ಎರಡು ಕುರಿಗಳು ಎಲ್ಲಕ್ಕಿಂತ ವಿಶೇಷವಾದಂಥವು.

ಅವನು ಸೆಬಾಸ್ಟಿಯನ್.

ನನ್ನ ಅತಿ ದೊಡ್ಡ ಟಗರು,

ಮತ್ತು ನನ್ನಂತೆ, ಅವನು ಕೂಡ ಒಂಟಿ.

ಯಾವಾಗಲೂ ಒಬ್ಬನೇ ದೂರ ಹೋಗುತ್ತಿರುತ್ತಾನೆ.

ಮತ್ತೆ ಅವನಾಗಿಯೇ ವಾಪಸ್ ಬಂದುಬಿಡುತ್ತಾನೆ.

ಮತ್ತು ಕೊನೆಯದಾಗಿ, ಲಿಲ್ಲಿ.

ನನ್ನ ಅತಿ ಬುದ್ಧಿವಂತ ಕುರಿ.

ನನ್ನ ತಲೆಯಲ್ಲಿ ಏನು ಯೋಚಿಸುತ್ತಿದ್ದೇನೆ ಮತ್ತು ಹೃದಯದಲ್ಲಿ ಏನು ಅನುಭವಿಸುತ್ತಿದ್ದೇನೆ

ಅಂತ ಇದಕ್ಕೆ ಯಾವಾಗಲೂ ತಿಳಿದಿರುತ್ತದೆ.

ಇತರರಿಗೆಲ್ಲಾ ಮಿಗಿಲಾಗಿ, ಇವಳಿಂದ ನನಗೆ ಸಿಗುವಂಥ ಶಾಂತಿ ಕುರುಬರಿಗಷ್ಟೇ ಗೊತ್ತು.

ಭೂಮಿಯ ಮೇಲಿನ ಅತ್ಯಂತ ಕರುಣಾಮಯಿ ಜೀವಿಗಳ

ಆರೈಕೆ ಮಾಡುವುದರಿಂದ ಲಭಿಸುವಂಥ ಶಾಂತಿ.

ಪ್ರತಿದಿನವೂ ಅವರ ಆರೋಗ್ಯದ ಆರೈಕೆಯಿಂದ ಶುರುವಾಗುತ್ತದೆ.

ಅವುಗಳಿಗೆ ಹೊಟ್ಟೆ ತುಂಬಾ ಆಹಾರ ಕೊಡುವೆ…

ಸುಂದರವಾಗಿ ಕಾಣುವಂತೆ ಮಾಡುವೆ.

ಅವುಗಳ ಮನೋರಂಜನೆಗಾಗಿ ಸಾಧ್ಯವಾದಷ್ಟು ಮಾಡುವೆ.

ನಾನು ಎದ್ದಾಗ ನನಗೆ ಗೊತ್ತು ನಾನು

ನಿನ್ನ ಪಕ್ಕದಲ್ಲಿ ಮಲಗಿದ್ದು ಏಳುವ ಗಂಡು ನಾನಾಗಿರುವೆ ಎಂದು

ಮತ್ತು ಅವುಗಳಿಗೆ ಔಷಧವನ್ನು ಕೊಡುತ್ತೇನೆ, ಅದನ್ನು ಅವು ಇಷ್ಟಪಡುತ್ತವೆ ಅಂದುಕೊಳ್ಳುತ್ತೇನೆ…

ಮಾತಾಡುವಂತಿದ್ದರೆ ಹೇಳಿಕೊಳ್ಳುತ್ತಿದ್ದವು.

ನಿನ್ನ ಔಷಧಿಯ ಸಮಯ, ಕಣೋ. ತಗೋ.

ನನ್ನ ಕೆಲಸಗಳೆಲ್ಲಾ ಮುಗಿದು, ಸೂರ್ಯನು ಆಕಾಶದ ಅಡಿಯಲ್ಲಿ ಮುಳುಗಲು ಆರಂಭಿಸಿದಾಗ,

ನಾನೊಂದು ಪುಸ್ತಕವನ್ನು ಎತ್ತಿಕೊಂಡು ಅವುಗಳಿಗಾಗಿ ಓದುತ್ತೇನೆ.

ಪತ್ತೇದಾರಿ ಕಾದಂಬರಿಗಳು, ನಿಗೂಢತೆಗಳು, ರಹಸ್ಯಗಳು. ಎಲ್ಲವೂ ನನ್ನ ನೆಚ್ಚಿನವೇ.

"ರಾಡ್ನಿ ಹಾಲಿಂಗ್ಸ್‌ಹೆಡ್ ಕೊಲೆ ಯಾವಾಗ ನಡೆಯಿತು ಅಂತ ನಂಗೊತ್ತು,

ಮತ್ತು ನಿಜವಾದ ಕೊಲೆಗಾರ ಯಾರು ಅಂತ ನಂಗೊತ್ತು."

ಅವರು ಕಥೆಯನ್ನು ಆಲಿಸುತ್ತಿದ್ದಾರೆ ಅಂತ ಅಂದುಕೊಳ್ಳಲು ನನಗೆ ಇಷ್ಟ.

ಆದರೂ ನನ್ನ ಮನಸ್ಸಿನಲ್ಲಿ ನನಗೆ ಗೊತ್ತು, ಅವು ಎಷ್ಟೇ ವಿಶೇಷವಾಗಿದ್ದರೂ, ಅವು ಆಗಲೂ…

ಕುರಿಗಳೇ.

ಇಲ್ಲ, ಅಷ್ಟೇ.

ಹೋಗಿ, ಎಲ್ಲರೂ.

ನಾಳೆ ಇದರ ಅಂತ್ಯವನ್ನು ಓದಿ ಹೇಳುತ್ತೇನೆ.

ಅಲ್ಲಿ ಯಾಕೆ ನಿಲ್ಲಿಸಿದ ಅಂತ?

ಕೊಲೆಗಾರ ಯಾರು ಅಂತ ಇನ್ನೇನು ಹೇಳುವವನಿದ್ದ!

ಇದೊಂದು ಹಿಂಸೆ! ಅದು ಕೆಲಸದವಳೇ, ಅಲ್ವಾ?

ಖಂಡಿತ ಅದು ಕೆಲಸದವಳೇ.

ಇಲ್ಲ, ಇಲ್ಲ, ಇಲ್ಲ, ಅದು ತೋಟದ ಮಾಲಿ.

ಯಾವಾಗಲೂ ಹುಲ್ಲು ಕತ್ತರಿಸುತ್ತಿದ್ದ, ಆದರೆ ಸ್ವಲ್ಪವೂ ತಿನ್ನುತ್ತಿರಲಿಲ್ಲವಲ್ಲ?

ಹೌದು. ಅನುಮಾನಾಸ್ಪದವೇ.

ನಿಮಗೇನು ತಲೆ ಕೆಟ್ಟಿದೆಯಾ? ಅದನ್ನು ಮಾಡಿದ್ದು ಆ ವೈದ್ಯ.

ಖಂಡಿತ ಇಲ್ಲ. ಆ ಭಯಾನಕ ಆಂಟಿ.

ಆ ಭಯಾನಕ ಆಂಟಿ ಇದ್ದಿದ್ದು ಮೂರು ಕಥೆಗಳ ಹಿಂದೆ ಕಣೋ, ಜಾಣ.

ಅದು ಹೇಗೋಲೋ ನಾವು ಒಂದೇ ತಂದೆ-ತಾಯಿಗೆ ಹುಟ್ಟಿದ್ದು?

ಅಯ್ಯೋ, ಶುರುವಾಯಿತು.

ಹೌದೋ.

ಓ, ಮತ್ತೆ ಶುರುಮಾಡಿಕೊಂಡರು.

ನೀವೆಲ್ಲರೂ ತಪ್ಪು ತಿಳಿದಿದ್ದೀರಿ.

ನನಗೆ ಅದು ಎರಡು ಅಧ್ಯಾಯಗಳ ಹಿಂದೆಯೇ ಗೊತ್ತಾಯಿತು.

ಕೆಲಸದವಳು, ತಾನೆ?

ಕೆಲಸದವಳಲ್ಲ.

ಅವನ ತಮ್ಮನ ಮಗ, ಬರ್ಟಿ ಹಾಲಿಂಗ್ಸ್‌ಹೆಡ್.

ಆದರೆ, ಲಿಲ್ಲಿ, ಬರ್ಟಿ ಹಾಲಿಂಗ್ಸ್‌ಹೆಡ್ ವಿರುದ್ಧದ ಸಾಕ್ಷಿಗಳೆಲ್ಲವನ್ನೂ ನಿಜವಾದ ಕೊಲೆಗಾರನೇ

ತಪ್ಪಾಗಿ ಸೃಷ್ಟಿಸಿದ್ದು ಅಂತ ಡಿಟೆಕ್ಟಿವ್ ಸಾಬೀತು ಮಾಡಿದನಲ್ವಾ?

ಅದೇನೇ.

ನಿಮಗೆ ಗೊತ್ತಾಗಲಿಲ್ವಾ?

ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು, ಸಾಕ್ಷಿಯನ್ನು ಅವನೇ ಸೃಷ್ಟಿಸಿದ್ದ.

ಬರ್ಟಿ ಹಾಲಿಂಗ್ಸ್‌ಹೆಡ್ಡೇ ನಿಜವಾದ ಕೊಲೆಗಾರ.

ಹಾಗೆ ಯಾಕೋ ಮಾಡಿದೆ?

ಜಾರ್ಜ್ ನಾಳೆ ಕಥೆಯನ್ನು ಮುಗಿಸುತ್ತಾನೆ. ನೀವೇ ನೋಡುವಿರಂತೆ.

ನನಗೆ ಈಗಲೂ ಅದು ಕೆಲಸದವಳೇ ಅನಿಸುತ್ತೆ.

"ಬರ್ಟಿಗೆ ಆ ಕಾನೂನಿನ ಬಗ್ಗೆ ಎಲ್ಲಾ ಗೊತ್ತಿತ್ತು,

ಒಂದೇ ಅಪರಾಧಕ್ಕಾಗಿ ಒಬ್ಬ ವ್ಯಕ್ತಿಯನ್ನು ಎರಡು ಬಾರಿ ಶಿಕ್ಷಿಸುವಂತಿರಲಿಲ್ಲ.

ಹಾಗಾಗಿ, ಬಂಧನದಿಂದ ತಪ್ಪಿಸಿಕೊಳ್ಳಲು, ಸುಳ್ಳು ಸಾಕ್ಷಿಗಳನ್ನು ಅವನೇ ಸೃಷ್ಟಿಸಿದ.

ಬರ್ಟಿ ಹಾಲಿಂಗ್ಸ್‌ಹೆಡ್ಡೇ ನಿಜವಾದ ಕೊಲೆಗಾರನಾಗಿದ್ದ."

ನನ್ನ ಹೆಚ್ಚಿನ ಕುರಿಗಳ ದಿನಚರಿ ಹೇಗಿರುತ್ತೆ ಎಂದರೆ ಅವು ತಿನ್ನುತ್ತಿರುತ್ತವೆ,

ಅಥವಾ ತಿನ್ನುವುದರ ಬಗ್ಗೆ ಯೋಚಿಸುತ್ತಿರುತ್ತವೆ.

ಆದರೆ ನನ್ನ ಬಳಿ ಮೂರು ಚೈತನ್ಯಭರಿತ ಕುರಿಮರಿಗಳಿವೆ, ಅವುಗಳ ಶಕ್ತಿ ಅಪರಿಮಿತ.

ವಸಂತಕಾಲದಲ್ಲಿ ಜನಿಸಿದ ಸಂತೋಷದ, ನಿರಾತಂಕ ಪುಟ್ಟ ಜೀವಿಗಳು.

ಅಸಲಿಗೆ, ಬಹುತೇಕ ಎಲ್ಲಾ ಕುರಿಮರಿಗಳು ವಸಂತಕಾಲದಲ್ಲೇ ಜನಿಸುತ್ತವೆ.

ಮತ್ತು ಇಲ್ಲಿ ನನ್ನ ಒಂದು ಕುರಿಮರಿ ಇದೆ, ಇದು ಹುಟ್ಟಿದ್ದು ಚಳಿಗಾಲದಲ್ಲಿ.

ಓ. ಹಲೋ.

- ನಾನು ಡೈಸಿ. - ನಾನು ಆಲಿವರ್.

- ನಾನು ಪಿಕಲ್ಸ್. - ನಿನ್ನ ಹೆಸರೇನು?

ನನಗೆ ಹೆಸರಿಲ್ಲ.

ನಮ್ಮ ಜೊತೆ ಆಟ ಆಡುತ್ತೀಯಾ?

ಇಲ್ಲ! ಹೋಗಾಚೆ!

ಆ ಚಳಿಗಾಲದ ಕುರಿಮರಿಯ ಜೊತೆ ಆಟ ಆಡಬಾರದು.

ಅವನು ಈ ಹಿಂಡಿಗೆ ಸೇರಿದವನಲ್ಲ.

ಕುರಿಗಳಿಗಷ್ಟೇ ಅರ್ಥವಾಗುವಂಥ ಕಾರಣಗಳಿಂದ,

ಚಳಿಗಾಲದಲ್ಲಿ ಹುಟ್ಟಿದ ಕುರಿಮರಿಯನ್ನು ಹಿಂಡು ಸಾಮಾನ್ಯವಾಗಿ ತಿರಸ್ಕರಿಸುತ್ತದೆ.

ಪರವಾಗಿಲ್ಲ.

ಚಳಿಗಾಲದಲ್ಲಿ ಹುಟ್ಟಿದ ಕುರಿಮರಿ ಭಿನ್ನವಾಗಿರುವುದರಿಂದ ಅಷ್ಟೇ.

ಓ, ಅಷ್ಟೇ. ಹಾಗೆ.

ನನಗೊಂದು ಪ್ರಶ್ನೆ ಇದೆ.

ಜಾರ್ಜ್ ಯಾವಾಗಲೂ ಆ ಕುರಿಮರಿಗೆ ಅಷ್ಟು ಪ್ರೀತಿ ಯಾಕೆ ತೋರಿಸುತ್ತಾನೆ?

ಜಾರ್ಜ್ ಕುರಿ ಅಲ್ಲ.

ಅವನಿಗೆ ಚಳಿಗಾಲದ ಕುರಿಮರಿಗಳ ಬಗ್ಗೆ ಯಾರೂ ಹೇಳಿಲ್ಲ.

ಓ, ಮತ್ತೊಂದು ವಿಷಯ, ನೀನು ನನ್ನ ಆಹ್ವಾನವನ್ನು ಸ್ವೀಕರಿಸಿದರೆ,

ನಾನು ಡೆನ್‌ಬ್ರೂಕ್ ಎಂಬ ಊರಿನ ಪಕ್ಕದಲ್ಲಿ ವಾಸಿಸುತ್ತಿರುತ್ತೇನೆ ಎಂದು ತಿಳಿದಿರು.

ಅದರಲ್ಲಿ ಕೆಲವು ವಿಶೇಷವಾದಂಥವರಿದ್ದಾರೆ.

ಉದಾಹರಣೆಗೆ…

ಶುಭೋದಯ, ಕೇಲೆಬ್.

ಕೇಲೆಬ್, ಅವನೂ ಕುರುಬನೇ.

ಶುಭೋದಯ, ಮಹಿಳೆಯರೇ.

ಇವನೆಂದರೆ ನನಗಾಗಲ್ಲ.

ಕಸಾಯಿಯವನಾದ ಹ್ಯಾಮ್.

ಇವನೆಂದರೆ ಖಂಡಿತ ನನಗಾಗಲ್ಲ.

ಬೆಥ್, ವಸತಿ ಮಾಲೀಕಳು.

ಇವಳಿಗೆ ನನ್ನ ಕಂಡರಾಗಲ್ಲ.

ಅವನನ್ನು ಕೊಂದುಹಾಕುತ್ತೇನೆ.

ಟಿಮ್, ಪೊಲೀಸ್ ಅಧಿಕಾರಿ.

ಇವನೊಬ್ಬ ಮೂರ್ಖ.

ಮತ್ತು ರೆವೆರೆಂಡ್ ಹಿಲ್‌ಕೋಟ್, ಈತನ ಪ್ರಕಾರ ಈತ ಜನರನ್ನೇ ಕಾಯುವ ಕುರುಬ.

ನಮ್ಮ ಸಂಬಂಧ ತುಂಬಾ ಸಂದಿಗ್ಧವಾದದ್ದು.

ಮತ್ತು ಇಂದಿನ ಪಠಣ: ಕಳೆದುಹೋದ ಕುರಿಯ ದೃಷ್ಟಾಂತ.

ಜಾರ್ಜ್, ನಮ್ಮೊಂದಿಗೆ ಸೇರಲು ಬಂದೆಯಾ?

ಕರ್ತನ ಗೃಹದಲ್ಲಿ ಎಲ್ಲರಿಗೂ ಸ್ವಾಗತವೇ.

ಕಸಾಯಿಯವರಿಗೂ ಕೂಡ, ಹಾಂ?

ನಾನು ನಿಮ್ಮ ಜೊತೆ ಸೇರಲು ಬಂದಿಲ್ಲ.

ಒಂದು ಹಳೆ ಬಾಕಿ ತೀರಿಸಲು ಬಂದೆ.

ನಮ್ಮ ಪ್ರೀತಿಯ ಜಾರ್ಜ್.

ನಮ್ಮ ಪ್ರೀತಿಯ ಜಾರ್ಜ್.

ಆದರೆ ಜನರ ಬಗ್ಗೆ ಸಾಕಿನ್ನು.

ನೀನು ನನ್ನ ಹಿಂಡನ್ನು ಭೇಟಿಯಾಗಬೇಕು.

ಅವರು ನಿನ್ನನ್ನು ನೋಡಲು ಕಾತುರರಾಗಿದ್ದಾರೆ.

ನಾನು ಕೂಡ ಅಷ್ಟೇ.

ದಯವಿಟ್ಟು ಬೇಗ ಬಾ.

ಪ್ರೀತಿಯಿಂದ, ಜಾರ್ಜ್.

ಕ್ಲೌಡ್?

ನನಗೊಂದು ಪ್ರಶ್ನೆ ಇದೆ.

ಕಾಡು ಸೇವಂತಿಗೆ ತಿಂದರೆ ನನ್ನ ಕಣ್ರೆಪ್ಪೆಗಳೂ ನಿನ್ನಂತೆಯೇ ಸುಂದರವಾಗುತ್ತವಾ?

ಇಲ್ಲ, ಅವುಗಳಿಂದ ಕಣ್ರೆಪ್ಪೆಗಳಿಗೇನೂ ಪ್ರಯೋಜನವಿಲ್ಲ.

ಆದರೆ ಅದರಿಂದ ಉಣ್ಣೆಗೆ ತುಂಬಾ ಪ್ರಯೋಜನವಿದೆ.

ವುಲ್-ಐಯ್ಸ್‌ನ ನೋಡು.

ಅವನು ಕಾಡು ಸೇವಂತಿಗೆ ಬಿಟ್ಟರೆ ಬೇರೇನೂ ತಿನ್ನುವುದಿಲ್ಲ.

ಓ, ಅದೇನಾ ಇವುಗಳ ಹೆಸರು? ಸರಿ.

ಒಂದಷ್ಟು ಕಾಡು ಸೇವಂತಿಗೆಯನ್ನು ಸೆಬಾಸ್ಟಿಯನ್‌ಗಾಗಿ ಉಳಿಸಿಡಬೇಕು. ಅವನು ಹೋಗಿ ತುಂಬಾ ದಿನಗಳಾದವು.

ಯಾರಿಗೇನಾಗಬೇಕು? ಜಾರ್ಜ್ ಅದೆಲ್ಲಿಂದಲೋ ಅವನನ್ನು ಇಲ್ಲಿಗೆ ತಂದಾಗಿನಿಂದ,

ಅವನು ಆ ಊರಿನೊಳಗೆ ಅಲೆದಾಡಿ ಹೋಗುತ್ತಿರುತ್ತಾನೆ.

ಹಸಿದಿರಲಿ ಬಿಡು.

ಅವನು ನಮ್ಮ ಬಗ್ಗೆ ಕಾಳಜಿ ತೋರದಿದ್ದ ಮಾತ್ರಕ್ಕೆ ನಾವು ಕಾಳಜಿ ತೋರಬಾರದು ಅಂತೇನಿಲ್ಲ.

ಸೆಬಾಸ್ಟಿಯನ್ ನಮ್ಮ ಹಿಂಡಿಗೆ ಸೇರಿದವನು.

ಓ, ಓ, ನೋಡಿ! ಅದು ಕೇಲೆಬ್!

ನಾಯಿಗಳು!

ನಾಯಿಗಳು, ನಾಯಿಗಳು, ನಾಯಿಗಳು, ನಾಯಿಗಳು, ನಾಯಿಗಳು.

ಕೇಲೆಬ್! ಇಲ್ಲಿ ಬಾ!

ಆಹಾ, ಇವನ ವಾಸನೆ ಎಂದರೆ ನನಗೆ ತುಂಬಾ ಇಷ್ಟ.

ಅದು ಅವನ ಉಣ್ಣೆಯ ಸ್ವೆಟರಿನದ್ದು.

ಎಷ್ಟು ಸುಂದರವಾಗಿ ಬಣ್ಣ ಹಾಕಿದ್ದಾರೆ.

- ಒಳಗೆ ಬರಬಹುದಾ? - ಹೋಗಾಚೆ!

ಒಳಗೆ ಬರುತ್ತಿದ್ದೇನೆ.

ಎಷ್ಟು ಹೊಸದಾಗಿ ಸುಂದರವಾಗಿ ಹೊಳೆಯುತ್ತಿದೆ.

ನಿನಗೂ ನನ್ನ ಆಲೋಚನೆಯೇ ಹೊಳೆಯುತ್ತಿದೆಯಾ?

- ನಾನು ಅದಕ್ಕೆ ಗುದ್ದಬೇಕು! - ನಾನು ಅದಕ್ಕೆ ಜೋರಾಗಿ ಗುದ್ದಬೇಕು!

ರೆಜ್ಜಿ! ರಾನಿ!

ಇದನ್ನು ಆಗಲೇ ಚರ್ಚಿಸಿದ್ದೇವೆ. ಅದಕ್ಕೆ ನಾವು ಗುದ್ದಬೇಕಾದರೆ…?

ಅದಕ್ಕೆ ನಾವು ಗುದ್ದಬೇಕಾದರೆ ಒಂದು ಸೂಕ್ತ ಕಾರಣ ಇರಬೇಕು.

ಅದು ಸರಿ.

ಕೇಲೆಬ್ ಈ ತಿಂಗಳಲ್ಲಿ ಮೂರನೇ ಬಾರಿ ಬರುತ್ತಿದ್ದಾನೆ.

ಅವರು ಅಲ್ಲಿ ಕೇವಲ ಒಂದು ವಿಷಯದ ಬಗ್ಗೆ ಅಷ್ಟೇ ಚರ್ಚಿಸುತ್ತಿರುತ್ತಾರೆ.

ಹಿಂಡುಗಳನ್ನು ಜೊತೆ ಸೇರಿಸುವುದು.

- ಹಿಂಡುಗಳನ್ನು ಜೊತೆ ಸೇರಿಸುವುದು! - ಹೊಸ ಕುರಿಗಳು.

- ಹೊಸ ಬಯಲುಗಳು! - ನಾಯಿಗಳು?

ನಾನು ಅದರ ಬಗ್ಗೆ ಯೋಚಿಸುತ್ತಿದ್ದೇನೆ!

ನಿನಗೊಂದು ಅವಕಾಶ ಕೊಟ್ಟಿದ್ದಕ್ಕೆ ನೀನು ನನಗೆ ಸುಳ್ಳು ಹೇಳಿದೆ, ಕೇಲೆಬ್!

ಮತ್ತೆ ವಾಪಸ್ ಬರಬೇಡ.

ಅಯ್ಯೋ, ನಮ್ಮ ಹಿಂಡುಗಳನ್ನು ಜೊತೆ ಸೇರಿಸುವುದಿಲ್ಲ ಅಂತ ಕಾಣುತ್ತೆ.

ನನಗೆ ತುಂಬಾ ಸಂತೋಷವಾಗಿತ್ತು.

ಈಗ ನನಗೆ ಬೇಜಾರಾಗಿ ದುಃಖವಾಗುತ್ತಿದೆ.

ಇದು ನಡೆಯಿತೆಂದು ನಾನು ಮರೆಯಬೇಕು!

ಸರಿಯಾಗಿ ಹೇಳಿದೆ. ಇದು ತುಂಬಾ ನಿರಾಶಾದಾಯಕ.

ಸರಿ, ಎಲ್ಲರೂ ಕೇಳಿ?

ಮೂರು ಎಣಿಸುವಷ್ಟರಲ್ಲಿ ಕೇಲೆಬ್ ಬಂದಿದ್ದನ್ನು ನಾವು ಮರೆತುಬಿಡೋಣ.

ಒಂದು. ಎರಡು--

ಆದರೆ ಮಾಪಲ್ ಬಗ್ಗೆ ಏನು? ಅವನು ಏನನ್ನೂ ಮರೆಯಲಾರ.

ಯಾಕಾಗಲ್ಲ?

ಪಾಪದ ಮಾಪಲ್.

ಅವನು ಹುಟ್ಟಿದ್ದೇ ಒಂದು ಭಯಾನಕ ರೋಗದೊಂದಿಗೆ.

ನಮ್ಮಲ್ಲಿ ಇತರರಿಗೆ ಭಿನ್ನವಾಗಿ, ಅವನು ಯಾವುದನ್ನೂ ಮರೆಯಲಾರ.

ಓ, ಹೌದು.

ಮಾಪಲ್, ನಾವೆಲ್ಲರೂ ಮರೆತ ನಂತರ, ಇದು ನಡೆಯಿತೆಂದು ನಮಗೆ ನೆನಪು ಮಾಡಬೇಡ.

ಖಚಿತವಾಗಿ ಹೇಳುತ್ತಿದ್ದೀರಾ? ಅಂಥ ಕೆಟ್ಟದ್ದೇನೂ ನಡೆಯಲಿಲ್ಲ.

ಇಲ್ಲ. ಆದರೆ ಅಂಥ ಒಳ್ಳೆಯದೇನೂ ನಡೆಯಲಿಲ್ಲ. ಹಾಗಾಗಿ ಸುಮ್ಮನೆ ಯಾಕೆ?

ತಯಾರಾ?

ಒಂದು.

Komen

No comments yet. Be the first to leave one.

Keep it about this subtitle — sync, quality, typos.500 characters left